ಸ್ಟಾಕ್ ಮಾಡಿಡಬೇಡಿ, ಬಳಸಿ
ಅನೇಕ ಸಭೆಗಳಲ್ಲಿ ಹಳೇ ಪ್ರಕಾಶನಗಳ ಸ್ಟಾಕ್ ತುಂಬ ಉಳಿದಿದೆ. ನೀವು ಇವುಗಳಲ್ಲಿ ಕೆಲವು ಪ್ರತಿಗಳನ್ನು ಪಡೆದುಕೊಂಡು ನಿಮ್ಮ ಖಾಸಗಿ ದೇವಪ್ರಭುತ್ವಾತ್ಮಕ ಲೈಬ್ರರಿಗೆ ಸೇರಿಸಬಹುದಲ್ಲವೇ? ಇಂಥ ಪ್ರಕಾಶನಗಳ ಪ್ರತಿಗಳನ್ನು ಇಟ್ಟುಕೊಳ್ಳುವುದರಿಂದ ಅನೇಕ ಪ್ರಯೋಜನಗಳಿವೆ. ಅವು ನಮ್ಮ ಅಧ್ಯಯನಕ್ಕಾಗಿ ಅಮೂಲ್ಯವಾದ ಸಾಧನ. ನಿಮ್ಮ ಬೈಬಲ್ ವಿದ್ಯಾರ್ಥಿ ಪ್ರಗತಿ ಮಾಡುತ್ತಿರುವಲ್ಲಿ, ಅವರು ಹಳೇ ಪ್ರಕಾಶನಗಳನ್ನು ಪಡಕೊಂಡು ತಮ್ಮ ಖಾಸಗಿ ಲೈಬ್ರರಿಯೊಂದನ್ನು ರಚಿಸಲು ಪ್ರೋತ್ಸಾಹಿಸಿ. ಸಭೆಯ ಸ್ಟಾಕ್‌ನಲ್ಲಿರುವ ಯಾವುದೇ ಹಳೇ ಪ್ರಕಾಶನಗಳು ರಾಜ್ಯ ಸಭಾಗೃಹದ ಲೈಬ್ರರಿಗಾಗಿ ಬೇಕಾಗಿವೆಯೋ ಎಂದು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲಾ ಮೇಲ್ವಿಚಾರಕನು ಖಚಿತಪಡಿಸಿಕೊಳ್ಳಬೇಕು. ಈ ಪ್ರಕಾಶನಗಳಿಗೆ ಇನ್ನೂ ಮೌಲ್ಯವಿದೆ. ಆದ್ದರಿಂದ ನಾವದನ್ನು ಸಭೆಯ ಲಿಟರೇಚರ್ ಕೌಂಟರ್‌ನಲ್ಲಿ ಸ್ಟಾಕ್ ಮಾಡಿಡುವ ಬದಲು ಬಳಸುವುದು ಹೆಚ್ಚು ಉತ್ತಮ.