ಪ್ರಶ್ನಾ ರೇಖಾಚೌಕ
◼ ಮೋಬೈಲ್ ಫೋನ್‌ಗಳು ಮತ್ತು ಇಲೆಕ್ಟ್ರಾನಿಕ್ ಪೇಜರ್‌ಗಳನ್ನು ಉಪಯೋಗಿಸುವಾಗ ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಗಳು ಯಾವುವು?
ಇಂತಹ ಉಪಕರಣಗಳು ನಾವು ಹೆಚ್ಚುಕಡಿಮೆ ಎಲ್ಲಿಂದಲೂ ಇತರರನ್ನು ಸಂಪರ್ಕಿಸಲು ನಮ್ಮನ್ನು ಸಾಧ್ಯಗೊಳಿಸುವವು. ಮೋಬೈಲ್ ಫೋನ್‌ಗಳು ಮತ್ತು ಪೇಜರ್‌ಗಳು ಉಪಯುಕ್ತಕರವಾಗಿರಬಹುದಾದರೂ, ಅವುಗಳನ್ನು ಅನುಚಿತವಾದ ಸಮಯಗಳಲ್ಲಿ ಉಪಯೋಗಿಸುವ ಮೂಲಕ ನಮ್ಮ ಶುಶ್ರೂಷೆ ಅಥವಾ ಕ್ರೈಸ್ತ ಕೂಟಗಳಲ್ಲಿ ಅವು ಗಮನವನ್ನು ಅಪಕರ್ಷಿಸುವಂತೆ ಬಿಡದಿರಲು ನಾವು ಜಾಗ್ರತೆ ವಹಿಸಬೇಕು. ಇದು ಹೇಗೆ ಸಂಭವಿಸಬಹುದು?
ನಾವು ಕ್ಷೇತ್ರ ಶೂಶ್ರೂಷೆಯಲ್ಲಿ ಸಾಕ್ಷಿ ನೀಡುತ್ತಿರುವಾಗ ನಮ್ಮ ಮೋಬೈಲ್ ಫೋನ್ ರಿಂಗ್ ಆಗುವುದಾದರೆ ಅಥವಾ ನಮ್ಮ ಪೇಜರ್ ಬೀಪ್ ಮಾಡುವುದಾದರೆ, ಅದರಿಂದುಂಟಾಗುವ ಪರಿಣಾಮವನ್ನು ಪರಿಗಣಿಸಿರಿ. ಮನೆಯವರು ಏನು ನೆನಸಬಹುದು? ನಾವು ಆ ಕರೆಯನ್ನು ಉತ್ತರಿಸಲಿಕ್ಕಾಗಿ ನಮ್ಮ ಸಂಭಾಷಣೆಯನ್ನು ನಿಲ್ಲಿಸುವುದಾದರೆ, ಮನೆಯವನಿಗೆ ಯಾವ ಅಭಿಪ್ರಾಯವನ್ನು ಕೊಡುವೆವು? ಇತರರು ರಾಜ್ಯ ಸಂದೇಶವನ್ನು ಕೇಳಿಸಿಕೊಳ್ಳುವುದರಿಂದ ಅವರನ್ನು ತಡೆಗಟ್ಟಬಹುದಾದ ಯಾವುದೇ ಕೆಲಸವನ್ನು ನಾವು ಮಾಡಲು ಬಯಸೆವು ಎಂಬುದಂತೂ ಖಂಡಿತ. (2 ಕೊರಿಂ. 6:3) ಆದುದರಿಂದ, ನಾವು ಒಂದು ಮೋಬೈಲ್ ಫೋನ್ ಅಥವಾ ಪೇಜರನ್ನು ಕೊಂಡೊಯ್ಯುವುದಾದರೆ, ನಾವು ಕ್ಷೇತ್ರ ಶುಶ್ರೂಷೆಯಲ್ಲಿ ಒಳಗೂಡಿರುವಾಗ ನಮ್ಮ ಅಥವಾ ಇತರರ ಗಮನವನ್ನು ಅಪಕರ್ಷಿಸದಂತೆ ಅದನ್ನು ಅಡ್ಜಸ್ಟ್ ಮಾಡಿ ಇಡಬೇಕು.
ಇತರರು ಸಾಕ್ಷಿಕೊಡುತ್ತಿರುವಾಗ ನಾವು ಪಕ್ಕದಲ್ಲಿ ಸುಮ್ಮನೆ ನಿಂತು ಕಾಯುತ್ತಿರುವಲ್ಲಿ ಆಗೇನು? ನಾವು ಕ್ಷೇತ್ರ ಸೇವೆಗೆಂದು ಒಂದಷ್ಟು ಸಮಯವನ್ನು ಬದಿಗಿರಿಸಿರುವುದಾದರೆ, ನಾವು ನಮ್ಮ ಮನಸ್ಸನ್ನು ಆ ಚಟುವಟಿಕೆಯ ಮೇಲೆ ಕೇಂದ್ರೀಕರಿಸಬೇಕಲ್ಲವೇ? ನಮ್ಮ ಪವಿತ್ರ ಸೇವೆಯ ಕಡೆಗಿನ ಗೌರವದಿಂದಾಗಿ, ದಯವಿಟ್ಟು ಅನಗತ್ಯವಾದ ವೈಯಕ್ತಿಕ ವ್ಯಾಪಾರವನ್ನು ಅಥವಾ ಸಾಮಾಜಿಕ ಅಭಿರುಚಿಗಳನ್ನು ಬೇರೊಂದು ಸಮಯದಲ್ಲಿ ನೋಡಿಕೊಳ್ಳಿ. (ರೋಮಾ. 12:7) ಆದರೆ, ಇದರರ್ಥ ಹೆಚ್ಚಿನ ಸಾಕ್ಷಿಯನ್ನು ಕೊಡಲಿಕ್ಕಾಗಿ ಅಥವಾ ಸಾಕ್ಷಿಕೊಡಲಿಕ್ಕಾಗಿ ಒಂದು ಸಮಯವನ್ನು ನಿಗದಿಸಲು ಫೋನನ್ನು ಉಪಯೋಗಿಸಬಾರದು ಎಂದಾಗಿರುವುದಿಲ್ಲ.
ನಾವು ಗಾಡಿಯನ್ನು ಓಡಿಸುವಾಗ ಮೋಬೈಲ್ ಫೋನ್‌ಗಳನ್ನು ಉಪಯೋಗಿಸುವುದರ ಕುರಿತು ವಿಶೇಷವಾಗಿ ಎಚ್ಚರಿಕೆಯುಳ್ಳವರಾಗಿರಬೇಕು. ಏಕೆಂದರೆ ಕೆಲವು ಸಂಶೋಧನೆಗಳು ತೋರಿಸುವಂತೆ, ಹೀಗೆ ಮಾಡುವುದು ಅಪಘಾತಕ್ಕೊಳಗಾಗುವ ಅಪಾಯವನ್ನು ಅಧಿಕಗೊಳಿಸುತ್ತದೆ. ಗಾಡಿಯನ್ನು ಓಡಿಸುವಾಗ ಮೋಬೈಲ್ ಫೋನ್‌ಗಳನ್ನು ಉಪಯೋಗಿಸುವುದನ್ನು ನಿರ್ಬಂಧಿಸುವ ಯಾವುದೇ ಕಾನೂನುಗಳನ್ನು ನಾವು ಚಾಚೂತಪ್ಪದೆ ಪಾಲಿಸಬೇಕು.
ನಾವು ಕ್ರೈಸ್ತ ಕೂಟಗಳಿಗೆ, ಸಮ್ಮೇಳನಗಳಿಗೆ ಮತ್ತು ಅಧಿವೇಶನಗಳಿಗೆ ಯೆಹೋವನನ್ನು ಆರಾಧಿಸಲಿಕ್ಕಾಗಿ ಮತ್ತು ಆತನಿಂದ ಬೋಧಿಸಲ್ಪಡಲಿಕ್ಕಾಗಿ ಬರುತ್ತೇವೆ. ಈ ಸಂದರ್ಭಗಳ ಪಾವಿತ್ರ್ಯಕ್ಕಾಗಿರುವ ಗಣ್ಯತೆಯು, ನಾವು ಮೋಬೈಲ್ ಫೋನ್‌ಗಳು ಮತ್ತು ಪೇಜರ್‌ಗಳು ನಮ್ಮ ಅಥವಾ ಇತರರ ಗಮನವನ್ನು ಅಪಕರ್ಷಿಸದಂತೆ ಅವುಗಳನ್ನು ಅಡ್ಜಸ್ಟ್ ಮಾಡಿ ಇಡುವಂತೆ ನಮ್ಮನ್ನು ಪ್ರೇರಿಸಬೇಕಲ್ಲವೇ? ತತ್‌ಕ್ಷಣವೇ ನಮ್ಮ ಗಮನವನ್ನು ಕೇಳಿಕೊಳ್ಳುವಂಥ ತುರ್ತಿನ ಪರಿಸ್ಥಿತಿಯು ಏಳುವಲ್ಲಿ, ನಾವು ಅದನ್ನು ಕೂಟದ ಸ್ಥಳದ ಹೊರಗೆ ನಿರ್ವಹಿಸಬೇಕು. ಇಲ್ಲವಾದರೆ, ನಾವು ವೈಯಕ್ತಿಕ ಅಥವಾ ಐಹಿಕ ವಿಚಾರಗಳನ್ನು ನೋಡಿಕೊಳ್ಳಲಿಕ್ಕಾಗಿ, ಆರಾಧನೆಗಾಗಿ ಮೀಸಲಾಗಿಡಲ್ಪಟ್ಟಿರುವ ಸಮಯದಲ್ಲಲ್ಲ ಬದಲಾಗಿ ಬೇರೆ ಸಮಯಗಳಲ್ಲಿ ಏರ್ಪಾಡುಗಳನ್ನು ಮಾಡಬೇಕು.—1 ಕೊರಿಂ. 10:24.
ಮೋಬೈಲ್ ಫೋನ್‌ಗಳನ್ನು ಅಥವಾ ಇನ್ನಾವುದೇ ಇಲೆಕ್ಟ್ರಾನಿಕ್ ಸಾಧನವನ್ನು ನಾವು ಉಪಯೋಗಿಸುವ ವಿಧವು, ಯಾವಾಗಲೂ ಇತರರಿಗೆ ಪರಿಗಣನೆಯನ್ನು ಮತ್ತು ಆತ್ಮಿಕ ವಿಷಯಗಳಿಗೆ ಆಳವಾದ ಗಣ್ಯತೆಯನ್ನು ತೋರಿಸುವಂತಿರಲಿ.