ರಾಜ್ಯ ಸಭಾಗೃಹದ ಲೈಬ್ರರಿಗಾಗಿ ಹೊಸ ಏರ್ಪಾಡು
ಲೋಕವ್ಯಾಪಕವಾಗಿರುವ ಸಭೆಗಳು ಅನೇಕ ವರುಷಗಳಿಂದ, ಹಿಂದೆ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಲೈಬ್ರರಿ ಎಂದು ಕರೆಯಲ್ಪಡುತ್ತಿದ್ದ ರಾಜ್ಯ ಸಭಾಗೃಹದ ಲೈಬ್ರರಿಯ ಸದುಪಯೋಗದಿಂದ ಪ್ರಯೋಜನಗಳನ್ನು ಪಡೆದುಕೊಂಡಿವೆ. ಈ ಹಿಂದೆ, ಪ್ರತಿಯೊಂದು ಸಭೆಯು ತನ್ನದೇ ಆದ ಒಂದು ಲೈಬ್ರರಿಯನ್ನು ಹೊಂದಿರುವುದು ಅಗತ್ಯವೆಂದು ಪರಿಗಣಿಸಲಾಗಿತ್ತು. ಆದರೆ ಇಂದು, ಅನೇಕ ರಾಜ್ಯ ಸಭಾಗೃಹಗಳು, ಬೇರೆ ಬೇರೆ ಭಾಷೆಗಳ ಸಭೆಗಳನ್ನೂ ಒಳಗೊಂಡು ಒಂದಕ್ಕಿಂತಲೂ ಹೆಚ್ಚಿನ ಸಭೆಗಳಿಂದ ಉಪಯೋಗಿಸಲ್ಪಡುತ್ತವೆ. ಆದ್ದರಿಂದ, ಪ್ರತಿಯೊಂದು ಭಾಷೆಗೆಂದು ಕೇವಲ ಒಂದು ಸುಸಜ್ಜಿತವಾದ ಲೈಬ್ರರಿಯನ್ನು ಹೊಂದಿರುವುದು ಸೂಕ್ತವಾಗಿರುವುದು. ಒಂದಕ್ಕಿಂತ ಹೆಚ್ಚಿನ ಸಭಾಂಗಣವಿರುವ ರಾಜ್ಯ ಸಭಾಗೃಹದಲ್ಲಿ, ಪ್ರತಿಯೊಂದು ಸಭಾಂಗಣದಲ್ಲಿ ಅದರಲ್ಲಿ ಕೂಡಿಬರುವ ಭಾಷಾಗುಂಪಿನ ಒಂದು ಲೈಬ್ರರಿಯಿತಕ್ಕದ್ದು.
ಸ್ಥಳದ ಉಪಯೋಗವನ್ನು ಮತ್ತು ಖರ್ಚನ್ನು ಕಡಿಮೆಗೊಳಿಸಲು ಈ ಏರ್ಪಾಡು ಸಹಾಯಮಾಡುತ್ತದೆ ಎಂಬುದಾಗಿ ನಿರೀಕ್ಷಿಸಲಾಗುತ್ತದೆ. ಅಷ್ಟುಮಾತ್ರವಲ್ಲದೆ, ಒಂದು ರಾಜ್ಯ ಸಭಾಗೃಹವನ್ನುಪಯೋಗಿಸುವ ಎರಡು ಅಥವಾ ಹೆಚ್ಚಿನ ಸಭೆಗಳ ಲೈಬ್ರರಿಗಳನ್ನು ಒಟ್ಟುಸೇರಿಸುವುದು ಉತ್ತಮ ಲೈಬ್ರರಿಗಳನ್ನು ಉತ್ಪಾದಿಸಬಹುದು. ಈ ರೀತಿಯಲ್ಲಿ ಲೈಬ್ರರಿಗಳನ್ನು ಒಟ್ಟುಸೇರಿಸುವಾಗ ಪುಸ್ತಕಗಳ ನಕಲು ಪ್ರತಿಯನ್ನು ಸಂಗ್ರಹಿಸಿಟ್ಟು, ಮುಂದಕ್ಕೆ ಒಂದುವೇಳೆ ಹೊಸ ರಾಜ್ಯ ಸಭಾಗೃಹವು ಕಟ್ಟಲ್ಪಡುವಲ್ಲಿ ಅದನ್ನು ಉಪಯೋಗಿಸಬಹುದು. ರಾಜ್ಯ ಸಭಾಗೃಹದಲ್ಲಿ, ಕಂಪ್ಯೂಟರ್ ಮತ್ತು ಸೊಸೈಟಿಯ ಸಿಡಿ-ರಾಮ್ (CD-ROM)ನಲ್ಲಿರುವ ವಾಚ್ಟವರ್ ಲೈಬ್ರರಿ ಲಭ್ಯವಿರುವಲ್ಲಿ, ಇದನ್ನು ಬಹಳ ಉಪಯುಕ್ತ ಉಪಕರಣವಾಗಿ ಕೆಲವರು ಕಂಡುಕೊಳ್ಳಬಹುದು.
ಪ್ರತಿಯೊಂದು ರಾಜ್ಯ ಸಭಾಗೃಹದ ಲೈಬ್ರರಿಗೆ ಒಬ್ಬ ಸಹೋದರನು, ಮುಖ್ಯವಾಗಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಮೇಲ್ವಿಚಾರಕರಲ್ಲೊಬ್ಬನು, ಲೈಬ್ರರಿ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾನೆ. ಅವನು ಈ ಲೈಬ್ರರಿಗೆ ಹೊಸ ಸಾಹಿತ್ಯಗಳನ್ನು ಸೇರಿಸುತ್ತಾ ಇರಬೇಕು ಮತ್ತು ಪ್ರತಿಯೊಂದು ಹೊಸ ಪುಸ್ತಕವನ್ನು ಲೈಬ್ರರಿಯಲ್ಲಿ ಇಡುವಾಗ ಅದರ ಮೊದಲ ಪುಟದಲ್ಲಿ, ಆ ಪುಸ್ತಕವು ರಾಜ್ಯ ಸಭಾಗೃಹದ ಲೈಬ್ರರಿಗೆ ಸೇರಿದ್ದು ಎಂದು ಗುರಿತಿಸಿಡಬೇಕು. ಅವನು, ಕಡಿಮೆಪಕ್ಷ ವರುಷದಲ್ಲಿ ಒಮ್ಮೆಯಾದರೂ, ಲೈಬ್ರರಿಯಲ್ಲಿರುವ ಯಾವುದೇ ಪುಸ್ತಕ ಕಾಣೆಯಾಗಿರುವುದಿಲ್ಲ ಮತ್ತು ಎಲ್ಲಾ ಪುಸ್ತಕಗಳು ಸುಸ್ಥಿತಿಯಲ್ಲಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ಲೈಬ್ರರಿಯನ್ನು ಪರೀಕ್ಷಿಸಿ ನೋಡಬೇಕು. ಈ ಲೈಬ್ರರಿಯಿಂದ ಸಾಹಿತ್ಯಗಳನ್ನು ರಾಜ್ಯ ಸಭಾಗೃಹದ ಹೊರಗೆ ತೆಗೆದುಕೊಂಡು ಹೋಗಬಾರದು.
ಸಭೆಗೆ ಹಾಜರಾಗುವ ಎಲ್ಲರಿಂದಲೂ ರಾಜ್ಯ ಸಭಾಗೃಹದ ಲೈಬ್ರರಿಯು ಬಹಳವಾಗಿ ಗಣ್ಯಮಾಡಲ್ಪಡುತ್ತದೆ. ಅದರ ಬಗ್ಗೆ ಜಾಗ್ರತೆವಹಿಸುವ ಮತ್ತು “ದೈವಜ್ಞಾನವನ್ನು” ಹುಡುಕಲು ಅದನ್ನು ಉಪಯೋಗಿಸುವ ಮೂಲಕ, ವೈಯಕ್ತಿಕವಾಗಿ ನಾವು ಸಹ ಅದನ್ನು ಗಣ್ಯಮಾಡುತ್ತೇವೆಂದು ತೋರಿಸೋಣ.—ಜ್ಞಾನೋ. 2:5.