ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜುಲೈ - ಸೆಪ್ಟೆಂ.
“ಇಂದು, ನಮ್ಮ ಆರೋಗ್ಯಕ್ಕೆ ಅಪಾಯವನ್ನು ತರುವ ಅನೇಕ ವಿಷಯಗಳಲ್ಲಿ ಕೀಟರವಾನಿತ ರೋಗವು ಒಂದಾಗಿದೆ. ನಾವು ಅನಿಶ್ಚಿತ ಕಾಲದ ವರೆಗೂ ಕಷ್ಟವನ್ನು ಅನುಭವಿಸುತ್ತಾ ಇರಬೇಕೆಂದು ಇದರ ಅರ್ಥವೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ ಮತ್ತು ಯೆಶಾಯ 11:6-9ನ್ನು ಓದಿರಿ.] ಮಾನವರು ದೊಡ್ಡದಾದ ಹಾಗೂ ಸಣ್ಣದಾದ ಇತರ ಜೀವಿಗಳೊಂದಿಗೆ ನೆಮ್ಮದಿಯಿಂದ ಜೀವಿಸುವ ಕಾಲದ ಕುರಿತಾದ ದೇವರ ವಾಗ್ದಾನವನ್ನು ಈ ಪತ್ರಿಕೆಯು ಚರ್ಚಿಸುತ್ತದೆ.”
ಕಾವಲಿನಬುರುಜು ಸೆಪ್ಟೆಂ.15
“ಇಂದಿನ ಲೋಕದಲ್ಲಿ ಅನೇಕರಿಗೆ ತಾವು ಪ್ರೀತಿರಹಿತವಾದ ವಿವಾಹದಲ್ಲಿ ಸಿಲುಕಿಕೊಂಡಿದ್ದೇವೆಂದು ಅನಿಸುತ್ತದೆ. ಈ ರೀತಿಯ ಪರಿಸ್ಥಿತಿಯಲ್ಲಿರುವ ಜನರು ಸಹಾಯಕ್ಕಾಗಿ ಯಾರ ಕಡೆಗೆ ನೋಡಸಾಧ್ಯವಿದೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ದೇವರ ಮೂಲತತ್ತ್ವಗಳು ನಮಗೆ ಸಹಾಯ ನೀಡಬಲ್ಲವೆಂದು ಬೈಬಲ್ ಆಶ್ವಾಸನೆ ನೀಡುತ್ತದೆ. [ಯೆಶಾಯ 48:17, 18ನ್ನು ಓದಿರಿ.] ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆಯು, ವೈವಾಹಿಕ ಜೀವನವನ್ನು ಬಲಗೊಳಿಸಬಲ್ಲ ಬೈಬಲ್ ಮೂಲತತ್ತ್ವಗಳನ್ನು ಪರಿಗಣಿಸುತ್ತದೆ.”
ಎಚ್ಚರ! ಜುಲೈ - ಸೆಪ್ಟೆಂ.
“ನಮ್ಮ ಸುತ್ತುಮುತ್ತಲಿನ ಸೃಷ್ಟಿಯನ್ನು ನೋಡುವಾಗ, ಸೃಷ್ಟಿಕರ್ತನ ಕಲಾಸೌಂದರ್ಯದ ಸಾಮರ್ಥ್ಯಗಳ ಕುರಿತು ನೀವು ಎಂದಾದರೂ ಆಶ್ಚರ್ಯಪಟ್ಟಿದ್ದೀರೋ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಪುಟ 17ರಲ್ಲಿರುವ ಲೇಖನಕ್ಕೆ ಗಮನವನ್ನು ಸೆಳೆಯಿರಿ, ಮತ್ತು ಲೇಖನದ ಕೊನೆಯ ಪ್ಯಾರಗ್ರಾಫ್ ಅನ್ನು ಎತ್ತಿತೋರಿಸಿರಿ. ಪ್ರಕಟನೆ 4:11ನ್ನು ಓದುವ ಮೂಲಕ ಸಮಾಪ್ತಿಗೊಳಿಸಿರಿ.
ಕಾವಲಿನಬುರುಜು ಅಕ್ಟೋ.1
“ನೀವು ಈ ಪ್ರಶ್ನೆಯನ್ನು ಎಂದಾದರೂ ಕೇಳಿದ್ದೀರೋ: ‘ದೇವರು ಪ್ರೀತಿಸ್ವರೂಪಿಯೂ ಸರ್ವಶಕ್ತನೂ ಆಗಿರುವುದಾದರೆ, ಕಷ್ಟಾನುಭವಿಸುವವರ ಪರವಾಗಿ ಆತನು ಏಕೆ ಮಧ್ಯಪ್ರವೇಶಿಸುವುದಿಲ್ಲ?’ [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಬೇಗನೆ ಆತನು ಎಲ್ಲಾ ಸಮಸ್ಯೆಗಳನ್ನು ಕೊನೆಗೊಳಿಸುವನು. [ಯೆಶಾಯ 65:17ನ್ನು ಓದಿರಿ.] ಆದರೆ ಈ ಪತ್ರಿಕೆಯು ತೋರಿಸುವಂತೆ, ಅಷ್ಟರವರೆಗೂ, ನಾವು ಕಷ್ಟಾನುಭವಿಸುತ್ತಿರುವಾಗ ದೇವರು ಭಾವರಹಿತನಾಗಿ ಸುಮ್ಮನೆ ನೋಡುತ್ತಿಲ್ಲ.”