ನಿಮ್ಮ ಜತೆ ಕರೆದುಕೊಂಡು ಹೋಗಬಲ್ಲಿರಾ?
ತೀವ್ರ ಆರೋಗ್ಯ ಸಮಸ್ಯೆ ಅಥವಾ ವಯಸ್ಸಾದ ಕಾರಣ ಜಾಸ್ತಿ ಸೇವೆ ಮಾಡಲು ಆಗದ ಪ್ರಚಾರಕರು ನಮ್ಮ ಸಭೆಗಳಲ್ಲಿ ಇದ್ದಾರೆ. (2 ಕೊರಿಂ. 4:16) ನಿಮ್ಮ ಸಭೆಯಲ್ಲಿ ಅಂಥವರು ಇರೋದಾದರೆ ನೀವು ಬೈಬಲ್ ಅಧ್ಯಯನ ನಿರ್ವಹಿಸಲು ಹೋಗುವಾಗ ಅವರನ್ನು ಕರೆದುಕೊಂಡು ಹೋಗಬಲ್ಲಿರಾ? ಮನೆಬಿಟ್ಟು ಹೊರಗೆ ಬರಲು ಆಗದಂಥ ಪ್ರಚಾರಕ ಇರೋದಾದರೆ ನೀವು ಮತ್ತು ನಿಮ್ಮ ವಿದ್ಯಾರ್ಥಿ ಅವರ ಮನೆಗೇ ಹೋಗಿ ಬೈಬಲ್ ಅಧ್ಯಯನ ನಡೆಸಬಲ್ಲಿರಾ? ಸೌಖ್ಯವಿಲ್ಲದಿರೋ ಪ್ರಚಾರಕ ಇರೋದಾದರೆ ಅವರನ್ನು ಒಂದೆರಡು ಮನೆ ಸೇವೆ ಮಾಡಲು ಅಥವಾ ಒಂದೆರಡು ಪುನರ್ಭೇಟಿ ಮಾಡಲು ಕರೆದುಕೊಂಡು ಹೋಗಬಲ್ಲಿರಾ? ವಯಸ್ಸಾದ ನಮ್ಮ ಸಹೋದರ ಸಹೋದರಿಯರು ಸಾರುವ ಕೆಲಸದಲ್ಲಿ ತುಂಬ ನಿಪುಣರಾಗಿರುತ್ತಾರೆ. ಅಂಥ ಪ್ರಚಾರಕರ ಜತೆ ಸೇವೆ ಮಾಡುವುದರಿಂದ ನಿಮಗೂ ಪ್ರಯೋಜನವಿದೆ. (ರೋಮ. 1:12) ಅಷ್ಟೇ ಅಲ್ಲ ನೀವು ತೋರಿಸುವ ಪ್ರೀತಿಗೆ ಯೆಹೋವ ದೇವರು ನಿಮ್ಮನ್ನು ಖಂಡಿತ ಆಶೀರ್ವದಿಸುತ್ತಾನೆ.—ಜ್ಞಾನೋ. 19:17; 1 ಯೋಹಾ. 3:17, 18.