ಹೊಸ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮ
1 ವಾರ್ತಾ ಮಾಧ್ಯಮಗಳು ಹಾಗೂ ಐಹಿಕ ಶಿಕ್ಷಕರು ಪ್ರಾಪಂಚಿಕ ಐಶ್ವರ್ಯಕ್ಕೆ ಮಹತ್ವವನ್ನು ನೀಡುತ್ತಾರಾದರೂ, ‘ಸತ್ಕಾರ್ಯಗಳಲ್ಲಿ ಐಶ್ವರ್ಯವಂತರಾಗಿರಿ’ ಎಂದು ದೇವರ ವಾಕ್ಯವು ನಮ್ಮನ್ನು ಉತ್ತೇಜಿಸುತ್ತದೆ. (1 ತಿಮೊ. 6:18) ಇದು, 2003ರ ಏಪ್ರಿಲ್ ತಿಂಗಳಲ್ಲಿ ಆರಂಭವಾಗುವ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮದ ಮುಖ್ಯ ವಿಷಯವಾಗಿದೆ. ಈ ಸಮ್ಮೇಳನದಲ್ಲಿ ನಾವು ಯಾವ ಉತ್ತೇಜನವನ್ನು ಪಡೆದುಕೊಳ್ಳುವೆವು?
2 “ದೇವರ ದೃಷ್ಟಿಕೋನದಿಂದ ಐಶ್ವರ್ಯವಂತರಾಗಿರಿ” ಎಂಬುದರ ಅರ್ಥವೇನು ಎಂಬುದನ್ನು ಸರ್ಕಿಟ್ ಮೇಲ್ವಿಚಾರಕರು ಚರ್ಚಿಸುವರು. ಮತ್ತು ಅವರು ಆತ್ಮಿಕ ಐಶ್ವರ್ಯವನ್ನು ಪಡೆದುಕೊಳ್ಳಲಿಕ್ಕಾಗಿ ಶ್ರಮಿಸುತ್ತಿರುವಂಥ ಕೆಲವರ ಇಂಟರ್ವ್ಯೂಮಾಡುವರು. ದಿನದ ಮೊದಲ ಭಾಷಣದಲ್ಲಿ ಸಂದರ್ಶಕ ಭಾಷಣಕಾರನು, ದೇವಜನರು ಹೇಗೆ “ಈ ಕೊಯ್ಲಿನ ಸಮಯದಲ್ಲಿ ಸತ್ಕಾರ್ಯಗಳನ್ನು” ಮಾಡುತ್ತಿದ್ದಾರೆ ಎಂಬುದನ್ನು ತೋರಿಸುವನು. ಇಂದು ಮಾಡಲ್ಪಡುತ್ತಿರುವ ದೇವನೇಮಿತ ಕೊಯ್ಲಿನ ಕೆಲಸದಲ್ಲಿ ನಾವು ಇನ್ನೂ ಹೆಚ್ಚಿನ ಮಟ್ಟಿಗೆ ಹೇಗೆ ಪಾಲ್ಗೊಳ್ಳಬಹುದು ಎಂಬುದನ್ನು ಪರಿಗಣಿಸುವಾಗ, ನಮ್ಮಲ್ಲಿ ಪ್ರತಿಯೊಬ್ಬರೂ ಉತ್ತೇಜನವನ್ನು ಪಡೆದುಕೊಳ್ಳುವೆವು.
3 ಆತ್ಮಿಕ ಐಶ್ವರ್ಯವನ್ನು ಬೆನ್ನಟ್ಟುತ್ತಿರುವ ಕ್ರೈಸ್ತ ಯುವ ಜನರನ್ನು ನಾವು ನೋಡುವಾಗ ನಮಗೆಷ್ಟು ಸಂತೋಷವಾಗುತ್ತದೆ! ಇದು ಯೆಹೋವನನ್ನು ಮಹಿಮೆಪಡಿಸುತ್ತದೆ ಮತ್ತು ಭವಿಷ್ಯತ್ತಿನ ಸೇವಾ ಸುಯೋಗಗಳಿಗಾಗಿ ಒಂದು ಒಳ್ಳೇ ತಳಪಾಯವನ್ನು ಹಾಕುವಂತೆ ಯುವ ಜನರಿಗೆ ಸಹಾಯಮಾಡುತ್ತದೆ. “ಯೆಹೋವನನ್ನು ಸ್ತುತಿಸುವುದರಲ್ಲಿ ಯುವ ಜನರ ಸತ್ಕಾರ್ಯಗಳಿಗಾಗಿ ಅವರನ್ನು ಶ್ಲಾಘಿಸುವುದು” ಎಂಬ ಭಾಗವು, ಸ್ಥಳಿಕವಾಗಿ ಯುವ ಕ್ರೈಸ್ತರು ಮಾಡುತ್ತಿರುವ ಸತ್ಕಾರ್ಯಗಳನ್ನು ಎತ್ತಿತೋರಿಸುವುದು.
4 ಸತ್ಕಾರ್ಯಗಳನ್ನು ಬೆನ್ನಟ್ಟುವುದರಿಂದ ಯಾವ ಫಲಿತಾಂಶಗಳು ಸಿಗುತ್ತವೆ? ಇದನ್ನು ಸಂದರ್ಶಕ ಭಾಷಣಕಾರನು, “ಸತ್ಕಾರ್ಯಗಳಲ್ಲಿ ಮುಂದುವರಿಯಿರಿ ಮತ್ತು ಯೆಹೋವನ ಆಶೀರ್ವಾದಗಳನ್ನು ಪಡೆದುಕೊಳ್ಳಿರಿ” ಎಂಬ ತನ್ನ ಅಂತಿಮ ಭಾಷಣದಲ್ಲಿ ಚರ್ಚಿಸುವನು. ನಾವು ಹೇರಳವಾದ ಆಶೀರ್ವಾದಗಳನ್ನು ಪಡೆದುಕೊಳ್ಳಲಿರುವ ನಾಲ್ಕು ಕ್ಷೇತ್ರಗಳನ್ನು ಅವನು ಪರಿಗಣಿಸುವನು: (1) ವ್ಯಕ್ತಿಗಳೋಪಾದಿ, (2) ಕುಟುಂಬಗಳೋಪಾದಿ, (3) ಒಂದು ಸಭೆಯೋಪಾದಿ, ಮತ್ತು (4) ಲೋಕವ್ಯಾಪಕ ಸಂಸ್ಥೆಯೋಪಾದಿ.
5 ಯೆಹೋವನಿಗೆ ಸಮರ್ಪಣೆಯನ್ನು ಮಾಡಿಕೊಂಡಿರುವವರಿಗೆ ದೀಕ್ಷಾಸ್ನಾನವನ್ನು ಪಡೆದುಕೊಳ್ಳುವ ಅವಕಾಶವಿರುವುದು. ನೀವು ಆ ಹೆಜ್ಜೆಯನ್ನು ತೆಗೆದುಕೊಳ್ಳಲು ಸಿದ್ಧರಿರುವಲ್ಲಿ, ಕೂಡಲೆ ಅದನ್ನು ಅಧ್ಯಕ್ಷ ಮೇಲ್ವಿಚಾರಕರಿಗೆ ತಿಳಿಯಪಡಿಸಿರಿ.
6 ನಿಮ್ಮ ಕ್ಷೇತ್ರಕ್ಕಾಗಿರುವ ಸಮ್ಮೇಳನದ ತಾರೀಖು ಪ್ರಕಟಿಸಲ್ಪಡುವಾಗ, ಅಲ್ಲಿ ಹಾಜರಿರಲಿಕ್ಕಾಗಿ ನಿಶ್ಚಿತ ಯೋಜನೆಗಳನ್ನು ಮಾಡಲು ಕೂಡಲೆ ಕ್ರಿಯೆಗೈಯಿರಿ. ಆರಂಭದ ಗೀತೆ ಹಾಗೂ ಪ್ರಾರ್ಥನೆಯಲ್ಲಿ ಒಳಗೂಡಲಿಕ್ಕಾಗಿ ಸ್ವಲ್ಪ ಬೇಗನೆ ಬರಲು ಪ್ರಯತ್ನಿಸಿರಿ. ವಿಶೇಷ ಸಮ್ಮೇಳನ ದಿನದ ಇಡೀ ಕಾರ್ಯಕ್ರಮಕ್ಕೆ ಉಪಸ್ಥಿತರಿರುವುದು ಮತ್ತು ಜಾಗರೂಕತೆಯಿಂದ ಕಿವಿಗೊಡುವುದು, ನಮ್ಮ ದೇವರಾಗಿರುವ ಯೆಹೋವನ ದೃಷ್ಟಿಕೋನದಲ್ಲಿ ನಿಜವಾಗಿಯೂ ಐಶ್ವರ್ಯವಂತರನ್ನಾಗಿ ಮಾಡುವಂಥ ಒಂದು ಮಾರ್ಗವನ್ನು ಬೆನ್ನಟ್ಟುತ್ತಾ ಹೋಗುವಂತೆ ನಮ್ಮನ್ನು ಬಲಪಡಿಸುವುದು.