ಶಿಕ್ಷಣ ನೀಡುವ, ಪ್ರಚೋದಿಸುವ ಹಾಗೂ ಬಲಪಡಿಸುವ ಸಾಧನಗಳು
1 ಬೈಬಲ್ ಹಾಗೂ ಯೆಹೋವನ ಸಾಕ್ಷಿಗಳ ಬಗ್ಗೆ ಜನರಿಗೆ ತಿಳುವಳಿಕೆಯನ್ನು ನೀಡಲು ಅವು ಬಹಳ ಶಕ್ತಿಶಾಲಿಯಾಗಿವೆ. ಸತ್ಯಕ್ಕಾಗಿ ದೃಢವಾದ ನಿಲುವನ್ನು ತೆಗೆದುಕೊಳ್ಳಲು ಅವು ಅನೇಕರನ್ನು ಪ್ರಚೋದಿಸಿವೆ. ದೇವರಿಗೆ ಸಮರ್ಪಿಸಿಕೊಂಡಿರುವ ಜನರ ನಂಬಿಕೆ ಹಾಗೂ ಗಣ್ಯತೆಯನ್ನು ಅವು ಬಲಪಡಿಸಿವೆ. ಅವುಗಳು ಏನಾಗಿವೆ? ಯೆಹೋವನ ಸಂಸ್ಥೆಯಿಂದ ತಯಾರಿಸಲ್ಪಟ್ಟ ವಿಡಿಯೋಗಳೇ. ಎಲ್ಲ ಹತ್ತು ವಿಡಿಯೋಗಳನ್ನು ನೀವು ನೋಡಿದ್ದೀರೋ? ಯಾವಾಗ ನೋಡಿದಿರಿ? ಇವುಗಳನ್ನು ನೀವು ನಿಮ್ಮ ಕ್ಷೇತ್ರಸೇವೆಯಲ್ಲಿ ಉಪಯೋಗಿಸುತ್ತೀರೋ? ಈ ಅತ್ಯುತ್ತಮವಾದ ಸಾಧನಗಳಿಂದ ಇನ್ನೂ ಹೆಚ್ಚಿನ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳಬಲ್ಲಿರಿ?
2 ಇಸವಿ 1999, ಜುಲೈ 1ರ ಕಾವಲಿನಬುರುಜು ಪತ್ರಿಕೆಯ, “ಒಂದು ಕುಟುಂಬದೋಪಾದಿ ದೇವರ ವಾಕ್ಯವನ್ನು ಕ್ರಮವಾಗಿ ಅಭ್ಯಾಸಿಸಿರಿ” ಎಂಬ ಲೇಖನದಲ್ಲಿ ಇದನ್ನು ಶಿಫಾರಸು ಮಾಡಲಾಯಿತು: ಅದು ಹೇಳಿತೇನೆಂದರೆ, “ಸೊಸೈಟಿಯ ಬೋಧಪ್ರದ ವಿಡಿಯೋಗಳಲ್ಲಿ ಒಂದನ್ನು ನೋಡಿ . . . ತದನಂತರ ಅದನ್ನು ಚರ್ಚಿಸಲು, ನೀವು ಅಧ್ಯಯನ ಸಮಯದಲ್ಲಿ ಒಂದಿಷ್ಟು ಸಮಯವನ್ನೂ ಬದಿಗಿರಿಸಬಹುದು.” ಈ ಒಳ್ಳೆಯ ಬುದ್ಧಿವಾದದ ಹೊಂದಿಕೆಯಲ್ಲಿ, ಒಂದು ತಿಂಗಳು ಬಿಟ್ಟು ಇನ್ನೊಂದು ತಿಂಗಳಿನ ಸೇವಾಕೂಟದಲ್ಲಿ ಒಂದೊಂದು ವಿಡಿಯೋವಿನ ಬಗ್ಗೆ ಚರ್ಚೆಯಿರುವುದು. ಸೇವಾಕೂಟದಲ್ಲಿ ಇದನ್ನು ಚರ್ಚಿಸುವ ಮುಂಚೆ ಮನೆಯಲ್ಲಿ ಈ ವಿಡಿಯೋವನ್ನು ನೋಡಬೇಕೆಂದು ನಾವು ಸಭೆಯಲ್ಲಿರುವ ಪ್ರತಿಯೊಬ್ಬರಿಗೂ ಉತ್ತೇಜನವನ್ನು ನೀಡುತ್ತೇವೆ.
3 ಈ ತಿಂಗಳು, ನಾವು ತಯಾರಿಸಿರುವ ಜೆಹೋವಾಸ್ ವಿಟ್ನೆಸಸ್—ದ ಆರ್ಗನೈಸೇಷನ್ ಬಿಹೈಂಡ್ ದ ನೇಮ್ (ಯೆಹೋವನ ಸಾಕ್ಷಿಗಳು—ಆ ಹೆಸರಿನ ಹಿಂದಿರುವ ಸಂಸ್ಥೆ) ಎಂಬ ಮೊದಲ ವಿಡಿಯೋದ ಬಗ್ಗೆ ಚರ್ಚಿಸುತ್ತೇವೆ. ಅದನ್ನು ನೋಡುವಾಗ ಈ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯಿರಿ.
◼ ಯೆಹೋವನ ಸಾಕ್ಷಿಗಳು ಯಾವುದಕ್ಕೆ ಪ್ರಸಿದ್ಧರಾಗಿದ್ದಾರೆ?
◼ ಬೆತೆಲಿನಲ್ಲಿ ಮಾಡಲ್ಪಡುವ ಪ್ರತಿಯೊಂದು ಕೆಲಸವೂ ಯಾವ ಶಾಸ್ತ್ರವಚನದೊಂದಿಗೆ ಸಂಬಂಧಿಸಿದೆ?
◼ ನಮ್ಮ ಪ್ರಕಾಶನಗಳಲ್ಲಿ ಉಪಯೋಗಿಸಲಿಕ್ಕಾಗಿ, ಬೈಬಲಿನ ಯಾವ ದೃಶ್ಯವನ್ನು ನಟಿಸಿ, ಫೋಟೋ ತೆಗೆದು, ಅದನ್ನು ಪೇಯಿಂಟ್ ಮಾಡಲಾಗುವುದನ್ನು ನೋಡಿದಿರಿ?
◼ ನಮ್ಮ ಸಾಹಿತ್ಯವು ತಯಾರಿಸಲ್ಪಡುವ ರೀತಿಯ ಕುರಿತಾಗಿ ಯಾವ ವಿಷಯವು ನಿಮ್ಮ ಮನಸೆಳೆಯುತ್ತದೆ?
◼ 1920ರಿಂದ 1990ರ ವರೆಗೆ, ಸೊಸೈಟಿಯಿಂದ ಎಷ್ಟು ಸಾಹಿತ್ಯಗಳು ಮುದ್ರಿಸಲ್ಪಟ್ಟವು?
◼ ದೇವರ ಜನರಲ್ಲಿ ಯಾರು ವಿಶೇಷವಾಗಿ ಬೆತೆಲ್ ಸೇವೆಗೆ ಅರ್ಹರಾಗಲು ಪ್ರಯತ್ನಪಡಬೇಕು?
◼ ಬೆತೆಲ್ ಕುಟುಂಬವು ಯೆಹೋವನ ಸಾಕ್ಷಿಗಳಿಗೆಲ್ಲ ಯಾವ ವಿಧಗಳಲ್ಲಿ ಒಂದು ಅತ್ಯುತ್ಕೃಷ್ಟ ಮಾದರಿಯನ್ನು ಇಡುತ್ತದೆ?
◼ ಸುವಾರ್ತೆಯನ್ನು ಆದಷ್ಟು ಜನರಿಗೆ ತಲುಪಿಸಲು ಬೆತೆಲ್ನಲ್ಲಿ ಮಾಡಲಾಗುತ್ತಿರುವ ಕೆಲಸದ ಕುರಿತಾಗಿ ನಿಮಗೆ ಯಾವ ವಿಷಯವು ಮನಸೆಳೆಯುತ್ತದೆ?
◼ ಲೋಕವ್ಯಾಪಕ ಕೆಲಸಕ್ಕಾಗಿ ಯಾವ ರೀತಿಯಲ್ಲಿ ಹಣಕಾಸು ನೆರವು ನೀಡಲ್ಪಡುತ್ತದೆ?
◼ ಯಾವ ಚಟುವಟಿಕೆಯನ್ನು ನಾವು ಹುರುಪಿನಿಂದ ಬೆಂಬಲಿಸಸಾಧ್ಯವಿದೆ ಹಾಗೂ ಯಾವ ಮನೋಭಾವದೊಂದಿಗೆ?—ಯೋಹಾನ 4:35; ಅ. ಕೃತ್ಯಗಳು 1:8.
◼ ನಮ್ಮ ಹೆಸರಿನ ಹಿಂದಿರುವ ಸಂಸ್ಥೆಯ ಕುರಿತಾಗಿ ನಿಮಗೆ ಯಾವ ರೀತಿಯ ಅನಿಸಿಕೆಯಾಗುತ್ತದೆ?
◼ ಈ ವಿಡಿಯೋವನ್ನು ನೀವು ಕ್ಷೇತ್ರ ಸೇವೆಯಲ್ಲಿ ಹೇಗೆ ಉಪಯೋಗಿಸಸಾಧ್ಯವಿದೆ?
ಡಿಸೆಂಬರ್ ತಿಂಗಳಿನಲ್ಲಿ ದ ಬೈಬಲ್—ಆ್ಯಕ್ಯುರೇಟ್ ಹಿಸ್ಟರಿ, ರಿಲಯಬಲ್ ಪ್ರಾಫೆಸಿ ಎಂಬ ವಿಡಿಯೋದ ಬಗ್ಗೆ ನಾವು ಚರ್ಚಿಸಲಿರುವೆವು.