ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಕಾವಲಿನಬುರುಜು ಜೂನ್15
“ಇಂದಿನ ಆಧುನಿಕ ಲೋಕದಲ್ಲಿ ಮಕ್ಕಳನ್ನು ತರಬೇತುಗೊಳಿಸುವುದು ಒಂದು ಪಂಥಾಹ್ವಾನವಾಗಿದೆ ಎಂಬುದನ್ನು ನೀವು ಒಪ್ಪಿಕೊಳ್ಳುವುದಿಲ್ಲವೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಆದರೂ ಹೆತ್ತವರು ಸಫಲರಾಗಸಾಧ್ಯವಿದೆ ಎಂಬ ಈ ಆಶ್ವಾಸನೆಯನ್ನು ಗಮನಿಸಿರಿ. [ಜ್ಞಾನೋಕ್ತಿ 22:6ನ್ನು ಓದಿ.] ಈ ಪಂಥಾಹ್ವಾನವನ್ನು ನಿಭಾಯಿಸಲು ಹೆತ್ತವರಿಗೆ ಸಹಾಯಮಾಡುವ ಪ್ರಾಯೋಗಿಕ ಸಲಹೆಯನ್ನು ಕಾವಲಿನಬುರುಜುವಿನ ಈ ಸಂಚಿಕೆಯು ನೀಡುತ್ತದೆ.”
ಎಚ್ಚರ! ಏಪ್ರಿ. - ಜೂನ್
“ಮಕ್ಕಳನ್ನು ಬೆಳೆಸುವುದು ಒಂದು ಪಂಥಾಹ್ವಾನವಾಗಿದೆ ಎಂಬುದನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳುತ್ತಾರೆ. ಇದನ್ನು ಒಂದು ಸಂತೋಷಕರ ಅನುಭವವಾಗಿ ಹೇಗೆ ಮಾಡಸಾಧ್ಯವಿದೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಎಚ್ಚರ!ದ ಈ ಸಂಚಿಕೆಯು, ಇದನ್ನು ಪರಿಣಾಮಕಾರಿಯಾಗಿ ಮಾಡಸಾಧ್ಯವಿರುವ ವಿಧಗಳನ್ನು ಪರಿಗಣಿಸುತ್ತದೆ.”
ಕಾವಲಿನಬುರುಜು ಜುಲೈ1
“ದುರಂತವು ಸಂಭವಿಸಿದಾಗ, ದೇವರಿಗೆ ಜನರ ಬಗ್ಗೆ ನಿಜವಾಗಿಯೂ ಹಿತಚಿಂತನೆ ಇದೆಯೊ ಮತ್ತು ಆತನು ಅವರ ಕಷ್ಟಾನುಭವವನ್ನು ಗಮನಿಸುತ್ತಾನೊ ಎಂದು ಅನೇಕರು ಪ್ರಶ್ನಿಸುತ್ತಾರೆ. ಇದರ ಕುರಿತು ನೀವೆಂದಾದರೂ ಚಿಂತಿಸಿದ್ದೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಇಂದು ದೇವರು ನಮ್ಮ ಕುರಿತು ಹೇಗೆ ಹಿತಚಿಂತನೆಯನ್ನು ತೋರಿಸುತ್ತಾನೆ ಮತ್ತು ಎಲ್ಲಾ ಕಷ್ಟಾನುಭವವನ್ನು ತೆಗೆದುಹಾಕಲಿಕ್ಕಾಗಿ ಆತನು ಹೇಗೆ ಆಧಾರವನ್ನು ಒದಗಿಸಿದ್ದಾನೆ ಎಂಬುದನ್ನು ಈ ಪತ್ರಿಕೆಯು ಚರ್ಚಿಸುತ್ತದೆ.” ಯೋಹಾನ 3:16ನ್ನು ಓದಿರಿ.
ಎಚ್ಚರ! ಏಪ್ರಿ. - ಜೂನ್
“ನಮ್ಮ ಸುತ್ತಲೂ ನಾವು ನೋಡುವ ಎಲ್ಲಾ ತೊಂದರೆಗಳು—ಯುದ್ಧಗಳು, ದುಷ್ಕೃತ್ಯಗಳು, ಮತ್ತು ಭೀಕರ ಕೃತ್ಯಗಳು—ಎಂದಾದರೂ ಕೊನೆಗೊಳ್ಳುವವೋ ಎಂದು ಅನೇಕರು ಕುತೂಹಲಪಟ್ಟಿದ್ದಾರೆ. ನಿಮ್ಮ ಅಭಿಪ್ರಾಯವೇನು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ದೇವರ ವಾಕ್ಯವು ಈ ಸಾಂತ್ವಾನದಾಯಕ ಆಶ್ವಾಸನೆಯನ್ನು ಕೊಡುತ್ತದೆ. [ಕೀರ್ತನೆ 46:8, 9ನ್ನು ಓದಿ.] ಸಮೀಪ ಭವಿಷ್ಯತ್ತಿನಲ್ಲಿ ಬೇಗನೆ ದೇವರು ನಮಗಾಗಿ ಸಾಧ್ಯಗೊಳಿಸಲಿರುವ ಉತ್ಕೃಷ್ಟ ಶಾಂತಿಯ ಇನ್ನೂ ಕೆಲವು ಅಂಶಗಳನ್ನು ಈ ಪತ್ರಿಕೆಯು ಚರ್ಚಿಸುತ್ತದೆ.”