2004ನೇ ಇಸವಿಗಾಗಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ
1 ವಿಶ್ವವ್ಯಾಪಕ ಪ್ರಮುಖತೆ ಹೊಂದಿರುವ ಕೆಲಸವನ್ನು ಸಾಧಿಸಲು ಯೆಹೋವನು ಸಾಮಾನ್ಯ ಜನರನ್ನು ಸನ್ನದ್ಧಗೊಳಿಸುತ್ತಾನೆ. ಆತನು ಇದನ್ನು ಮಾಡುವ ಒಂದು ವಿಧವು, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಪ್ರತಿ ವಾರ ಒದಗಿಸಲ್ಪಡುವ ತರಬೇತಿಯ ಮೂಲಕವೇ. ನಿಮ್ಮ ಪರಿಸ್ಥಿತಿಗಳು ಅನುಮತಿಸುವಷ್ಟರ ಮಟ್ಟಿಗೆ ನೀವು ಅದರಲ್ಲಿ ಭಾಗವಹಿಸುತ್ತಿದ್ದೀರೋ? ಈ ಏರ್ಪಾಡುಗಳಿಂದ ವಿದ್ಯಾರ್ಥಿಗಳು ಅತ್ಯಧಿಕ ಪ್ರಯೋಜನವನ್ನು ಪಡೆದುಕೊಳ್ಳಲಾಗುವಂತೆ ಜನವರಿಯಿಂದ ಕೆಲವು ಹೊಂದಾಣಿಕೆಗಳು ಕಾರ್ಯರೂಪಕ್ಕೆ ಹಾಕಲ್ಪಡುವವು.
2 ಸಹಾಯಕ ಸಲಹೆಗಾರನ ಸರದಿ: ಸಹಾಯಕ ಸಲಹೆಗಾರನಿಂದ ಪಡೆದುಕೊಳ್ಳುವ ಸಲಹೆಗಳಿಗಾಗಿ ಉಪದೇಶ ಭಾಷಣಗಳು ಮತ್ತು ಬೈಬಲ್ ಮುಖ್ಯಾಂಶಗಳನ್ನು ನೀಡುವ ಸಹೋದರರು ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಅರ್ಹ ಹಿರಿಯರಿರುವ ಸಭೆಗಳಲ್ಲಿ, ಸಹಾಯಕ ಸಲಹೆಗಾರನ ನೇಮಕವನ್ನು ವಾರ್ಷಿಕವಾಗಿ ಸರದಿಯ ಪ್ರಕಾರ ನೀಡಬಹುದು. ಈ ರೀತಿಯಲ್ಲಿ, ಕೆಲಸದ ಹೊರೆಯು ಸರಿಭಾಗಿಸಲ್ಪಡುವುದು; ಆದರೆ ಹೆಚ್ಚು ಪ್ರಾಮುಖ್ಯವಾಗಿ, ಹಿರಿಯರು ಮತ್ತು ಶುಶ್ರೂಷಾ ಸೇವಕರು, ಬೇರೆ ಬೇರೆ ಸಮರ್ಥ ಭಾಷಣಕರ್ತರ ಮತ್ತು ಬೋಧಕರ ಸಂಗ್ರಹಿತ ಅನುಭವದಿಂದ ಪ್ರಯೋಜನವನ್ನು ಪಡೆಯುವರು.
3 ಮೌಖಿಕ ಪುನರ್ವಿಮರ್ಶೆಯ ಶೆಡ್ಯೂಲ್: ಮೌಖಿಕ ಪುನರ್ವಿಮರ್ಶೆಯಿರುವ ವಾರದಲ್ಲಿ ನಿಮ್ಮ ಸಭೆಯ ಸರ್ಕಿಟ್ ಸಮ್ಮೇಳನವಿರುವುದಾದರೆ, ಪುನರ್ವಿಮರ್ಶೆಯನ್ನು (ಮತ್ತು ವಾರದ ಇಡೀ ಶೆಡ್ಯೂಲನ್ನು) ಮುಂದಿನ ವಾರಕ್ಕೆ ಮುಂದೂಡಬಹುದು ಮತ್ತು ಆ ಮುಂದಿನ ವಾರದ ಶೆಡ್ಯೂಲನ್ನು ಈ ವಾರದಲ್ಲಿ ಉಪಯೋಗಿಸಬೇಕು. ಆದರೆ, ಸರ್ಕಿಟ್ ಮೇಲ್ವಿಚಾರಕನ ಸಂದರ್ಶನವು ಮೌಖಿಕ ಪುನರ್ವಿಮರ್ಶೆಯ ವಾರದಂದು ಇರುವುದಾದರೆ, ಎರಡು ಸಂಪೂರ್ಣ ಸಾಪ್ತಾಹಿಕ ಶೆಡ್ಯೂಲ್ಗಳನ್ನು ಬದಲಾಯಿಸುವ ಆವಶ್ಯಕತೆಯಿರುವುದಿಲ್ಲ. ಬದಲಿಗೆ, ಗೀತೆ, ಭಾಷಣ ಗುಣದ ಭಾಷಣ, ಮತ್ತು ಬೈಬಲ್ ಮುಖ್ಯಾಂಶಗಳನ್ನು ಶೆಡ್ಯೂಲ್ ಮಾಡಲ್ಪಟ್ಟಿರುವಂತೆಯೇ ಪ್ರಸ್ತುತಪಡಿಸಬೇಕು. (ಭಾಷಣ ಗುಣದ ಭಾಷಣದ ನಂತರ ನೀಡಲ್ಪಡುವ) ಉಪದೇಶ ಭಾಷಣವನ್ನು ಮುಂದಿನ ವಾರದ ಶೆಡ್ಯೂಲ್ನಿಂದ ತೆಗೆಯಬೇಕು. ಬೈಬಲ್ ಮುಖ್ಯಾಂಶಗಳನ್ನು ಹಿಂಬಾಲಿಸುತ್ತಾ ಅರ್ಧ ತಾಸಿನ ಸೇವಾ ಕೂಟವಿರಬೇಕು, ಮತ್ತು ಇದನ್ನು 10 ನಿಮಿಷದ ಮೂರು ಭಾಗಗಳನ್ನು ಅಥವಾ 15 ನಿಮಿಷದ ಎರಡು ಭಾಗಗಳನ್ನು ಪ್ರಸ್ತುತಪಡಿಸಲಿಕ್ಕಾಗಿ ಹೊಂದಿಸಿಕೊಳ್ಳಬಹುದು. (ಆರಂಭದ ಪ್ರಕಟನೆಗಳನ್ನು ಬಿಟ್ಟುಬಿಡಬೇಕು.) ಸೇವಾ ಕೂಟದ ನಂತರ ಗೀತೆಯಿರುವುದು ಮತ್ತು ನಂತರ ಸರ್ಕಿಟ್ ಮೇಲ್ವಿಚಾರಕನಿಂದ ಅರ್ಧ ತಾಸಿನ ಕಾರ್ಯಕ್ರಮವಿರುವುದು. ಮುಂದಿನ ವಾರದ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯು ಶೆಡ್ಯೂಲ್ನ ಪ್ರಕಾರ ಭಾಷಣ ಗುಣದ ಭಾಷಣ ಮತ್ತು ಬೈಬಲ್ ಮುಖ್ಯಾಂಶಗಳೊಂದಿಗೆ ಆರಂಭಿಸುವುದು, ಮತ್ತು ಇದರ ನಂತರ ಮೌಖಿಕ ಪುನರ್ವಿಮರ್ಶೆಯಿರುವುದು.
4 ಆತ್ಮಿಕ ಬೆಳವಣಿಗೆಗಾಗಿರುವ ಪ್ರತಿಯೊಂದು ಸಂದರ್ಭವನ್ನು ಸದುಪಯೋಗಿಸಿಕೊಳ್ಳಿರಿ. ನಿಮ್ಮ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ನೀವು ಪ್ರಯೋಜನವನ್ನು ಪಡೆಯುವಾಗ, ನಿಮ್ಮ ಸಭೆಯನ್ನು ನೀವು ಪ್ರೋತ್ಸಾಹಿಸುತ್ತೀರಿ, ಬೈಬಲ್ ಪ್ರವಾದನೆಯ ನೆರವೇರಿಕೆಯಲ್ಲಿ ಭಾಗವಹಿಸುತ್ತೀರಿ, ಮತ್ತು ನಾವು ಪ್ರಕಟಿಸಬೇಕಾಗಿರುವ ಅದ್ಭುತಕರ ಸಂದೇಶದ ಮೂಲಕರ್ತನನ್ನು ಘನಪಡಿಸುತ್ತೀರಿ.—ಯೆಶಾ. 32:3, 4; ಪ್ರಕ. 9:19.