‘ಪುರುಷರಲ್ಲಿ ವರದಾನಗಳು’ ದೇವರ ಮಂದೆಯನ್ನು ಸಿದ್ಧಮನಸ್ಸಿನಿಂದ ಕಾಯುತ್ತಾರೆ
1 ‘ಪುರುಷರಲ್ಲಿ ವರದಾನಗಳನ್ನು’ ಒದಗಿಸುವ ಮೂಲಕ ಯೆಹೋವನು ತನ್ನ ಪುತ್ರನ ಮುಖಾಂತರ ಎಷ್ಟು ಪ್ರೀತಿಯ ಒದಗಿಸುವಿಕೆಯನ್ನು ಮಾಡಿದ್ದಾನೆ! (ಎಫೆ. 4:8, 11, 12, NW) ದೇವರ ಮಂದೆಯನ್ನು ಸಕ್ರಿಯವಾಗಿ ಮತ್ತು ಉತ್ಸುಕತೆಯಿಂದ ಪಾಲನೆಮಾಡುವುದರೊಂದಿಗೆ ಅವರಿಗೆ ಇನ್ನೂ ಬಹಳಷ್ಟು ಜವಾಬ್ದಾರಿಗಳಿವೆ. (1 ಪೇತ್ರ 5:2, 3) ನಮಗೆ ಬಹಳಷ್ಟು ಅಗತ್ಯವಿರುವ ಈ ಏರ್ಪಾಡಿನಿಂದ ನಮ್ಮಲ್ಲಿ ಎಲ್ಲರೂ ಪ್ರಯೋಜನ ಪಡೆಯುತ್ತೇವೆ. ಕೆಲವರು ತೊಂದರೆಗಳನ್ನು ಎದುರಿಸುತ್ತಿರಲಿ, ಸಭೆಯಲ್ಲಿ ಹೊಸದಾಗಿ ಸಹವಾಸಮಾಡುವವರಾಗಿರಲಿ, ನಿರ್ದಿಷ್ಟ ಬಲಹೀನತೆಯುಳ್ಳವರಾಗಿರಲಿ, ಇಲ್ಲವೇ ದಾರಿತಪ್ಪಿಹೋದವರಾಗಿರಲಿ, ಎಲ್ಲರ ಆತ್ಮಿಕ ಹಿತಕ್ಷೇಮದಲ್ಲಿ ಈ ಪುರುಷರು ತೀವ್ರವಾದ ವೈಯಕ್ತಿಕ ಆಸಕ್ತಿಯನ್ನು ತೋರಿಸುತ್ತಾರೆ.—ಫಿಲಿ. 2:4; 1 ಥೆಸ. 5:12-14.
2 ಲೋಕದಲ್ಲಿನ ತಳಮಳಗೊಳಿಸುವಂಥ ಘಟನೆಗಳು ಸ್ವಲ್ಪ ಮಟ್ಟಿಗೆ ಭೀತಿಯನ್ನು ಹುಟ್ಟಿಸುವಾಗ, ಈ ಉಪಕುರುಬರು, “ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ” ಪರಿಣಮಿಸುತ್ತಾರೆ. ನಾವು ದಣಿದಿರುವಾಗ ಇಲ್ಲವೇ ಭಾರದಿಂದ ಕುಗ್ಗಿರುವಾಗ ಮತ್ತು ಸಾಂತ್ವನದ ಅಗತ್ಯವುಳ್ಳವರಾಗಿರುವಾಗ, ಅವರು “ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ” ನಮಗೆ ಚೈತನ್ಯವನ್ನು ನೀಡುತ್ತಾರೆ.—ಯೆಶಾ. 32:2.
3 ನಿಷ್ಕ್ರಿಯರನ್ನು ಪ್ರೋತ್ಸಾಹಿಸುವುದು: ಅನಿಯಮಿತರೂ, ನಿಷ್ಕ್ರಿಯರೂ ಆಗಿರುವ ವ್ಯಕ್ತಿಗಳಿಗೆ ಪ್ರೋತ್ಸಾಹ ನೀಡಲು, ಸಭೆಯ ಎಲ್ಲ ಚಟುವಟಿಕೆಯಲ್ಲಿ ಪುನಃ ಕ್ರಮವಾಗಿ ಭಾಗವಹಿಸಲಿಕ್ಕಾಗಿ ಹಿಂದಿರುಗಿ ಬರಲಿಕ್ಕೋಸ್ಕರ ಅವರಿಗೆ ಸಹಾಯಮಾಡಲು ಹಿರಿಯರು ವಿಶೇಷ ಪ್ರಯತ್ನವನ್ನು ಮಾಡುತ್ತಾರೆ. ಪ್ರೀತಿಪೂರ್ವಕ ಕುರಿಪಾಲನಾ ಭೇಟಿಗಳು, ಅನೇಕರು ಸಭಾ ಕೂಟಗಳಿಗೆ ಕ್ರಮವಾಗಿ ಹಾಜರಾಗಲು ಮತ್ತು ಪುನಃ ಕ್ಷೇತ್ರ ಸೇವೆಯಲ್ಲಿ ಪಾಲ್ಗೊಳ್ಳುವಂಥ ಹಂತದ ವರೆಗೆ ಅವರು ಆತ್ಮಿಕವಾಗಿ ಬೆಳೆಯಲು ಸಹಾಯಮಾಡಿವೆ. ಹಿರಿಯರ ಈ ಎಲ್ಲ ಪ್ರಯತ್ನಗಳು, ಯೆಹೋವನ ಪ್ರೀತಿಭರಿತ ಆರೈಕೆ ಹಾಗೂ ಯೇಸು ಕ್ರಿಸ್ತನ ಸಕ್ರಿಯ ಮುಂದಾಳುತನವನ್ನು ಪ್ರತಿಬಿಂಬಿಸುತ್ತವೆ. ಅಲೆದಾಡುತ್ತಿರಬಹುದಾದ ಇಲ್ಲವೇ ದಾರಿ ತಪ್ಪಿಹೋಗಿರಬಹುದಾದ ತನ್ನ ಯಾವುದೇ ಕುರಿಗಾಗಿ ಇಂಥ ಆಸಕ್ತಿಯನ್ನು ತೋರಿಸುವುದರಲ್ಲಿ ಅವನು ಮಾದರಿಯನ್ನಿಟ್ಟನು.—ಮತ್ತಾ. 18:12-14; ಯೋಹಾ. 10:16, 27-29.
4 ಕೆಲವರು ಆತ್ಮಿಕವಾಗಿ ತಡವರಿಸುತ್ತಿದ್ದಾರೆಂದು ತೋರಿಸುವಂಥ ಲಕ್ಷಣಗಳಿಗಾಗಿ ಈ ಉಪಕುರುಬರು ಯಾವಾಗಲೂ ಎಚ್ಚರವಾಗಿರುತ್ತಾರೆ. ನಿರುತ್ಸಾಹದ ಯಾವುದೇ ಲಕ್ಷಣಗಳನ್ನು ತೋರಿಸುವ, ಕೂಟಗಳಿಗೆ ಹಾಜರಾಗುವುದರಲ್ಲಿ ಅನಿಯಮಿತರಾಗುವ, ಇಲ್ಲವೇ ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವಿಕೆಯನ್ನು ಕಡಿಮೆಗೊಳಿಸುತ್ತಿರುವ ಯಾವುದೇ ವ್ಯಕ್ತಿಗೆ ಬಹುಶಃ ಆತ್ಮಿಕ ನೆರವಿನ ಅಗತ್ಯವಿದೆ. ಲೌಕಿಕ ಉಡುಗೆತೊಡುಗೆಯ ಕಡೆಗೆ ಓಲುತ್ತಿರುವ ಇಲ್ಲವೇ ಸಭೆಯ ಕಡೆಗೆ ಟೀಕಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಲು ಆರಂಭಿಸುತ್ತಿರುವ ಯಾವುದೇ ವ್ಯಕ್ತಿಗೆ ಸಹಾಯಮಾಡಲು ಹಿರಿಯರು ಸಿದ್ಧಮನಸ್ಸುಳ್ಳವರಾಗಿದ್ದಾರೆ. ಇಂಥವರು ಯೆಹೋವನಿಗಾಗಿರುವ ತಮ್ಮ ಪ್ರೀತಿಯನ್ನು ಪುನಃ ಹೊತ್ತಿಸಿಕೊಳ್ಳುವಂತೆ ಸಹಾಯಮಾಡುವ ಪ್ರಯತ್ನದಲ್ಲಿ, ನಿಜವಾದ ಆಸಕ್ತಿ ಹಾಗೂ ಕೋಮಲವಾದ ವಾತ್ಸಲ್ಯದೊಂದಿಗೆ ಈ ಚಿಂತಿತ ಮೇಲ್ವಿಚಾರಕರು, ‘ತಮ್ಮ ಪ್ರಾಣಗಳನ್ನೇ ಕೊಡುವದಕ್ಕೆ’ ಸಿದ್ಧರಿದ್ದಾರೆ.—1 ಥೆಸ. 2:8.
5 ಗತ ಕಾಲಗಳಲ್ಲಿ, ಕೆಲವು ಸಮರ್ಪಿತ ಕ್ರೈಸ್ತರ ಸಭೆಯೊಂದಿಗಿನ ಸಂಪರ್ಕವು ಕಡಿದುಹೋಯಿತು ಮತ್ತು ಆರೋಗ್ಯದ ಸಮಸ್ಯೆಗಳು, ಆರ್ಥಿಕ ಕುಸಿತಗಳು, ಇಲ್ಲವೇ ಕುಟುಂಬದ ಒತ್ತಡಗಳಿಂದ ಜಜ್ಜಿಹೋಗಿರುವ ಕಾರಣ ಆತ್ಮಿಕವಾಗಿ ನಿಷ್ಕ್ರಿಯರಾಗಿದ್ದಾರೆ. ಹಿರಿಯರು ಅವರನ್ನು ಟೀಕಿಸದೇ, ಯೆಹೋವನು ತನ್ನ ಎಲ್ಲ ಕುರಿಗಳನ್ನು ನೋಡಿಕೊಳ್ಳುತ್ತಾನೆ ಮತ್ತು ಕಷ್ಟದ ಸಮಯಗಳಲ್ಲೂ ಅವರನ್ನು ಪೋಷಿಸುವನೆಂಬ ಆಶ್ವಾಸನೆಯನ್ನು ದಯಾಭಾವದಿಂದ ನೀಡುತ್ತಾರೆ. (ಕೀರ್ತ. 55:22; 1 ಪೇತ್ರ 5:7) ಸದಾ ಎಚ್ಚರವಾಗಿರುವ ಹಿಂಡಿನ ಕುರುಬರು, ಇಂಥ ನಿಷ್ಕ್ರಿಯ ವ್ಯಕ್ತಿಗಳು ‘ದೇವರ ಸಮೀಪಕ್ಕೆ ಬಂದರೆ, ಆಗ ಆತನು ಅವರ ಸಮೀಪಕ್ಕೆ ಬಂದು’ ಅವರಿಗೆ ಸಾಂತ್ವನ ಮತ್ತು ಚೈತನ್ಯವನ್ನು ಕೊಡುವನು ಎಂಬುದನ್ನು ಗ್ರಹಿಸಲು ಸಹಾಯಮಾಡುತ್ತಾರೆ.—ಯಾಕೋ. 4:8; ಕೀರ್ತ. 23:3, 4.
6 ದುರ್ಬಲರಾಗಿರುವವರನ್ನು ಮೌಲ್ಯವುಳ್ಳವರೆಂದೆಣಿಸುವುದು: ಪ್ರೀತಿಪರ ಉಪಕುರುಬರು, ಉಪೇಕ್ಷಿಸಲ್ಪಡುವ ಸಾಧ್ಯತೆಯಿರುವವರ ಬಗ್ಗೆಯೂ ಚಿಂತಿತರಾಗಿದ್ದಾರೆ. ಹೆಚ್ಚಿನ ಸಭೆಗಳಲ್ಲಿ ದುರ್ಬಲರಾಗಿರುವ, ನರ್ಸಿಂಗ್ ಹೋಮ್ಗಳಲ್ಲೇ ಇರುವ, ಇಲ್ಲವೇ ತಮ್ಮಷ್ಟಕ್ಕೇ ಏನನ್ನೂ ಮಾಡಲು ಅಸಮರ್ಥರಾಗಿರುವವರು ಇದ್ದೇ ಇರುತ್ತಾರೆ. ಅವರ ಪರಿಸ್ಥಿತಿಗಳಿಂದಾಗಿ, ರಾಜ್ಯದ ಸಂದೇಶವನ್ನು ಘೋಷಿಸುವುದರಲ್ಲಿ ಅವರು ಪಾಲ್ಗೊಳ್ಳುವುದು ತುಂಬ ಮಿತವಾಗಿರುತ್ತದೆ. ಇದನ್ನು ನಾವು ಅರ್ಥಮಾಡಿಕೊಳ್ಳಬಹುದು. ಅವರನ್ನು ಭೇಟಿಯಾಗಲು ಬರುವವರು, ಇತರ ರೋಗಿಗಳು, ಇಲ್ಲವೇ ಅವರನ್ನು ನೋಡಿಕೊಳ್ಳುವವರೊಂದಿಗಿನ ಸಂಪರ್ಕದಿಂದಾಗಿ ಮಾತ್ರ ಅವರಿಗೆ ಸಾಕ್ಷಿಯನ್ನು ಕೊಡುವ ಅವಕಾಶ ಸಿಗಬಹುದು. ಹಾಗಿದ್ದರೂ ಅವರೇನನ್ನು ಮಾಡಲು ಶಕ್ತರಾಗಿದ್ದಾರೊ ಅದು, ಇಡೀ ಲೋಕದಲ್ಲಿ ನಡೆಯುತ್ತಿರುವ ಸಾರುವ ಕೆಲಸಕ್ಕೆ ಒಂದು ಅಮೂಲ್ಯವಾದ ಕಾಣಿಕೆಯಾಗಿದೆ. (ಮತ್ತಾ. 25:15) ಅವರು ಕೇವಲ 15 ನಿಮಿಷ ಸಾಕ್ಷಿಯನ್ನು ಕೊಟ್ಟರೂ, ಇದು ವರದಿಸಲ್ಪಡಬೇಕು ಮತ್ತು ಅವರನ್ನು ಕ್ರಮದ ರಾಜ್ಯ ಪ್ರಚಾರಕರಾಗಿ ಪರಿಗಣಿಸಲಾಗುವುದು.
7 ವರ್ಷದ ಈ ಸಮಯದಲ್ಲಿ, ಅಂದರೆ ಜ್ಞಾಪಕಾಚರಣೆಯ ಅವಧಿಯಲ್ಲಿ ಈ ‘ಪುರುಷರಲ್ಲಿ ವರದಾನಗಳು’ ತಮ್ಮ ಸಹೋದರರ ಆತ್ಮಿಕ ಅಗತ್ಯಗಳ ಕುರಿತು ವಿಶೇಷ ಅರಿವುಳ್ಳವರಾಗಿರುತ್ತಾರೆ. ದಾರಿತಪ್ಪಿಹೋಗಿರುವವರು, ಸಭೆಯೊಂದಿಗಿನ ಹೃದಯೋಲ್ಲಾಸಕರ ಸಹವಾಸದಿಂದಾಗಿ ಬರುವ ಆನಂದ ಮತ್ತು ಮನಶ್ಶಾಂತಿಯನ್ನು ಪುನಃ ಒಮ್ಮೆ ಅನುಭವಿಸುವಂತೆ ಸಹಾಯಮಾಡಲು, ಹಿರಿಯರು ವಿಶೇಷ ಪ್ರಯತ್ನವನ್ನು ಮಾಡಲು ಇದು ಎಷ್ಟು ಸೂಕ್ತವಾದ ಸಮಯವಾಗಿದೆ! “ಕ್ರಿಸ್ತನಂಬಿಕೆಯುಳ್ಳ” ಅಂಥವರು, ಪ್ರಾಯಶ್ಚಿತ್ತ ಯಜ್ಞದಲ್ಲಿ ತಮ್ಮ ನಂಬಿಕೆಯನ್ನು ಪುನರ್ದೃಢೀಕರಿಸುತ್ತಾ, ಸಭಾ ಕೂಟಗಳಲ್ಲಿ ಮತ್ತು ಶುಶ್ರೂಷೆಯಲ್ಲಿ ಹಾಜರಿರುವುದನ್ನು ನಾವು ನೋಡುವಾಗ ನಮಗೆ ಸಂತೋಷವಾಗುತ್ತದೆ.—ಗಲಾ. 6:10; ಲೂಕ 15:4-7; ಯೋಹಾ. 10:11, 14.