ಜೋಪಾನವಾಗಿಡಿ
ಕ್ಷೇತ್ರ ಸೇವೆಗಾಗಿ ಸೂಚಿಸಲ್ಪಟ್ಟ ನಿರೂಪಣೆಗಳು
ತಿಂಗಳಿನ ಸಾಹಿತ್ಯ ನೀಡುವಿಕೆಯನ್ನು ಒಳಗೂಡಿರುವ ನಿರೂಪಣೆಗಳನ್ನು ತಯಾರಿಸುವುದರಲ್ಲಿ ನಿಮಗೆ ಸಹಾಯಮಾಡಲು ಕೊಡಲ್ಪಟ್ಟಿರುವ ಈ ಮುಂದಿನ ಸಲಹೆಗಳನ್ನು ಉಪಯೋಗಿಸಿರಿ.
ಯೆಹೋವನ ಸಮೀಪಕ್ಕೆ ಬನ್ನಿರಿ
“ದೇವರಲ್ಲಿ ನಂಬಿಕೆಯಿಡುವ ಅನೇಕ ಜನರು ಆತನಿಗೆ ಸಮೀಪವಾಗಿರಲು ಬಯಸುತ್ತಾರೆ. ಆದರೆ ದೇವರು ನಮ್ಮನ್ನು ತನ್ನ ಸಮೀಪಕ್ಕೆ ಬರುವಂತೆ ಆಮಂತ್ರಿಸುತ್ತಾನೆಂಬುದು ನಿಮಗೆ ತಿಳಿದಿತ್ತೋ? [ಯಾಕೋಬ 4:8ನ್ನು ಓದಿರಿ.] ದೇವರ ಸಮೀಪಕ್ಕೆ ಬರಲಿಕ್ಕಾಗಿ ತಮ್ಮ ಸ್ವಂತ ಬೈಬಲನ್ನು ಉಪಯೋಗಿಸಲು ಜನರಿಗೆ ಸಹಾಯಮಾಡುವಂಥ ರೀತಿಯಲ್ಲಿ ಈ ಪ್ರಕಾಶನವು ವಿನ್ಯಾಸಿಸಲ್ಪಟ್ಟಿದೆ.” 16ನೇ ಪುಟದಲ್ಲಿರುವ 1ನೇ ಪ್ಯಾರಗ್ರಾಫನ್ನು ಓದಿರಿ.”
“ಇಂದು ಅನ್ಯಾಯವು ತುಂಬಿತುಳುಕುತ್ತಿದೆ. ಅದು ಇಲ್ಲಿ ವಿವರಿಸಲ್ಪಟ್ಟಿರುವಂತೆಯೇ ಇದೆ. [ಪ್ರಸಂಗಿ 8:9ಎ ಭಾಗವನ್ನು ಓದಿರಿ.] ದೇವರು ನಮ್ಮ ಕುರಿತು ಕಾಳಜಿ ವಹಿಸುತ್ತಾನೋ ಎಂದು ಅನೇಕರು ಯೋಚಿಸುತ್ತಾರೆ. [119ನೇ ಪುಟದಲ್ಲಿರುವ 4ನೇ ಪ್ಯಾರಗ್ರಾಫ್ನ ಮೊದಲ ಮೂರು ವಾಕ್ಯಗಳನ್ನು ಓದಿರಿ.] ದೇವರು ಸ್ವಲ್ಪ ಸಮಯದ ವರೆಗೆ ಅನ್ಯಾಯವನ್ನು ಏಕೆ ಅನುಮತಿಸಿದ್ದಾನೆ ಎಂಬುದನ್ನು ಈ ಅಧ್ಯಾಯವು ವಿವರಿಸುತ್ತದೆ.”
ನಿಮ್ಮ ಕುರಿತು ಕಾಳಜಿ ವಹಿಸುವ ಒಬ್ಬ ಸೃಷ್ಟಿಕರ್ತನಿದ್ದಾನೊ?a
“ನಮಗೆ ದಿಕ್ಕುತೋರದಂತೆ ಮಾಡುವ ಸಮಸ್ಯೆಗಳನ್ನು ಹೇಗೆ ಬಗೆಹರಿಸುವುದು ಎಂಬುದಕ್ಕಿರುವ ಅತ್ಯುತ್ತಮ ಬುದ್ಧಿವಾದವನ್ನು ನಾವೆಲ್ಲಿ ಕಂಡುಕೊಳ್ಳಬಲ್ಲೆವು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಮತ್ತಾಯ 7:28, 29ನ್ನು ಓದಿರಿ.] ಯೇಸುವಿನ ಪರ್ವತ ಪ್ರಸಂಗಕ್ಕೆ ಜನರು ಹೇಗೆ ಪ್ರತಿಕ್ರಿಯಿಸಿದರು ಎಂಬುದನ್ನು ಈ ವಚನವು ತೋರಿಸುತ್ತದೆ. ಇತರರು ಏನು ಹೇಳಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಿ. [ಪುಟ 152ರಲ್ಲಿರುವ ಹೇಳಿಕೆಗಳನ್ನು ತೋರಿಸಿರಿ.] ಈ ಅಧ್ಯಾಯವು ಯೇಸುವಿನ ಜೀವನ ಮತ್ತು ಬೋಧನೆಗಳ ಕುರಿತು ಚರ್ಚಿಸುತ್ತದೆ.”
“‘ದೇವರೊಬ್ಬನು ಇರುವುದಾದರೆ, ಈ ಲೋಕದಲ್ಲಿರುವ ಕಷ್ಟಸಂಕಟ ಮತ್ತು ಅನ್ಯಾಯವನ್ನು ತೆಗೆದುಹಾಕಲು ಆತನೆಂದಾದರೂ ಕ್ರಿಯೆಗೈಯುವನೋ’ ಎಂದು ನೀವು ಯೋಚಿಸಿದ್ದುಂಟೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಪ್ರಕಟನೆ 21:3, 4ನ್ನು ಓದಿರಿ.] ಕಷ್ಟಸಂಕಟವನ್ನು ನಿರ್ಮೂಲಮಾಡಲು ಮತ್ತು ಅದರ ಮೂಲವನ್ನೇ ತೆಗೆದುಹಾಕಲು ದೇವರು ಏನು ಮಾಡಲಿದ್ದಾನೆ ಎಂಬುದನ್ನು ಈ ಪುಸ್ತಕ ವಿವರಿಸುತ್ತದೆ.” 10ನೇ ಅಧ್ಯಾಯವನ್ನು ತೋರಿಸಿರಿ.
ಎಚ್ಚರಿಕೆಯಿಂದಿರಿ!
“ಇಂದು ಸರ್ವಸಾಮಾನ್ಯವಾಗಿರುವ ಗಂಭೀರವಾದ ಸಮಸ್ಯೆಗಳು ಮತ್ತು ದಂಗುಬಡಿಸುವ ಘಟನೆಗಳ ವಿಷಯದಲ್ಲಿ ಜನರು ಚಿಂತಿತರಾಗಿದ್ದಾರೆ. [ಸ್ಥಳಿಕ ಉದಾಹರಣೆಯೊಂದನ್ನು ತಿಳಿಸಿರಿ.] ಇಂತಹ ವಿಷಯಗಳು ಒಂದು ಭೌಗೋಳಿಕ ಚಿಹ್ನೆಯ ಭಾಗವಾಗಿದ್ದು, ದೇವರ ರಾಜ್ಯವು ಶೀಘ್ರವೇ ಲೋಕದ ವ್ಯವಹಾರಗಳನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲಿದೆ ಎಂಬುದು ನಿಮಗೆ ತಿಳಿದಿತ್ತೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ, ಮತ್ತಾಯ 24:3, 7, 8; ಲೂಕ 21:7, 10, 11; 2 ತಿಮೊಥೆಯ 3:1-5ರಂಥ ಸೂಕ್ತವಾದ ವಚನವೊಂದನ್ನು ಓದಿರಿ.] ಈ ಬ್ರೋಷರ್, ಈಗ ಈ ಘಟನೆಗಳ ಮಹತ್ವಾರ್ಥದ ವಿಷಯದಲ್ಲಿ ಎಚ್ಚರವಾಗಿರುವುದು ಏಕೆ ವಿಶೇಷವಾಗಿ ತುರ್ತಿನದ್ದಾಗಿದೆ ಎಂಬುದರ ಕುರಿತು ಚರ್ಚಿಸುತ್ತದೆ.”
“ಇಂದು ಅನೇಕರು ದಂಗುಬಡಿಸುವ ಘಟನೆಗಳಿಂದಲೋ ಅಥವಾ ವೈಯಕ್ತಿಕವಾಗಿ ವಿಪರೀತ ನಷ್ಟವನ್ನು ಅನುಭವಿಸಿರುವುದರಿಂದಲೋ ದುಃಖತಪ್ತರಾಗಿದ್ದಾರೆ. ಇಂತಹ ವಿಷಯಗಳನ್ನು ತಡೆಯಲು ದೇವರು ಏಕೆ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಅನೇಕರು ಸೋಜಿಗಪಡುತ್ತಾರೆ. ಮಾನವಕುಲದ ಕಷ್ಟಸಂಕಟವನ್ನು ನೀಗಿಸಲು ದೇವರು ಶೀಘ್ರವೇ ಕ್ರಿಯೆಗೈಯಲಿದ್ದಾನೆ ಎಂದು ಬೈಬಲ್ ನಮಗೆ ಆಶ್ವಾಸನೆ ಕೊಡುತ್ತದೆ. [ಪ್ರಕಟನೆ 14:6, 7ನ್ನು ಓದಿರಿ.] ದೇವರ ನ್ಯಾಯತೀರ್ಪು ಮಾನವಕುಲಕ್ಕೆ ಯಾವ ಅರ್ಥದಲ್ಲಿದೆ ಎಂಬುದನ್ನು ಗಮನಿಸಿರಿ. [2 ಪೇತ್ರ 3:10, 13ನ್ನು ಓದಿರಿ.] ಈ ಬ್ರೋಷರ್ ಈ ಪ್ರಾಮುಖ್ಯ ಸಂಗತಿಯ ಕುರಿತ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ.”
ನಿತ್ಯಜೀವಕ್ಕೆ ನಡೆಸುವ ಜ್ಞಾನ
“ಇವುಗಳಂತಹ ಸುಂದರವಾದ ಸುತ್ತುಗಟ್ಟುಗಳಲ್ಲಿ ಜೀವಿಸುವಂತೆ ನಿಮ್ಮನ್ನು ಆಮಂತ್ರಿಸುವುದಾದರೆ ನೀವು ಆ ಆಮಂತ್ರಣವನ್ನು ಸ್ವೀಕರಿಸುವಿರೋ? [ಪುಟ 4-5ರಲ್ಲಿರುವ ಚಿತ್ರವನ್ನು ತೋರಿಸಿರಿ ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ರೀತಿಯ ಜೀವನವನ್ನು ಸದಾ ಅನುಭೋಗಿಸಲು ನಾವೇನನ್ನು ಮಾಡತಕ್ಕದ್ದು ಎಂಬುದರ ಕುರಿತು ದೇವರ ವಾಕ್ಯವು ಏನು ಹೇಳುತ್ತದೆಂಬುದನ್ನು ಗಮನಿಸಿ. [ಯೋಹಾನ 17:3ನ್ನು ಓದಿರಿ.] ನಿತ್ಯಜೀವಕ್ಕೆ ನಡೆಸುವ ಜ್ಞಾನವನ್ನು ಸಂಪಾದಿಸಲು ಈ ಪುಸ್ತಕವು ನಿಮಗೆ ಸಹಾಯಮಾಡುವುದು.” ಮುಂದಿನ ಭೇಟಿಯಲ್ಲಿ 1ನೇ ಅಧ್ಯಾಯದ ಮೊದಲ ಐದು ಪ್ಯಾರಗ್ರಾಫ್ಗಳನ್ನು ಚರ್ಚಿಸಲು ಏರ್ಪಾಡನ್ನು ಮಾಡಿರಿ.
ಪುಟ 188-9ರಲ್ಲಿರುವ ಚಿತ್ರಕ್ಕೆ ತಿರುಗಿಸಿ, ಚಿತ್ರದೊಂದಿಗೆ ಕೊಡಲ್ಪಟ್ಟಿರುವ ಪ್ರಶ್ನೆಯನ್ನು ಉಪಯೋಗಿಸುತ್ತಾ ಮನೆಯವರನ್ನು ಹೀಗೆ ಕೇಳಿ: “ದೇವರ ಜ್ಞಾನವು ಭೂಮಿಯನ್ನು ತುಂಬಿಕೊಳ್ಳುವಾಗ ನೀವು ಪರದೈಸಿನಲ್ಲಿ ಜೀವಿಸಲು ನಿರೀಕ್ಷಿಸುವಿರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಯೆಶಾಯ 11:9ನ್ನು ಓದಿರಿ.] ಪರದೈಸಿನ ಕುರಿತು ಬೈಬಲ್ ಏನು ಹೇಳುತ್ತದೆ ಮತ್ತು ನಾವು ಹೇಗೆ ಅದರ ಭಾಗವಾಗಿರಬಲ್ಲೆವು ಎಂಬುದನ್ನು ತಿಳಿದುಕೊಳ್ಳಲು ಈ ಪುಸ್ತಕವು ನಿಮಗೆ ಸಹಾಯಮಾಡುವುದು.” ಮುಂದಿನ ಭೇಟಿಯಲ್ಲಿ 1ನೇ ಅಧ್ಯಾಯದ 11-16 ಪ್ಯಾರಗ್ರಾಫ್ಗಳನ್ನು ಚರ್ಚಿಸಲು ಏರ್ಪಾಡನ್ನು ಮಾಡಿರಿ.
ಮಹಾ ಬೋಧಕನಿಂದ ಕಲಿಯಿರಿb
“ಇಲ್ಲಿ ಹೇಳಿರುವಂಥ ರೀತಿಯಲ್ಲಿ ಜನರು ಜೀವಿಸುವುದಾದರೆ ಈ ಲೋಕವು ಜೀವಿಸಲು ಹೆಚ್ಚು ಉತ್ತಮವಾದ ಸ್ಥಳವಾಗಿರುವುದು ಎಂದು ನಿಮಗನಿಸುತ್ತದೋ? [ಮತ್ತಾಯ 7:12ಎ ಭಾಗವನ್ನು ಓದಿ. ನಂತರ ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಪುಸ್ತಕವು, ಜೀವಿಸಿರುವವರಲ್ಲೇ ಅತ್ಯಂತ ಮಹಾನ್ ಬೋಧಕನು ಕಲಿಸಿದ ಅನೇಕ ಪಾಠಗಳನ್ನು ಹೊಂದಿದೆ.” ಅಧ್ಯಾಯ 17ರಲ್ಲಿರುವ ಚಿತ್ರಗಳು ಮತ್ತು ಅವುಗಳೊಂದಿಗೆ ಕೊಡಲ್ಪಟ್ಟಿರುವ ಹೇಳಿಕೆಗಳನ್ನು ಎತ್ತಿತೋರಿಸಿರಿ.
“ಅನೇಕ ಹೆತ್ತವರು ತಮ್ಮ ಮಕ್ಕಳಲ್ಲಿ ಹಿತಕರವಾದ ಮೌಲ್ಯಗಳನ್ನು ಬೇರೂರಿಸಲು ಪ್ರಯತ್ನಿಸುತ್ತಾರೆ. ಇದು ಪ್ರಾಮುಖ್ಯವೆಂದು ನಿಮಗನಿಸುತ್ತದೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಜ್ಞಾನೋಕ್ತಿ 22:6ನ್ನು ಓದಿ.] ಹೆತ್ತವರು ತಮ್ಮ ಮಕ್ಕಳನ್ನು ಚಿಕ್ಕ ಪ್ರಾಯದಿಂದಲೇ ತರಬೇತುಗೊಳಿಸಬೇಕೆಂದು ಪ್ರೋತ್ಸಾಹಿಸಲ್ಪಟ್ಟಿದ್ದಾರೆ ಎಂಬುದನ್ನು ಗಮನಿಸಿರಿ. ಇದನ್ನು ಮಾಡುವಂತೆ ಹೆತ್ತವರಿಗೆ ಸಹಾಯಮಾಡುವ ಸಲುವಾಗಿ ಈ ಪುಸ್ತಕವನ್ನು ವಿನ್ಯಾಸಿಸಲಾಗಿದೆ.” ಅಧ್ಯಾಯ 15 ಅಥವಾ 18ರಲ್ಲಿರುವ ಚಿತ್ರಗಳು ಮತ್ತು ಅವುಗಳ ಕೆಳಗಿನ ಹೇಳಿಕೆಗಳನ್ನು ಎತ್ತಿತೋರಿಸಿರಿ.
“ಅನೇಕವೇಳೆ ತಮ್ಮ ಮಕ್ಕಳು ಕೇಳುವ ಪ್ರಶ್ನೆಗಳಿಂದ ಹೆತ್ತವರು ಬೆರಗಾಗುತ್ತಾರೆ. ಅವುಗಳಲ್ಲಿ ಕೆಲವು ಪ್ರಶ್ನೆಗಳು ಉತ್ತರಿಸಲು ಕಷ್ಟಕರವಾಗಿರಬಹುದು, ಅಲ್ಲವೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಎಫೆಸ 6:4ನ್ನು ಓದಿ.] ಇಂದು ತಮ್ಮ ಮಕ್ಕಳ ಪಶ್ನೆಗಳನ್ನು ಉತ್ತರಿಸಲು ಈ ಪುಸ್ತಕವು ಹೆತ್ತವರಿಗೆ ಸಹಾಯಮಾಡಬಲ್ಲದು.” ಅಧ್ಯಾಯ 11, 12, ಅಥವಾ 34ರಿಂದ 36ರಲ್ಲಿರುವ ಚಿತ್ರಗಳು ಮತ್ತು ಅವುಗಳೊಂದಿಗೆ ಕೊಡಲ್ಪಟ್ಟಿರುವ ಹೇಳಿಕೆಗಳಲ್ಲಿ ಕೆಲವನ್ನು ಎತ್ತಿತೋರಿಸಿರಿ.
ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ?c
“ನಮ್ಮ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಪಾತಕ ಮತ್ತು ಹಿಂಸಾಚಾರದ ವಿಷಯದಲ್ಲಿ ನಮಗೆಲ್ಲರಿಗೂ ಚಿಂತೆಯಿದೆ. ಆದರೆ ಈ ಸಮಸ್ಯೆಗೆ ಯಾರ ಬಳಿಯಾದರೂ ನಿಜ ಪರಿಹಾರವಿದೆ ಎಂದು ನಿಮಗನಿಸುತ್ತದೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ದೇವರ ಬಳಿ ಒಂದು ಪರಿಹಾರವಿದೆ?” ಪುಟ 196ಕ್ಕೆ ತಿರುಗಿಸಿ; ಪ್ಯಾರಗ್ರಾಫ್ 19ರಲ್ಲಿರುವ ಜ್ಞಾನೋಕ್ತಿ 2:21, 22ನ್ನು ಓದಿ ಮತ್ತು ಅದರ ಕುರಿತು ಹೇಳಿಕೆ ನೀಡಿ. 16ನೇ ಅಧ್ಯಾಯದ ಶೀರ್ಷಿಕೆಯನ್ನು ತೋರಿಸಿರಿ, ಮತ್ತು ಪುಸ್ತಕವನ್ನು ನೀಡಿರಿ.
ಪುಟ 6ಕ್ಕೆ ತಿರುಗಿಸುತ್ತಾ ಹೀಗೆ ಹೇಳಿರಿ: “ನಮ್ಮ ಸುಂದರವಾದ ಭೂಮಿ ಮತ್ತು ಅದರಲ್ಲಿರುವ ಜೀವವು ಅಕಸ್ಮಾತ್ತಾಗಿ ಬಂದುಬಿಟ್ಟಿತು ಎಂದು ಅನೇಕ ಜನರು ನಂಬುತ್ತಾರೆ. ಇವೆಲ್ಲವೂ ಸಂಭವಿಸಿರುವುದಕ್ಕೆ ನ್ಯಾಯಸಮ್ಮತವಾದ ವಿವರಣೆಯು ಯಾವುದಾಗಿರಬಹುದು ಎಂದು ನಿಮಗೆ ತೋರುತ್ತದೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಹೇರಳವಾದ ರುಜುವಾತುಗಳು, ಅತಿ ಶಕ್ತಿಶಾಲಿಯಾಗಿರುವ ಮತ್ತು ನಮ್ಮನ್ನು ಬಹಳಷ್ಟು ಪ್ರೀತಿಸುವವನೂ ಆಗಿರುವ ಒಬ್ಬ ಸೃಷ್ಟಿಕರ್ತನಿದ್ದಾನೆ ಎಂಬ ಬೈಬಲ್ ವೃತ್ತಾಂತವನ್ನು ದೃಢಪಡಿಸುತ್ತವೆ. ಆತನು ಸತ್ಯ ದೇವರಾಗಿದ್ದಾನೆ, ಮತ್ತು ಆತನ ಹೆಸರು ಯೆಹೋವ ಎಂದಾಗಿದೆ.” ಕೀರ್ತನೆ 83:18ನ್ನು ಓದಿರಿ, ಮತ್ತು ಹೇಗೆ ಇಡೀ ಭೂಮಿಯನ್ನು ಪರದೈಸಾಗಿ ಮಾರ್ಪಡಿಸುವುದು ಆತನ ಉದ್ದೇಶವಾಗಿದೆ ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿರಿ.
ದೇವರಿಗಾಗಿ ಮಾನವಕುಲದ ಅನ್ವೇಷಣೆd
“ಇಂದು ಅನೇಕಾನೇಕ ಧರ್ಮಗಳಿರುವುದರಿಂದ, ಇದರಲ್ಲಿ ಯಾವುದು ದೇವರಿಂದ ಅಂಗೀಕರಿಸಲ್ಪಟ್ಟಿದೆ ಎಂಬುದನ್ನು ನಾವು ಹೇಗೆ ನಿರ್ಧರಿಸಬಲ್ಲೆವು ಎಂಬುದರ ಕುರಿತು ನೀವು ಎಂದಾದರೂ ಯೋಚಿಸಿದ್ದುಂಟೋ?” ಪ್ರತಿಕ್ರಿಯೆ ಸಿಕ್ಕಿದ ಬಳಿಕ 377ನೇ ಪುಟಕ್ಕೆ ತಿರುಗಿಸಿರಿ. 7ನೇ ಅಂಶವನ್ನು ಎತ್ತಿತೋರಿಸಿರಿ, ಮತ್ತು ಸತ್ಯ ಧರ್ಮವು ಮಾನವಕುಲದ ಎಲ್ಲ ಜಾತಿಗಳನ್ನು ಐಕ್ಯಗೊಳಿಸಬೇಕು ಎಂಬುದನ್ನು ನೀವು ಒಪ್ಪುವುದಿಲ್ಲವೋ ಎಂದು ಮನೆಯವರನ್ನು ಕೇಳಿರಿ. ಸೂಚಿಸಲ್ಪಟ್ಟಿರುವ ಶಾಸ್ತ್ರವಚನಗಳಲ್ಲಿ ಒಂದನ್ನು ತೆರೆದು ನೋಡಿ, ಮತ್ತು ಸಮಯವು ಅನುಮತಿಸಿದಂತೆ, ಪಟ್ಟಿಯಲ್ಲಿರುವ ಇತರ ಕೆಲವು ಅಂಶಗಳನ್ನು ಚರ್ಚಿಸಿರಿ. ನಿಜವಾದ ಆಸಕ್ತಿ ಕಂಡುಬಂದಲ್ಲಿ ಪುಸ್ತಕವನ್ನು ನೀಡಿರಿ. ನೀವು ಹೊರಡಲಿರುವಾಗ ಹೀಗೆ ಕೇಳಬಹುದು: “ಸತ್ಯ ಧರ್ಮವು ಒಬ್ಬ ವ್ಯಕ್ತಿಯ ನಡತೆಯನ್ನು ಹೇಗೆ ಪ್ರಭಾವಿಸಬೇಕು?” ಈ ಪ್ರಶ್ನೆಗೆ ಉತ್ತರವನ್ನು ಕೊಡಲು ಒಂದು ಪುನರ್ಭೇಟಿಗಾಗಿ ಏರ್ಪಾಡು ಮಾಡಿರಿ.
ಒಬ್ಬ ವ್ಯಕ್ತಿ ಒಂದು ಪ್ರಧಾನ ಧಾರ್ಮಿಕ ಗುಂಪಿನ ಸದಸ್ಯನು ಎಂದು ತನ್ನನ್ನು ಗುರುತಿಸಿಕೊಳ್ಳುವುದಾದರೆ, ನೀವು ಹೀಗೆ ಹೇಳಬಹುದು: “ಬೇರೆ ಬೇರೆ ಧರ್ಮಗಳ ಜನರನ್ನು ಭೇಟಿಮಾಡುವುದು ಆಸಕ್ತಿದಾಯಕವಾಗಿದೆ. ವಿಭಿನ್ನ ವಿಧಗಳಲ್ಲಿ ಮಾನವಕುಲವು ದೇವರಿಗಾಗಿ ಅನ್ವೇಷಣೆಯನ್ನು ಮಾಡಿದೆ. [ಸೂಕ್ತವಾಗಿರುವಲ್ಲಿ ಅಪೊಸ್ತಲರ ಕೃತ್ಯಗಳು 17:26, 27ನ್ನು ಓದಿರಿ.] ಅನೇಕವೇಳೆ, ಜನರು ತಮ್ಮ ಹೆತ್ತವರ ಧರ್ಮವನ್ನು ಅನುಸರಿಸುತ್ತಾರೆ. [ಪುಟ 8ರಲ್ಲಿರುವ ಪ್ಯಾರಗ್ರಾಫ್ 12ನ್ನು ಓದಿರಿ.] ಬೇರೆ ಧರ್ಮಗಳ ಕುರಿತು ಕಲಿಯುವುದು ಜ್ಞಾನೋದಯವನ್ನು ನೀಡುವಂಥದ್ದೂ ಬೋಧಪ್ರದವೂ ಆಗಿದೆ. ಈ ಪುಸ್ತಕವು ಲೋಕದ ಪ್ರಧಾನ ಧರ್ಮಗಳ ಮೂಲ, ಆಚರಣೆಗಳು ಮತ್ತು ಬೋಧನೆಗಳನ್ನು ವಿವರಿಸುತ್ತದೆ.” ಇಲ್ಲಿ ಸೂಚಿಸಲ್ಪಟ್ಟಿರುವ ಪುಟಗಳಲ್ಲಿ ಕಂಡುಬರುವಂತೆ, ಆ ವ್ಯಕ್ತಿಯ ಧರ್ಮಕ್ಕೆ ಸಂಬಂಧಿಸಿದ ಯಾವ ಮಾಹಿತಿಯನ್ನು ಪುಸ್ತಕದಲ್ಲಿ ಕಂಡುಕೊಳ್ಳಬಹುದು ಎಂಬುದರ ಕುರಿತು ಒಂದು ಉದಾಹರಣೆಯನ್ನು ತೋರಿಸಿರಿ: ಸಿಕ್ಮತ (100-1); ಹಿಂದೂಧರ್ಮ (116-17); ಬೌದ್ಧಮತ (141); ಟಾವೊಮತ (164-6); ಕನ್ಫ್ಯೂಷಿಯಸ್ ಧರ್ಮ (177); ಶಿಂಟೊಮತ (190-5); ಯೆಹೂದಿಮತ (220-1); ಮತ್ತು ಇಸ್ಲಾಮ್ (289).
ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ!
“ನೀವು [ಸದ್ಯಕ್ಕೆ ಸುದ್ದಿಯಲ್ಲಿರುವ ವಿಷಯವನ್ನು ತಿಳಿಸಿ] ಇದರ ಕುರಿತು ಕೇಳಿರಬಹುದು. ಜನರು ದುರಂತಮಯವಾಗಿ ಕೊಲ್ಲಲ್ಪಡುವಾಗ, ದುರಂತಕ್ಕೆ ಬಲಿಯಾದವರ ಕುಟುಂಬಗಳಿಗೆ ಯಾವ ರೀತಿಯ ಸಾಂತ್ವನವನ್ನು ನೀಡಸಾಧ್ಯವಿದೆಯೆಂದು ಅನೇಕರು ಯೋಚಿಸುತ್ತಾರೆ. ನೀವೇನು ನೆನಸುತ್ತೀರಿ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಆಮೇಲೆ, 299ನೆಯ ಪುಟವನ್ನು ತೆರೆದು, ಚಿತ್ರಿಸಲ್ಪಟ್ಟಿರುವ ಪುನರುತ್ಥಾನದ ದೃಶ್ಯವನ್ನು ತೋರಿಸಿರಿ. ಹೀಗೆ ಹೇಳುತ್ತಾ ಮುಂದುವರಿಸಿ: “ಪರದೈಸ್ ಭೂಮಿಯಲ್ಲಿ ನೀತಿವಂತರೂ ಅನೀತಿವಂತರೂ ಪುನಃ ಜೀವಿತಕ್ಕೆ ತರಲ್ಪಡುವ ವಿಷಯವನ್ನು ತಿಳಿದು ಅನೇಕರು ಆಶ್ಚರ್ಯಪಡುತ್ತಾರೆ. [ಪುಟ 297ರಲ್ಲಿರುವ 9ನೇ ಪ್ಯಾರಗ್ರಾಫ್ನಲ್ಲಿ ಉದ್ಧರಿಸಲ್ಪಟ್ಟಿರುವ ಅಪೊಸ್ತಲರ ಕೃತ್ಯಗಳು 24:15ನ್ನು ಓದಿರಿ, ನಂತರ 10ನೇ ಪ್ಯಾರಗ್ರಾಫ್ನಲ್ಲಿರುವ ವಿವರಣೆಯನ್ನು ತಿಳಿಸಿರಿ.] ಭವಿಷ್ಯತ್ತಿಗಾಗಿರುವ ದೇವರ ಉದ್ದೇಶದ ಕುರಿತಾದ ಇನ್ನೂ ಅನೇಕ ಆಸಕ್ತಿಕರ ವಿವರಗಳನ್ನು ಈ ಪುಸ್ತಕವು ಚರ್ಚಿಸುತ್ತದೆ.”
ಬೈಬಲ್—ದೇವರ ವಾಕ್ಯವೊ ಮನುಷ್ಯನದ್ದೊ?e
“ಹೆಚ್ಚು ಕಡಿಮೆ ಪ್ರತಿಯೊಬ್ಬರೂ ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಿರುವ ಸಮಯವೊಂದರಲ್ಲಿ ನಾವು ಜೀವಿಸುತ್ತಿದ್ದೇವೆ. ಅನೇಕರು ಮಾರ್ಗದರ್ಶನೆಗಾಗಿ ಎಲ್ಲ ರೀತಿಯ ಸಲಹೆಗಾರರ ಕಡೆಗೆ ತಿರುಗುತ್ತಾರೆ. ಕೆಲವರು ಸಹಾಯಕ್ಕಾಗಿ ಮನಶ್ಶಾಸ್ತ್ರಜ್ಞರ ಕಡೆಗೆ ನೋಡುತ್ತಾರೆ. ನಿಜವಾಗಿಯೂ ಕಾರ್ಯಸಾಧಕವಾಗಿರುವಂಥ ಸ್ವಸ್ಥ ಸಲಹೆಯನ್ನು ನಾವು ಎಲ್ಲಿ ಕಂಡುಕೊಳ್ಳಬಹುದೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನಾವೆಲ್ಲರೂ ತಿಳಿದುಕೊಳ್ಳಬೇಕಾದ ಒಂದು ಪ್ರಾಮುಖ್ಯ ವಾಸ್ತವಾಂಶವನ್ನು ಬೈಬಲ್ ತಿಳಿಸುತ್ತದೆ. [2 ತಿಮೊಥೆಯ 3:16ನ್ನು ಓದಿರಿ. ಅನಂತರ ಪುಟ 187ಕ್ಕೆ ತಿರುಗಿಸಿ ಪ್ಯಾರಗ್ರಾಫ್ 9ನ್ನು ಓದಿರಿ.] ಬೈಬಲ್ ಏನು ಹೇಳುತ್ತದೋ ಅದನ್ನು ಅನುಸರಿಸುವುದು ಹೇಗೆ ಯಾವಾಗಲೂ ಒಳ್ಳೆಯ ಫಲಿತಾಂಶಗಳನ್ನು ತರುತ್ತದೆ ಎಂಬುದನ್ನು ಗಣ್ಯಮಾಡಲು ಈ ಪುಸ್ತಕವು ನಿಮಗೆ ಸಹಾಯಮಾಡುವುದು.
ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ
“ಕ್ರಿಸ್ಮಸ್ ಸಮಯಾವಧಿಯಲ್ಲಿ ಅನೇಕರು ಯೇಸುವಿನ ಕುರಿತು ನೆನಸುತ್ತಿರುತ್ತಾರೆ. ಆದರೂ, ಲೋಕದಲ್ಲೆಲ್ಲಾ ಅನೇಕ ಕೆಟ್ಟ ವಿಷಯಗಳು ಸಂಭವಿಸುತ್ತಿರುವುದರಿಂದ, ಯೇಸು ನಮ್ಮ ಕುರಿತು ನಿಜವಾಗಿಯೂ ಕಾಳಜಿ ವಹಿಸುತ್ತಾನೋ ಎಂದು ಕೆಲವರು ಸೋಜಿಗಪಡಬಹುದು. ಈ ವಿಷಯದಲ್ಲಿ ನಿಮ್ಮ ಅನಿಸಿಕೆ ಏನು?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. 24ನೇ ಅಧ್ಯಾಯಕ್ಕೆ ತಿರುಗಿಸಿರಿ, ಮತ್ತು ಯೇಸು ಭೂಮಿಗೆ ಬಂದ ಕಾರಣವನ್ನು ಸಂಕ್ಷಿಪ್ತವಾಗಿ ಚರ್ಚಿಸಿರಿ. ಅನಂತರ ಯೋಹಾನ 15:13ನ್ನು ಓದುವಾಗ ಯೇಸುವಿಗೆ ಇತರರಲ್ಲಿದ್ದ ಹೃತ್ಪೂರ್ವಕ ಪ್ರೀತಿಯನ್ನು ಒತ್ತಿಹೇಳಿರಿ.
“ಯಾರಾದರೂ ಯೇಸು ಕ್ರಿಸ್ತನ ಬಗ್ಗೆ ಪ್ರಸ್ತಾಪವೆತ್ತಿದರೆ, ಅನೇಕರು ಅವನನ್ನು ಮನಸ್ಸಿನಲ್ಲಿ ಒಬ್ಬ ಮಗುವಾಗಿ ಅಥವಾ ಈಗಷ್ಟೇ ಸಾಯಲಿರುವ ಒಬ್ಬ ವ್ಯಕ್ತಿಯಾಗಿ ಚಿತ್ರಿಸಿಕೊಳ್ಳುತ್ತಾರೆ. ಯೇಸುವಿನ ವಿಷಯದಲ್ಲಿ ಅವರಿಗೆ ತಿಳಿದಿರುವುದು ಅವನ ಜನನ ಮತ್ತು ಮರಣದ ಕುರಿತು ಮಾತ್ರವೇ ಆಗಿರುತ್ತದೆ. ಅವನ ಜೀವಮಾನ ಕಾಲದಲ್ಲಿ ಅವನು ಹೇಳಿದ ಮತ್ತು ಮಾಡಿದ ವಿಷಯಗಳು ಅನೇಕವೇಳೆ ಗಮನಿಸಲ್ಪಡದೆ ಹೋಗುತ್ತವೆ. ಅವನು ಏನನ್ನು ಸಾಧಿಸಿದನೋ ಅದು ಭೂಮಿಯಲ್ಲಿ ಯಾವುದೇ ಸಮಯದಲ್ಲಿ ಜೀವಿಸಿರುವ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದಲೇ ಅವನು ನಮ್ಮ ಪರವಾಗಿ ಮಾಡಿದ ಅದ್ಭುತಕರ ವಿಷಯಗಳನ್ನು ನಮ್ಮಿಂದ ಸಾಧ್ಯವಾಗುವಷ್ಟರ ಮಟ್ಟಿಗೆ ಕಲಿತುಕೊಳ್ಳುವುದು ಆವಶ್ಯಕ.” ಯೋಹಾನ 17:3ನ್ನು ಓದಿರಿ. ಪೀಠಿಕೆಯ ಮೊದಲ ಪುಟಕ್ಕೆ ತಿರುಗಿಸಿ, ನಾಲ್ಕನೇ ಪ್ಯಾರಗ್ರಾಫನ್ನು ಓದಿರಿ.
ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?
“ನಾವು ಇಂದು ಎದುರಿಸುತ್ತಿರುವಂತಹ ರೀತಿಯ ತೊಂದರೆಗಳಿಂದ ಸುತ್ತುವರಿಯಲ್ಪಟ್ಟು ಜೀವಿಸುವಂತೆ ದೇವರು ಉದ್ದೇಶಿಸಿದನೆಂದು ನೀವು ನೆನಸುತ್ತೀರೊ?” [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಮತ್ತಾಯ 6:10ನ್ನು ಓದಿರಿ.] ಆ ದೇವರ ರಾಜ್ಯವು ಏನಾಗಿರಬಹುದು ಎಂಬುದರ ಕುರಿತು ನೀವು ಎಂದಾದರೂ ಯೋಚಿಸಿದ್ದುಂಟೋ? ಪಾಠ 6ಕ್ಕೆ ತಿರುಗಿಸಿರಿ, ಮತ್ತು ಪಾಠದ ಆರಂಭದಲ್ಲಿ ಕೊಡಲ್ಪಟ್ಟಿರುವ ಪ್ರಶ್ನೆಗಳನ್ನು ಓದಿರಿ. ಪಾಠದ ಚರ್ಚೆಯನ್ನು ಆರಂಭಿಸಿರಿ ಅಥವಾ ಮುಂದಿನ ಭೇಟಿಯಲ್ಲಿ ಇದನ್ನು ಮಾಡಲು ಏರ್ಪಾಡು ಮಾಡಿರಿ.
“ಆಧುನಿಕ ಸಮಾಜದ ಮುನ್ನಡೆಗಳ ಹೊರತಾಗಿಯೂ, ಕಾಯಿಲೆ ಮತ್ತು ಮರಣವು ಮಾನವಕುಲದಲ್ಲಿ ಹೆಚ್ಚಿನ ಸಂಕಟ ಮತ್ತು ಶೋಕವನ್ನು ಉಂಟುಮಾಡುತ್ತವೆ. ಯೇಸು ಅಸ್ವಸ್ಥರಿಗಾಗಿ, ವೃದ್ಧರಿಗಾಗಿ ಮತ್ತು ಸತ್ತವರಿಗಾಗಿಯೂ ಏನು ಮಾಡಲಿದ್ದಾನೆ ಎಂಬುದನ್ನು ನೀವು ತಿಳಿದಿದ್ದೀರೋ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಆ ವ್ಯಕ್ತಿಗೆ ಉತ್ತರವನ್ನು ಕಂಡುಕೊಳ್ಳಲು ಆಸಕ್ತಿಯಿರುವುದಾದರೆ, ಪಾಠ 5ಕ್ಕೆ ತಿರುಗಿಸಿ 5-6ನೇ ಪ್ಯಾರಗ್ರಾಫ್ಗಳಿಗಾಗಿರುವ ಪ್ರಶ್ನೆಗಳನ್ನು ಓದಿರಿ. ಪ್ಯಾರಗ್ರಾಫ್ಗಳನ್ನು ಚರ್ಚಿಸಿರಿ, ಅಥವಾ ಮುಂದಿನ ಭೇಟಿಯಲ್ಲಿ ಚರ್ಚಿಸಲು ಏರ್ಪಾಡು ಮಾಡಿರಿ.
ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ
“ಜೀವನದ ಒತ್ತಡಗಳನ್ನು ನಿಭಾಯಿಸುವುದರಲ್ಲಿ ಸಹಾಯಕ್ಕಾಗಿ ನಾವು ಎತ್ತ ತಿರುಗಬಲ್ಲೆವು ಎಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ರೋಮಾಪುರ 15:4ನ್ನು ಓದಿರಿ.] ಕಷ್ಟತೊಂದರೆಗಳನ್ನು ತಾಳಿಕೊಳ್ಳುವಂತೆ ನಮ್ಮನ್ನು ಶಕ್ತಗೊಳಿಸುವ ಉಪದೇಶ, ಸಾಂತ್ವನ ಮತ್ತು ನಿರೀಕ್ಷೆಯನ್ನು ಪ್ರೇರಿತ ಶಾಸ್ತ್ರಗಳು ಒದಗಿಸುತ್ತವೆ ಎಂಬುದನ್ನು ಗಮನಿಸಿರಿ. ಬೈಬಲನ್ನು ಓದುವುದರಿಂದ ಅತಿ ಹೆಚ್ಚು ಪ್ರಯೋಜನವನ್ನು ಹೇಗೆ ಪಡೆಯಬಲ್ಲೆವು ಎಂಬುದರ ಕುರಿತಾಗಿ ಸಹಾಯಕಾರಿ ಸಲಹೆಗಳನ್ನು ಈ ಪುಸ್ತಕವು ಒದಗಿಸುತ್ತದೆ.” ಪುಟ 30ರಲ್ಲಿ ಪಟ್ಟಿಮಾಡಲ್ಪಟ್ಟಿರುವ ನಾಲ್ಕು ಅಂಶಗಳನ್ನು ಎತ್ತಿತೋರಿಸಿರಿ.
“ಯೇಸು ಭೂಮಿಯಲ್ಲಿ ಜೀವಿಸಿದ್ದ ಸಮಯದಿಂದಲೂ ಅನೇಕ ಜನರು ದೇವರ ರಾಜ್ಯವು ಬರಲಿ ಎಂದು ಪ್ರಾರ್ಥಿಸುತ್ತಾ ಬಂದಿದ್ದಾರೆ. ಆ ರಾಜ್ಯದ ಬರೋಣವು ಮಾನವಕುಲಕ್ಕೆ ಯಾವ ಅರ್ಥದಲ್ಲಿರುವುದು ಎಂಬುದರ ಕುರಿತು ನೀವು ಎಂದಾದರೂ ಯೋಚಿಸಿದ್ದೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ದಾನಿಯೇಲ 2:44ನ್ನು ಓದಿರಿ.] ದೇವರ ರಾಜ್ಯವು ಏನಾಗಿದೆ, ಅದು ಏನನ್ನು ಸಾಧಿಸುವುದು, ಮತ್ತು ನಾವು ಅದರ ನೀತಿಯುತ ಆಳ್ವಿಕೆಯಿಂದ ಹೇಗೆ ಪ್ರಯೋಜನ ಹೊಂದಬಲ್ಲೆವು ಎಂಬುದನ್ನೂ ಈ ಪುಸ್ತಕವು ವಿವರಿಸುತ್ತದೆ.” ಪುಟಗಳು 92-3ರಲ್ಲಿರುವ ಚಿತ್ರವನ್ನು ತೋರಿಸಿರಿ.
[ಪಾದಟಿಪ್ಪಣಿಗಳು]
a ಕನ್ನಡದಲ್ಲಿ ಲಭ್ಯವಿಲ್ಲ.
b ಕನ್ನಡದಲ್ಲಿ ಲಭ್ಯವಿಲ್ಲ.
c ಕನ್ನಡದಲ್ಲಿ ಲಭ್ಯವಿಲ್ಲ.
d ಕನ್ನಡದಲ್ಲಿ ಲಭ್ಯವಿಲ್ಲ.
e ಕನ್ನಡದಲ್ಲಿ ಲಭ್ಯವಿಲ್ಲ.