ಗಂಭೀರ ಪರಿಗಣನೆಗೆ ಯೊಗ್ಯವಾದ ಒಂದು ವಿಡಿಯೋ
“ಈ ವಿಡಿಯೋ ನಿಜವಾಗಿಯೂ ನಿಮ್ಮನ್ನು ಯೋಚಿಸುವಂತೆ ಮಾಡುತ್ತದೆ!”
“ಅದು ನೇರವಾಗಿ ನನ್ನ ಹೃದಯವನ್ನು ತಲಪಿತು!”
“ನಾನು ತೀರಾ ಭಾವೋದ್ರೇಕಿತಳಾದೆ!”
1 ಯುವಜನರು ಪ್ರಶ್ನಿಸುವುದು—ನಾನು ನಿಜ ಸ್ನೇಹಿತರನ್ನು ಹೇಗೆ ಮಾಡಿಕೊಳ್ಳಬಲ್ಲೆ? ಎಂಬ ವಿಡಿಯೋವನ್ನು ಮೊದಲ ಬಾರಿ ವೀಕ್ಷಿಸಿದಾಗ ನಿಮಗೂ ಇದೇ ರೀತಿ ಅನಿಸಿತೋ? ಕೆಲವು ವರ್ಷಗಳ ಹಿಂದೆ ಒಬ್ಬ ಯುವ ಸಹೋದರನು ತನ್ನ ಜೀವನದಲ್ಲಿ ಹೆಚ್ಚು ತೊಂದರೆಗಳನ್ನು ಅನುಭವಿಸುತ್ತಿದ್ದನು, ಅದಕ್ಕೆಲ್ಲಾ ಕಾರಣ ಅವನು ಆರಿಸಿಕೊಂಡಿದ್ದ ಗೆಳೆಯರೇ ಆಗಿದ್ದರು. ಸತ್ಯದ ಬಗ್ಗೆ ಅವನು ಆಸಕ್ತಿಯನ್ನು ಕಳೆದುಕೊಳ್ಳುವಂತೆ ಅವರು ಮಾಡಿದರು ಮತ್ತು ಅವನು ಯೆಹೋವನೊಂದಿಗಿನ ತನ್ನ ಸಂಬಂಧವನ್ನು ಕಳೆದುಕೊಂಡನು. ಆ ಸಮಯದಲ್ಲೇ ನಿಜ ಸ್ನೇಹಿತರು ವಿಡಿಯೋ ಬಿಡುಗಡೆಯಾಯಿತು. ಅವನು ಬರೆದದ್ದು: “ನಾನು ವಿಡಿಯೋವನ್ನು ಪದೇ ಪದೇ ವೀಕ್ಷಿಸುತ್ತಿದ್ದಂತೆ, ನನ್ನ ಕಣ್ಣಿನಿಂದ ಕಂಬನಿಯು ಧಾರಾಕಾರವಾಗಿ ಕೆಳಗಿಳಿಯಿತು. ಸಮಯಕ್ಕೆ ಸರಿಯಾಗಿ ನನಗೆ ಸಹಾಯಮಾಡಿದ್ದಕ್ಕಾಗಿ ನಾನು ಯೆಹೋವನಿಗೆ ತುಂಬ ಉಪಕಾರಹೇಳಿದೆ.” ಆ ವಿಡಿಯೋ ಅವನು ತನ್ನ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡುವಂತೆ ಮತ್ತು ಸರಿಯಾದ ರೀತಿಯ ಸ್ನೇಹಿತರನ್ನು ಗಳಿಸುವಂತೆ ಅವನನ್ನು ಪ್ರಚೋದಿಸಿತು. ಅವನು ಕೂಡಿಸಿದ್ದು: “ಯುವಜನರನ್ನು ಬಾಧಿಸುತ್ತಿರುವ ವಿಷಯಗಳ ಸದ್ಯೋಚಿತ ಮಾಹಿತಿಯು ನಿಮ್ಮಲ್ಲಿದೆ ಎಂಬುದು ನಿಶ್ಚಯ.” ಹೆತ್ತವರೇ ಮತ್ತು ಯುವಜನರೇ ನಿಮ್ಮ ಮುಂದಿನ ಕುಟುಂಬ ಅಧ್ಯಯನದಲ್ಲಿ ನೀವೇಕೆ ಈ ವಿಡಿಯೋವನ್ನು ಮತ್ತೊಮ್ಮೆ ವೀಕ್ಷಿಸಬಾರದು? ಪ್ರತಿಯೊಂದು ಭಾಗದ ನಂತರ ಸ್ವಲ್ಪ ನಿಲ್ಲಿಸಿ, ಈ ಕೆಳಗಿನ ಪ್ಯಾರದಲ್ಲಿರುವ ಪ್ರಶ್ನೆಗಳನ್ನು ಮುಚ್ಚುಮರೆಯಿಲ್ಲದೆ ಪ್ರಾಮಾಣಿಕವಾಗಿ ಒಟ್ಟಿಗೆ ಚರ್ಚಿಸಿರಿ.
2 ಪೀಠಿಕೆ: ನಿಜ ಸ್ನೇಹಿತರು ಅಂದರೆ ಯಾರು?—ಜ್ಞಾನೋ. 18:24.
3 ಸ್ನೇಹಕ್ಕಿರುವ ರಸ್ತೆತಡೆಗಳು: ನಿಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಭಾವನೆಯನ್ನು ನೀವು ಹೇಗೆ ಜಯಿಸಬಲ್ಲಿರಿ? (ಫಿಲಿ. 2:4) ನೀವು ನಿಮ್ಮ ವ್ಯಕ್ತಿತ್ವವನ್ನು ಉತ್ತಮಗೊಳಿಸುವ ಮನಸ್ಸುಳ್ಳವರಾಗಿರಬೇಕು ಏಕೆ ಮತ್ತು ಇದನ್ನು ಮಾಡಲು ನಿಮಗೆ ಯಾರು ಸಹಾಯಮಾಡುವರು? ನಿಮಗೆ ಹೆಚ್ಚು ಸ್ನೇಹಿತರನ್ನು ಮಾಡಿಕೊಳ್ಳುವ ಸಂದರ್ಭಗಳು ಹೇಗೆ ಸಿಗುತ್ತವೆ ಮತ್ತು ಅವರನ್ನು ಎಲ್ಲಿ ಕಂಡುಕೊಳ್ಳಬಲ್ಲಿರಿ?—2 ಕೊರಿಂ. 6:13.
4 ದೇವರೊಂದಿಗೆ ಸ್ನೇಹ: ನೀವು ಯೆಹೋವನೊಂದಿಗೆ ಅತಿ ಆಪ್ತ ಸಂಬಂಧವನ್ನು ಹೇಗೆ ಬೆಳೆಸಿಕೊಳ್ಳಬಲ್ಲಿರಿ, ಮತ್ತು ಅದೇಕೆ ಪ್ರಯೋಜನಾರ್ಹವಾಗಿದೆ? (ಕೀರ್ತ. 34:8) ದೇವರೊಂದಿಗಿನ ನಿಮ್ಮ ಸ್ನೇಹವನ್ನು ಹೆಚ್ಚು ಉತ್ತಮವಾಗಿ ಯಾರು ಬಲಪಡಿಸಬಲ್ಲರು?
5 ತಪ್ಪಾದ ರೀತಿಯ ಸ್ನೇಹಿತರು: ದುಸ್ಸಹವಾಸಿಗಳು ಯಾರು? (1 ಕೊರಿಂ. 15:33) ತಪ್ಪಾದ ರೀತಿಯ ಸ್ನೇಹಿತರು ಒಬ್ಬನನ್ನು ಹೇಗೆ ಆಧ್ಯಾತ್ಮಿಕ ಧ್ವಂಸಕ್ಕೆ ನಡೆಸಬಲ್ಲರು? ದೀನಳ ಕುರಿತಾದ ಬೈಬಲ್ ವೃತ್ತಾಂತವು ನಿಮಗೇನನ್ನು ಕಲಿಸುತ್ತದೆ?—ಆದಿ. 34:1, 2, 7, 19.
6 ಒಂದು ನವಕಾಲೀನ ಡ್ರಾಮಾ: ಒಂಟಿತನವು ಟಾರಾಳನ್ನು ಹೇಗೆ ಬಾಧಿಸಿತು? ಅವಳು ಲೋಕದ ಯುವಜನರೊಂದಿಗಿನ ತನ್ನ ಸಹವಾಸವನ್ನು ಹೇಗೆ ಸಮರ್ಥಿಸಲು ಪ್ರಯತ್ನಿಸಿದಳು? ಅವರು ಯಾವ ಅಪಾಯಗಳಿಗೆ ಅವಳನ್ನು ಗುರಿಮಾಡಿದರು? ಅವಳ ಹೆತ್ತವರು ಅವಳು ಅಪಾಯಕ್ಕೊಳಗಾಗಿರುವುದನ್ನು ತಿಳಿಯಲು ಏಕೆ ತಪ್ಪಿಹೋದರು, ಆದರೆ ಅವರು ಯಾವ ಮನೋಭಾವದೊಂದಿಗೆ ಆಧ್ಯಾತ್ಮಿಕವಾಗಿ ಚೇತರಿಸಿಕೊಳ್ಳುವಂತೆ ಟಾರಾಳಿಗೆ ಸಹಾಯಮಾಡಿದರು? ಒಬ್ಬ ಪಯನೀಯರ್ ಸಹೋದರಿಯು ಟಾರಾಳಿಗೆ ಹೇಗೆ ಒಬ್ಬ ನಿಜ ಸ್ನೇಹಿತೆಯಾದಳು? ಜ್ಞಾನೋಕ್ತಿ 13:20 ಮತ್ತು ಯೆರೆಮೀಯ 17:9ಕ್ಕೆ ಕ್ರೈಸ್ತರು ಏಕೆ ಗಮನಕೊಡಬೇಕು? ಯಾವ ಪ್ರಾಮುಖ್ಯ ಪಾಠವನ್ನು ಟಾರಾ ಕಲಿತಳು?
7 ಸಮಾಪ್ತಿ: ಈ ವಿಡಿಯೋದಿಂದ ನೀವು ಯಾವ ಪಾಠಗಳನ್ನು ಕಲಿತಿದ್ದೀರಿ? ಇತರರಿಗೆ ಸಹಾಯಮಾಡಲು ನೀವಿದನ್ನು ಹೇಗೆ ಉಪಯೋಗಿಸಬಲ್ಲಿರಿ?—ಕೀರ್ತ. 71:17.