ಬ್ರಾಂಚ್‌ನಿಂದ ಪತ್ರ
ಪ್ರಿಯ ರಾಜ್ಯ ಪ್ರಚಾರಕರೇ:
ಕಳೆದ ಕೆಲವು ವರ್ಷಗಳಿಂದ ಮಾಡಲ್ಪಟ್ಟಿರುವ ಸಂಘಟನಾತ್ಮಕ ಬದಲಾವಣೆಗಳಿಗೆ ನೀವೆಲ್ಲರೂ ನೀಡಿರುವ ಬೆಂಬಲಕ್ಕಾಗಿ ನಾವು ಗಣ್ಯತೆಯನ್ನು ವ್ಯಕ್ತಪಡಿಸುತ್ತೇವೆ.
ಸೆಪ್ಟೆಂಬರ್ 1, 2006 ರಿಂದ ಆರಂಭಿಸಿ ಹೊಸ ಜಿಲ್ಲೆಗಳ ಏರ್ಪಾಡುಗಳು ಕಾರ್ಯರೂಪಕ್ಕೆ ಬರಲಿದೆ. ಇದರಿಂದ ಸ್ಥಳಿಕ ಭಾಷೆಯನ್ನಾಡಬಲ್ಲ ಜಿಲ್ಲಾ ಮೇಲ್ವಿಚಾರಕರು ಸರ್ಕಿಟ್ ಸಮ್ಮೇಳನಗಳಲ್ಲಿ ಸೇವೆಸಲ್ಲಿಸಲು ಸಾಧ್ಯವಾಗುವುದು. ಜಿಲ್ಲೆ 1, ಇಂಗ್ಲಿಷ್ ಸರ್ಕಿಟ್ ಆಗಿರುವುದು. ಜಿಲ್ಲೆ 2, ಹಿಂದಿ ಮತ್ತು ಉತ್ತರ ಭಾರತದ ಭಾಷೆಗಳು. ಜಿಲ್ಲೆ 3, ಕನ್ನಡ, ತಮಿಳು, ಮತ್ತು ತೆಲುಗು ಭಾಷೆಗಳನ್ನಾಡುವ ಪ್ರಚಾರಕರು ಹಾಗೂ ಜಿಲ್ಲೆ 4, ಎಲ್ಲ ಮಲೆಯಾಳಂ ಸರ್ಕಿಟ್‌ಗಳು.
ದೊಡ್ಡ ನಗರಗಳಲ್ಲಿರುವ ವಿಭಿನ್ನ ಭಾಷೀಯ ಗುಂಪುಗಳಿಗೆ ವಿಶೇಷ ಗಮನವನ್ನು ಕೊಡುವಂತೆ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಅಂದರೆ ಕೆಲವೊಮ್ಮೆ ಒಂದೇ ಟೆರಿಟೊರಿಯಲ್ಲಿ ಒಂದಕ್ಕಿಂತ ಹೆಚ್ಚು ಸಭೆಗಳು ಕೆಲಸಮಾಡುವವು, ಆದರೆ ಪ್ರತಿಯೊಬ್ಬರು ತಮ್ಮ ಭಾಷೆಯನ್ನಾಡುವ ಜನರ ಮೇಲೆ ಗಮನವನ್ನು ಕೇಂದ್ರೀಕರಿಸುವರು.
ಯೆಹೋವನ ಚಿತ್ತವನ್ನು ಹೆಚ್ಚು ಸುಸಂಘಟಿತ ರೀತಿಯಲ್ಲಿ ಪೂರೈಸಲು ನಮ್ಮಲ್ಲಿ ಪ್ರತಿಯೊಬ್ಬರು ತಮ್ಮ ಪಾಲನ್ನು ಮಾಡುವುದು ಮತ್ತು ತಮ್ಮ ಸಭೆಯ ಭಾಷೆಯಲ್ಲದೆ ಬೇರೆ ಭಾಷೆಯ ಜನರು ಆಸಕ್ತಿ ತೋರಿಸುವಾಗ ಏನು ಮಾಡಬೇಕೆಂದು ನಿರ್ದೇಶಿಸಲಾಗಿದೆಯೋ ಅದನ್ನು ಅನುಸರಿಸುವುದು ಅಗತ್ಯವಾಗಿರುವುದು.—ಕೀರ್ತ. 40:8.
ವಿವಿಧ ಭಾಷೆಗಳನ್ನಾಡುವ ಹೊಸಬರು ನಮ್ಮನ್ನು ಜೊತೆಗೂಡುವಾಗ, ಕೂಟಗಳನ್ನು ನಡೆಸಲು ಹೆಚ್ಚಿನ ಸ್ಥಳಗಳ ಅವಶ್ಯವಿದೆ. ದೇಶಾದ್ಯಂತ ರಾಜ್ಯಸಭಾಗೃಹದ ಯೋಜನೆಗಳಿಗಾಗಿ ಶಾರೀರಿಕವಾಗಿಯೂ ಮತ್ತು ಪ್ರಾಪಂಚಿಕವಾಗಿಯೂ ನೀಡಲ್ಪಡುತ್ತಿರುವ ಬೆಂಬಲವನ್ನು ನೋಡುವುದು ಸಂತೋಷಕರವಾಗಿದೆ. ಆರ್ಥಿಕ ಸನ್ನಿವೇಶವು ಬದಲಾಗದಿದ್ದರೂ ಸ್ಥಳಿಕ ಪ್ರಚಾರಕರ ಹೆಚ್ಚಾದ ದಾನಗಳು ಅನೇಕ ಸಭಾಗೃಹಗಳನ್ನು ಕಟ್ಟುವಂತೆ ಸಾಧ್ಯಗೊಳಿಸಿವೆ. ಸಭೆಗಳು ಸ್ಥಳದ ಮತ್ತು ನಿರ್ಮಾಣಕಾರ್ಯದ ದುಬಾರಿ ವೆಚ್ಚವನ್ನು ವಹಿಸಿಕೊಳ್ಳುತ್ತಾ ತಮ್ಮ ಸ್ವಂತ ಹೊರೆಯನ್ನು ಅಥವಾ ಜವಾಬ್ದಾರಿಯನ್ನು ಹೊರುವಾಗ ನಿರ್ಮಾಣಕಾರ್ಯದ ಮೇಲೆ ಯೆಹೋವನ ಆಶೀರ್ವಾದ ಸದಾ ಇರುವುದೆಂಬ ಭರವಸೆ ನಮಗಿದೆ.—ಗಲಾ. 6:5; ಕೀರ್ತ. 127:1.
ನಿಮ್ಮ ಸಹೋದರರು,
ಭಾರತದ ಬ್ರಾಂಚ್ ಆಫೀಸ್