ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 7/07 ಪು. 3
  • ಪ್ರಶ್ನಾ ಚೌಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ಚೌಕ
  • 2007 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಇಂಟರ್‌ನೆಟ್‌ನ ಉಪಯೋಗ—ಅಪಾಯಗಳ ಕುರಿತು ಎಚ್ಚರಿಕೆ!
    1999 ನಮ್ಮ ರಾಜ್ಯದ ಸೇವೆ
  • ಮಕ್ಕಳು ಆನ್‌ಲೈನ್‌ನಲ್ಲಿ . . . ಹೆತ್ತವರು ಏನು ತಿಳಿದಿರಬೇಕು?
    ಎಚ್ಚರ!—2009
  • ಮಕ್ಕಳು ಆನ್‌ಲೈನ್‌ನಲ್ಲಿ . . . ಹೆತ್ತವರು ಏನು ಮಾಡಬೇಕು?
    ಎಚ್ಚರ!—2009
  • ಇಂಟರ್‌ನೆಟ್‌ನ ಅಪಾಯಗಳಿಂದ ನಾನು ಹೇಗೆ ದೂರವಿರಬಲ್ಲೆ?
    ಎಚ್ಚರ!—2000
ಇನ್ನಷ್ಟು
2007 ನಮ್ಮ ರಾಜ್ಯದ ಸೇವೆ
km 7/07 ಪು. 3

ಪ್ರಶ್ನಾ ಚೌಕ

◼ ಇಂಟರ್‌ನೆಟ್‌ ಮೂಲಕ ಅಪರಿಚಿತ ವ್ಯಕ್ತಿಯೊಂದಿಗೆ ಸಂಪರ್ಕವನ್ನಿಟ್ಟುಕೊಳ್ಳುವುದರಲ್ಲಿ ಯಾವ ಅಪಾಯಗಳಿವೆ?

ಜನರು ಪರಸ್ಪರ ಸಂಪರ್ಕಿಸಲಿಕ್ಕಾಗಿ ಮತ್ತು ಪತ್ರವ್ಯವಹಾರ ಮಾಡಲಿಕ್ಕಾಗಿ ಇಂಟರ್‌ನೆಟ್‌ನಲ್ಲಿ ಹಲವಾರು ವೆಬ್‌ಸೈಟ್‌ಗಳನ್ನು ವಿನ್ಯಾಸಿಸಲಾಗಿದೆ. ಇಂಥ ಅನೇಕ ಸೈಟ್‌ಗಳಲ್ಲಿ, ಜನರು ತಮ್ಮ ಸ್ವಂತ ಪ್ರೋಫೈಲ್‌ಗಳನ್ನು ಸೃಷ್ಟಿಸಿ ಪ್ರಚುರಪಡಿಸಲು ಅವಕಾಶವಿರುತ್ತದೆ. ಇವುಗಳಲ್ಲಿ ಚಿತ್ರಗಳನ್ನು ಹಾಗೂ ವೈಯಕ್ತಿಕ ಮಾಹಿತಿಗಳನ್ನು ಕೂಡ ಇಡಬಹುದು. ಈ ಪ್ರೋಫೈಲ್‌ಗಳನ್ನು ಜನರು ವೀಕ್ಷಿಸಿ ಅನಂತರ ಅವರೊಂದಿಗೆ ಸಂಪರ್ಕ ಬೆಳೆಸಸಾಧ್ಯವಿದೆ. ಇಂಥ ವೆಬ್‌ಸೈಟ್‌ಗಳು ಯುವಜನರಲ್ಲಿ ಜನಪ್ರಿಯವಾಗಿವೆ. ಸಭೆಯಲ್ಲಿರುವ ಕೆಲವು ಯೌವನಸ್ಥರು ಯೆಹೋವನ ಸಾಕ್ಷಿಗಳೆಂದು ಹೇಳಿಕೊಳ್ಳುವ ಇತರರೊಂದಿಗೆ ವ್ಯವಹರಿಸಲು ಅವುಗಳನ್ನು ಉಪಯೋಗಿಸಿರುತ್ತಾರೆ.

ಇಂಟರ್‌ನೆಟ್‌ ಮೂಲಕ ನಾವು ಸಂಪರ್ಕಿಸುವ ಒಬ್ಬ ವ್ಯಕ್ತಿಗೆ, ತನ್ನ ಪರಿಚಯ, ಆಧ್ಯಾತ್ಮಿಕತೆ ಅಥವಾ ತನ್ನ ಉದ್ದೇಶದ ವಿಷಯದಲ್ಲಿ ನಮ್ಮನ್ನು ಮೋಸಗೊಳಿಸುವುದು ಬಲು ಸುಲಭ. (ಕೀರ್ತ. 26:4) ತಾನೊಬ್ಬ ಯೆಹೋವನ ಸಾಕ್ಷಿಯೆಂದು ಹೇಳಿಕೊಳ್ಳುವವನು ವಾಸ್ತವದಲ್ಲಿ ಒಬ್ಬ ಅವಿಶ್ವಾಸಿಯೋ ಬಹಿಷ್ಕೃತನೋ ಆಗಿರಬಹುದು. ಇಲ್ಲವೆ ಅವನು ಒಬ್ಬ ಕ್ರಿಯಾಶೀಲ ಧರ್ಮಭ್ರಷ್ಟನು ಕೂಡ ಆಗಿರಬಹುದು. (ಗಲಾ. 2:4) ಅನೇಕ ಶಿಶುಕಾಮಿಗಳು ತಮ್ಮ ಬೇಟೆಗಳನ್ನು ಹುಡುಕುವುದಕ್ಕಾಗಿ ಇಂಥ ವೆಬ್‌ಸೈಟ್‌ಗಳನ್ನು ಬಳಸುತ್ತಾರೆ ಎಂಬುದನ್ನು ವರದಿಗಳು ಕಂಡುಕೊಂಡಿವೆ.

ನಾವು ಸಂಪರ್ಕವನ್ನಿಟ್ಟುಕೊಂಡಿರುವ ವ್ಯಕ್ತಿಗಳು ಸಭೆಯಲ್ಲಿ ಒಳ್ಳೆಯ ನಿಲುವನ್ನು ಹೊಂದಿದ್ದಾರೆ ಎಂಬ ವಿಷಯ ನಮಗೆ ಮನದಟ್ಟಾಗಿರುವುದಾದರೂ, ವೆಬ್‌ಸೈಟ್‌ ಮೂಲಕ ಮಾಡುವ ಸಂಭಾಷಣೆಗಳು ನಮಗರಿವಿಲ್ಲದೆಯೇ ಅಹಿತಕರ ವಿಷಯಗಳಿಗೆ ಸುಲಭವಾಗಿ ತೇಲಿ ಹೋಗಬಲ್ಲವು. ಏಕೆಂದರೆ ತಾವು ಸ್ವತಃ ಭೇಟಿಯಾಗಿರದ ವ್ಯಕ್ತಿಗಳೊಂದಿಗೆ ಸಂಯಮವಿಲ್ಲದೆ ವರ್ತಿಸುವುದು ಜನರ ಪ್ರವೃತ್ತಿಯಾಗಿದೆ. ಕಂಪ್ಯೂಟರ್‌ ಮೂಲಕ ವ್ಯವಹರಿಸುವುದು ತಮ್ಮ ಖಾಸಗಿ ವಿಷಯ ಎಂದು ಅವರು ಎಣಿಸುವುದರಿಂದ ತಾವು ಏನೇ ಹೇಳಿದರೂ ಅದು ಇತರರಿಗೆ ಅಂದರೆ ಹೆತ್ತವರಿಗಾಗಲಿ ಹಿರಿಯರಿಗಾಗಲಿ ಗೊತ್ತಾಗುವುದಿಲ್ಲ ಎಂಬ ಭಾವನೆಯೂ ಅವರಿಗಿರಬಹುದು. ವಿಷಾದಕರವಾಗಿ, ಈ ಉರ್ಲಿಗೆ ಕ್ರೈಸ್ತ ಕುಟುಂಬಗಳ ಅನೇಕ ಯೌವನಸ್ಥರು ಸಿಕ್ಕಿಬಿದ್ದಿದ್ದಾರೆ ಮತ್ತು ಹೊಲಸು ಮಾತುಗಳ ಸಂಭಾಷಣೆಯಲ್ಲಿ ಒಳಗೂಡಿದ್ದಾರೆ. (ಎಫೆ. 5:3, 4; ಕೊಲೊ. 3:8) ಇತರರು ತಮ್ಮ ಕಂಪ್ಯೂಟರ್‌ ಪ್ರೋಫೈಲ್‌ನಲ್ಲಿ ಕಾಮೋದ್ರೇಕಗೊಳಿಸುವ ತಮ್ಮ ಫೊಟೋಗಳನ್ನೂ ಅಶ್ಲೀಲ ಅಡ್ಡಹೆಸರುಗಳನ್ನೂ ಸೇರಿಸಿದ್ದಾರೆ ಇಲ್ಲವೆ ಮುಚ್ಚುಮರೆಯಿಲ್ಲದ ಲೈಂಗಿಕ ಸಂಗೀತ ಮತ್ತು ವಿಡಿಯೋಗಳನ್ನು ಅಳವಡಿಸಿಕೊಂಡಿದ್ದಾರೆ.

ಹೀಗಿರುವುದರಿಂದ, ತಮ್ಮ ಮಕ್ಕಳು ಕಂಪ್ಯೂಟರಿನಲ್ಲಿ ಏನೆಲ್ಲಾ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಹೆತ್ತವರು ನಿಗಾ ಇಡಬೇಕು. (ಜ್ಞಾನೋ. 29:15) ಅಪರಿಚಿತ ವ್ಯಕ್ತಿಯನ್ನು ನಮ್ಮ ಮನೆಗೆ ಕರೆತರುವುದೂ ಅವನು ನಮ್ಮ ಮಕ್ಕಳೊಂದಿಗೆ ಏಕಾಂತವಾಗಿರುವುದಕ್ಕೆ ಅವಕಾಶ ಕೊಡುವುದೂ ತೀರ ಅಪಾಯಕಾರಿ. ಹಾಗೆಯೇ, ಅಪರಿಚಿತ ವ್ಯಕ್ತಿಗಳು ತಮ್ಮನ್ನು ಯೆಹೋವನ ಸಾಕ್ಷಿಗಳೆಂದು ಹೇಳಿಕೊಳ್ಳುವುದಾದರೂ ಅವರೊಂದಿಗೆ ಇಂಟರ್‌ನೆಟ್‌ ಮೂಲಕ ನಾವಾಗಲಿ ನಮ್ಮ ಮಕ್ಕಳಾಗಲಿ ಸ್ನೇಹ ಬೆಳೆಸಿಕೊಳ್ಳುವುದು ತುಂಬ ಅಪಾಯಕಾರಿಯಾಗಿದೆ.​—⁠ಜ್ಞಾನೋ. 22:⁠3.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ