ಸಂತೃಪ್ತಿಕರವಾದ ಜೀವನ—ಲಭ್ಯವಾಗುವ ವಿಧ ಎಂಬ ಬ್ರೋಷರ್ಗಾಗಿ ಸೂಚಿತ ನಿರೂಪಣೆಗಳು
◼ “ನಾವೆಲ್ಲರೂ ಎದುರಿಸುತ್ತಿರುವ ದಿನನಿತ್ಯದ ಸಮಸ್ಯೆಗಳನ್ನು ಗಮನಿಸುವಾಗ, ನಿಜವಾಗಿಯೂ ಸಂತೃಪ್ತಿಕರವಾದ ಜೀವನವು ಸಾಧ್ಯವೆಂದು ನಿಮಗನಿಸುತ್ತದೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಮತ್ತಾಯ 5:5ರಲ್ಲಿ ಒಂದು ವಿವೇಕಯುತ ಸಲಹೆಯು ಕಂಡುಬರುತ್ತದೆ. [ಓದಿರಿ] ಆದರೆ, ನಾವು ಹೇಗೆ ಅಂಥ ಶಾಂತ ಗುಣವನ್ನು ಬೆಳೆಸಿಕೊಳ್ಳಬಹುದು ಮತ್ತು ಕೋಪವನ್ನು ಹತೋಟಿಯಲ್ಲಿಡಬಹುದು? ಈ ಪ್ರಕಾಶನದ ಪುಟ 9ರಲ್ಲಿರುವ ಚಿತ್ರವನ್ನು ಮತ್ತು ಅದರ ಕೆಳಗಿರುವ ಬರಹವನ್ನು ಗಮನಿಸಿರಿ.” ಈಗ, ಪುಟ 8ರಲ್ಲಿರುವ ಪ್ಯಾರಗ್ರಾಫ್ 11ಕ್ಕೆ ಗಮನವನ್ನು ಸೆಳೆಯಿರಿ.
◼ “ಅಹಿತಕರ ಪ್ರಭಾವಗಳಿಂದ ತುಂಬಿರುವ ಈ ಲೋಕದಲ್ಲಿ ತಮ್ಮ ಮಕ್ಕಳನ್ನು ಹೇಗೆ ಬೆಳೆಸುವುದು ಎಂಬುದರ ಬಗ್ಗೆ ಅನೇಕ ಹೆತ್ತವರು ಚಿಂತಿತರಾಗಿದ್ದಾರೆಂಬುದನ್ನು ನೀವು ಒಪ್ಪುವುದಿಲ್ಲವೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಅಂಥ ಹಾನಿಕಾರಕ ಪರಿಸರದಿಂದ ತಮ್ಮ ಮಕ್ಕಳನ್ನು ರಕ್ಷಿಸಲು ಹೆತ್ತವರು ಏನು ಮಾಡಸಾಧ್ಯವಿದೆ?” ಜ್ಞಾನೋಕ್ತಿ 22:6ನ್ನು ಓದಿರಿ. ನಂತರ, ಪುಟ 5ನ್ನು ತೆರೆದು, ಮೇಲಣ ಚಿತ್ರವನ್ನು ಮತ್ತು ಪ್ಯಾರಗ್ರಾಫ್ 2ನ್ನು ಚರ್ಚಿಸಿರಿ.
◼ “ಇಂದು, ಶಾಂತಿ ಮತ್ತು ಸಂತೋಷವನ್ನು ಕಂಡುಕೊಳ್ಳಲು ನಮ್ಮಲ್ಲಿ ಅನೇಕರು ಪ್ರಯಾಸಪಡುತ್ತೇವಾದರೂ, ಅದನ್ನು ಕಂಡುಕೊಳ್ಳುವುದು ಬಹಳ ಕಷ್ಟಕರವಾಗಿದೆ. ಇವುಗಳನ್ನು ಕಂಡುಕೊಳ್ಳುವುದು ಇಷ್ಟು ಕಷ್ಟಕರವಾಗಿರುವುದೇಕೆ ಎಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಮಾನವಕುಲದ ಇಂದಿನ ಸ್ಥಿತಿಗತಿಯ ಕುರಿತು ಯೋಬ 14:1, 2 ಏನು ತಿಳಿಸುತ್ತದೆ ಎಂಬುದನ್ನು ಗಮನಿಸಿ. ನಿಜವಾಗಿಯೂ ಸಂತೋಷದಿಂದಿರಲು ನಮಗೆ ಯಾವುದು ಸಹಾಯಮಾಡಬಲ್ಲದು?” ಪುಟ 22ರಲ್ಲಿರುವ ಪ್ಯಾರಗ್ರಾಫ್ 2ರ ಕಡೆಗೆ ಗಮನ ಸೆಳೆಯಿರಿ ಮತ್ತು ಅದೇ ಪುಟದಲ್ಲಿರುವ ಚಿತ್ರವನ್ನು ಸಹ ಚರ್ಚಿಸಿರಿ.