ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 9/07 ಪು. 1
  • ಬ್ರಾಂಚ್‌ನಿಂದ ಪತ್ರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬ್ರಾಂಚ್‌ನಿಂದ ಪತ್ರ
  • 2007 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಬ್ರಾಂಚ್‌ ಆಫೀಸ್‌ನಲ್ಲಿ ಏನೆಲ್ಲ ಕೆಲಸಕಾರ್ಯ ನಡೆಯುತ್ತದೆ?
    ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
  • ಬ್ರಾಂಚ್‌ನಿಂದ ಪತ್ರ
    2005 ನಮ್ಮ ರಾಜ್ಯದ ಸೇವೆ
  • ಸೇವೆ ಹೆಚ್ಚಿಸಲು ನಮಗಿರುವ ಅವಕಾಶಗಳು
    ಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು
  • ನಮ್ಮ ಪಯನೀಯರರನ್ನು ಗಣ್ಯಮಾಡುವುದು
    1990 ನಮ್ಮ ರಾಜ್ಯದ ಸೇವೆ
ಇನ್ನಷ್ಟು
2007 ನಮ್ಮ ರಾಜ್ಯದ ಸೇವೆ
km 9/07 ಪು. 1

ಬ್ರಾಂಚ್‌ನಿಂದ ಪತ್ರ

ಪ್ರಿಯ ರಾಜ್ಯ ಪ್ರಚಾರಕರೇ:

ಭಾರತದ ಬ್ರಾಂಚ್‌ನ ಟೆರಿಟೊರಿಯಲ್ಲಿ 2007ರ ಸೇವಾ ವರ್ಷದಲ್ಲಾದ ಅಭಿವೃದ್ಧಿಯನ್ನು ನೋಡಲು ನಾವು ಹರ್ಷಿಸುತ್ತೇವೆ! ನಾವು ಮಾರ್ಚ್‌ ತಿಂಗಳಲ್ಲಿ 1,628 ರೆಗ್ಯುಲರ್‌ ಪಯನೀಯರರ ಮತ್ತು ಏಪ್ರಿಲ್‌ ತಿಂಗಳಲ್ಲಿ 4,212 ಆಕ್ಸಿಲಿಯರಿ ಪಯನೀಯರರ ಸರ್ವಕಾಲಿಕ ಉಚ್ಚಾಂಕವನ್ನು ಮುಟ್ಟಿದೆವು. ಹೆಚ್ಚುತ್ತಿರುವ ಪಯನೀಯರರ ಸಂಖ್ಯೆಯು ಸಾರುವ ಕೆಲಸದ ಮೇಲೆ ಉತ್ತಮ ಪರಿಣಾಮ ಬೀರುತ್ತಿದೆ. ಮಾರ್ಚ್‌ ತಿಂಗಳಲ್ಲಿ ವರದಿಸಿರುವ 27,153 ಪ್ರಚಾರಕರು 25,390 ಬೈಬಲ್‌ ಅಧ್ಯಯನಗಳನ್ನು ನಡೆಸಿದರು. ಕೆಲವು ಟೆರಿಟೊರಿಗಳಲ್ಲಿನ ವಿರೋಧದ ಮಧ್ಯೆಯೂ ನಮ್ಮ ಸಹೋದರರು ರಾಜ್ಯ ಸಾರುವಿಕೆಯ ಕೆಲಸದಲ್ಲಿ ಪಟ್ಟುಹಿಡಿದು ಮುಂದುವರಿಯುತ್ತಿದ್ದಾರೆ.

“ಧರ್ಮದ ಹೆಸರಿನಲ್ಲಿ ನಡೆಯುವ ದುಷ್ಕೃತ್ಯಗಳು ಅಂತ್ಯವಾಗುವವೊ?” ರಾಜ್ಯ ವಾರ್ತೆ ನಂ. 37ರ ಸುಮಾರು 9.5 ಲಕ್ಷ ಪ್ರತಿಗಳನ್ನು ಭಾರತದ ಬ್ರಾಂಚ್‌ನ ಟೆರಿಟೊರಿಯಾದ್ಯಂತ ವಿತರಿಸಲಾಯಿತು! ಆಸಕ್ತ ಜನರು ಆ ರಾಜ್ಯ ವಾರ್ತೆಯ ಹಿಂಬದಿಯಲ್ಲಿರುವ ಕೂಪನ್‌ ಅನ್ನು ಬಳಸಿ ಎಚ್ಚರಿಕೆಯಿಂದಿರಿ! ಬ್ರೋಷರಿನ ಪ್ರತಿಗಳಿಗಾಗಿ ಮತ್ತು ಬೈಬಲ್‌ ಅಧ್ಯಯನಗಳಿಗಾಗಿ ವಿನಂತಿಸಿದರು. ಜ್ಞಾಪಕಾಚರಣೆಯ ಆಮಂತ್ರಣ ಪತ್ರಗಳನ್ನು ವಿತರಿಸುವ ಕಾರ್ಯಾಚರಣೆ ಮಹಾ ಯಶಸ್ಸನ್ನು ಕಂಡಿತು. ಫಲಿತಾಂಶವಾಗಿ ಈ ವರ್ಷದ ಜ್ಞಾಪಕಾಚರಣೆಯ ಹಾಜರಿ 73,193 ಆಗಿತ್ತು.

ಇಂಥ ಕಾರ್ಯಾಚರಣೆಗಳ ಧ್ಯೇಯ, ಬೈಬಲ್‌ ನಿಜವಾಗಿಯೂ ಕಲಿಸುತ್ತಿರುವ ವಿಷಯಗಳನ್ನು ಪ್ರಾಮಾಣಿಕ ಹೃದಯದ ಜನರು ಕಲಿಯುವಂತೆ ಸಹಾಯಮಾಡುವುದೇ ಆಗಿದೆ. (ಮತ್ತಾ. 28:19, 20) ನೀವು ಸುವಾರ್ತೆ ಸಾರುವಾಗ ಆಸಕ್ತಿ ತೋರಿಸುವ ಪ್ರತಿಯೊಬ್ಬ ವ್ಯಕ್ತಿಯ ಕುರಿತು ಟಿಪ್ಪಣಿ ಬರೆದಿಟ್ಟುಕೊಳ್ಳಲು ಮರೆಯಬೇಡಿ ಮತ್ತು ಬೈಬಲ್‌ ಅಧ್ಯಯನವನ್ನು ಆರಂಭಿಸುವ ಗುರಿಯೊಂದಿಗೆ ಪುನರ್ಭೇಟಿಮಾಡಿರಿ. ಈ ಪ್ರಾಮುಖ್ಯ ಚಟುವಟಿಕೆಯಲ್ಲಿ ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸಮಾಡಲು ನಾವು ಹರ್ಷಿಸುತ್ತೇವೆ ಮತ್ತು ನಮ್ಮ ಹೃತ್ಪೂರ್ವಕ ಕ್ರೈಸ್ತ ಪ್ರೀತಿಯನ್ನು ಕಳುಹಿಸಿಕೊಡುತ್ತೇವೆ.

ನಿಮ್ಮ ಸಹೋದರರು,

ಭಾರತದ ಬ್ರಾಂಚ್‌ ಆಫೀಸ್‌

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ