ರಕ್ತವನ್ನು ವಿಸರ್ಜಿಸುವುದರಲ್ಲಿ ನಮಗೆ ಸಹಾಯಮಾಡುವ ಒದಗಿಸುವಿಕೆಗಳು
ಯಾವುದೇ ಮುದ್ರಿತ ತಾರೀಖಿಲ್ಲದ ಅಥವಾ 3/99ರ ಮುದ್ರಿತ ತಾರೀಖನ್ನು ಹೊಂದಿರುವ ಅಡ್ವಾನ್ಸ್ ಮೆಡಿಕಲ್ ಡೈರೆಕ್ಟಿವ್/ರಿಲೀಸ್ ಕಾರ್ಡ್ ಅಥವಾ ಐಡೆಂಟಿಟಿ ಕಾರ್ಡ್ನ್ನು ಈಗಾಗಲೇ ಭರ್ತಿಮಾಡಿ ಇಟ್ಟುಕೊಂಡಿರುವ ಸ್ನಾತ ಪ್ರಚಾರಕರು ಈ ವರ್ಷವೂ ಒಂದು ಹೊಸ ಕಾರ್ಡನ್ನು ಭರ್ತಿಮಾಡಬೇಕಾಗಿರುವುದಿಲ್ಲ. ಡಿಸೆಂಬರ್ 29ರ ವಾರದ ಸೇವಾ ಕೂಟಕ್ಕಾಗಿ, ಸೆಕ್ರಿಟರಿಯ ಬಳಿ ಹೊಸ ಸ್ನಾತ ಪ್ರಚಾರಕರಿಗಾಗಿ, ಅವರ ಮಕ್ಕಳಿಗಾಗಿ, ಮತ್ತು ಹೊಸ ಕಾರ್ಡ್ಗಳ ಅಗತ್ಯವಿರುವವರಿಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಡ್ಗಳು ಇರಬೇಕು. ಆಗಸ್ಟ್ ತಿಂಗಳಿನಲ್ಲಿ ಫಾರ್ಮ್ಗಳ ವಾರ್ಷಿಕ ಸರಬರಾಜಿನೊಂದಿಗೆ ಈ ಕಾರ್ಡ್ಗಳನ್ನೂ ಎಲ್ಲಾ ಸಭೆಗಳಿಗೆ ಕಳುಹಿಸಲಾದೆ. ಸಭೆಯಲ್ಲಿ ಸಾಕಷ್ಟು ಕಾರ್ಡ್ಗಳು ಇಲ್ಲವಾದರೆ, ಸೆಕ್ರಿಟರಿಯು ಹತ್ತಿರದಲ್ಲಿರುವ ಸಭೆಗಳಲ್ಲಿ ವಿಚಾರಿಸಿ ನೋಡಬಹುದು ಅಥವಾ ಸಭೆಯ ಮುಂದಿನ ಸಾಹಿತ್ಯ ವಿನಂತಿಯಲ್ಲಿ ಹೆಚ್ಚಿನ ಕಾರ್ಡ್ಗಳಿಗಾಗಿ ವಿನಂತಿಸಬಹುದು.
ಕಾರ್ಡ್ಗಳನ್ನು ಮನೆಯಲ್ಲಿ ಜಾಗರೂಕವಾಗಿ ತುಂಬಿಸಬೇಕು, ಆದರೆ ಸಹಿ ಹಾಕಬಾರದು. ಮುಂದಿನ ಸಭಾ ಪುಸ್ತಕ ಅಧ್ಯಯನದಲ್ಲಿ, ಅಗತ್ಯವಿರುವ ನೆರವನ್ನು ಪುಸ್ತಕ ಅಧ್ಯಯನ ಮೇಲ್ವಿಚಾರಕನಿಂದ ಪಡೆದುಕೊಂಡು ಕಾರ್ಡ್ಗಳಲ್ಲಿ ಸಹಿ ಹಾಕಬೇಕು, ಸಾಕ್ಷಿಯ ಸಹಿ ಹಾಕಿಸಬೇಕು, ಮತ್ತು ಅದರ ತಾರೀಖನ್ನು ನಮೂದಿಸಬೇಕು. ಕಾರ್ಡನ್ನು ಪಡೆದುಕೊಳ್ಳುತ್ತಿರುವವನು ಅದರಲ್ಲಿ ಸಹಿ ಹಾಕುವುದನ್ನು ಸಾಕ್ಷಿಗಳು ಸ್ವತಃ ನೋಡಬೇಕು.
ಅಸ್ನಾತ ಪ್ರಚಾರಕರು, ಅಡ್ವಾನ್ಸ್ ಮೆಡಿಕಲ್ ಡೈರೆಕ್ಟಿವ್/ರಿಲೀಸ್ ಕಾರ್ಡ್ನಲ್ಲಿ ಮತ್ತು ಐಡೆಂಟಿಟಿ ಕಾರ್ಡ್ನಲ್ಲಿ ಸೂಚಿಸಲ್ಪಟ್ಟಿರುವ ವಿಷಯಕ್ಕೆ ತಕ್ಕಂತೆ ತಮಗಾಗಿ ಮತ್ತು ತಮ್ಮ ಮಕ್ಕಳಿಗಾಗಿ ಡೈರಕ್ಟಿವ್ಗಳನ್ನು ಬರೆದುಕೊಳ್ಳಬಹುದು.