ದೇವರಿಂದ ಬೆಂಬಲಿಸಲ್ಪಟ್ಟ ಕೆಲಸ
1 ಇಂದು ದೇವರ ಸೇವಕರಲ್ಲಿ ಅನೇಕರ ಬಳಿ, ಪ್ರಸ್ತುತ ವಿಷಯಗಳ ವ್ಯವಸ್ಥೆಯಲ್ಲಿ ಉಚ್ಚಮಟ್ಟದ ಶಿಕ್ಷಣ, ಐಶ್ವರ್ಯ, ಮತ್ತು ಖ್ಯಾತಿ ಇರುವುದಿಲ್ಲ. ಈ ಕಾರಣದಿಂದಾಗಿ, ಕೆಲವು ಜನರು ನಮ್ಮ ಶುಶ್ರೂಷೆಯನ್ನು ಅಲ್ಪಮಾತ್ರದ್ದಾಗಿ ಕಡೆಗಣಿಸಿಬಿಡುತ್ತಾರೆ. (ಯೆಶಾ. 53:3) ಹಾಗಿದ್ದರೂ, ನಾವು ಮಾಡುವ ಬೈಬಲ್ ಶೈಕ್ಷಣಿಕ ಕೆಲಸವು ಲೋಕವ್ಯಾಪಕವಾಗಿ ಲಕ್ಷಾಂತರ ಮಂದಿಗೆ ಸಾಂತ್ವನ ಮತ್ತು ನಿರೀಕ್ಷೆಯನ್ನು ತಂದಿದೆ. ಸಾಧಾರಣ ಜನರು ಇಂತಹ ಮಹತ್ತರವಾದ ಫಲಿತಾಂಶಗಳನ್ನು ಸಾಧಿಸಲು ಹೇಗೆ ಸಾಧ್ಯವಾಯಿತು? ದೇವರ ಬೆಂಬಲದಿಂದಲೇ. (ಮತ್ತಾ. 28:19, 20; ಅ. ಕೃ. 1:8) “ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾನೆ” ಎಂದು ಅಪೊಸ್ತಲ ಪೌಲನು ವಿವರಿಸಿದನು.—1 ಕೊರಿಂ. 1:26-29.
2 ಅಪೊಸ್ತಲರು ಮತ್ತು ಪ್ರಥಮ ಶತಮಾನದ ಇತರ ಕ್ರೈಸ್ತರು ಬಹುಮಟ್ಟಿಗೆ “ಶಾಸ್ತ್ರಾಭ್ಯಾಸ ಮಾಡದ ಸಾಧಾರಣ” ಜನರಾಗಿದ್ದರು. (ಅ. ಕೃ. 4:13) ಆದಾಗ್ಯೂ, ಸುವಾರ್ತೆಯನ್ನು ಸಾರುವ ನೇಮಕವನ್ನು ಅವರು ಧೈರ್ಯದಿಂದ ಪೂರೈಸುತ್ತಾ ಮುಂದುವರಿದರು, ಮತ್ತು ಯೆಹೋವನು ಅವರ ಪ್ರಯತ್ನಗಳನ್ನು ಆಶೀರ್ವದಿಸಿದನು. ಅಡ್ಡಿತಡೆಗಳ ಹೊರತಾಗಿಯೂ, “[ಯೆಹೋವನ] ವಾಕ್ಯವು ಬಹಳವಾಗಿ ಹೆಚ್ಚುತ್ತಾ ಪ್ರಬಲವಾಯಿತು.” ಈ ಕೆಲಸವು ದೇವರಿಂದ ಬೆಂಬಲಿಸಲ್ಪಟ್ಟಿದ್ದರಿಂದ, ಇದನ್ನು ತಡೆಗಟ್ಟಿ ನಿಲ್ಲಿಸಲು ಯಾವುದರಿಂದಲೂ ಸಾಧ್ಯವಾಗಲಿಲ್ಲ. (ಅ. ಕೃ. 5:38, 39; 19:20) ಆಧುನಿಕ ಸಮಯಗಳಲ್ಲೂ ಇದು ಸತ್ಯವಾಗಿದೆ. ಬಲಾಢ್ಯ ನಾಯಕರ ಜಗ್ಗದ ವಿರೋಧವು ಸಹ ಸುವಾರ್ತೆಯು ಬಹಳವಾಗಿ ಹೆಚ್ಚುತ್ತಾ ಪ್ರಬಲವಾಗುವುದರಿಂದ ತಡೆಗಟ್ಟಲು ಸಾಧ್ಯವಾಗಿಲ್ಲ.—ಯೆಶಾ. 54:17.
3 ಎಲ್ಲ ಕೀರ್ತಿ ದೇವರಿಗೆ ಸಲ್ಲತಕ್ಕದ್ದು: ದೇವರ ಶುಶ್ರೂಷಕರಾಗಿರುವ ವಿಶೇಷ ಸುಯೋಗವು ನಮ್ಮದಾಗಿರುವುದಾದರೂ, ನಾವು ನಮ್ಮ ಬಗ್ಗೆಯೇ ಹೆಮ್ಮೆಪಟ್ಟುಕೊಳ್ಳಲು ಕಾರಣವಿದೆಯೋ? ಖಂಡಿತವಾಗಿಯೂ ಇಲ್ಲ. ಕ್ರೈಸ್ತ ಶುಶ್ರೂಷೆಗೆ ಸೂಚಿಸುತ್ತಾ ಅಪೊಸ್ತಲ ಪೌಲನು ಬರೆದದ್ದು: “ಬಲಾಧಿಕ್ಯವು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲವೆಂದು ತೋರುವದಕ್ಕಾಗಿ ಈ ನಿಕ್ಷೇಪವು ಮಣ್ಣಿನ ಘಟಗಳಲ್ಲಿ ನಮಗುಂಟು.” (2 ಕೊರಿಂ. 4:7) ದೇವರು ಒದಗಿಸಿದ ಶಕ್ತಿಯಿಂದಲೇ ತನ್ನ ಶುಶ್ರೂಷೆಯನ್ನು ನೆರವೇರಿಸಲು ಸಾಧ್ಯವಾಯಿತು ಎಂದು ಪೌಲನು ಗ್ರಹಿಸಿದನು.—ಎಫೆ. 6:19, 20; ಫಿಲಿ. 4:13.
4 ತದ್ರೀತಿಯಲ್ಲಿ, ನಾವು “ದೇವರಿಂದ ಸಹಾಯವನ್ನು ಪಡೆ”ದಿರುವುದರಿಂದಲೇ ಸಾರುವ ಕೆಲಸವು ಮಾಡಲ್ಪಡುತ್ತಿದೆ ಎಂಬುದನ್ನು ನಾವು ಗ್ರಹಿಸಿಕೊಳ್ಳುತ್ತೇವೆ. (ಅ. ಕೃ. 26:22) ಈ ರೀತಿಯ ಭೌಗೋಳಿಕ ಷೋಷಣೆಯ ಮೂಲಕ, ಯೆಹೋವನು ಜನಾಂಗಗಳಲ್ಲಿ ಒಂದು ನಡುಕವನ್ನು ಉಂಟುಮಾಡಲಿಕ್ಕಾಗಿ ನಮ್ಮನ್ನು ಗಮನಾರ್ಹವಾದ ರೀತಿಯಲ್ಲಿ ಉಪಯೋಗಿಸುತ್ತಿದ್ದಾನೆ. ಈ ನಡುಕವು, ಶೀಘ್ರವೇ ಬರಲಿರುವ ನ್ಯಾಯನಿರ್ಣಾಯಕ ಧ್ವಂಸಮಾಡುವಿಕೆಯ ಮುನ್ಸೂಚನೆಯಾಗಿದೆ. (ಹಗ್ಗಾ. 2:7) ಮಹಾ ಆಧ್ಯಾತ್ಮಿಕ ಕೊಯ್ಲಿನ ಕೆಲಸದಲ್ಲಿ “ದೇವರ ಜೊತೆಕೆಲಸ”ದವರಾಗಿರುವುದು ನಮಗೆ ಎಂತಹ ಸುಯೋಗವಾಗಿದೆ!—1 ಕೊರಿಂ. 3:6-9.