“ಹುರುಪಿನ ರಾಜ್ಯ ಘೋಷಕರು” ಜಿಲ್ಲಾ ಅಧಿವೇಶನದಿಂದ ಪೂರ್ಣವಾಗಿ ಪ್ರಯೋಜನ ಪಡೆಯುವುದು
1 ಒಂದು ಉತ್ತೇಜನದಾಯಕ ಕಾರ್ಯಕ್ರಮ: ನಮ್ಮ ಇತ್ತೀಚಿನ ಜಿಲ್ಲಾ ಅಧಿವೇಶನದಲ್ಲಿ ಎಂತಹ ಉತ್ತೇಜನೀಯ ಕಾರ್ಯಕ್ರಮದಲ್ಲಿ ನಾವು ಆನಂದಿಸಿದೆವು! ನಾವೆಲ್ಲರೂ, ದೇವರ ರಾಜ್ಯವನ್ನು ಹುರುಪಿನಿಂದ ಘೋಷಿಸಲು ಉತ್ತಮವಾಗಿ ಸನ್ನದ್ಧರಾಗಿರಬೇಕೆಂಬ ಏಕ ಉದ್ದೇಶದೊಂದಿಗೆ ಕೂಡಿಬಂದಿದ್ದೆವು. ಮೊದಲನೆಯ ಭಾಷಣಕರ್ತನು, ‘ಘೋಷಿಸುವುದು’ ಎಂಬ ಶಬ್ದವನ್ನು ಹೇಗೆ ವಿವರಿಸಿದನು ಎಂಬುದು ನಿಮಗೆ ಜ್ಞಾಪಕವಿದೆಯೋ? “ಯೆಹೋವನು ನಮ್ಮೊಂದಿಗೆ ಇದ್ದಾನೆಂಬುದನ್ನು ತಿಳಿದವರಾಗಿ ನಿರ್ಭೀತಿಯಿಂದಿರಿ” ಎಂಬ ಭಾಷಣದಲ್ಲಿ ಯಾವ ಸಂಶೋಧನೆಯನ್ನು ಮಾಡುವಂತೆ ನಮ್ಮನ್ನು ಪ್ರೋತ್ಸಾಹಿಸಲಾಯಿತು ಎಂಬುದನ್ನು ನೀವು ಮರುಜ್ಞಾಪಿಸಿಕೊಳ್ಳಬಲ್ಲಿರೋ? ನೀವು ಇದುವರೆಗೂ ಯಾವ ನಿಜ ಜೀವನ ವೃತ್ತಾಂತಗಳನ್ನು ಪರಿಶೀಲಿಸಿ ನೋಡಿದ್ದೀರಿ?
2 “ವಿವಿಧ ಪರೀಕ್ಷೆಗಳಿಂದ ಶೋಧಿಸಲ್ಪಟ್ಟ ನಮ್ಮ ನಂಬಿಕೆಯ ಗುಣಮಟ್ಟ” ಎಂಬ ಭಾಷಣಮಾಲೆಯು, ಯೆಹೋವನು ಹಿಂಸೆಯನ್ನು ಏಕೆ ಅನುಮತಿಸುತ್ತಾನೆ ಎಂಬುದಕ್ಕೆ ಮೂರು ಪ್ರಧಾನ ಕಾರಣಗಳನ್ನು ಕೊಟ್ಟಿತು. ಅವು ಯಾವುವೆಂದು ನೀವು ವಿವರಿಸಬಲ್ಲಿರೋ? ನಮ್ಮ ಕ್ರೈಸ್ತ ತಾಟಸ್ಥ್ಯಕ್ಕೆ ಇರುವ ಶಾಸ್ತ್ರೀಯ ಆಧಾರ ಯಾವುದು? ನಮ್ಮ ತಟಸ್ಥ ನಿಲುವಿನ ಕಾರಣ ನಾವು ಎದುರಿಸಬಹುದಾದ ಯಾವ ಪಂಥಾಹ್ವಾನಗಳ ವಿಷಯದಲ್ಲಿ ನಾವು ನಮ್ಮನ್ನೇ ಸಿದ್ಧಪಡಿಸಿಕೊಳ್ಳಬೇಕೆಂದು ನಮ್ಮನ್ನು ಪ್ರೋತ್ಸಾಹಿಸಲಾಯಿತು? ನಾವು ಪರೀಕ್ಷೆಗಳಲ್ಲಿ ನಂಬಿಗಸ್ತರಾಗಿ ಉಳಿಯುವುದು ಹೇಗೆ ಯೆಹೋವನಿಗೆ ಸ್ತುತಿಯನ್ನು ತರುತ್ತದೆ?
3 “ಕಷ್ಟಕಾಲಗಳಲ್ಲಿ ಸ್ಥಿರವಾಗಿ ನಿಲ್ಲಿರಿ” ಎಂಬ ಡ್ರಾಮದ ಯಾವ ದೃಶ್ಯಗಳು ವಿಶೇಷವಾಗಿ ನಿಮ್ಮನ್ನು ಬಲಪಡಿಸಿದವು? ನಾವು ಹೇಗೆ ಯೆರೆಮೀಯನಂತಿರಬಲ್ಲೆವು?
4 “ಈ ಪ್ರಪಂಚದ ದೃಶ್ಯವು ಬದಲಾಗುತ್ತಾ ಇದೆ” ಎಂಬ ಬಹಿರಂಗ ಭಾಷಣವು, ಗಮನಾರ್ಹವಾದ ಯಾವ ಬದಲಾವಣೆಗಳು ಭವಿಷ್ಯತ್ತಿನಲ್ಲಿ ಕಾದಿವೆ ಮತ್ತು ದೇವರ ಭಯಪ್ರೇರಕ ದಿನಕ್ಕೆ ನಡೆಸುತ್ತವೆ ಎಂಬುದನ್ನು ವಿವರಿಸಿತು? “ಹುರುಪಿನ ರಾಜ್ಯ ಘೋಷಕರೋಪಾದಿ ನಿಮ್ಮಲ್ಲಿ ಸತ್ಕಾರ್ಯಗಳು ಸಮೃದ್ಧವಾಗಿರಲಿ” ಎಂಬ ಮುಕ್ತಾಯದ ಭಾಷಣಕ್ಕೆ ನೀವು ಕಿವಿಗೊಡುತ್ತಿದ್ದಾಗ, ನಿಮ್ಮ ವೈಯಕ್ತಿಕ ಶುಶ್ರೂಷೆಗೆ ಆ ಮಾಹಿತಿಯನ್ನು ಹೇಗೆ ಸಂಬಂಧಿಸಿದಿರಿ?
5 ಅನ್ವಯಿಸಲು ಮುಖ್ಯವಾದ ಅಂಶಗಳು: “ಕೃತಜ್ಞತೆಯುಳ್ಳವರಾಗಿರಿ” ಎಂಬ ಭಾಷಣದಲ್ಲಿ ವಿವರಿಸಲ್ಪಟ್ಟಂತೆ, ಯೆಹೋವನಿಗಾಗಿರುವ ನಮ್ಮ ಆಳವಾದ ಉಪಕಾರ ಮನೋಭಾವವನ್ನು ನಾವು ಹೇಗೆ ವ್ಯಕ್ತಪಡಿಸಬಲ್ಲೆವು? “ಹುರುಪಿನಿಂದ ಪ್ರಚೋದಿಸಲ್ಪಟ್ಟ ರಾಜ್ಯ ಘೋಷಕರು” ಎಂಬ ಮುಖ್ಯ ಭಾಷಣದಲ್ಲಿ, ಯಾರ ಹುರುಪನ್ನು ಅನುಕರಿಸುವಂತೆ ನಾವು ಪ್ರೋತ್ಸಾಹಿಸಲ್ಪಟ್ಟೆವು? ಯಾವ ಸ್ವಪರೀಕ್ಷೆಯನ್ನು ಮಾಡುವಂತೆ ನಾವು ಕೇಳಿಕೊಳ್ಳಲ್ಪಟ್ಟೆವು?
6 “ಮೀಕನ ಪ್ರವಾದನೆಯು ಯೆಹೋವನ ಹೆಸರಿನಲ್ಲಿ ನಡೆಯುವಂತೆ ನಮ್ಮನ್ನು ಬಲಪಡಿಸುತ್ತದೆ” ಎಂಬ ಭಾಷಣಮಾಲೆಯಲ್ಲಿ, ಯೆಹೋವನ ಅನುಗ್ರಹವನ್ನು ಪಡೆಯುವಂತಾಗಲು ನಾವು ಯಾವ ಮೂರು ಆವಶ್ಯಕತೆಗಳನ್ನು ತಲಪಬೇಕು ಎಂಬುದು ಎತ್ತಿತೋರಿಸಲ್ಪಟ್ಟಿತು? ಇವು ತಲಪಬಲ್ಲ ಆವಶ್ಯಕತೆಗಳೋ? (ಮೀಕ 6:8) “ನಿಮ್ಮ ಹೃದಯವನ್ನು ಕಾಯುವ ಮೂಲಕ ಪರಿಶುದ್ಧತೆಯನ್ನು ಕಾಪಾಡಿಕೊಳ್ಳಿರಿ” ಎಂಬ ಭಾಷಣಕ್ಕನುಸಾರ, ಯಾವ ವಿಧಗಳಲ್ಲಿ ನಾವು ನೈತಿಕವಾಗಿ ಶುದ್ಧರಾಗಿ ಉಳಿಯಬೇಕು? “ಮೋಸದ ವಿರುದ್ಧ ಎಚ್ಚರದಿಂದಿರಿ” ಎಂಬ ಭಾಷಣವು, ಯಾವ ಕ್ಷೇತ್ರಗಳಲ್ಲಿ ನಾವು ಮೋಸಹೋಗದಂತೆ ಮತ್ತು ಇತರರಿಗೆ ಮೋಸಮಾಡದಂತೆ ನಮ್ಮನ್ನು ಎಚ್ಚರಿಸಿತು?
7 “ತಮ್ಮ ಶುಶ್ರೂಷೆಯನ್ನು ಮಹಿಮೆಪಡಿಸುವ ರಾಜ್ಯ ಘೋಷಕರು” ಎಂಬ ಭಾಷಣಮಾಲೆಯಿಂದ ಯಾವ ಪ್ರಾಯೋಗಿಕ ಅಂಶಗಳನ್ನು ನೀವು ನಿಮ್ಮ ಶುಶ್ರೂಷೆಯಲ್ಲಿ ಅನ್ವಯಿಸಲು ಪ್ರಾರಂಭಿಸಿದ್ದೀರಿ? “ಆತ್ಮಿಕ ಸಂಭಾಷಣೆಯು ಭಕ್ತಿವೃದ್ಧಿಮಾಡುತ್ತದೆ” ಎಂಬ ಭಾಷಣದಲ್ಲಿ ಫಿಲಿಪ್ಪಿ 4:8 ಪರಿಶೀಲಿಸಲ್ಪಟ್ಟಿತು. ಈ ಶಾಸ್ತ್ರವಚನವು ನಮ್ಮ ಸಂಭಾಷಣೆಗಳನ್ನು ದೈವಿಕ ವಿಷಯಗಳ ಕಡೆಗೆ ನಿರ್ದೇಶಿಸಲು ಹೇಗೆ ಸಹಾಯಮಾಡುತ್ತದೆ, ಮತ್ತು ಇದನ್ನು ನಾವು ಯಾವಾಗ ಮಾಡಬೇಕು?
8 “ಸಂಕಷ್ಟದ ಸಮಯಗಳಲ್ಲಿ ಯೆಹೋವನಲ್ಲಿ ಪೂರ್ಣ ಭರವಸೆಯಿಡಿರಿ” ಎಂಬ ಭಾಷಣವು, ದುರಂತಕರ ಘಟನೆಗಳು, ಆರ್ಥಿಕ ಕಷ್ಟಗಳು, ನ್ಯೂನ ಆರೋಗ್ಯ, ಕೌಟುಂಬಿಕ ಸಮಸ್ಯೆಗಳು, ಮತ್ತು ನಿತ್ಯವಾಗಿರುವ ದೌರ್ಬಲ್ಯಗಳೊಂದಿಗೆ ನಾವು ಹೇಗೆ ವ್ಯವಹರಿಸಬೇಕು ಎಂಬುದನ್ನು ವಿವರಿಸಿತು. ಈ ಪರಿಸ್ಥಿತಿಗಳನ್ನು ಎದುರಿಸುವಾಗ ನಾವು ಹೇಗೆ ಯೆಹೋವನಲ್ಲಿ ಭರವಸೆಯನ್ನು ತೋರಿಸಬಲ್ಲೆವು?
9 ಹೊಸ ಆತ್ಮಿಕ ನಿಕ್ಷೇಪಗಳು: ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ (ಇಂಗ್ಲಿಷ್) ಎಂಬ ಹೊಸ ಪುಸ್ತಕವನ್ನು ಪಡೆದುಕೊಳ್ಳಲು ನಾವು ಸಂತೋಷಿಸಿದೆವು. ಅದರ ಉದ್ದೇಶವನ್ನು ವಿವರಿಸುತ್ತಾ ಮಾಡಲ್ಪಟ್ಟ ಪ್ರಕಟನೆಯು ನಿಮ್ಮ ಮೇಲೆ ಯಾವ ಪ್ರಭಾವವನ್ನು ಬೀರಿತು? ಶಿಷ್ಯರನ್ನಾಗಿ ಮಾಡುವ ನಮ್ಮ ಕೆಲಸದಲ್ಲಿ ಎರಡನೆಯ ಅಧ್ಯಯನ ಪುಸ್ತಕವಾಗಿ ಅದು ಏಕೆ ಪ್ರಯೋಜನಕರವಾಗಿರುವುದು?
10 ನಂತರ, ದೇವರ ಸಮೀಪಕ್ಕೆ ಬನ್ನಿರಿa ಎಂಬ ಸುಂದರವಾದ ಪುಸ್ತಕವನ್ನು ನಾವು ಪಡೆದುಕೊಂಡೆವು. ಅದರ ವಿಶೇಷ ವೈಶಿಷ್ಟ್ಯಗಳಲ್ಲಿ ಕೆಲವು ಯಾವುವು? ಅದರಲ್ಲಿರುವ ಯಾವ ಚಿತ್ರಗಳು ನಿಮಗೆ ತುಂಬ ಇಷ್ಟವಾದವು? ಅದನ್ನು ಓದುವುದು ನಿಮ್ಮನ್ನು ಯೆಹೋವನ ಸಮೀಪಕ್ಕೆ ತಂದಿದೆಯೋ? ಅದರಿಂದ ಇನ್ನೂ ಯಾರು ಪ್ರಯೋಜನ ಪಡೆಯಬಲ್ಲರು?
11 “ಹುರುಪಿನ ರಾಜ್ಯ ಘೋಷಕರು” ಜಿಲ್ಲಾ ಅಧಿವೇಶನವು, ಈಗಿರುವ ಪಂಥಾಹ್ವಾನದಾಯಕ ಸಮಯಗಳನ್ನು ಎದುರಿಸುವುದರಲ್ಲಿ ನಮಗೆ ಬೇಕಾದ ಆತ್ಮಿಕ ಪ್ರೋತ್ಸಾಹವನ್ನು ಒದಗಿಸಿತು. ಆ ಅತಿ ಶ್ರೇಷ್ಠ ಆತ್ಮಿಕ ಏರ್ಪಾಡಿನಿಂದ ಪೂರ್ಣ ಪ್ರಯೋಜನ ಪಡೆಯಲಿಕ್ಕಾಗಿ, ಏನು ಹೇಳಲ್ಪಟ್ಟಿತೋ ಅದನ್ನು ಜ್ಞಾಪಕದಲ್ಲಿಟ್ಟುಕೊಳ್ಳಲು, ನಾವು ಪಡೆದುಕೊಂಡದ್ದಕ್ಕಾಗಿ ಗಣ್ಯತೆಯನ್ನು ವ್ಯಕ್ತಪಡಿಸಲು, ಮತ್ತು ನಾವು ಕಲಿತದ್ದನ್ನು ಅನ್ವಯಿಸಲು ನಮ್ಮಿಂದಾದುದೆಲ್ಲವನ್ನೂ ಮಾಡೋಣ. (2 ಪೇತ್ರ 3:14) ಹೀಗೆ ಮಾಡುವುದು, ನಾವು ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ಅನುಕರಿಸುತ್ತಾ ಹುರುಪಿನ ರಾಜ್ಯ ಘೋಷಕರಾಗಲು ನಮ್ಮನ್ನು ಬಲಪಡಿಸುವುದು. ಇದೆಲ್ಲವೂ ಯೆಹೋವನ ಮಹಿಮೆಗಾಗಿರುವುದು.—ಫಿಲಿ. 1:9-11.
[ಪಾದಟಿಪ್ಪಣಿ]
a ಕನ್ನಡದಲ್ಲಿ ಲಭ್ಯವಿಲ್ಲ.