ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಕಾವಲಿನಬುರುಜು ಮೇ15
“ಮಾನವರು ಭೂಮಿಯ ಮೇಲೆ ಮಾಡುವ ವಿಷಯಗಳು ದೇವರ ಮೇಲೆ ಪರಿಣಾಮಬೀರಬಲ್ಲವು ಎಂಬುದರ ಕುರಿತು ನೀವು ಎಂದಾದರೂ ಯೋಚಿಸಿದ್ದುಂಟೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನಮ್ಮ ಕೃತ್ಯಗಳು ದೇವರ ಭಾವನೆಗಳ ಮೇಲೆ ಹೇಗೆ ಪರಿಣಾಮಬೀರಬಲ್ಲವು ಎಂಬುದನ್ನು ಗಮನಿಸಿರಿ. [ಜ್ಞಾನೋಕ್ತಿ 27:11ನ್ನು ಓದಿ.] ದೇವರ ಮನಸ್ಸನ್ನು ಸಂತೋಷಪಡಿಸಿದ ಕೆಲವರ ಉದಾಹರಣೆಗಳನ್ನು ಈ ಪತ್ರಿಕೆಯು ಪರಿಗಣಿಸುತ್ತದೆ, ಮತ್ತು ನಾವು ಸಹ ಇದನ್ನು ಹೇಗೆ ಮಾಡಬಲ್ಲೆವು ಎಂಬುದನ್ನು ವಿವರಿಸುತ್ತದೆ.”
ಎಚ್ಚರ! ಏಪ್ರಿ. - ಜೂನ್
“ಹೆತ್ತವರಿಬ್ಬರಿಗೂ ಮಕ್ಕಳು ಇಷ್ಟವಾಗಿರುವುದಾದರೂ, ಮಕ್ಕಳ ಪಾಲನೆ ಮಾತ್ರ ಸಾಮಾನ್ಯವಾಗಿ ತಾಯಿಗೆ ಬಿಡಲ್ಪಡುತ್ತದೆ. ಒಂದು ಮಗುವನ್ನು ಬೆಳೆಸುವುದರಲ್ಲಿ ತಂದೆಯ ಪಾತ್ರವೇನಾಗಿರಬಹುದು ಎಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಜಂಟಿ ಪ್ರಯತ್ನದಿಂದ ಮಗುವಿನ ಅಗತ್ಯಗಳನ್ನು ಅತ್ಯುತ್ತಮ ರೀತಿಯಲ್ಲಿ ಹೇಗೆ ಪೂರೈಸುವುದು ಎಂಬುದನ್ನು ಈ ಪತ್ರಿಕೆಯು ವಿವರಿಸುತ್ತದೆ.”
ಕಾವಲಿನಬುರುಜು ಜೂನ್1
“ದೇವರನ್ನು ಆರಾಧಿಸಲಿಕ್ಕಾಗಿ ಒಂದು ಸಂಘಟಿತ ಧರ್ಮದ ಭಾಗವಾಗಿರುವುದು ಆವಶ್ಯಕವಲ್ಲ ಎಂದು ಕೆಲವರು ನೆನಸುತ್ತಾರೆ. ನೀವು ಇದರ ಕುರಿತು ಎಂದಾದರೂ ಯೋಚಿಸಿದ್ದೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಪೂರ್ವಕಾಲದಲ್ಲಿ ಜನರೊಂದಿಗೆ ದೇವರು ಹೇಗೆ ವ್ಯವಹರಿಸಿದನು ಎಂಬುದರ ಕುರಿತಾದ ದಾಖಲೆಯನ್ನು ಈ ಪತ್ರಿಕೆಯು ಪರಿಶೀಲಿಸುತ್ತದೆ. ಮತ್ತು ದೇವರನ್ನು ಸತ್ಯದಿಂದ ಆರಾಧಿಸುವುದೆಂಬುದರ ಅರ್ಥವೇನು ಎಂಬುದನ್ನೂ ಇದು ಪರಿಗಣಿಸುತ್ತದೆ.” ಯೋಹಾನ 4:24ನ್ನು ಓದಿರಿ.
ಎಚ್ಚರ! ಏಪ್ರಿ. - ಜೂನ್
“ತಮ್ಮ ಕೆಲಸವನ್ನು ಪೂರ್ಣವಾಗಿ ಮಾಡಿಮುಗಿಸುವಷ್ಟು ಸಮಯ ತಮಗೆ ಇಲ್ಲ ಎಂದು ಇಂದು ಅನೇಕರು ಭಾವಿಸುತ್ತಾರೆ. ಇದು ನಿಮ್ಮ ವಿಷಯದಲ್ಲಿಯೂ ಸತ್ಯವಾಗಿದೆಯೋ? [ಪ್ರತಿಕ್ರಿಯೆಗಾಗಿ ಅನುಮತಿಸಿ. ನಂತರ ಪುಟ 21ರಲ್ಲಿರುವ ಲೇಖನವನ್ನು ತೆರೆಯಿರಿ.] ನಮಗೆ ಲಭ್ಯವಿರುವ ಸಮಯದಲ್ಲೇ ಅತಿ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳುವುದರ ಬಗ್ಗೆ ಪ್ರಾಯೋಗಿಕ ಸಲಹೆಗಳನ್ನು ಎಚ್ಚರ! ಪತ್ರಿಕೆಯ ಈ ಸಂಚಿಕೆಯ ಒದಗಿಸುತ್ತದೆ.”