ಒಂದು ಉತ್ಸಾಹಭರಿತ ಪ್ರತಿಕ್ರಿಯೆ!
1 ಎಲ್ಲೆಡೆಯೂ ಇರುವ ಕ್ರೈಸ್ತ ಕುಟುಂಬಗಳು ಯುವ ಜನರು ಪ್ರಶ್ನಿಸುವುದು—ನಾನು ನಿಜ ಸ್ನೇಹಿತರನ್ನು ಹೇಗೆ ಮಾಡಿಕೊಳ್ಳಬಲ್ಲೆ? (ಇಂಗ್ಲಿಷ್) ಎಂಬ ವಿಡಿಯೋಗಾಗಿ ತಮ್ಮ ಉತ್ಸಾಹಭರಿತ ಕೃತಜ್ಞತೆಯನ್ನು ವ್ಯಕ್ತಪಡಿಸಿವೆ. ಈ ವಿಡಿಯೋವನ್ನು ನೋಡಿದ ನಂತರ, ನನ್ನ ಪುತ್ರರು ಮೌನವಾಗಿ ಕುಳಿತುಕೊಂಡರು, ಇದರಲ್ಲಿರುವ ಎಲ್ಲ ವಿಷಯಗಳನ್ನು ಅವರು ಅರ್ಥಮಾಡಿಕೊಂಡು ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು ಎಂದು ಅಮೆರಿಕದಲ್ಲಿರುವ ಒಬ್ಬ ತಂದೆ ಹೇಳಿದನು! ಮಲಾವಿಯಿಂದ ಬಂದ ಒಂದು ವರದಿಯು ಹೇಳಿದ್ದೇನೆಂದರೆ, ಯುವ ಸಹೋದರ ಸಹೋದರಿಯರು ಇದನ್ನು ಪೂರ್ತಿಯಾಗಿ ಅರ್ಥಮಾಡಿಕೊಂಡು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು, ಏಕೆಂದರೆ ಶಾಲೆಯಲ್ಲಿ ಅವರ ಸಹಪಾಠಿಗಳಿಂದ ಅವರು ಇದೇ ರೀತಿಯ ಒತ್ತಡಗಳನ್ನು ಎದುರಿಸುತ್ತಾರೆ. ಜರ್ಮನಿಯಲ್ಲಿ ಒಬ್ಬ ತಂದೆಯು ಈ ವಿಡಿಯೋದ ಕುರಿತಾಗಿ ಹೇಳಿದ್ದು: “ನಾನು ಇದನ್ನು ನನ್ನ ಪ್ರಾರ್ಥನೆಗಳಿಗೆ ಒಂದು ಉತ್ತರವಾಗಿ ಪರಿಗಣಿಸುತ್ತೇನೆ.” ಒಬ್ಬ ಯುವತಿಯು ಹೇಳಿದ್ದು: “ಯೆಹೋವನು ನಿಜವಾಗಿಯೂ ನನ್ನ ಕುರಿತು ಚಿಂತಿಸುತ್ತಾನೆ ಎಂಬುದನ್ನು ನನಗೆ ಮರುಜ್ಞಾಪಿಸಿದ್ದಕ್ಕಾಗಿ ತುಂಬ ಉಪಕಾರಗಳು.” ನ್ಯೂ ಸೀಲೆಂಡ್ನಲ್ಲಿನ ಒಬ್ಬ ಹಿರಿಯನು ವರದಿಸಿದ್ದು: “ನಮ್ಮಲ್ಲಿರುವ ಒಬ್ಬ ಹದಿವಯಸ್ಕಳು ಜೀವಕ್ಕೆ ನಡೆಸುವ ದಾರಿಗೆ ಹಿಂದಿರುಗುವಂತೆ ಇದು ಸಹಾಯಮಾಡಿತು.” ಒಬ್ಬ ವಿವಾಹಿತೆ ಇದನ್ನು ನೋಡಿದ ನಂತರ ಹೇಳಿದ್ದು: “ಸತ್ಯದಲ್ಲಿರುವ ಪ್ರತಿಯೊಬ್ಬ ಯುವ ವ್ಯಕ್ತಿಯು ಈ ವಿಡಿಯೋವನ್ನು ನೋಡಿ, ಸತ್ಯವನ್ನು ತನ್ನದಾಗಿಸಿಕೊಳ್ಳುವಂತೆ ಪ್ರೇರಿಸಲ್ಪಡಬೇಕು ಎಂಬುದನ್ನು ನಾನು ಎಷ್ಟು ಆಶಿಸುತ್ತೇನೆ!” ಕುಟುಂಬಗಳೇ, ಈ ವಿಡಿಯೋವನ್ನು ಪುನಃ ಒಮ್ಮೆ ಏಕೆ ನೋಡಬಾರದು? ತದನಂತರ, ಜೊತೆಯಾಗಿ ಈ ಮುಂದಿನ ಪ್ರಶ್ನೆಗಳನ್ನು ಚರ್ಚಿಸಿರಿ.
2 ಪೀಠಿಕೆ: ನಿಜ ಸ್ನೇಹಿತನು ಎಂದರೆ ಯಾರು?—ಜ್ಞಾನೋ. 18:24.
3 ಸ್ನೇಹಕ್ಕಿರುವ ರಸ್ತೆತಡೆಗಳು: ನೀವು ಕಡೆಗಣಿಸಲ್ಪಟ್ಟಿದ್ದೀರಿ ಎಂಬ ಭಾವನೆಯನ್ನು ಹೇಗೆ ಜಯಿಸಬಲ್ಲಿರಿ? (ಫಿಲಿ. 2:4) ನೀವು ನಿಮ್ಮ ವ್ಯಕ್ತಿತ್ವವನ್ನು ಉತ್ತಮಗೊಳಿಸಲು ಏಕೆ ಇಚ್ಛಿಸಬೇಕು, ಮತ್ತು ಇದನ್ನು ಮಾಡಲು ನಿಮಗೆ ಯಾರು ಸಹಾಯಮಾಡುವರು? ಹೊಸ ಸ್ನೇಹಿತರನ್ನು ಮಾಡಿಕೊಳ್ಳುವ ಸಂದರ್ಭಗಳು ಹೇಗೆ ಸಿಗುತ್ತವೆ ಮತ್ತು ಅವರನ್ನು ಎಲ್ಲಿ ಕಂಡುಕೊಳ್ಳಬಹುದು?—2 ಕೊರಿಂ. 6:13.
4 ದೇವರೊಂದಿಗೆ ಸ್ನೇಹ: ನೀವು ಯೆಹೋವನೊಂದಿಗೆ ಒಂದು ಸಂಬಂಧವನ್ನು ಹೇಗೆ ಬೆಳೆಸಿಕೊಳ್ಳಬಹುದು, ಮತ್ತು ಅದು ಏಕೆ ಪ್ರಯೋಜನಾರ್ಹವಾಗಿದೆ? (ಕೀರ್ತ. 34:8) ದೇವರೊಂದಿಗಿನ ನಿಮ್ಮ ಸ್ನೇಹವನ್ನು ಅತಿ ಉತ್ತಮವಾಗಿ ಯಾರು ಬಲಪಡಿಸಬಲ್ಲರು?
5 ತಪ್ಪಾದ ರೀತಿಯ ಸ್ನೇಹಿತರು: ಕೆಟ್ಟ ಸಹವಾಸಿಗಳು ಯಾರು? (1 ಕೊರಿಂ. 15:33) ತಪ್ಪಾದ ರೀತಿಯ ಸ್ನೇಹಿತರು ಹೇಗೆ ಒಬ್ಬನನ್ನು ಆತ್ಮಿಕ ನಾಶನಕ್ಕೆ ನಡೆಸಬಲ್ಲರು? ದೀನಳ ಕುರಿತಾದ ಬೈಬಲ್ ವೃತ್ತಾಂತವು ನಿಮಗೆ ಏನನ್ನು ಕಲಿಸುತ್ತದೆ?—ಆದಿ. 34:1, 2, 7, 19.
6 ಒಂದು ನವಕಾಲೀನ ಡ್ರಾಮಾ: ಒಂಟಿತನವು ತಾರಾಳನ್ನು ಹೇಗೆ ಬಾಧಿಸಿತು? ಅವಳು ಲೌಕಿಕ ಯುವ ಜನರೊಂದಿಗಿನ ತನ್ನ ಸಹವಾಸವನ್ನು ಹೇಗೆ ನ್ಯಾಯವೆಂದು ಸಮರ್ಥಿಸಲು ಪ್ರಯತ್ನಿಸಿದಳು? ಯಾವ ಅಪಾಯಗಳನ್ನು ಅವಳು ಎದುರಿಸುವಂತೆ ಅವರು ಮಾಡಿದರು? ಅವಳು ಒಳಗಾಗಿರುವ ಅಪಾಯವನ್ನು ನೋಡುವುದರಲ್ಲಿ ಅವಳ ಹೆತ್ತವರು ಏಕೆ ತಪ್ಪಿಹೋದರು, ಆದರೆ ಯಾವ ಮನೋಭಾವದೊಂದಿಗೆ ಅವರು ಅವಳು ಆತ್ಮಿಕವಾಗಿ ಚೇತರಿಸಿಕೊಳ್ಳುವಂತೆ ಸಹಾಯಮಾಡಿದರು? ಒಬ್ಬ ಪಯನೀಯರ್ ಸಹೋದರಿಯು ಹೇಗೆ ತಾರಾಳಿಗೆ ಒಬ್ಬ ನಿಜ ಸ್ನೇಹಿತೆಯಾಗಿ ಪರಿಣಮಿಸಿದಳು? ಜ್ಞಾನೋಕ್ತಿ 13:20 ಮತ್ತು ಯೆರೆಮೀಯ 17:9ಕ್ಕೆ ಕ್ರೈಸ್ತರು ಏಕೆ ಗಮನಕೊಡಬೇಕು? ಯಾವ ಪ್ರಾಮುಖ್ಯ ಪಾಠವನ್ನು ತಾರಾ ಕಲಿತಳು?
7 ಸಮಾಪ್ತಿ: ಈ ವಿಡಿಯೋದಿಂದ ನೀವು ಯಾವ ಪಾಠಗಳನ್ನು ಕಲಿತಿದ್ದೀರಿ? ಬೇರೆಯವರಿಗೆ ಸಹಾಯಮಾಡಲು ನೀವು ಇದನ್ನು ಹೇಗೆ ಉಪಯೋಗಿಸಬಲ್ಲಿರಿ?—ಕೀರ್ತ. 71:17.