(1) ಪ್ರಶ್ನೆ, (2) ಶಾಸ್ತ್ರವಚನ, ಮತ್ತು (3) ಅಧ್ಯಾಯ
ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕವನ್ನು ನೀಡುವ ಒಂದು ಸುಲಭ ವಿಧಾನವು ಯಾವುದೆಂದರೆ, (1) ದೃಷ್ಟಿಕೋನ ಪ್ರಶ್ನೆಯೊಂದನ್ನು ಕೇಳಿ, (2) ಸೂಕ್ತವಾದ ವಚನವೊಂದನ್ನು ಓದಿ ಮತ್ತು (3) ಆ ವಿಷಯವನ್ನು ಚರ್ಚಿಸುವ ಅಧ್ಯಾಯವನ್ನು ಪುಸ್ತಕದಿಂದ ತೋರಿಸಿ, ಅಧ್ಯಾಯದ ಶೀರ್ಷಿಕೆಯ ಕೆಳಗಿರುವ ಪೀಠಿಕಾರೂಪದ ಪ್ರಶ್ನೆಗಳನ್ನು ಓದುವುದೇ ಆಗಿದೆ. ಮನೆಯವರು ಆಸಕ್ತಿಯನ್ನು ತೋರಿಸುವಲ್ಲಿ, ನೀವು ಆ ಅಧ್ಯಾಯದ ಮೊದಲ ಕೆಲವು ಪ್ಯಾರಗ್ರಾಫ್ಗಳನ್ನು ಉಪಯೋಗಿಸಿ ಒಂದು ಬೈಬಲ್ ಅಧ್ಯಯನವನ್ನು ಪ್ರತ್ಯಕ್ಷಾಭಿನಯಿಸಲು ಸಾಧ್ಯವಾಗಬಹುದು. ಈ ವಿಧಾನವನ್ನು, ಮೊದಲ ಭೇಟಿಯನ್ನು ಅಥವಾ ಪುನರ್ಭೇಟಿಯನ್ನು ಮಾಡುವಾಗ ಒಂದು ಅಧ್ಯಯನವನ್ನು ಆರಂಭಿಸಲು ಉಪಯೋಗಿಸಬಹುದು.
◼ “ಈ ಬೈಬಲ್ ವಚನದಲ್ಲಿ ತಿಳಿಸಲ್ಪಟ್ಟಿರುವ ಪ್ರಕಾರ, ಮಾನವರಾದ ನಾವು ನಮ್ಮ ಸೃಷ್ಟಿಕರ್ತನ ಕುರಿತು ತಿಳಿಯಸಾಧ್ಯವಿದೆ ಎಂದು ನೀವು ನೆನಸುತ್ತೀರೊ?” ಅಪೊಸ್ತಲರ ಕೃತ್ಯಗಳು 17:26, 27ನ್ನು ಓದಿರಿ ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಅಧ್ಯಾಯ 1ರ ಕಡೆಗೆ ಮನೆಯವರ ಗಮನವನ್ನು ನಿರ್ದೇಶಿಸಿರಿ.
◼ “ಇಂದು ನಾವು ಎದುರಿಸುತ್ತಿರುವಂಥ ಸಮಸ್ಯೆಗಳನ್ನು ನೋಡುವಾಗ, ಇಲ್ಲಿ ತಿಳಿಸಲ್ಪಟ್ಟಿರುವಂತೆ ನಾವು ಸಾಂತ್ವನ ಮತ್ತು ನಿರೀಕ್ಷೆಯನ್ನು ಕಂಡುಕೊಳ್ಳಸಾಧ್ಯವಿದೆ ಎಂದು ನಿಮಗನಿಸುತ್ತದೊ?” ರೋಮಾಪುರ 15:4ನ್ನು ಓದಿರಿ ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಅಧ್ಯಾಯ 2ರ ಕಡೆಗೆ ಮನೆಯವರ ಗಮನವನ್ನು ನಿರ್ದೇಶಿಸಿರಿ.
◼ “ಈ ಬದಲಾವಣೆಗಳನ್ನು ಮಾಡುವ ಅಧಿಕಾರ ನಿಮಗಿರುತ್ತಿದ್ದಲ್ಲಿ, ನೀವು ಹೀಗೆ ಮಾಡುತ್ತಿದ್ದಿರೊ?” ಪ್ರಕಟನೆ 21:4ನ್ನು ಓದಿರಿ ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಅಧ್ಯಾಯ 3ರ ಕಡೆಗೆ ಮನೆಯವರ ಗಮನವನ್ನು ನಿರ್ದೇಶಿಸಿರಿ.
◼ “ಈ ಹಳೆಯ ಗೀತೆಯೊಂದರಲ್ಲಿ ವರ್ಣಿಸಲ್ಪಟ್ಟಿರುವ ಪರಿಸ್ಥಿತಿಗಳನ್ನು ನಮ್ಮ ಮಕ್ಕಳು ಎಂದಾದರೂ ಅನುಭವಿಸುವರು ಎಂದು ನಿಮಗನಿಸುತ್ತದೊ?” ಕೀರ್ತನೆ 37:10, 11ನ್ನು ಓದಿರಿ ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಅಧ್ಯಾಯ 3ರ ಕಡೆಗೆ ಮನೆಯವರ ಗಮನವನ್ನು ನಿರ್ದೇಶಿಸಿರಿ.
◼ “ಈ ಮಾತುಗಳು ಎಂದಾದರೊಂದು ದಿನ ನೆರವೇರುವವು ಎಂದು ನೀವು ನೆನಸುತ್ತೀರೊ?” ಯೆಶಾಯ 33:24ನ್ನು ಓದಿರಿ ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಅಧ್ಯಾಯ 3ರ ಕಡೆಗೆ ಮನೆಯವರ ಗಮನವನ್ನು ನಿರ್ದೇಶಿಸಿರಿ.
◼ “ಜೀವಿತರು ಏನು ಮಾಡುತ್ತಿದ್ದಾರೆಂದು ಮೃತರಿಗೆ ತಿಳಿದಿದೆಯೊ ಎಂಬುದರ ಕುರಿತು ಎಂದಾದರೂ ನೀವು ಆಲೋಚಿಸಿದ್ದೀರೊ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಪ್ರಸಂಗಿ 9:5ನ್ನು ಓದಿರಿ ಮತ್ತು ಅಧ್ಯಾಯ 6ರ ಕಡೆಗೆ ಮನೆಯವರ ಗಮನವನ್ನು ನಿರ್ದೇಶಿಸಿರಿ.
◼ “ಯೇಸು ಈ ವಚನಗಳಲ್ಲಿ ತಿಳಿಸಿರುವ ಹಾಗೆ, ಮೃತರಾದ ನಮ್ಮ ಪ್ರಿಯ ವ್ಯಕ್ತಿಗಳನ್ನು ನಾವು ಒಂದು ದಿನ ಪುನಃ ನೋಡಸಾಧ್ಯವಿದೆ ಎಂದು ನೀವು ನೆನಸುತ್ತೀರೊ?” ಯೋಹಾನ 5:28, 29ನ್ನು ಓದಿರಿ ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಅಧ್ಯಾಯ 7ರ ಕಡೆಗೆ ಮನೆಯವರ ಗಮನವನ್ನು ನಿರ್ದೇಶಿಸಿರಿ.
◼ “ಈ ಪ್ರಸಿದ್ಧ ಪ್ರಾರ್ಥನೆಯಲ್ಲಿ ತಿಳಿಸಿರುವಂತೆ, ದೇವರ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲು ಹೇಗೆ ಸಾಧ್ಯವೆಂದು ನಿಮಗನಿಸುತ್ತದೆ?” ಮತ್ತಾಯ 6:9, 10ನ್ನು ಓದಿರಿ ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಅಧ್ಯಾಯ 8ರ ಕಡೆಗೆ ಮನೆಯವರ ಗಮನವನ್ನು ನಿರ್ದೇಶಿಸಿರಿ.
◼ “ಈ ಪ್ರವಾದನೆಯಲ್ಲಿ ವರ್ಣಿಸಲ್ಪಟ್ಟಿರುವ ಕಾಲಾವಧಿಯಲ್ಲಿ ನಾವು ಜೀವಿಸುತ್ತಿದ್ದೇವೆಂದು ನಿಮಗನಿಸುತ್ತದೊ?” 2 ತಿಮೊಥೆಯ 3:1-4ನ್ನು ಓದಿರಿ ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಅಧ್ಯಾಯ 9ರ ಕಡೆಗೆ ಮನೆಯವರ ಗಮನವನ್ನು ನಿರ್ದೇಶಿಸಿರಿ.
◼ “ಮಾನವಕುಲದ ಸಮಸ್ಯೆಗಳು ಏಕೆ ಹೆಚ್ಚಾಗುತ್ತಾ ಹೋಗುತ್ತಿವೆ ಎಂದು ಅನೇಕರು ಆಶ್ಚರ್ಯವನ್ನು ವ್ಯಕ್ತಪಡಿಸುತ್ತಾರೆ. ಇದಕ್ಕೆ ಕಾರಣವೇನು ಎಂಬುದು ಈ ವಚನದಲ್ಲಿ ತಿಳಿಸಲ್ಪಟ್ಟಿದೆ. ಈ ವಿಚಾರವನ್ನು ನೀವೆಂದಾದರೂ ಪರಿಗಣಿಸಿದ್ದೀರೊ?” ಪ್ರಕಟನೆ 12:9ನ್ನು ಓದಿರಿ ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಅಧ್ಯಾಯ 10ರ ಕಡೆಗೆ ಮನೆಯವರ ಗಮನವನ್ನು ನಿರ್ದೇಶಿಸಿರಿ.
◼ “ನೀವು ಎಂದಾದರೂ ಇಂತಹ ಪ್ರಶ್ನೆಗೆ ಉತ್ತರವನ್ನು ತಿಳಿಯಲು ಬಯಸಿದ್ದೀರೊ?” ಯೋಬ 21:7ನ್ನು ಓದಿರಿ ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಅಧ್ಯಾಯ 11ರ ಕಡೆಗೆ ಮನೆಯವರ ಗಮನವನ್ನು ನಿರ್ದೇಶಿಸಿರಿ.
◼ “ಬೈಬಲಿನ ಈ ಬುದ್ಧಿವಾದವನ್ನು ಅನ್ವಯಿಸುವುದು, ಸಂತೋಷಭರಿತ ಕುಟುಂಬ ಜೀವನವನ್ನು ಆನಂದಿಸುವಂತೆ ಜನರಿಗೆ ಸಹಾಯಮಾಡುವುದು ಎಂದು ನೀವು ನೆನಸುತ್ತೀರೊ?” ಎಫೆಸ 5:33ನ್ನು ಓದಿರಿ ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಅಧ್ಯಾಯ 14ರ ಕಡೆಗೆ ಮನೆಯವರ ಗಮನವನ್ನು ನಿರ್ದೇಶಿಸಿರಿ.
[ಪುಟ 6ರಲ್ಲಿರುವಚೌಕ]
ಬೈಬಲ್ ಅಧ್ಯಯನದ ಏರ್ಪಾಡನ್ನು ಪ್ರತ್ಯಕ್ಷಾಭಿನಯಿಸಿದ ಬಳಿಕ, ಅಧ್ಯಯನವು ಇನ್ನೂ ಎರಡು ಸಲ ನಡೆಸಲ್ಪಟ್ಟಿರುವಲ್ಲಿ ಮತ್ತು ಅದು ಮುಂದುವರಿಯುವುದು ಎಂಬಂತೆ ತೋರುವಲ್ಲಿ, ಅದನ್ನು ಒಂದು ಅಧ್ಯಯನವಾಗಿ ವರದಿಸಬಹುದು.