ಬೈಬಲ್—ಮಾನವಕುಲದ ಅತ್ಯಂತ ಹಳೆಯ ಆಧುನಿಕ ಪುಸ್ತಕಕ್ಕಾಗಿ ಗಣ್ಯತೆಯನ್ನು ಹೆಚ್ಚಿಸುವುದು
ಈ ವಿಡಿಯೋವನ್ನು ನೋಡಿದಾಗ ನೀವು ಗಮನಿಸಿರಬಹುದಾದ ಮುಖ್ಯಾಂಶಗಳನ್ನು ಕೆಳಕಂಡ ಪ್ರಶ್ನೆಗಳು ಎತ್ತಿತೋರಿಸುವವು: (1) ಬೈಬಲ್ ಸರಿಸಾಟಿಯಿಲ್ಲದ್ದಾಗಿದೆ ಎಂಬುದನ್ನು ಯಾವ ನಿಜಾಂಶಗಳು ತೋರಿಸುತ್ತವೆ? (2) ಪುರಾತನವಾಗಿದ್ದರೂ ಬೈಬಲ್ ಆಧುನಿಕ ವಿಜ್ಞಾನದೊಂದಿಗೆ ಹೇಗೆ ಹೊಂದಿಕೆಯಲ್ಲಿದೆ ಎಂಬುದನ್ನು ಸೂಚಿಸುವ ಒಂದು ಉದಾಹರಣೆಯನ್ನು ಕೊಡಿ. (3) ಇಂದು ನಮ್ಮ ಬಳಿಯಿರುವ ಬೈಬಲ್ ಆರಂಭದಲ್ಲಿ ಬರೆಯಲ್ಪಟ್ಟಂತೆಯೇ ಇದ್ದು, ಅದರಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ ಎಂಬುದನ್ನು ನಾವು ಹೇಗೆ ನಿಶ್ಚಯದಿಂದ ಹೇಳಸಾಧ್ಯವಿದೆ? (4) ಬೈಬಲಿನ ಪುರಾತನ ಹಸ್ತಪ್ರತಿಗಳ ಗ್ರಂಥಪಾಠದ ಎದ್ದುಕಾಣುವಂಥ ವೈಶಿಷ್ಟ್ಯವು ಯಾವುದು ಮತ್ತು ಇದು ನಿಮ್ಮಲ್ಲಿ ಯಾವ ಭರವಸೆಯನ್ನು ಮೂಡಿಸುತ್ತದೆ? (5) ಯಾವ ವಿಧಗಳಲ್ಲಿ ಜಾನ್ ವಿಕ್ಲಿಫ್, ಜೊಹಾನಸ್ ಗಟನ್ಬರ್ಗ್, ವಿಲ್ಯಮ್ ಟಿಂಡೇಲ್, ಮೇರಿ ಜೋನ್ಸ್ ಮತ್ತು ಚಾರ್ಲ್ಸ್ ಟೇಸ್ ರಸಲ್ರಂಥವರು ದೇವರ ವಾಕ್ಯವನ್ನು ಲೋಕದಾದ್ಯಂತ ಹಬ್ಬಿಸುವುದರಲ್ಲಿ ತಮ್ಮ ಭಾಗವನ್ನು ವಹಿಸಿದರು? (6) ಚರ್ಚ್ ಬೈಬಲನ್ನು ತೀವ್ರವಾಗಿ ವಿರೋಧಿಸಿದ್ದು ಹೇಗೆ, ಆದರೂ ಅದು ಇಂದಿನ ತನಕ ಅಸ್ತಿತ್ವದಲ್ಲಿರಲು ಯಾವುದು ಸಾಧ್ಯಮಾಡಿಕೊಟ್ಟಿತು? (7) ಯೆಹೋವನ ಸಂಸ್ಥೆ ಬೈಬಲನ್ನು ಎಷ್ಟರ ಮಟ್ಟಿಗೆ ಭಾಷಾಂತರಿಸಿದೆ ಹಾಗೂ ಉತ್ಪಾದಿಸಿದೆ? (8) ಕಡ್ಡಾಯಪಡಿಸುವ ಜೂಜು (1 ತಿಮೊ. 6:9, 10), ವಿವಾಹ ವಿಚ್ಛೇದ ಹಾಗೂ ದಾಂಪತ್ಯದ್ರೋಹ (1 ಕೊರಿಂ. 13:4, 5; ಎಫೆ. 5:28-33), ಮತ್ತು ಧನಸಂಪತ್ತುಗಳನ್ನು ಶೇಖರಿಸುವುದರಲ್ಲೇ ಮಗ್ನರಾಗಿರುವುದು (ಮತ್ತಾ. 16:26) ಎಂಬ ಸಮಸ್ಯೆಗಳನ್ನು ನಿಭಾಯಿಸಲು ಬೈಬಲಿನ ಪ್ರಾಯೋಗಿಕ ಸಲಹೆಯು ಯಾವ ರೀತಿಯಲ್ಲಿ ಜನರಿಗೆ ಸಹಾಯ ಮಾಡಿದೆ? (9) ಶಾಸ್ತ್ರೀಯ ನಿಯಮಗಳನ್ನು ಅನ್ವಯಿಸುವುದು ರಾಷ್ಟ್ರೀಯ, ಕುಲಸಂಬಂಧಿತ ಹಾಗೂ ಜಾತೀಯ ದ್ವೇಷವನ್ನು ಜಯಿಸಬಹುದು ಎಂಬುದಕ್ಕೆ ಯಾವ ರುಜುವಾತಿದೆ? (10) ಬೈಬಲಿನಲ್ಲಿರುವ ವಿಷಯಗಳನ್ನು ಕಲಿಯುವುದರಿಂದ ಯಾವ ವಿಧಗಳಲ್ಲಿ ನಿಮ್ಮ ಸಂತೋಷವು ಹೆಚ್ಚಿದೆ? (11) ಈ ವಿಡಿಯೋದಿಂದ ಯಾರು ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ನೀವು ನೆನೆಸುತ್ತೀರಿ ಮತ್ತು ಇದನ್ನು ಅವರಿಗೆ ಹೇಗೆ ನೀಡುವಿರಿ?