ನಿಮಗೆ ಒಳನೋಟವನ್ನು ನೀಡುವಂಥ ಹಾಗೂ ನಿಮ್ಮನ್ನು ಹುರಿದುಂಬಿಸುವಂಥ ಒಂದು ವಿಡಿಯೋ!
ಅದು 1951ರ ಏಪ್ರಿಲ್ ತಿಂಗಳಾಗಿತ್ತು. ಹಿಂದಣ ಸೋವಿಯಟ್ ಯೂನಿಯನ್ನ ಸಾವಿರಾರು ಮಂದಿ ಯೆಹೋವನ ಸಾಕ್ಷಿಗಳನ್ನು ಬೇರೆ ಬೇರೆ ಕಡೆಗಳಿಂದ ಒಟ್ಟುಗೂಡಿಸಿ, ಬಾಕ್ಸ್ಕಾರ್ಗಳಲ್ಲಿ ತುಂಬಿಸಿ, ಸೈಬೀರಿಯಕ್ಕೆ ಗಡೀಪಾರುಮಾಡಲಾಯಿತು. ಶಕ್ತಿಶಾಲಿಯಾಗಿದ್ದ ಸೋವಿಯಟ್ ಸರಕಾರವು ಅವರನ್ನು ನಾಶಮಾಡಲು ಏಕೆ ದೃಢನಿರ್ಧಾರವನ್ನು ಮಾಡಿತ್ತು? ಅನೇಕ ವರ್ಷಗಳ ವರೆಗೆ ತುಂಬ ಕಷ್ಟಕರವಾದ ಹಿಂಸೆಯನ್ನು ಅನುಭವಿಸಿದರೂ ನಮ್ಮ ಸಹೋದರರು ಹೇಗೆ ಪಾರಾಗಿ ಉಳಿದರು ಮತ್ತು ಏಳಿಗೆಹೊಂದಿದರು? ಪರೀಕ್ಷೆಗಳ ಕೆಳಗೆ ನಂಬಿಗಸ್ತರು—ಸೋವಿಯಟ್ ಯೂನಿಯನ್ನಲ್ಲಿ ಯೆಹೋವನ ಸಾಕ್ಷಿಗಳು (ಇಂಗ್ಲಿಷ್) ಎಂಬ ವಿಡಿಯೋದಲ್ಲಿ ನೀವು ಉತ್ತರಗಳನ್ನು ಕಂಡುಕೊಳ್ಳುವಿರಿ. ಈ ವಿಡಿಯೋವನ್ನು ನೋಡಿರಿ, ಮತ್ತು ಅದರ ಬೋಧಪ್ರದ ಸಂದೇಶವು, ಏನೇ ಆದರೂ ಯೆಹೋವನಿಗೆ ನಿಮ್ಮ ನಂಬಿಗಸ್ತಿಕೆಯನ್ನು ಕಾಪಾಡಿಕೊಳ್ಳುತ್ತಾ ಇರಲು ನಿಮ್ಮನ್ನು ಪ್ರಚೋದಿಸುವಂತೆ ಬಿಡಿರಿ!
ನೀವು ಈ ಪ್ರಶ್ನೆಗಳಿಗೆ ಉತ್ತರಿಸಬಲ್ಲಿರೋ? (1) ರಷ್ಯದಲ್ಲಿ ಯೆಹೋವನ ಸಾಕ್ಷಿಗಳು ಪ್ರಥಮ ಅಧಿಕೃತ ಅಂಗೀಕಾರವನ್ನು ಯಾವಾಗ ಪಡೆದುಕೊಂಡರು? (2) ಎರಡನೆಯ ಲೋಕ ಯುದ್ಧಕ್ಕೆ ಮೊದಲು ಮತ್ತು ನಂತರ, ಸೋವಿಯಟ್ ಯೂನಿಯನ್ ಅನೇಕ ಸಾವಿರ ಸಾಕ್ಷಿ ಕುಟುಂಬಗಳನ್ನು ಹೇಗೆ ಪಡೆದುಕೊಂಡಿತು? (3) ಅವರ ನಂಬಿಕೆಗಳು ಲೆನಿನ್ನ ತತ್ತ್ವಜ್ಞಾನದೊಂದಿಗೆ ಹೇಗೆ ನೇರವಾಗಿ ಸಂಘರ್ಷಿಸುತ್ತಿದ್ದವು? (4) ಆಪರೇಷನ್ ನಾರ್ತ್ ಅಂದರೆ ಏನು, ಮತ್ತು ಇದರ ಮೂಲಕ ಸ್ಟ್ಯಾಲಿನನು ಏನನ್ನು ಸಾಧಿಸುವ ನಿರೀಕ್ಷೆಯಲ್ಲಿದ್ದನು? (5) ಸಾಕ್ಷಿಗಳಿಗೆ ದೇಶಭ್ರಷ್ಟತೆಯು ಯಾವ ಅರ್ಥದಲ್ಲಿತ್ತು, ಮತ್ತು ದೇಶಭ್ರಷ್ಟತೆಯಿಂದ ತಪ್ಪಿಸಿಕೊಳ್ಳಬೇಕಾಗಿದ್ದಲ್ಲಿ ಅವರು ಏನನ್ನು ಮಾಡುವಂತೆ ಹೇಳಲ್ಪಟ್ಟರು? (6) ಸೈಬೀರಿಯಕ್ಕೆ ಹೋಗುವ ದೀರ್ಘಕಾಲದ ರೈಲು ಪ್ರಯಾಣದ ಸಮಯದಲ್ಲಿ, ನಮ್ಮ ಸಹೋದರ ಸಹೋದರಿಯರು ಪರಸ್ಪರ ಹೇಗೆ ಉತ್ತೇಜನವನ್ನು ಪಡೆದುಕೊಂಡರು ಮತ್ತು ಅವರನ್ನು ಸೆರೆಹಿಡಿದವರಿಗೆ ಹೇಗೆ ಆಶ್ಚರ್ಯವನ್ನುಂಟುಮಾಡಿದರು? (7) ಸೈಬೀರಿಯದಲ್ಲಿ ಸಾಕ್ಷಿಗಳು ಯಾವ ದುರವಸ್ಥೆಗಳನ್ನು ತಾಳಿಕೊಂಡರು? (8) ಯೆಹೋವನ ಜನರು ಯಾವ ಆತ್ಮಿಕ ಒದಗಿಸುವಿಕೆಯನ್ನು ಅಮೂಲ್ಯವಾಗಿ ಪರಿಗಣಿಸುತ್ತಾರೆ, ಮತ್ತು ಏಕೆ? (9) ನಮ್ಮ ಸಹೋದರರು ಸಾಹಿತ್ಯಕ್ಕೋಸ್ಕರ ತಮ್ಮ ಜೀವಗಳನ್ನು ಸಹ ಅಪಾಯಕ್ಕೊಡ್ಡಲು ಏಕೆ ಸಿದ್ಧಮನಸ್ಕರಾಗಿದ್ದರು, ಮತ್ತು ಸಾಕ್ಷಿಗಳು ಅದನ್ನು ಪಡೆದುಕೊಳ್ಳದಂತೆ ತಡೆಗಟ್ಟಲಿಕ್ಕಾಗಿ ಅಧಿಕಾರಿಗಳು ಮಾಡಿದ ಸತತ ಪ್ರಯತ್ನಗಳ ಹೊರತಾಗಿಯೂ ಅವರು ಹೇಗೆ ಯಶಸ್ಸನ್ನು ಪಡೆದರು? (10) ಕ್ರುಸ್ಚಿವ್ ದೇವಜನರ ಮೇಲಿನ ಆಕ್ರಮಣವನ್ನು ಹೇಗೆ ಮುಂದುವರಿಸಿದನು? (11) ಸಾಕ್ಷಿ ಮಕ್ಕಳ ನಂಬಿಕೆಯನ್ನು ಹಾಳುಮಾಡಲು ಸರಕಾರಿ ಅಧಿಕಾರಿಗಳು ಹೇಗೆ ಪ್ರಯತ್ನಿಸಿದರು? (12) ತಾವು ಏಕೆ ಹಿಂಸಿಸಲ್ಪಡುತ್ತಿದ್ದೇವೆ ಎಂಬುದಕ್ಕಿರುವ ಕಾರಣದ ವಿಷಯದಲ್ಲಿ ನಮ್ಮ ಸಹೋದರರಿಗೆ ಯಾವ ಸ್ಪಷ್ಟವಾದ ತಿಳಿವಳಿಕೆಯಿತ್ತು? (2002, ವರ್ಷಪುಸ್ತಕ [ಇಂಗ್ಲಿಷ್], ಪುಟಗಳು 203-4) (13) ದೇವರ ಸಂಸ್ಥೆಯ ಮೇಲೆ ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಉಪಯೋಗಿಸಿ ಮಾಡಲ್ಪಟ್ಟ ದೃಢನಿರ್ಧಾರಿತ ಆಕ್ರಮಣವು, ಹಿಂಸಕರ ಮೇಲೆ ಯಾವ ಪ್ರತಿಕೂಲ ಪರಿಣಾಮವನ್ನು ಬೀರಿತು? (2002, ವರ್ಷಪುಸ್ತಕ [ಇಂಗ್ಲಿಷ್], ಪುಟಗಳು 220-1) (14) ಹಿಂದಣ ಸೋವಿಯಟ್ ಯೂನಿಯನ್ನಲ್ಲಿ ಸಾಕ್ಷಿಗಳಿಗೆ ಕೇವಲ ಕನಸುಗಳಾಗಿದ್ದ ಯಾವ ಸಂಗತಿಗಳು ನಂತರ ನೈಜವಾಗಿ ಪರಿಣಮಿಸಿದವು? (15) ತಮ್ಮ ಪರೀಕ್ಷೆಗಳನ್ನು ತಾಳಿಕೊಳ್ಳುವಂತೆ ನಮ್ಮ ಸಹೋದರರಿಗೆ ಯಾವುದು ಸಹಾಯಮಾಡಿತು, ಮತ್ತು ವಿಡಿಯೋದ ಕೊನೇ ದೃಶ್ಯವು ಯೆರೆಮೀಯ 1:19ರ ಮಾತುಗಳ ಸತ್ಯತೆಯನ್ನು ಹೇಗೆ ಚಿತ್ರಿಸಿತು? (16) ವಿಶೇಷವಾಗಿ ನಿಮ್ಮನ್ನು ಪ್ರಚೋದಿಸುವಂಥ, ಪರೀಕ್ಷೆಯ ಕೆಳಗೆ ನಂಬಿಗಸ್ತಿಕೆಯ ನಿಜ ಜೀವನದ ಅನುಭವಗಳಲ್ಲಿ ಒಂದನ್ನು ತಿಳಿಸಿರಿ.