ನಂಬಿಗಸ್ತರಾದ ವೃದ್ಧ ಜನರನ್ನು ಮರೆಯದಿರಿ
1 ಅನ್ನಳು ಎಂಭತ್ತುನಾಲ್ಕು ವರುಷ ಪ್ರಾಯದ ವಿಧವೆಯಾಗಿದ್ದರೂ ಮತ್ತು ತುಂಬ ವೃದ್ಧೆಯಾಗಿದ್ದರೂ ‘ಎಂದೂ ದೇವಾಲಯವನ್ನು ಬಿಟ್ಟುಹೋಗುತ್ತಿರಲಿಲ್ಲ.’ ಅವಳ ನಂಬಿಗಸ್ತಿಕೆಯು, ಅವಳಿಗೆ ಒಂದು ವಿಶೇಷ ಪ್ರತಿಫಲವನ್ನು ನೀಡುವಂತೆ ಯೆಹೋವನನ್ನು ಪ್ರಚೋದಿಸಿತು. (ಲೂಕ 2:36-38) ಇಂದು, ಅನೇಕ ಸಹೋದರ ಸಹೋದರಿಯರು ಕಷ್ಟಕರವಾದ ಪರಿಸ್ಥಿತಿಗಳನ್ನು ಎದುರಿಸುತ್ತಿರುವುದಾದರೂ, ಅವರು ಅನ್ನಳಂಥ ಮನೋಭಾವವನ್ನು ತೋರಿಸುತ್ತಾರೆ. ಅಂಥ ನಂಬಿಗಸ್ತ ವ್ಯಕ್ತಿಗಳು ಆರೋಗ್ಯ ಸಮಸ್ಯೆಗಳೊಂದಿಗೆ ಅಥವಾ ಇತಿಮಿತಿಗಳೊಂದಿಗೆ ಹೆಣಗಾಡಬೇಕಾಗಿರುವುದರಿಂದ, ಅವರು ಕೆಲವೊಮ್ಮೆ ನಿರಾಶರಾಗಬಹುದು. ನಾವು ಅವರಿಗೆ ಪ್ರೋತ್ಸಾಹ ನೀಡಬಲ್ಲ ಹಾಗೂ ಅವರು ಒಳ್ಳೇ ಆತ್ಮಿಕ ನಿಯತ ಕ್ರಮವನ್ನು ಕಾಪಾಡಿಕೊಳ್ಳುವಂತೆ ಅವರಿಗೆ ಸಹಾಯಮಾಡಸಾಧ್ಯವಿರುವ ಕೆಲವು ಪ್ರಾಯೋಗಿಕ ವಿಧಗಳನ್ನು ಈಗ ಪರಿಗಣಿಸೋಣ.
2 ಕೂಟಗಳು ಮತ್ತು ಶುಶ್ರೂಷೆ: ಇತರರು ಪ್ರೀತಿಯಿಂದ ಸಾರಿಗೆ ವ್ಯವಸ್ಥೆಯನ್ನು ಏರ್ಪಡಿಸಲು ತಮ್ಮನ್ನು ನೀಡಿಕೊಳ್ಳುವಾಗ, ಅನೇಕ ನಂಬಿಗಸ್ತ ವೃದ್ಧ ಜನರು ಕ್ರಮವಾಗಿ ಕ್ರೈಸ್ತ ಕೂಟಗಳಿಗೆ ಇನ್ನೂ ಸುಲಭವಾಗಿ ಹಾಜರಾಗಸಾಧ್ಯವಿದೆ. ಇದು ಈ ನಂಬಿಗಸ್ತ, ದೀರ್ಘಕಾಲದ ಸೇವಕರನ್ನು ಆತ್ಮಿಕವಾಗಿ ಬಲಪಡಿಸುತ್ತದೆ ಮತ್ತು ಇದು ಸಭೆಗೂ ಪ್ರಯೋಜನದಾಯಕವಾಗಿದೆ. ಅತ್ಯುತ್ತಮವಾದ ಈ ಕಾರ್ಯದಲ್ಲಿ ನೀವೆಂದಾದರೂ ಪಾಲ್ಗೊಂಡಿದ್ದಿರೋ?—ಇಬ್ರಿ. 13:16.
3 ಶುಶ್ರೂಷೆಯಲ್ಲಿ ಕ್ರಮವಾಗಿ ಭಾಗವಹಿಸುವುದು, ನಿಜ ಕ್ರೈಸ್ತರಿಗೆ ಆನಂದ ಹಾಗೂ ಸಂತೃಪ್ತಿಯನ್ನು ತರುತ್ತದೆ. ಹೀಗೆ ಮಾಡುವುದು ವೃದ್ಧರಿಗೆ ಹಾಗೂ ಅಸ್ವಸ್ಥರಿಗೆ ಒಂದು ಪಂಥಾಹ್ವಾನವಾಗಿರಸಾಧ್ಯವಿದೆ. ಸಾಕ್ಷಿಕಾರ್ಯದ ಯಾವುದಾದರೊಂದು ವೈಶಿಷ್ಟ್ಯದಲ್ಲಿ ನಿಮ್ಮೊಂದಿಗೆ “ಜೊತೆಕೆಲಸ”ದವರೋಪಾದಿ ಈ ಪ್ರಿಯರಲ್ಲಿ ಒಬ್ಬರು ನಿಮ್ಮೊಂದಿಗೆ ಜೊತೆಗೂಡಸಾಧ್ಯವಿದೆಯೋ? (ರೋಮಾ. 16:3, 9, 21) ಟೆಲಿಫೋನ್ ಸಾಕ್ಷಿಕಾರ್ಯದಲ್ಲಿ ನಿಮ್ಮೊಂದಿಗೆ ಪಾಲ್ಗೊಳ್ಳಲಿಕ್ಕಾಗಿ ಇಲ್ಲವೆ ಒಂದು ಪುನರ್ಭೇಟಿ ಅಥವಾ ಒಂದು ಬೈಬಲ್ ಅಧ್ಯಯನಕ್ಕೆ ಹೋಗಲಿಕ್ಕಾಗಿ ನಿಮ್ಮೊಂದಿಗೆ ಬರುವಂತೆ ಆ ವೃದ್ಧ ಸಹೋದರ ಅಥವಾ ಸಹೋದರಿಯನ್ನು ನೀವು ಆಮಂತ್ರಿಸಬಹುದು. ವೃದ್ಧರೊಬ್ಬರು ಕಾಯಿಲೆಯ ದೆಸೆಯಿಂದ ಮನೆಯಲ್ಲಿಯೇ ಇರುವಲ್ಲಿ, ಒಬ್ಬ ಬೈಬಲ್ ವಿದ್ಯಾರ್ಥಿಯು ಅಧ್ಯಯನಕ್ಕಾಗಿ ಅವರ ಮನೆಗೇ ಹೋಗಸಾಧ್ಯವಿದೆಯೋ?
4 ಅಧ್ಯಯನ ಮತ್ತು ಸಹವಾಸ: ಆಗಿಂದಾಗ್ಗೆ ಕೆಲವರು ವೃದ್ಧರನ್ನು ಅಥವಾ ಅಸ್ವಸ್ಥರನ್ನು ತಮ್ಮ ಕುಟುಂಬ ಅಧ್ಯಯನಕ್ಕೆ ಹಾಜರಾಗುವಂತೆ ಆಮಂತ್ರಿಸುತ್ತಾರೆ, ಇಲ್ಲವೆ ಅವರ ಮನೆಯಲ್ಲೇ ಈ ಅಧ್ಯಯನವನ್ನು ನಡೆಸುತ್ತಾರೆ. ಒಬ್ಬ ತಾಯಿಯು ತನ್ನ ಇಬ್ಬರು ಚಿಕ್ಕ ಮಕ್ಕಳನ್ನು ಕರೆದುಕೊಂಡು, ಒಬ್ಬ ವೃದ್ಧ ಸಹೋದರಿಯ ಮನೆಯಲ್ಲಿ ಆ ಮಕ್ಕಳೊಂದಿಗೆ ಬೈಬಲ್ ಕಥೆಗಳ ನನ್ನ ಪುಸ್ತಕದ ಅಧ್ಯಯನ ನಡೆಸಲು ಹೋದಳು, ಮತ್ತು ಈ ಸಹವಾಸದಿಂದ ಅವರೆಲ್ಲರೂ ಉತ್ತೇಜನವನ್ನು ಪಡೆದುಕೊಂಡರು. ಅಂಥ ವ್ಯಕ್ತಿಗಳು ಒಂದು ಊಟಕ್ಕೋ ಅಥವಾ ಇನ್ನಿತರ ಸಾಮಾಜಿಕ ಸಂದರ್ಭಗಳಲ್ಲಿಯೋ ಆಮಂತ್ರಿಸಲ್ಪಡುವುದನ್ನು ತುಂಬ ಗಣ್ಯಮಾಡುತ್ತಾರೆ. ತೀರ ದೀರ್ಘವಾದ ಸಮಯದ ವರೆಗೆ ಭೇಟಿ ನೀಡುವುದು ಅಸ್ವಸ್ಥರಿಗೆ ತೊಂದರೆಯಾಗುವಲ್ಲಿ, ನೀವು ಅವರಿಗೆ ಫೋನ್ಮಾಡಬಹುದು ಅಥವಾ ಅವರಿಗೋಸ್ಕರ ಓದಲಿಕ್ಕಾಗಿ, ಅವರೊಂದಿಗೆ ಪ್ರಾರ್ಥಿಸಲಿಕ್ಕಾಗಿ, ಅಥವಾ ಭಕ್ತಿವೃದ್ಧಿಮಾಡುವಂಥ ಒಂದು ಅನುಭವವನ್ನು ಹಂಚಿಕೊಳ್ಳಲಿಕ್ಕಾಗಿ ಸ್ವಲ್ಪ ಸಮಯಕ್ಕಾಗಿ ಅವರಲ್ಲಿಗೆ ಹೋಗಸಾಧ್ಯವಿದೆ.—ರೋಮಾ. 1:11, 12.
5 ಯೆಹೋವನು ನಂಬಿಗಸ್ತರಾದ ವೃದ್ಧ ಜನರನ್ನು ತುಂಬ ಅಮೂಲ್ಯವಾಗಿ ಪರಿಗಣಿಸುತ್ತಾನೆ. (ಇಬ್ರಿ. 6:10, 11) ಅವರಿಗಾಗಿರುವ ನಮ್ಮ ಗಣ್ಯತೆಯನ್ನು ವ್ಯಕ್ತಪಡಿಸುವ ಮೂಲಕ ಮತ್ತು ಒಂದು ಒಳ್ಳೆಯ ಆತ್ಮಿಕ ನಿಯತ ಕ್ರಮವನ್ನು ಕಾಪಾಡಿಕೊಳ್ಳುವಂತೆ ಅವರಿಗೆ ಸಹಾಯಮಾಡುವ ಮೂಲಕ ನಾವು ಆತನನ್ನು ಅನುಕರಿಸಸಾಧ್ಯವಿದೆ.