ದಯವಿಟ್ಟು ತಡಮಾಡದೆ ಭೇಟಿಮಾಡಿರಿ
ಯಾರನ್ನು ತಡಮಾಡದೆ ಭೇಟಿಮಾಡಬೇಕು? ಸಾಹಿತ್ಯವನ್ನು ಅಥವಾ ಕ್ರಮವಾಗಿ ಪತ್ರಿಕೆಯನ್ನು ಪಡೆದುಕೊಳ್ಳಲು ವಿನಂತಿಸುವ ಇಲ್ಲವೆ ಒಬ್ಬ ಸಾಕ್ಷಿಯು ತಮ್ಮನ್ನು ತಮ್ಮ ಮನೆಯಲ್ಲಿ ಭೇಟಿಯಾಗುವಂತೆ ಬಯಸುವ ವ್ಯಕ್ತಿಗಳನ್ನು ತಡಮಾಡದೆ ಭೇಟಿಮಾಡಬೇಕು. ಈ ವಿನಂತಿಗಳು ಎಲ್ಲಿಂದ ಬರುತ್ತವೆ? ಅಂಚೆ ಅಥವಾ ಟೆಲಿಫೋನ್ ಇಲ್ಲವೆ ನಮ್ಮ ಅಧಿಕೃತ ಇಂಟರ್ನೆಟ್ ವೆಬ್ ಸೈಟ್ನ ಮೂಲಕ ಬ್ರಾಂಚ್ ಆಫೀಸನ್ನು ಸಂಪರ್ಕಿಸುವ ವ್ಯಕ್ತಿಗಳಿಂದ ಬರುತ್ತವೆ. ಈ ರೀತಿಯ ಆಸಕ್ತಿಯು ತೋರಿಸಲ್ಪಡುವಾಗ, ಬ್ರಾಂಚ್ ಆಫೀಸು S-70 ಫಾರ್ಮ್ ಅನ್ನು ಉಪಯೋಗಿಸುತ್ತಾ ಸ್ಥಳಿಕ ಸಭೆಗೆ ಇದರ ಕುರಿತು ತಿಳಿಸುತ್ತದೆ. ಆ ಫಾರ್ಮ್ನ ಮೇಲೆ “Please Arrange for a Qualified Publisher to Call on This Person” ಎಂಬ ಶೀರ್ಷಿಕೆಯಿದೆ. ಹಿರಿಯರು S-70 ಫಾರ್ಮ್ವೊಂದನ್ನು ಪಡೆದುಕೊಳ್ಳುವಾಗ, ಆಸಕ್ತ ವ್ಯಕ್ತಿಗೆ ಶ್ರದ್ಧಾಪೂರ್ವಕವಾಗಿ ಹೆಚ್ಚಿನ ಸಹಾಯವನ್ನು ನೀಡುವ ಒಬ್ಬ ಪ್ರಚಾರಕನಿಗೆ ಅದನ್ನು ಒಡನೆಯೇ ಒಪ್ಪಿಸಬೇಕು. ಆ ವ್ಯಕ್ತಿಯನ್ನು ಮನೆಯಲ್ಲಿ ಕಂಡುಕೊಳ್ಳುವುದು ಕಷ್ಟಕರವಾಗಿರುವುದಾದರೆ, ಪ್ರಚಾರಕನು ಆ ವ್ಯಕ್ತಿಯನ್ನು ಟೆಲಿಫೋನಿನ ಮೂಲಕ ಸಂಪರ್ಕಿಸಲು ಪ್ರಯತ್ನಿಸಬಹುದು ಅಥವಾ ಜಾಣ್ಮೆಯಿಂದ ಒಂದು ಚೀಟಿಯನ್ನು ಬಿಟ್ಟುಬರಬಹುದು. ಇಂತಹ ಒಂದು ಭೇಟಿಯನ್ನು ನೀವು ಮಾಡುವಂತೆ ಕೇಳಿಕೊಳ್ಳಲ್ಪಡುವಲ್ಲಿ, ದಯವಿಟ್ಟು ಆಸಕ್ತ ವ್ಯಕ್ತಿಯನ್ನು ತಡಮಾಡದೆ ಸಂಪರ್ಕಿಸಲು ಸಕಲ ಪ್ರಯತ್ನವನ್ನು ಮಾಡಿರಿ.