ರಕ್ತವನ್ನು ವಿಸರ್ಜಿಸುವುದರಲ್ಲಿ ನಮಗೆ ನೆರವನ್ನು ನೀಡಲು ಹೊಸ ಒದಗಿಸುವಿಕೆ
ಆಡಳಿತ ಮಂಡಲಿಯು, ಡ್ಯೂರಬ್ಲ್ ಪವರ್ ಆಫ್ ಅಟರ್ನಿ (ಡೀಪೀಏ - ಸ್ಥಿರ ಮುಖ್ತ್ಯಾರ ನಾಮೆ) ಸಾಕ್ಷ್ಯಪತ್ರ ಮತ್ತು ಅಡ್ವಾನ್ಸ್ ಮೆಡಿಕಲ್ ಡೈರೆಕ್ಟಿವ್/ರಿಲೀಸ್ ಕಾರ್ಡ್ನ ಅತಿ ಮುಖ್ಯ ಭಾಗಗಳನ್ನು ಒಂದೇ ಒಂದು ಪ್ರಮಾಣ ಪತ್ರವನ್ನಾಗಿ ಒಟ್ಟುಸೇರಿಸಲು ಅನುಮತಿಯನ್ನು ನೀಡಿದೆ. ಇದನ್ನು ನಾವು ಸಾಮಾನ್ಯವಾಗಿ ಡೀಪೀಏ ಕಾರ್ಡ್ ಎಂದು ಕರೆಯುವೆವು.
ಈ ಡೀಪೀಏ ಕಾರ್ಡನ್ನು ನವೀಕರಿಸುವ ಅಗತ್ಯವಿರುವುದಿಲ್ಲ ಮತ್ತು ನೀವು ಅಂತಾರಾಷ್ಟ್ರೀಯವಾಗಿ ಪ್ರಯಾಣಿಸುವಾಗ ಇದು ನಿಮ್ಮ ಆಯ್ಕೆಗಳ ವಿವರಣ ಪತ್ರವಾಗಿ ಕಾರ್ಯವೆಸಗುವುದು. ಭವಿಷ್ಯದಲ್ಲಿ, ನಿಮಗೆ ಒಂದು ಹೊಸ ಡೀಪೀಏ ಕಾರ್ಡನ್ನು ತುಂಬಿಸುವಂತೆ ಬರುವ ಸನ್ನಿವೇಶಗಳು: (1) ನಿಮಗೆ ನಿಮ್ಮ ಡೀಪೀಏ ಕಾರ್ಡ್ನಲ್ಲಿ ಕೆಲವೊಂದು ಬದಲಾವಣೆಗಳನ್ನು, ಅಂದರೆ ನಿಮ್ಮ ಆಯ್ಕೆಗಳು, ಆರೋಗ್ಯಾರೈಕೆಯ ಏಜಂಟರು, ವಿಳಾಸಗಳು ಮತ್ತು ದೂರವಾಣಿ ಸಂಖ್ಯೆಗಳಲ್ಲಿ ಬದಲಾವಣೆಗಳನ್ನು ಮಾಡಲಿಕ್ಕಿರುವಾಗ, ಅಥವಾ (2) ನಿಮ್ಮ ಡೀಪೀಏ ಕಾರ್ಡ್ ಕಳೆದುಹೋಗಿರುವಾಗ ಅಥವಾ ನಾಶವಾಗಿರುವಾಗ.
ಡೀಪೀಏ ಕಾರ್ಡನ್ನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸತಕ್ಕದ್ದು ಮತ್ತು ಅದನ್ನು ಮನೆಯಲ್ಲಿರುವಾಗ ಜಾಗ್ರತೆಯಿಂದ ತುಂಬಿಸಬೇಕು. ಆದರೂ, ಕಾರ್ಡ್ಗೆ ಸಹಿ ಹಾಕುವ ಮುಂಚೆ, ಸ್ಥಾಪಿತ ಕಾರ್ಯವಿಧಿಗಳನ್ನು ನಿಕಟವಾಗಿ ಹಿಂಬಾಲಿಸುವುದು ಪ್ರಾಮುಖ್ಯ. ಉದಾಹರಣೆಗೆ, ನೀವು ಸಹಿ ಹಾಕುವುದನ್ನು ಇಬ್ಬರು ಸಾಕ್ಷಿಗಳು ನೋಡಬೇಕು ಎಂದು ನಿಮ್ಮ ಕಾರ್ಡ್ ಹೇಳುವುದಾದರೆ, ನೀವು ಸಹಿ ಹಾಕುವಾಗ ಆ ಇಬ್ಬರು ಸಾಕ್ಷಿಗಳು ಪ್ರತ್ಯಕ್ಷವಿರಬೇಕು. ಹೊಸ ಕಾರ್ಡ್ಗಳನ್ನು ತುಂಬಿಸಿರದವರಿಗೆ ಯಾವುದೇ ನೆರವಿನ ಅಗತ್ಯವಿದೆಯೋ ಎಂಬುದನ್ನು ನೋಡಲಿಕ್ಕಾಗಿ ಪುಸ್ತಕ ಅಧ್ಯಯನ ಮೇಲ್ವಿಚಾರಕರು ಆಗಿಂದಾಗ್ಗೆ ಇದರ ಕುರಿತು ಅಂಥವರ ಬಳಿ ವಿಚಾರಿಸಬಹುದು.
ಡೀಪೀಏ ಕಾರ್ಡನ್ನು ಮಡಚುವ ಮುನ್ನ, ನಿಮ್ಮ ವೈದ್ಯರಿಗಾಗಿ ಮತ್ತು ನಿಮ್ಮ ಸ್ವಂತ ಫೈಲ್ಗಾಗಿ ಉತ್ತಮ ಗುಣಮಟ್ಟದ ಫೋಟೋಕಾಪಿಗಳನ್ನು ಮಾಡಿಕೊಳ್ಳಿ. ನಿಮ್ಮ ಇತರ ಕುಟುಂಬದ ಸದಸ್ಯರಿಗೆ ಮತ್ತು ಸಭಾ ಕಾರ್ಯದರ್ಶಿಗೆ ಸಹ ನೀವು ಪ್ರತಿಗಳನ್ನು ಕೊಡಲು ಬಯಸಬಹುದು. ಪ್ರತಿಗಳು ಸ್ಟಾಂಡರ್ಡ್ (A4) ಸೈಸ್ ಪುಟದ ಒಂದು ಪಕ್ಕದಲ್ಲಿ ಮಾತ್ರ ನಮೂದಿಸಲ್ಪಡಬೇಕು, ಮತ್ತು ಡೀಪೀಏ ಕಾರ್ಡ್ ಅದರ ಮಧ್ಯದಲ್ಲಿರಬೇಕು. ನೀವು ನಿಮ್ಮೊಂದಿಗೆ ಡೀಪೀಏ ಕಾರ್ಡ್ನ ಫೋಟೋಕಾಪಿಯನ್ನಲ್ಲ ಬದಲಿಗೆ ಮೂಲಪ್ರತಿಯನ್ನು ಕೊಂಡೊಯ್ಯಬೇಕು.
ಸ್ನಾತ ಸಾಕ್ಷಿಗಳ ಮಕ್ಕಳಿಗಾಗಿರುವ, 3/99ರ ಮುದ್ರಣ ತಾರೀಖನ್ನು ಹೊಂದಿರುವ ಐಡೆಂಟಿಟಿ ಕಾರ್ಡ್ ಬದಲಾಯಿಸಲ್ಪಟ್ಟಿಲ್ಲ. ಪ್ರತಿ ಅಪ್ರಾಪ್ತವಯಸ್ಕ ಮಗುವಿಗಾಗಿ ಒಂದು ಕಾರ್ಡ್ ಸರಿಯಾಗಿ ತುಂಬಿಸಲ್ಪಟ್ಟು ಸಹಿ ಹಾಕಲ್ಪಟ್ಟಿದೆ ಮತ್ತು ಸೂಕ್ತವಾದ ಸಮಯಗಳಲ್ಲಿ ಮಗು ಅದನ್ನು ತನ್ನೊಂದಿಗೆ ಕೊಂಡೊಯ್ಯುತ್ತದೆ ಎಂಬುದನ್ನು ಹೆತ್ತವರು ಖಚಿತಪಡಿಸಿಕೊಳ್ಳಬೇಕು.
ಅಸ್ನಾತ ಪ್ರಚಾರಕರು ಡೀಪೀಏ ಕಾರ್ಡ್ನಲ್ಲಿ ಮತ್ತು ಐಡೆಂಟಿಟಿ ಕಾರ್ಡ್ನಲ್ಲಿ ಸೂಚಿಸಲ್ಪಟ್ಟಿರುವ ವಿಷಯಕ್ಕೆ ತಕ್ಕಂತೆ ತಮಗೆ ಮತ್ತು ತಮ್ಮ ಮಕ್ಕಳಿಗಾಗಿರುವ ಆರೋಗ್ಯಾರೈಕೆಯ ಮಾಹಿತಿಯನ್ನು ಬರೆದುಕೊಳ್ಳಬೇಕು. ಮತ್ತು ವರ್ಷದಲ್ಲಿ ಹೊಸದಾಗಿ ದೀಕ್ಷಾಸ್ನಾನ ಪಡೆದುಕೊಳ್ಳುವ ಎಲ್ಲಾ ಪ್ರಚಾರಕರಿಗೆ ಕಾರ್ಯದರ್ಶಿಯು ಒಂದು ಡೀಪೀಏ ಕಾರ್ಡನ್ನು ಒದಗಿಸಬೇಕು.