ಮನೆಬಾಗಿಲಲ್ಲಿ ಮತ್ತು ಟೆಲಿಫೋನಿನ ಮೂಲಕ ಬೈಬಲ್ ಅಧ್ಯಯನಗಳನ್ನು ಆರಂಭಿಸುವುದು
1, 2. ಕಾರ್ಯಮಗ್ನರಾಗಿರುವ ಜನರಿಗೆ ಸಹಾಯಮಾಡಲು ನಾವು ನಮ್ಮ ಬೈಬಲ್ ಅಧ್ಯಯನ ಕಾರ್ಯಕ್ರಮವನ್ನು ಹೇಗೆ ಹೊಂದಿಸಿಕೊಳ್ಳಬಹುದು?
1 ಇಂದು ಜನರು ಕಾರ್ಯಮಗ್ನರಾಗಿದ್ದಾರೆ. ಹಾಗಿದ್ದರೂ, ಅನೇಕರಿಗೆ ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿಯಿದೆ. ಅವರ ಆಧ್ಯಾತ್ಮಿಕ ಅಗತ್ಯವನ್ನು ತೃಪ್ತಿಪಡಿಸುವುದರಲ್ಲಿ ನಾವು ಹೇಗೆ ಸಹಾಯಮಾಡಬಲ್ಲೆವು? (ಮತ್ತಾ. 5:3) ಅನೇಕ ಪ್ರಚಾರಕರು ಜನರ ಮನೆಬಾಗಿಲಲ್ಲಿ ಅಥವಾ ಟೆಲಿಫೋನಿನ ಮೂಲಕ ಬೈಬಲ್ ಅಧ್ಯಯನವನ್ನು ಮಾಡಶಕ್ತರಾಗಿದ್ದಾರೆ. ಈ ರೀತಿಯಲ್ಲಿ ನೀವು ನಿಮ್ಮ ಶುಶ್ರೂಷೆಯನ್ನು ವಿಸ್ತರಿಸಬಲ್ಲಿರೊ?
2 ಬೈಬಲ್ ಅಧ್ಯಯನಗಳನ್ನು ಆರಂಭಿಸಬೇಕಾದರೆ, ಸಂದರ್ಭ ದೊರಕುವಾಗಲೆಲ್ಲಾ ಒಂದು ಬೈಬಲ್ ಅಧ್ಯಯನವನ್ನು ಪ್ರತ್ಯಕ್ಷಾಭಿನಯಿಸಲು ನಾವು ಸಿದ್ಧರಿರಬೇಕು. ಹೇಗೆ ಮತ್ತು ಎಲ್ಲಿ ಇದನ್ನು ಮಾಡಸಾಧ್ಯವಿದೆ?
3. ಆರಂಭದ ಭೇಟಿಯಲ್ಲಿಯೇ ಒಂದು ಬೈಬಲ್ ಅಧ್ಯಯನವನ್ನು ಏಕೆ ಪ್ರತ್ಯಕ್ಷಾಭಿನಯಿಸಿ ತೋರಿಸಬೇಕು, ಮತ್ತು ಇದನ್ನು ಹೇಗೆ ಮಾಡಸಾಧ್ಯವಿದೆ?
3 ಮನೆಬಾಗಿಲಲ್ಲಿ: ಬೈಬಲಿನ ಕುರಿತು ಮಾತಾಡಲು ಇಷ್ಟಪಡುವ ಒಬ್ಬ ವ್ಯಕ್ತಿಯನ್ನು ನೀವು ಭೇಟಿಯಾಗುವಾಗ, ಅಪೇಕ್ಷಿಸು ಬ್ರೋಷರಿನಲ್ಲಿ ನೀವು ಈ ಮುಂಚೆಯೇ ತಯಾರಿಸಿರುವ ಪ್ಯಾರಗ್ರಾಫ್ನ ಕಡೆಗೆ, ಉದಾಹರಣೆಗೆ ಒಂದನೇ ಪಾಠದಲ್ಲಿನ ಒಂದನೇ ಪ್ಯಾರಗ್ರಾಫ್ನ ಕಡೆಗೆ ಬ್ರೋಷರನ್ನು ತಿರುಗಿಸಿ, ಅಧ್ಯಯನವನ್ನು ಆರಂಭಿಸಿರಿ. ಪ್ಯಾರಗ್ರಾಫ್ ಅನ್ನು ಓದಿ, ಪ್ರಶ್ನೆಯನ್ನು ಕೇಳಿ ಮತ್ತು ಅಲ್ಲಿ ಉಲ್ಲೇಖಿಸಿರುವ ಒಂದು ಇಲ್ಲವೆ ಎರಡು ವಚನಗಳನ್ನು ಚರ್ಚಿಸಿ. ಅನೇಕವೇಳೆ ಇದನ್ನು ಮನೆಬಾಗಿಲಲ್ಲೇ ನಿಂತು ಐದರಿಂದ ಹತ್ತು ನಿಮಿಷಗಳಲ್ಲಿ ಮಾಡಸಾಧ್ಯವಿದೆ. ಆ ವ್ಯಕ್ತಿ ಒಂದುವೇಳೆ ಚರ್ಚೆಯಲ್ಲಿ ಆನಂದಿಸುವುದಾದರೆ, ನಂತರದ ಒಂದು ಅಥವಾ ಎರಡು ಪ್ಯಾರಗ್ರಾಫ್ಗಳನ್ನು ಮುಂದಿನ ಬಾರಿ ಚರ್ಚಿಸಲು ಏರ್ಪಾಡುಮಾಡಿರಿ.—ನೇರವಾದ ಪ್ರಸ್ತಾವಗಳನ್ನು ಉಪಯೋಗಿಸಿ ಅಧ್ಯಯನಗಳನ್ನು ಆರಂಭಿಸುವುದರ ಕುರಿತಾದ ಹೆಚ್ಚಿನ ಸಲಹೆಗಳನ್ನು 2002ರ ಜನವರಿ ತಿಂಗಳಿನ ನಮ್ಮ ರಾಜ್ಯದ ಸೇವೆಯ ಪು. 6ರಲ್ಲಿ ಕಂಡುಕೊಳ್ಳಸಾಧ್ಯವಿದೆ.
4. ಪುನರ್ಭೇಟಿಗಳನ್ನು ಮಾಡುವಾಗ ಮನೆಬಾಗಿಲಲ್ಲೇ ನಿಂತು ಬೈಬಲ್ ಅಧ್ಯಯನವನ್ನು ನಾವು ಹೇಗೆ ಆರಂಭಿಸಬಹುದು?
4 ಪುನರ್ಭೇಟಿಗಳನ್ನು ಮಾಡಿ ಬೈಬಲ್ ಅಧ್ಯಯನಗಳನ್ನು ಆರಂಭಿಸುವಾಗಲೂ ಇದೇ ವಿಧಾನವನ್ನು ಉಪಯೋಗಿಸಸಾಧ್ಯವಿದೆ. ಉದಾಹರಣೆಗೆ, ನೀವು ಅಪೇಕ್ಷಿಸು ಬ್ರೋಷರನ್ನು ಪರಿಚಯಪಡಿಸಿ, ಪಾಠ 2ರ ಪ್ಯಾರಗ್ರಾಫ್ 1-2ನ್ನು ಉಪಯೋಗಿಸುವ ಮೂಲಕ ದೇವರ ಹೆಸರನ್ನು ತಿಳಿಸಿ. ಮುಂದಿನ ಭೇಟಿಯಲ್ಲಿ, ಪ್ಯಾರಗ್ರಾಫ್ 3-4ನ್ನು ಉಪಯೋಗಿಸುತ್ತಾ ಯೆಹೋವನ ಗುಣಗಳ ಕುರಿತು ಬೈಬಲ್ ಏನನ್ನು ಪ್ರಕಟಪಡಿಸುತ್ತದೆ ಎಂಬುದನ್ನು ನೀವು ಚರ್ಚಿಸಸಾಧ್ಯವಿದೆ. ಅನಂತರದ ಚರ್ಚೆಯಲ್ಲಿ, ನಾವು ಯೆಹೋವನನ್ನು ತಿಳಿದುಕೊಳ್ಳುವಂತೆ ಬೈಬಲಿನ ಅಧ್ಯಯನವು ಹೇಗೆ ಸಹಾಯಮಾಡುತ್ತದೆ ಎಂಬುದನ್ನು ಎತ್ತಿತೋರಿಸಲು ನೀವು ಪ್ಯಾರಗ್ರಾಫ್ 5-6ನ್ನು ಮತ್ತು ಪುಟ 5ರಲ್ಲಿರುವ ಚಿತ್ರವನ್ನು ಪರಿಗಣಿಸಸಾಧ್ಯವಿದೆ. ಇವೆಲ್ಲವನ್ನು ಮನೆಬಾಗಿಲಲ್ಲೇ ನಿಂತು ನಡೆಸಸಾಧ್ಯವಿದೆ.
5, 6. (ಎ) ಟೆಲಿಫೋನಿನ ಮೂಲಕ ಬೈಬಲನ್ನು ಅಧ್ಯಯನಮಾಡಲು ಕೆಲವು ಜನರು ಏಕೆ ಇಷ್ಟಪಡಬಹುದು? (ಬಿ) ಫೋನಿನ ಮೂಲಕ ಅಧ್ಯಯನವನ್ನು ಮಾಡಲು ಕೇಳಿಕೊಳ್ಳುವಾಗ ನಾವು ಯಾವ ಪ್ರಸ್ತಾವವನ್ನು ಉಪಯೋಗಿಸಸಾಧ್ಯವಿದೆ?
5 ಟೆಲಿಫೋನಿನ ಮೂಲಕ: ಕೆಲವು ವ್ಯಕ್ತಿಗಳು ಮುಖಾಮುಖಿಯಾಗಿ ಬೈಬಲನ್ನು ಅಧ್ಯಯನಮಾಡುವುದಕ್ಕಿಂತಲೂ ಟೆಲಿಫೋನಿನ ಮೂಲಕ ಅಧ್ಯಯನಮಾಡಲು ಹೆಚ್ಚು ಸಿದ್ಧರಿರಬಹುದು. ಈ ಅನುಭವವನ್ನು ಪರಿಗಣಿಸಿರಿ: ಒಬ್ಬ ಸಹೋದರಿಯು ಮನೆಯಿಂದ ಮನೆಗೆ ಸಾರುತ್ತಿರುವಾಗ ಒಬ್ಬ ಯುವ ಸ್ತ್ರೀಯನ್ನು ಭೇಟಿಯಾದಳು. ಆ ಯುವ ಸ್ತ್ರೀಗೆ ಮಕ್ಕಳಿದ್ದರು ಮತ್ತು ಆಕೆ ಒಬ್ಬ ಕಾರ್ಯಮಗ್ನ ಉದ್ಯೋಗಸ್ಥ ಸ್ತ್ರೀಯಾಗಿದ್ದಳು. ಸಹೋದರಿಗೆ ಆ ಸ್ತ್ರೀಯನ್ನು ಪುನಃ ಮನೆಯಲ್ಲಿ ಭೇಟಿಯಾಗಲು ಸಾಧ್ಯವಾಗದಿದ್ದ ಕಾರಣ, ಟೆಲಿಫೋನಿನ ಮೂಲಕ ಆಕೆಯೊಂದಿಗೆ ಮಾತಾಡಲು ನಿರ್ಧರಿಸಿದಳು. ಬೈಬಲಿನ ಕುರಿತು ಚರ್ಚಿಸಲು ತನಗೆ ನಿಜವಾಗಿಯೂ ಸಮಯವಿಲ್ಲ ಎಂಬುದಾಗಿ ಆ ಯುವ ಸ್ತ್ರೀಯು ತಿಳಿಸಿದಾಗ, ಸಹೋದರಿಯು ಆಕೆಗೆ ಹೀಗೆ ಹೇಳಿದಳು: “ಕೇವಲ 10 ಇಲ್ಲವೆ 15 ನಿಮಿಷದಲ್ಲಿ ನೀವು ಯಾವುದಾದರೊಂದು ಹೊಸ ವಿಷಯವನ್ನು ಕಲಿಯಸಾಧ್ಯವಿದೆ ಮತ್ತು ಇದನ್ನು ಟೆಲಿಫೋನಿನ ಮೂಲಕವೂ ಮಾಡಸಾಧ್ಯವಿದೆ.” “ಫೋನಿನ ಮೂಲಕವಾದರೆ ಸರಿ, ನನಗೆ ತೊಂದರೆಯಿಲ್ಲ” ಎಂದು ಆ ಸ್ತ್ರೀ ಉತ್ತರಿಸಿದಳು. ಬೇಗನೆ ಟೆಲಿಫೋನಿನ ಮೂಲಕ ಒಂದು ಕ್ರಮದ ಅಧ್ಯಯನವು ಆರಂಭಗೊಂಡಿತು.
6 ನೀವು ಭೇಟಿಯಾಗುವ ಯಾರಾದರೂ ಟೆಲಿಫೋನಿನ ಮೂಲಕ ಅಧ್ಯಯನವನ್ನು ಮಾಡಲು ಸಿದ್ಧರಿದ್ದಾರೊ? ಈಗಾಗಲೇ ತಿಳಿಸಲ್ಪಟ್ಟಿರುವ ರೀತಿಯಲ್ಲಿ ನೀವೂ ಅಧ್ಯಯನವನ್ನು ಆರಂಭಿಸಲು ಪ್ರಯತ್ನಿಸಬಹುದು ಅಥವಾ ನೀವು ಹೀಗೂ ಹೇಳಬಹುದು: “ನೀವು ಒಂದುವೇಳೆ ಇಷ್ಟಪಡುವುದಾದರೆ, ನಾವು ಟೆಲಿಫೋನಿನ ಮೂಲಕ ಬೈಬಲಿನ ಕುರಿತು ಚರ್ಚಿಸಸಾಧ್ಯವಿದೆ. ನಿಮಗೆ ಹೇಗನಿಸುತ್ತದೆ, ಇದು ನಿಮಗೆ ಹೆಚ್ಚು ಸೂಕ್ತವಾಗಿದೆಯೊ?” ಇತರರ ಸನ್ನಿವೇಶಗಳಿಗೆ ಸರಿಯಾಗಿ ನಮ್ಮ ಬೈಬಲ್ ಅಧ್ಯಯನ ಕಾರ್ಯಕ್ರಮವನ್ನು ಹೊಂದಿಸಿಕೊಳ್ಳುವ ಮೂಲಕ, ‘ದೈವಜ್ಞಾನವನ್ನು ಪಡೆದುಕೊಳ್ಳುವಂತೆ’ ನಾವು ಅವರಿಗೆ ಸಹಾಯಮಾಡಬಹುದು.—ಜ್ಞಾನೋ. 2:5; 1 ಕೊರಿಂ. 9:23.