ನೂತನ ಲೋಕ ಸಮಾಜವು ಕ್ರಿಯೆಯಲ್ಲಿ—ಇದರತ್ತ ಒಂದು ಐತಿಹಾಸಿಕ ನೋಟ
ನೀವು 1954ರ ಈ ಫಿಲ್ಮ್ನ ವಿಡಿಯೋವನ್ನು ನೋಡುವಾಗ, ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವುದರ ಕುರಿತು ಆಲೋಚಿಸಿರಿ: (1) ಮೂಲತಃ ಈ ಫಿಲ್ಮ್ ಯಾವ ಕಾರಣಕ್ಕಾಗಿ ತಯಾರಿಸಲ್ಪಟ್ಟಿತು, ಮತ್ತು ಇದು ಏನನ್ನು ಪೂರೈಸಿತು? (2) ಯೆಹೋವನ ಸಾಕ್ಷಿಗಳು ಯಾವ ಪ್ರಕಾಶನಗಳನ್ನು ಮುದ್ರಿಸುತ್ತಾರೆ, ಯಾರಿಗಾಗಿ ಮತ್ತು ಏಕೆ? (3) ಕಾವಲಿನಬುರುಜು ಪತ್ರಿಕೆಯ 1954ರ ಪ್ರಸರಣ ಸಂಖ್ಯೆಯು ಇಂದಿನ ಪ್ರಸರಣ ಸಂಖ್ಯೆಗಿಂತ ಎಷ್ಟು ಹೆಚ್ಚಾಗಿದೆ? (4) ಇತ್ತೀಚಿನ ವರ್ಷಗಳಲ್ಲಿ, ನಮ್ಮ ಮುದ್ರಣ ಕಾರ್ಯಾಚರಣೆಯು ಯಾವ ರೀತಿಯಲ್ಲಿ ಹೆಚ್ಚು ಆಧುನೀಕರಿಸಲ್ಪಟ್ಟಿದೆ? (5) ಯಾಂಕೀ ಸ್ಟೇಡಿಯಮ್ನಲ್ಲಿ ನಡೆದ 1953ರ ಅಂತಾರಾಷ್ಟ್ರೀಯ ಅಧಿವೇಶನದ ಯಾವ ವಿಷಯವು ನಿಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರಿತು? (6) ಟ್ರೈಲರ್ ಸಿಟಿ ಏನಾಗಿತ್ತು, ಮತ್ತು ಅದರ ಕುರಿತು ಯಾವ ಎದ್ದುಕಾಣುವಂಥ ವಿಷಯಗಳನ್ನು ನೀವು ಗಮನಿಸಿದಿರಿ? (7) ನಮ್ಮ ಕೆಲಸವು ಕೇವಲ ಒಂದು ರಾಷ್ಟ್ರ, ಒಂದು ರಾಷ್ಟ್ರೀಯತೆ, ಅಥವಾ ಒಂದು ಜನಾಂಗದ ಕೆಲಸವಾಗಿಲ್ಲ ಎಂಬುದನ್ನು ಯಾವುದು ತೋರಿಸುತ್ತದೆ? (8) ಯೆಹೋವನ ಸಂಸ್ಥೆಯು ಯಾವುದರ ಮೂಲಕ ಕಾರ್ಯನಡಿಸುತ್ತದೋ ಆ ಪ್ರೀತಿಯ ಆತ್ಮವನ್ನು ನೀವು ಯಾವ ವಿಧಗಳಲ್ಲಿ ಗ್ರಹಿಸಿದ್ದೀರಿ? (ಕೀರ್ತ. 133:1) (9) ಸಾವಿರದ ಒಂಬೈನೂರ ಐವತ್ತರ ದಶಕದಲ್ಲಿ ನಡೆದ ನೂತನ ಲೋಕ ಸಮಾಜದ ಚಟುವಟಿಕೆಗಳ ಈ ಐತಿಹಾಸಿಕ ವಿಮರ್ಶೆಯನ್ನು ನೋಡುವುದನ್ನು ಯಾರು ಗಣ್ಯಮಾಡುವರೆಂದು ನೀವು ನೆನಸುತ್ತೀರಿ?