ಐಕ್ಯಭಾವದಿಂದ ಜೋಡಿಸಲ್ಪಟ್ಟವರಾಗಿರ್ರಿ
1 ಮಾನವ ದೇಹದ ಕೌಶಲಭರಿತ ವಿನ್ಯಾಸವನ್ನು ಕಂಡು ನೀವು ಎಷ್ಟು ಸಲ ಆಶ್ಚರ್ಯಪಟ್ಟಿದ್ದೀರಿ? (ಕೀರ್ತ. 139:14) ದೇಹದ ಪ್ರತಿಯೊಂದು ಅಂಗವು ಬೇರೆಲ್ಲಾ ಅಂಗಗಳೊಂದಿಗೆ ಹೊಂದಿಕೊಂಡು ಕೆಲಸಮಾಡುತ್ತದೆ. ದೇವರ ವಾಕ್ಯವು ಕ್ರೈಸ್ತ ಸಭೆಯನ್ನು ಸುಸಂಯೋಜಿತ ದೇಹದೊಂದಿಗೆ ಹೋಲಿಸುತ್ತದೆ. ಶಿರಸ್ಸಾದ ಯೇಸುವಿನ ಕೆಳಗೆ, ಸಭೆಯ ಪ್ರತಿಯೊಬ್ಬ ಸದಸ್ಯರು ‘ಎಲ್ಲಾ ನರಗಳಿಂದ ಬಿಗಿಯಾಗಿ ಜೋಡಿಸಲ್ಪಟ್ಟು ಅದರದರ ಶಕ್ತಿಯ ಪ್ರಕಾರ ಐಕ್ಯವಾಗಿದ್ದಾರೆ.’ (ಎಫೆ. 4:16) ಆದುದರಿಂದ, ಯೆಹೋವನು ಅದ್ಭುತಕರವಾದ ವಿಷಯಗಳನ್ನು ಸಾಧಿಸಲಿಕ್ಕಾಗಿ ತನ್ನ ಐಕ್ಯ ಜನರನ್ನು ಉಪಯೋಗಿಸಬಲ್ಲನು.
2 ಪ್ರಥಮ ಶತಮಾನದ ಸಭೆಯ ಸದಸ್ಯರು, ಒಬ್ಬರು ಇನ್ನೊಬ್ಬರ ಆತ್ಮಿಕ ಮತ್ತು ಭೌತಿಕ ಆವಶ್ಯಕತೆಗಳನ್ನು ನೋಡಿಕೊಳ್ಳಲಿಕ್ಕಾಗಿ “ಏಕಮನಸ್ಸಿನಿಂದ” ಕಾರ್ಯನಡಿಸಿದರು. (ಅ. ಕೃ. 2:44-47) ಯೆಹೋವನ ಬೆಂಬಲದೊಂದಿಗೆ, ಅವರು ಘೋರ ಹಿಂಸೆಯನ್ನು ಐಕ್ಯದಿಂದ ಎದುರಿಸಿದರು ಮತ್ತು ಅದನ್ನು ಜಯಿಸಿದರು. (ಅ. ಕೃ. 4:24-31) ಅವರು ಎಲ್ಲೆಲ್ಲಾ ಹೋದರೋ ಅಲ್ಲಿ ರಾಜ್ಯದ ಸಂದೇಶವನ್ನು ಪ್ರಕಟಿಸಿದರು. ಹೀಗೆ ಆ ಸಮಯದಲ್ಲಿ ಜ್ಞಾತವಾಗಿದ್ದ ಭೂಭಾಗವನ್ನು ಅವರು ಸುವಾರ್ತೆಯಿಂದ ಆವರಿಸಿದರು. (ಕೊಲೊ. 1:23) ಆಧುನಿಕ ಕಾಲಗಳಲ್ಲಿ, ಕ್ರೈಸ್ತ ಸಭೆಯು ಇದೇ ವಿಷಯಗಳನ್ನು ಇನ್ನೂ ದೊಡ್ಡದಾದ ಪ್ರಮಾಣದಲ್ಲಿ ಐಕ್ಯವಾಗಿ ಸಾಧಿಸಿದೆ. ಈ ಒಗ್ಗಟ್ಟಿಗೆ ಯಾವ ಅಂಶಗಳು ನೆರವು ನೀಡಿವೆ?
3 ದೈವಿಕ ಬೋಧನೆಯಿಂದ ಒಟ್ಟಾಗಿ ಕೂಡಿಸಲ್ಪಡುವುದು: ಭೂಮಿಯಾದ್ಯಂತ, ನಾವು ನಮ್ಮ ಆರಾಧನೆಯಿಂದಾಗಿ ಐಕ್ಯಗೊಳಿಸಲ್ಪಟ್ಟಿದ್ದೇವೆ. ಇದು ಹೇಗೆ ಸಾಧ್ಯ? ಆತ್ಮಿಕ ‘ಆಹಾರವನ್ನು ಹೊತ್ತುಹೊತ್ತಿಗೆ’ ಒದಗಿಸುವ ಯೆಹೋವನ ದೃಶ್ಯ ಮಾಧ್ಯಮವನ್ನು ನಾವು ಅಂಗೀಕರಿಸುತ್ತೇವೆ. (ಮತ್ತಾ. 24:45) ಆತನು ಸಭೆಯಲ್ಲಿ ಬೋಧಕರೋಪಾದಿ ಕೊಟ್ಟಿರುವ ‘ಮನುಷ್ಯರಲ್ಲಿ ದಾನಗಳನ್ನು’ ಸಹ ನಾವು ಬಹಳಷ್ಟು ಗಣ್ಯಮಾಡುತ್ತೇವೆ. ನಮ್ಮನ್ನು ಆತ್ಮಿಕವಾಗಿ ಪೋಷಿಸಲಿಕ್ಕಾಗಿರುವ ಯೆಹೋವನ ಒದಗಿಸುವಿಕೆಗಳನ್ನು ನಾವು ನಮ್ರತೆಯಿಂದ ಸ್ವೀಕರಿಸುವಾಗ, ಯೆಹೋವನ ವಾಕ್ಯದ ಕುರಿತಾದ ನಮ್ಮ ತಿಳಿವಳಿಕೆಯು ಬೆಳೆಯುತ್ತದೆ ಮತ್ತು ಯೇಸುವಿನ ಶಿಷ್ಯರಾಗಿ ಅವನನ್ನು ಅನುಕರಿಸುವ ಒಂದೇ ರೀತಿಯ ಬಯಕೆಯನ್ನು ನಮ್ಮಲ್ಲಿ ಉಂಟುಮಾಡುತ್ತದೆ. ‘ನಂಬಿಕೆಯಿಂದ ಐಕ್ಯವನ್ನು ಹೊಂದು’ವುದಕ್ಕಾಗಿ ಮನಃಪೂರ್ವಕವಾಗಿ ಪ್ರಯತ್ನಿಸುತ್ತಾ, ನಾವು ದೇವರ ವಾಕ್ಯವನ್ನು ಅಧ್ಯಯನ ಮಾಡುತ್ತಾ ಮುಂದುವರಿಯಬೇಕು. (ಎಫೆ. 4:8, 11-13) ಬೈಬಲನ್ನು ದಿನಾಲೂ ಓದುವ ಮೂಲಕ ನೀವು ನಮ್ಮ ಆತ್ಮಿಕ ಐಕ್ಯವನ್ನು ವರ್ಧಿಸುತ್ತಿದ್ದೀರೋ?
4 ಕ್ರೈಸ್ತ ಸಹವಾಸದಿಂದ ಐಕ್ಯಗೊಳಿಸಲ್ಪಟ್ಟಿರುವುದು: ಕ್ರೈಸ್ತ ಕೂಟಗಳಲ್ಲಿ ಪ್ರೀತಿಯು ನಮ್ಮನ್ನು ಆಪ್ತವಾದ ಸಹವಾಸದಲ್ಲಿ ಒಟ್ಟುಗೂಡಿಸುತ್ತದೆ. ಈ ಕೂಟಗಳಲ್ಲಿ, ನಾವು ‘ಪರಸ್ಪರ ಹಿತಚಿಂತಕರಾಗಿರು’ತ್ತೇವೆ. (ಇಬ್ರಿ. 10:24, 25) ಇದು ಹೊರಗಿನ ತೋರಿಕೆಗಳಿಗಿಂತ ಹೆಚ್ಚನ್ನು ನೋಡುವುದು ಮತ್ತು ನಮ್ಮ ಸಹೋದರರನ್ನು ನಿಜವಾಗಿಯೂ ತಿಳಿದುಕೊಳ್ಳುವುದನ್ನು ಆವಶ್ಯಪಡಿಸುತ್ತದೆ. ಯೆಹೋವನು ಅವರನ್ನು ಪರಿಗಣಿಸುವಂತೆಯೇ ನಾವೂ ಅವರನ್ನು ಅಮೂಲ್ಯರಾಗಿ ಪರಿಗಣಿಸಬೇಕು. (ಹಗ್ಗಾ. 2:7, NW ಪಾದಟಿಪ್ಪಣಿ) ನಾವು ಅವರ ನಂಬಿಕೆಯ ಅಭಿವ್ಯಕ್ತಿಗಳಿಗೆ ಕಿವಿಗೊಡುವಾಗ, ಅವರಿಗಾಗಿರುವ ನಮ್ಮ ಪ್ರೀತಿಯು ಗಾಢಗೊಳ್ಳುತ್ತದೆ ಮತ್ತು ನಮ್ಮ ಐಕ್ಯವು ಬಲಗೊಳ್ಳುತ್ತದೆ. ಸಭಾ ಕೂಟಗಳಿಗೆ ಕ್ರಮವಾಗಿ ಹಾಜರಾಗುವ ವ್ಯಕ್ತಿ ಎಂಬ ಹೆಸರು ನಿಮಗಿದೆಯೋ?
5 ಕ್ಷೇತ್ರದಲ್ಲಿ ಜೊತೆಗೆಲಸದವರು: ಜೊತೆವಿಶ್ವಾಸಿಗಳೊಂದಿಗೆ ಸುವಾರ್ತೆಯನ್ನು ಸಾರುವುದು, ದೇವರ ಚಿತ್ತವನ್ನು ಮಾಡುವುದರಲ್ಲಿ ನಮ್ಮನ್ನು ಐಕ್ಯಗೊಳಿಸುತ್ತದೆ. ಅಪೊಸ್ತಲ ಪೌಲನು ‘ರಾಜ್ಯಾಭಿವೃದ್ಧಿಗಾಗಿರುವ ತನ್ನ ಜೊತೆಗೆಲಸದವರನ್ನು’ ಗಣ್ಯಮಾಡಿದನು. (ಕೊಲೊ. 4:11) ಶುಶ್ರೂಷೆಯಲ್ಲಿರುವಾಗ ಅನುಭವಗಳನ್ನು ಹಂಚಿಕೊಳ್ಳುವುದು ಮತ್ತು ಒಬ್ಬರನ್ನೊಬ್ಬರು ಬೆಂಬಲಿಸುವುದು, ನಮ್ಮ ಕ್ರೈಸ್ತ ನೇಮಕವನ್ನು ಪೂರೈಸಲು ನಮಗೆ ಸಹಾಯಮಾಡುತ್ತದೆ ಮತ್ತು ಐಕ್ಯತೆಯ ನಮ್ಮ ಬಂಧವನ್ನು ಬಲಪಡಿಸುತ್ತದೆ.—ಕೊಲೊ. 3:14.
6 ಪವಿತ್ರಾತ್ಮದ ಐಕ್ಯಗೊಳಿಸುವ ಪ್ರಭಾವ: ನಾವು ಯೆಹೋವನ ಚಿತ್ತವನ್ನು ಮಾಡುವುದರಲ್ಲಿ ಶ್ರದ್ಧೆಯಿಂದ ನಿರತರಾಗಿರುವಾಗ, ಆತನು ನಮಗೆ ತನ್ನ ಆತ್ಮವನ್ನು ಕೊಡುತ್ತಾನೆ. ಇದು ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲು ಮತ್ತು ಒಂದಾಗಿರಲು ನಮಗೆ ಸಹಾಯಮಾಡುತ್ತದೆ. (ಕೀರ್ತ. 133:1) ಇದು “ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳು”ವಂತೆ ನಮ್ಮನ್ನು ಪ್ರೇರಿಸುತ್ತದೆ. (ಎಫೆ. 4:3) ದೇವಜನರ ಮಧ್ಯೆಯಿರುವ ಒಗ್ಗಟ್ಟಿಗೆ ನಮ್ಮಲ್ಲಿ ಪ್ರತಿಯೊಬ್ಬರೂ ಹೆಚ್ಚನ್ನು ಕೂಡಿಸಬಲ್ಲೆವು. ಅದನ್ನು ನಾವು ಒಬ್ಬರು ಇನ್ನೊಬ್ಬರನ್ನು ಉಪಚರಿಸುವ ರೀತಿಯಲ್ಲಿ ಪವಿತ್ರಾತ್ಮದ ಫಲಗಳನ್ನು ವ್ಯಕ್ತಪಡಿಸುವ ಮೂಲಕ ಮಾಡಸಾಧ್ಯವಿದೆ.—ಗಲಾ. 5:22, 23.
7 ಕ್ರಿಸ್ತನ ಶಿರಸ್ಸುತನದ ಕೆಳಗೆ ಒಟ್ಟಿಗೆ ಐಕ್ಯದಿಂದ ಸೇವೆ ಸಲ್ಲಿಸುವುದು, ‘ದೇಹವೆಲ್ಲಾ ಪ್ರೀತಿಯಿಂದ ಕ್ಷೇಮಾಭಿವೃದ್ಧಿಯನ್ನು ಹೊಂದುವಂತೆ ಮಾಡುತ್ತದೆ.’ (ಎಫೆ. 4:16) ಮಾತ್ರವಲ್ಲದೆ, ಅದು ‘ಶಾಂತಿದಾಯಕ ದೇವರಾದ’ ಯೆಹೋವನನ್ನು ಮಹಿಮೆಪಡಿಸುತ್ತದೆ.—ರೋಮಾ. 16:20.