ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 9/05 ಪು. 1
  • ಬ್ರಾಂಚ್‌ನಿಂದ ಪತ್ರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬ್ರಾಂಚ್‌ನಿಂದ ಪತ್ರ
  • 2005 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಬ್ರಾಂಚ್‌ನಿಂದ ಪತ್ರ
    2007 ನಮ್ಮ ರಾಜ್ಯದ ಸೇವೆ
  • ಬ್ರಾಂಚ್‌ ಆಫೀಸ್‌ನಲ್ಲಿ ಏನೆಲ್ಲ ಕೆಲಸಕಾರ್ಯ ನಡೆಯುತ್ತದೆ?
    ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
  • ಬ್ರಾಂಚ್‌ನಿಂದ ಪತ್ರ
    2006 ನಮ್ಮ ರಾಜ್ಯದ ಸೇವೆ
  • ಪ್ರೀತಿ, ನಂಬಿಕೆ ಮತ್ತು ವಿಧೇಯತೆಗೆ ಒಂದು ಪುರಾವೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
ಇನ್ನಷ್ಟು
2005 ನಮ್ಮ ರಾಜ್ಯದ ಸೇವೆ
km 9/05 ಪು. 1

ಬ್ರಾಂಚ್‌ನಿಂದ ಪತ್ರ

ಪ್ರಿಯ ರಾಜ್ಯ ಪ್ರಚಾರಕರೇ:

ಕಳೆದ ಕೆಲವು ಸೇವಾ ವರ್ಷಗಳಲ್ಲಿ ಸಭೆಗಳನ್ನು ಮತ್ತು ಸರ್ಕಿಟ್‌ಗಳನ್ನು ಏಕೀಕರಿಸುವ ಮತ್ತು ಬಲಪಡಿಸುವ ಕೆಲಸವು ಮುಂದುವರಿದಿದೆ. ಕಳೆದ ಸೇವಾ ವರ್ಷದಲ್ಲಿ 14 ಸಭೆಗಳು ಹತ್ತಿರದ ಸಭೆಗಳೊಂದಿಗೆ ಸೇರಿಸಲ್ಪಟ್ಟದ್ದರಿಂದ ಅವು ಮುಚ್ಚಲ್ಪಟ್ಟವು. ಹೀಗೆ ಕಳೆದ ಎರಡು ಸೇವಾ ವರ್ಷಗಳಲ್ಲಿ 36 ಸಭೆಗಳು ಮುಚ್ಚಲ್ಪಟ್ಟಿವೆ. ಹೆಚ್ಚು ಸಹೋದರರು ಸೇವಾ ಸುಯೋಗಗಳಿಗೆ ಅರ್ಹರಾಗಲು ಪ್ರಯತ್ನಿಸುತ್ತಿರುವುದರಿಂದ, ಈಗ ಸರಾಸರಿಯಾಗಿ ಪ್ರತಿಯೊಂದು ಸಭೆಯಲ್ಲಿ ಮೂರು ಹಿರಿಯರು ಮತ್ತು ನಾಲ್ಕು ಶುಶ್ರೂಷಾ ಸೇವಕರಿದ್ದಾರೆ.

ದೊಡ್ಡ ಸಭೆಗಳಿರುವ ಕಡೆ ಉತ್ತಮವಾದ ರಾಜ್ಯ ಸಭಾಗೃಹಗಳ ಆವಶ್ಯಕತೆಯಿದೆ. ಹೀಗೆ, ಕಳೆದ ಸೆಪ್ಟೆಂಬರ್‌ ತಿಂಗಳಿನಿಂದ ಬ್ರಾಂಚ್‌ನಿಂದ ಬಂದ ಸಹೋದರರು 10 ವಿಭಿನ್ನ ಸ್ಥಳಗಳಲ್ಲಿನ ಸಮರ್ಪಣಾ ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಲು ನಾವು ಸಂತೋಷಪಡುತ್ತೇವೆ. ಇವುಗಳಲ್ಲಿ ಎರಡು ಸೌಕರ್ಯಗಳು ಅವಳಿ ರಾಜ್ಯ ಸಭಾಗೃಹಗಳನ್ನು ಹೊಂದಿವೆ. ಇವೆಲ್ಲವೂ ಭಾವೀ ಬೆಳವಣಿಗೆಗೆ ಸದೃಢ ತಳಪಾಯವನ್ನು ಹಾಕಿವೆ.

ಬೆತೆಲ್‌ ಗೃಹ ಮತ್ತು ಅದರ ಆಫೀಸ್‌ ಹಾಗೂ ಮುದ್ರಣಾಲಯವು ಈಗ ಸುಸ್ಥಾಪಿತವಾಗಿದೆ ಮತ್ತು ಆತುರದಿಂದ ಮುನ್ನೋಡುತ್ತಿರುವ ಅನೇಕ ಪಟ್ಟು ವಿಸ್ತರಣೆಯನ್ನು ನಿಭಾಯಿಸಲು ಸಿದ್ಧವಾಗಿದೆ. ಈ ಕ್ಯಾಲೆಂಡರ್‌ ವರ್ಷದ ಆರಂಭದ ತಿಂಗಳುಗಳಲ್ಲಿ ಹೊಸ ಯಂತ್ರಗಳು ಅಳವಡಿಸಲ್ಪಟ್ಟವು. ಮತ್ತು ಈಗ ಹೊಸದಾಗಿ ಅಳವಡಿಸಲ್ಪಟ್ಟ ಎರಡು ರ್ಯಾಪಿಡಾ ಮುದ್ರಣ ಯಂತ್ರಗಳು ತಾಸಿಗೆ 12,000 ಪತ್ರಿಕೆಗಳನ್ನು ಮುದ್ರಿಸುತ್ತವೆ. ಹಿಂದೆ ನಾವು ಹೊಂದಿದ್ದ ಯಂತ್ರವು ಮುದ್ರಿಸುತ್ತಿದ್ದುದಕ್ಕಿಂತ ಇದು ಎರಡು ಪಟ್ಟು ಹೆಚ್ಚು ಆಗಿದೆ. ಕಾಗದವನ್ನು ಕತ್ತರಿಸುವ, ಮಡಚುವ, ಟ್ರಿಮ್‌ ಮಾಡುವ ಮತ್ತು ಹೊಲಿಯುವ ಹೊಸ ಯಂತ್ರಗಳು ಮುದ್ರಣಾಲಯವನ್ನು ಸಂಪೂರ್ಣವಾಗಿ ಸಜ್ಜುಗೊಳಿಸಿವೆ. ಇದರರ್ಥ ಮುಂದಿನ ಅನೇಕ ವರ್ಷಗಳಿಗೆ ನಮ್ಮಿಂದ ಸಾಹಿತ್ಯದ ಬೇಡಿಕೆಯನ್ನು ಆರಾಮವಾಗಿ ನಿರ್ವಹಿಸಲು ಸಾಧ್ಯವಿರುವುದು.

ಹೊಸ ಉಪಕರಣವನ್ನು ಅಳವಡಿಸುವುದು, ಆರು ಮಂದಿ ಸಹೋದರರು ಮತ್ತು ಅವರ ಪತ್ನಿಯರು ಕೂಡಿದ ಅಂತಾರಾಷ್ಟ್ರೀಯ ತಂಡದ ಸಹಾಯವನ್ನು ಅವಶ್ಯಪಡಿಸಿತು ಹಾಗೂ ನಮ್ಮ ಸ್ವಂತ ಕ್ಷೇತ್ರದಿಂದ ಐದು ನಿಪುಣ ಟೆಕ್ನಿಷನ್‌ಗಳು ಬೇಕಾದ ನೆರವನ್ನು ನೀಡಿದರು. ಬೆತೆಲ್‌ ಕುಟುಂಬದ ಸದಸ್ಯರು ಈ ಎಲ್ಲ ಸ್ವಯಂ ಸೇವಕರ ಅನುಭವ ಮತ್ತು ಸಿದ್ಧಮನಸ್ಸಿನ ಪ್ರಯತ್ನಗಳನ್ನು ಬಹಳವಾಗಿ ಗಣ್ಯಮಾಡಿದರು ಮತ್ತು ಅವರಿಂದ ಅಗಲುವ ಸಮಯ ಬಂದಾಗ ಅನೇಕ ಕಣ್ಣುಗಳು ಕಂಬನಿಯಿಂದ ತುಂಬಿದವು.

ಸುನಾಮಿಯಿಂದ ಬಾಧಿತರಾದ ಸಹೋದರರಿಗೆ ಸಹಾಯವನ್ನು ನೀಡಲು ಮಾಡಲ್ಪಟ್ಟ ಪರಿಹಾರ ಕಾರ್ಯದಲ್ಲಿ ಅಂತಾರಾಷ್ಟ್ರೀಯ ಸಹಾಯವು ಸಹ ಒಳಗೂಡಿತ್ತು. ದೇಶದಾದ್ಯಂತದಿಂದ ಮತ್ತು ಹೊರದೇಶಗಳಲ್ಲಿ ಜೀವಿಸುತ್ತಿರುವ ಭಾರತೀಯರಿಂದ ನಿಧಿಗಳು ಪ್ರವಾಹವಾಗಿ ಹರಿದು ಬಂದವು ಮತ್ತು ಒಂದೇ ವಾರದೊಳಗಾಗಿ, ಬಾಧಿಸಲ್ಪಟ್ಟ ಸಹೋದರರನ್ನು ಭೇಟಿಮಾಡಿ ಪ್ರಾಯೋಗಿಕವಾದ ಪರಿಹಾರ ಒದಗಿಸುವಿಕೆಗಳನ್ನು ಮಾಡಲು ನಮ್ಮಿಂದ ಸಾಧ್ಯವಾಯಿತು. ವಿಶೇಷವಾಗಿ ಈ ನೆರವು ಅತಿಯಾಗಿ ಬಾಧಿಸಲ್ಪಟ್ಟಿದ್ದ ಅಂಡಮಾನ್‌ ಮತ್ತು ನಿಕೊಬಾರ್‌ ದ್ವೀಪಗಳಲ್ಲಿರುವ ಸಹೋದರರಿಗೆ ನೀಡಲ್ಪಟ್ಟಿತು. ತದನಂತರ ಸಮರ್ಥ ಸರ್ಕಿಟ್‌ ಮೇಲ್ವಿಚಾರಕರು ಮತ್ತು ನಿರ್ಮಾಣಕಾರ್ಯ ಸಿಬ್ಬಂದಿಯಿಂದ ಮಾಡಲ್ಪಟ್ಟ ಭೇಟಿಗಳು, ಪರಿಹಾರ ಕಾರ್ಯಗಳು ಆ ದುರಂತದಲ್ಲಿ ಎಲ್ಲವನ್ನೂ ಕಳೆದುಕೊಂಡವರಿಗೆ ಬೇಕಾದ ನೆರವನ್ನು ನೀಡುತ್ತಿವೆ ಎಂಬುದನ್ನು ಖಚಿತಪಡಿಸಿವೆ. ಸುನಾಮಿ ಪೀಡಿತ ಕ್ಷೇತ್ರಗಳಲ್ಲಿರುವ ಸಹೋದರ ಸಹೋದರಿಯರು, ವಿಪತ್ತಿನ ಸಮಯದಲ್ಲಿ ತಮಗೆ ನೆರವಾದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸುವಂತೆ ನಮ್ಮನ್ನು ಕೇಳಿಕೊಂಡರು. ಒಂದು ಪ್ರೀತಿಯ ಕ್ರೈಸ್ತ ಸಹೋದರತ್ವದ ಭಾಗವಾಗಿರುವುದು ನಮಗೆ ಎಂತಹ ಸುಯೋಗವಾಗಿದೆ!​—⁠1 ಪೇತ್ರ 2:⁠17.

ರಾಜ್ಯದ ಅಭಿರುಚಿಗಳನ್ನು ಪ್ರವರ್ಧಿಸುವುದರಲ್ಲಿ ಮಾಡಲ್ಪಡುವ ಈ ಎಲ್ಲ ಹುರುಪಿನ ಚಟುವಟಿಕೆಯು ಶ್ಲಾಘನೀಯವಾಗಿದೆ! ನೀವು ಕೊಡುವ ಹಣಕಾಸಿನ ಬೆಂಬಲವು ಸಹ ತುಂಬ ಗಣ್ಯಮಾಡಲ್ಪಡುತ್ತದೆ. (ಜ್ಞಾನೋಕ್ತಿ 3:9, 10) ‘ಆತನ ಮಹಿಮೆಯನ್ನು ಪ್ರಖ್ಯಾತಿಪಡಿಸುವುದರಲ್ಲಿ’ ನಾವು ಮಾಡುವ ಐಕ್ಯ ಪ್ರಯತ್ನಗಳನ್ನು ಯೆಹೋವನು ಆಶೀರ್ವದಿಸಲಿ.​—⁠ಎಫೆಸ 1:⁠11.

ನಿಮ್ಮ ಸಹೋದರರು,

ಭಾರತದ ಬ್ರಾಂಚ್‌ ಆಫೀಸ್‌

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ