ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜುಲೈ - ಸೆಪ್ಟೆಂ.
“ವಿವಾಹಗಳು ಮುರಿದುಹೋಗುತ್ತಿರುವುದು ದಿನೇ ದಿನೇ ಹೆಚ್ಚುತ್ತಿರುವುದರಿಂದ ತಮ್ಮ ವಿವಾಹ ಸಂಗಾತಿಯನ್ನು ವಿವೇಚನೆಯಿಂದ ಆಯ್ದುಕೊಳ್ಳುವುದು ತುಂಬ ಪ್ರಾಮುಖ್ಯ. ಈ ವಿಷಯದಲ್ಲಿ ಸರಿಯಾದ ಆಯ್ಕೆಯನ್ನು ಮಾಡಲು ನಮಗೆ ಯಾವುದು ಸಹಾಯಮಾಡುವುದು? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ಈ ಹಳೆಯ ನಾಣ್ಣುಡಿ ಅನೇಕರಿಗೆ ಸಹಾಯಕರವಾಗಿದೆ. [ಜ್ಞಾನೋಕ್ತಿ 22:3ನ್ನು ಓದಿ, ಬಳಿಕ ಪುಟ 16ರಲ್ಲಿರುವ ಲೇಖನವನ್ನು ತೋರಿಸಿರಿ.] ಈ ಲೇಖನವು, ಜನರು ಸರಿಯಾದ ನಿರ್ಣಯವನ್ನು ಮಾಡಲಿಕ್ಕಾಗಿ ಗಂಭೀರವಾಗಿ ಯೋಚಿಸುವಂತೆ ಮಾಡುವ ಬಹಳಷ್ಟು ವಿಷಯಗಳನ್ನು ತಿಳಿಸುತ್ತದೆ.”
ಕಾವಲಿನಬುರುಜು ಸೆಪ್ಟೆಂ.1
“ಜೀವನದಲ್ಲಿನ ಸವಾಲುಗಳನ್ನು ಎದುರಿಸಲಿಕ್ಕಾಗಿ ತಮ್ಮ ಮಕ್ಕಳನ್ನು ಸಿದ್ಧಗೊಳಿಸುವ ವಿಷಯದ ಬಗ್ಗೆ ಅನೇಕ ಹೆತ್ತವರು ಚಿಂತೆಗೀಡಾಗಿದ್ದಾರೆ. ತಮ್ಮ ಪಾತ್ರವನ್ನು ನಿರ್ವಹಿಸಲು ಹೆತ್ತವರಿಗೆ ಯಾವುದು ಸಹಾಯಮಾಡಬಲ್ಲದು? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ಶಾಸ್ತ್ರವಚನಗಳಲ್ಲಿ ಕೊಡಲಾಗಿರುವ ಈ ಸಲಹೆಯನ್ನು ಗಮನಿಸಿ. [1 ಕೊರಿಂಥ 16:14ನ್ನು ಓದಿ ಮತ್ತು ಪುಟ 22ರಲ್ಲಿರುವ ಲೇಖನವನ್ನು ತೋರಿಸಿ.] ಈ ಲೇಖನವು ಪ್ರೀತಿಯ ಮೂರು ಅಂಶಗಳನ್ನು ವಿವರಿಸುತ್ತದೆ. ಅಲ್ಲದೆ, ಹೆತ್ತವರು ತಮ್ಮ ಮಕ್ಕಳಿಗೆ ತರಬೇತಿಕೊಡುವಾಗ ಈ ಗುಣವನ್ನು ಅನ್ವಯಿಸಿಕೊಳ್ಳಸಾಧ್ಯವಿರುವ ನಿರ್ದಿಷ್ಟ ಮಾರ್ಗಗಳನ್ನೂ ತಿಳಿಸುತ್ತದೆ.”
ಎಚ್ಚರ! ಅಕ್ಟೋ. - ಡಿಸೆಂ.
“ಹೆತ್ತವರು ತಮಗೆ ನಿಜವಾಗಿಯೂ ಸಹಾಯಮಾಡಬಲ್ಲ ಸಲಹೆಗಳನ್ನು ಎಲ್ಲಿ ಕಂಡುಕೊಳ್ಳಬಲ್ಲರೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ಬೈಬಲ್ನಲ್ಲಿರುವ ಈ ಮಾತನ್ನು ಗಮನಿಸಿ. [2 ತಿಮೊಥೆಯ 3:16ನ್ನು ಓದಿ.] ಈ ಪತ್ರಿಕೆಯು, ಸಂತೋಷಭರಿತ ಮಕ್ಕಳನ್ನು ಬೆಳೆಸಲು ಹೆತ್ತವರಿಗೆ ಸಹಾಯಮಾಡುವುದರಲ್ಲಿ ಬೈಬಲ್ ಎಷ್ಟೊಂದು ಪ್ರಾಯೋಗಿಕವಾಗಿದೆ ಎಂದು ತೋರಿಸುತ್ತದೆ.”
ಕಾವಲಿನಬುರುಜು ಅಕ್ಟೋ.1
“ಜೀವನದಲ್ಲಿ ಒಂದು ಗುರಿಯನ್ನು ಹೊಂದಿರುವುದು ಜೀವನವನ್ನು ಇನ್ನಷ್ಟು ಅರ್ಥಭರಿತವಾಗಿ ಮಾಡುತ್ತದೆಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ ಮತ್ತು 1 ಯೋಹಾನ 2:15-17ನ್ನು ಓದಿ. ಬಳಿಕ ಪುಟ 19ರಲ್ಲಿರುವ ಲೇಖನವನ್ನು ತೋರಿಸಿ.] ಈ ಲೇಖನ ಮತ್ತು ಮುಂದಿನ ಲೇಖನವು ದೇವರ ಚಿತ್ತವನ್ನು ಮಾಡುವುದು ಹೇಗೆ ನಮ್ಮ ಜೀವನವನ್ನು ಅರ್ಥಭರಿತವಾಗಿಯೂ ಹರ್ಷಭರಿತವಾಗಿಯೂ ಮಾಡಬಲ್ಲದು ಎಂಬುದನ್ನು ಚರ್ಚಿಸುತ್ತದೆ.”