ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 12/05 ಪು. 1
  • ಜೀವಕ್ಕೆ ನಡೆಸುವ ಶಿಕ್ಷಣ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವಕ್ಕೆ ನಡೆಸುವ ಶಿಕ್ಷಣ
  • 2005 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಶಿಕ್ಷಣದ ಬಗ್ಗೆ ಯೆಹೋವನ ಸಾಕ್ಷಿಗಳ ಅಭಿಪ್ರಾಯವೇನು?
    ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು
  • ಶಿಕ್ಷಣ—ಯೆಹೋವನನ್ನು ಸ್ತುತಿಸಲು ಅದನ್ನು ಉಪಯೋಗಿಸಿರಿ
    ಕಾವಲಿನಬುರುಜು—1996
  • ಬೈಬಲು ಶಿಕ್ಷಣವನ್ನು ನಿರುತ್ತೇಜಿಸುತ್ತದೊ?
    ಎಚ್ಚರ!—1998
  • ದೈವಿಕ ಶಿಕ್ಷಣದ ಅಪಾರ ಮೌಲ್ಯ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
ಇನ್ನಷ್ಟು
2005 ನಮ್ಮ ರಾಜ್ಯದ ಸೇವೆ
km 12/05 ಪು. 1

ಜೀವಕ್ಕೆ ನಡೆಸುವ ಶಿಕ್ಷಣ

1  ದೇವರ ವಾಕ್ಯದ ಸತ್ಯವನ್ನು ಅರಿತುಕೊಳ್ಳುತ್ತಿದ್ದಂತೆ ಜನರ ಕಣ್ಣುಗಳು ಕಾಂತಿಯಿಂದ ಹೊಳೆಯುವುದನ್ನು ನೋಡುವುದು ಎಂಥ ಉತ್ತಮ ಪ್ರತಿಫಲವಾಗಿದೆ! ದೇವರ ಮತ್ತು ಮಾನವಕುಲದ ಕಡೆಗಿನ ಆತನ ಉದ್ದೇಶದ ಕುರಿತಾದ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳುವುದು ನಿಜವಾಗಿಯೂ ಸಂತೃಪ್ತಿಕರವಾದ ಕೆಲಸವಾಗಿದೆ. ಇಂಥ ಶಿಕ್ಷಣವು ಒಬ್ಬ ವ್ಯಕ್ತಿಯನ್ನು ನಿತ್ಯಜೀವಕ್ಕೆ ನಡೆಸಸಾಧ್ಯವಿದೆ.​—⁠ಯೋಹಾ. 17:⁠3.

2  ಈ ಶಿಕ್ಷಣವು ಶ್ರೇಷ್ಠವಾಗಿದೆಯೇಕೆ? ಇಂದು, ಸಾಧ್ಯವಿರುವ ಎಲ್ಲ ವಿಧಾನಗಳ ಮೂಲಕ ಮತ್ತು ಊಹಿಸಸಾಧ್ಯವಿರುವ ಯಾವುದೇ ವಿಷಯದ ಬಗ್ಗೆ ಶಿಕ್ಷಣ ನೀಡಲಾಗುತ್ತದೆ. (ಪ್ರಸಂ. 12:12) ಆದರೆ ಈ ರೀತಿಯ ಜ್ಞಾನಕ್ಕೆ ‘ದೇವರ ಮಹತ್ತುಗಳಿಗೆ’ ಇರುವಷ್ಟು ಮೌಲ್ಯವಿರುವುದಿಲ್ಲ. (ಅ. ಕೃ. 2:11) ಈ ಲೋಕದಲ್ಲಿ ನೀಡಲ್ಪಡುವ ಶಿಕ್ಷಣವು ಸೃಷ್ಟಿಕರ್ತನಿಗೆ ಹೆಚ್ಚು ಸಮೀಪವಾಗಲು ಮತ್ತು ಆತನ ಉದ್ದೇಶಗಳ ಬಗ್ಗೆ ತಿಳಿದುಕೊಳ್ಳಲು ಮಾನವಕುಲಕ್ಕೆ ಸಾಧ್ಯಮಾಡಿದೆಯೆ? ನಾವು ಸತ್ತಾಗ ಏನು ಸಂಭವಿಸುತ್ತದೆ ಮತ್ತು ಇಷ್ಟೊಂದು ಕಷ್ಟಸಂಕಟಗಳು ಏಕಿವೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಲು ಅದು ಸಹಾಯಮಾಡಿದೆಯೆ? ಅದು ಜನರಿಗೆ ನಿರೀಕ್ಷೆಯನ್ನು ನೀಡಿದೆಯೆ? ಕುಟುಂಬದ ಏರ್ಪಾಡನ್ನು ಉತ್ತಮಗೊಳಿಸಲು ಅದು ನೆರವು ನೀಡಿದೆಯೆ? ಇಲ್ಲ. ಕೇವಲ ದೈವಿಕ ಶಿಕ್ಷಣದಿಂದ ಮಾತ್ರ ನಾವು ಜೀವನದ ಅತಿ ಪ್ರಾಮುಖ್ಯ ಪ್ರಶ್ನೆಗಳಿಗೆ ನಿಜವಾದ ಉತ್ತರಗಳನ್ನು ಕಂಡುಕೊಳ್ಳಲು ಸಾಧ್ಯವಿದೆ.

3  ದೈವಿಕ ಶಿಕ್ಷಣವು ಇಂದಿನ ಜಗತ್ತಿನಲ್ಲಿ ಯಾವುದು ತೀರ ಕಡಿಮೆಯಾಗಿದೆಯೋ ಅದನ್ನು ಒದಗಿಸುತ್ತದೆ. ಅದು ವಿದ್ಯಾರ್ಥಿಯ ನೈತಿಕ ಮೌಲ್ಯಗಳ ಉತ್ತಮಗೊಳಿಸುವಿಕೆಯೇ ಆಗಿದೆ. ದೇವರ ವಾಕ್ಯದ ಬೋಧನೆಗಳನ್ನು ಸ್ವೀಕರಿಸಿ, ಅವುಗಳನ್ನು ಅನ್ವಯಿಸಿಕೊಳ್ಳುವವರ ಹೃದಯದಿಂದ ಆ ವಾಕ್ಯವು ಕುಲವಾದ, ಜಾತಿವಾದ ಮತ್ತು ರಾಷ್ಟ್ರಾಭಿಮಾನವನ್ನು ಬುಡಸಮೇತ ಕಿತ್ತೆಸೆಯುತ್ತದೆ. (ಇಬ್ರಿ. 4:12) ಎಲ್ಲ ರೀತಿಯ ಹಿಂಸಾಚಾರವನ್ನು ತೊರೆದು ‘ನೂತನ [ವ್ಯಕ್ತಿತ್ವವನ್ನು] ಧರಿಸಿಕೊಳ್ಳುವಂತೆ’ ಅದು ಜನರನ್ನು ಪ್ರೇರೇಪಿಸಿದೆ. (ಕೊಲೊ. 3:9-11; ಮೀಕ 4:1-3) ಅಷ್ಟುಮಾತ್ರವಲ್ಲ, ದೈವಿಕ ಶಿಕ್ಷಣವು ಆಳವಾಗಿ ಬೇರೂರಿರುವ ಮತ್ತು ದೇವರನ್ನು ಅಸಂತೋಷಪಡಿಸುವ ರೂಢಿಗಳನ್ನು ಹಾಗೂ ಪ್ರವೃತ್ತಿಗಳನ್ನು ಜಯಿಸುವಂತೆ ಲಕ್ಷಾಂತರ ಮಂದಿಗೆ ಬಲವನ್ನು ನೀಡಿದೆ.​—⁠1 ಕೊರಿಂ. 6:9-11.

4  ಈಗ ಏಕೆ ತುರ್ತಿನದ್ದಾಗಿದೆ? ನಮ್ಮ ಮಹಾನ್‌ ಶಿಕ್ಷಕನು ನಾವು ಜೀವಿಸುತ್ತಿರುವ ಕಾಲದ ವಿಶೇಷತೆಯನ್ನು ಗ್ರಹಿಸುವಂತೆ ನಮಗೆ ಎಚ್ಚರಿಕೆ ನೀಡುತ್ತಿದ್ದಾನೆ. ಆತನು ಮುಂತಿಳಿಸಿರುವ ಪ್ರವಾದನಾತ್ಮಕ ತೀರ್ಪುಗಳಲ್ಲಿ ಸದ್ಯೋಚಿತ ಮಾಹಿತಿಯು ಅಡಕವಾಗಿದೆ ಮತ್ತು ಅದನ್ನು ಭೂಮಿಯಾದ್ಯಂತ ಘೋಷಿಸಬೇಕಾಗಿದೆ. (ಪ್ರಕ. 14:6, 7) ಕ್ರಿಸ್ತನು ಸ್ವರ್ಗದಲ್ಲಿ ಆಳ್ವಿಕೆಯನ್ನು ನಡೆಸುತ್ತಿದ್ದಾನೆ, ಸುಳ್ಳುಧರ್ಮದ ಲೋಕ ಸಾಮ್ರಾಜ್ಯವು ಬಲುಬೇಗನೆ ನಾಶವಾಗಲಿದೆ ಮತ್ತು ದೇವರ ರಾಜ್ಯವು ಭೂಮಿಯ ಮೇಲಿರುವ ಎಲ್ಲ ಸರಕಾರಗಳನ್ನು ನಿರ್ನಾಮಮಾಡಲು ಸಿದ್ಧವಾಗಿದೆ. (ದಾನಿ. 2:44; ಪ್ರಕ. 11:15; 17:16) ಆದುದರಿಂದಲೇ, ಜನರು ಈಗ ಆಳುತ್ತಿರುವ ದೇವರ ಅರಸನನ್ನು ಅಂಗೀಕರಿಸುವುದು, ಮಹಾ ಬಾಬೆಲಿನಿಂದ ಹೊರಗೆ ಬರುವುದು, ನಂಬಿಕೆಯಿಂದ ಯೆಹೋವನ ನಾಮವನ್ನು ಹೇಳಿಕೊಳ್ಳುವುದು ತುರ್ತಿನದ್ದಾಗಿದೆ. (ಕೀರ್ತ. 2:11, 12; ರೋಮಾ. 10:13; ಪ್ರಕ. 18:4) ಈ ಕಾರಣದಿಂದ, ಜೀವಕ್ಕೆ ನಡೆಸುವ ಶಿಕ್ಷಣವನ್ನು ಇತರರಿಗೆ ನೀಡುವುದರಲ್ಲಿ ನಾವು ಸಾಧ್ಯವಾದಷ್ಟು ಪೂರ್ಣವಾಗಿ ಪಾಲ್ಗೊಳ್ಳೋಣ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ