ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/08 ಪು. 4
  • ನೀವು ಬೋಧಕರಾಗಿರಬಲ್ಲಿರಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನೀವು ಬೋಧಕರಾಗಿರಬಲ್ಲಿರಿ!
  • 2008 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಬೇರೆಯವರಿಗೆ ತರಬೇತಿ ಕೊಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ಸಾರುವ ಕೆಲಸ ಮಾಡಲು ಯೆಹೋವನು ಕೊಡುವ ತರಬೇತಿ
    2011 ನಮ್ಮ ರಾಜ್ಯದ ಸೇವೆ
  • ಭಾಗ 3: ಇತರರ ಪ್ರಗತಿಗೆ ನೆರವಾಗಿರಿ
    1991 ನಮ್ಮ ರಾಜ್ಯದ ಸೇವೆ
  • ಹಿರಿಯರೇ, ಇತರರಿಗೆ ತರಬೇತಿ ಕೊಡುವ ಬಗ್ಗೆ ನಿಮ್ಮ ಅನಿಸಿಕೆ ಏನು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
ಇನ್ನಷ್ಟು
2008 ನಮ್ಮ ರಾಜ್ಯದ ಸೇವೆ
km 11/08 ಪು. 4

ನೀವು ಬೋಧಕರಾಗಿರಬಲ್ಲಿರಿ!

1. ಪ್ರತಿಯೊಬ್ಬ ರಾಜ್ಯಪ್ರಚಾರಕನ ಮುಂದೆ ಯಾವ ನೆಚ್ಚಿನ ಸದವಕಾಶವಿದೆ?

1 ಇತರರಿಗೆ ಸತ್ಯವನ್ನು ಕಲಿಸುವುದು ಶುಶ್ರೂಷೆಯ ಅತ್ಯಂತ ಪ್ರತಿಫಲದಾಯಕ ಅಂಶಗಳಲ್ಲೊಂದು. ಜನರು ರಾಜ್ಯ ಸಂದೇಶಕ್ಕೆ ಪ್ರತಿಕ್ರಿಯಿಸುವ ರೀತಿಯನ್ನು ನೋಡುವುದು ಮತ್ತು ವಿಶ್ವದ ಪರಮಾಧಿಕಾರಿಯನ್ನು ಸಮೀಪಿಸಲು ಅವರಿಗೆ ಸಹಾಯಮಾಡುವುದು ಒಂದು ನೆಚ್ಚಿನ ಅನುಭವ. ಅದು ಆನಂದಭರಿತ ಕೆಲಸ ನಿಶ್ಚಯ! (ಯಾಕೋ. 4:⁠8) ಸತ್ಯಕ್ಕಾಗಿ ಹಸಿದಿರುವ ಜನರಿಗೆ ಬೋಧಿಸಿ ಅವರು ತಮ್ಮ ವ್ಯಕ್ತಿತ್ವ, ಹೊರತೋರಿಕೆ, ನಡತೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುವುದನ್ನು ಕಾಣುವುದೇ ಪ್ರತಿಯೊಬ್ಬ ರಾಜ್ಯಪ್ರಚಾರಕನ ಗುರಿಯಾಗಿರಬೇಕು.​—⁠ಮತ್ತಾ. 28:​19, 20.

2. ಬೈಬಲ್‌ ಅಧ್ಯಯನವನ್ನು ನಡೆಸಲು ಕೆಲವರು ಹಿಂಜರಿಯಬಹುದೇಕೆ, ಮತ್ತು ಈ ಸಮಸ್ಯೆಯನ್ನು ಪರಿಹರಿಸಲು ಯಾವುದು ಸಹಾಯಮಾಡುವುದು?

2 ಯೆಹೋವನ ಮೇಲೆ ಆತುಕೊಳ್ಳಿ: ಹಿಂದಿನ ಕಾಲದ ನಂಬಿಗಸ್ತ ಸೇವಕರು ತಮಗೆ ಕೊಡಲಾದ ನೇಮಕವನ್ನು ಪೂರೈಸಲು ತಾವು ಅನರ್ಹರೆಂದು ಭಾವಿಸಿದರು. ಮೋಶೆ, ಯೆರೆಮೀಯ, ಆಮೋಸ ಮತ್ತು ಇನ್ನಿತರ ಸಾಮಾನ್ಯ ವ್ಯಕ್ತಿಗಳು ಯೆಹೋವನ ಮೇಲೆ ಆತುಕೊಂಡದ್ದರಿಂದ ತಮ್ಮ ಸಾಮರ್ಥ್ಯದಲ್ಲಿ ತಮಗಿದ್ದ ಸಂದೇಹಗಳನ್ನು ಅಥವಾ ಅಭದ್ರಭಾವನೆಗಳನ್ನು ಪರಿಹರಿಸಿ ಆತನು ಕೊಟ್ಟ ಮಹತ್ತ್ವಪೂರ್ಣ ಕೆಲಸವನ್ನು ಪೂರೈಸಲು ಶಕ್ತರಾದರು. (ವಿಮೋ. 4:​10-12; ಯೆರೆ. 1:​6, 7; ಆಮೋ. 7:​14, 15) ಅಪೊಸ್ತಲ ಪೌಲನು ಕೂಡ ‘ಧೈರ್ಯಗೊಂಡನು.’ ಹೇಗೆ? “ನಮ್ಮ ದೇವರ ಮೂಲಕ” ಎಂದು ಅವನು ಹೇಳಿದನು. (1 ಥೆಸ. 2:⁠2) ಹೌದು, ನಾವೆಲ್ಲರು ಫಲಭರಿತ ಬೈಬಲ್‌ ಅಧ್ಯಯನಗಳನ್ನು ನಡೆಸಲು ಅಗತ್ಯವಿರುವ ವಿವೇಕ, ಶಕ್ತಿ ಮತ್ತು ಸಹಾಯವನ್ನು ಯೆಹೋವನು ಖಂಡಿತ ಒದಗಿಸುವನೆಂದು ಆತನಲ್ಲಿ ಭರವಸೆಯಿಡಬಲ್ಲೆವು.​—⁠ಯೆಶಾ. 41:10; 1 ಕೊರಿಂ. 1:​26, 27; 1 ಪೇತ್ರ 4:⁠11.

3, 4. ದೇವರ ವಾಕ್ಯದ ಬೋಧಕರಾಗುವಂತೆ ನಮಗೆ ಸಹಾಯಮಾಡಲಿಕ್ಕಾಗಿ ಯಾವ ತರಬೇತಿ ಲಭ್ಯವಿದೆ?

3 ತರಬೇತನ್ನು ಸ್ವೀಕರಿಸಿ: ನಾವು ಬೋಧಕರಾಗಿ ಪೂರ್ಣ ಪ್ರವೀಣರಾಗಲಿಕ್ಕಾಗಿ ನಮ್ಮ ಮಹಾ ಬೋಧಕನಾದ ಯೆಹೋವನು ಕ್ರಮವಾದ ಆಧ್ಯಾತ್ಮಿಕ ಶಿಕ್ಷಣ ಕಾರ್ಯಕ್ರಮದ ಮೂಲಕ ನಮಗೆ ತರಬೇತಿ ನೀಡುತ್ತಿದ್ದಾನೆ. (ಯೆಶಾ. 54:13; 2 ತಿಮೊ. 3:​16, 17) ಬೈಬಲಿನ ಕುರಿತಾದ ಜ್ಞಾನವನ್ನು ಪಡೆಯಲು ಮತ್ತು ಬೈಬಲ್‌ ಸತ್ಯಗಳನ್ನು ಕಲಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ನಿಮಗಿರುವ ಎಲ್ಲಾ ಅವಕಾಶಗಳ ಸದುಪಯೋಗ ಮಾಡುತ್ತಾ ಆತನು ಕೊಡುವ ತರಬೇತನ್ನು ಸ್ವೀಕರಿಸಿರಿ. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ ಮತ್ತು ಸೇವಾ ಕೂಟಗಳ ಮುಖ್ಯ ಉದ್ದೇಶ ಇದೇ ಆಗಿರುವುದಾದರೂ ಬೇರೆಲ್ಲಾ ಸಭಾಕೂಟಗಳು ಸಹ ದೇವರ ವಾಕ್ಯದಿಂದ ಬೋಧಿಸುವಂತೆ ನಮ್ಮನ್ನು ತರಬೇತುಗೊಳಿಸುತ್ತವೆ.

4 ಆಳವಾದ ಬೈಬಲ್‌ ಸತ್ಯಗಳನ್ನು ಬೋಧಿಸಲು ಸಹ ಸರಳ ವಿಧಾನಗಳನ್ನು ಉಪಯೋಗಿಸಲು ಕಲಿಯಿರಿ. ಶುಶ್ರೂಷಾಶಾಲೆ ಪುಸ್ತಕವು ಪುಟ 227ರಲ್ಲಿ ಹೀಗೆ ವಿವರಿಸುತ್ತದೆ: “ನಿಮ್ಮ ವಿಷಯವಸ್ತು ಇತರರಿಗೆ ಅರ್ಥವತ್ತಾಗಿರಬೇಕಾದರೆ, ಮೊದಲಾಗಿ ಸ್ವತಃ ನೀವೇ ಅದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು.” ಕೂಟಗಳಲ್ಲಿ ಹೇಳಿಕೆಗಳನ್ನು ನೀಡುವ ಮೂಲಕ ನಮ್ಮ ಮನಸ್ಸಿನಲ್ಲಿ ಮುಖ್ಯ ವಿಷಯಗಳು ಅಚ್ಚೊತ್ತಲ್ಪಡುತ್ತವೆ. ಇದರಿಂದ ಮುಂದಿನ ದಿನಗಳಲ್ಲಿ ಅವನ್ನು ಬಳಸಲು ನಾವು ಶಕ್ತರಾಗುವೆವು. ಆದಕಾರಣ ಕೂಟಗಳಿಗೆ ಚೆನ್ನಾಗಿ ತಯಾರಿಸಿರಿ. ಆಗ ಬೋಧಿಸುವ ನಿಮ್ಮ ಸಾಮರ್ಥ್ಯದ ಬಗ್ಗೆ ಆತ್ಮವಿಶ್ವಾಸವು ಹೆಚ್ಚುವುದು.

5. ಬೋಧಕರಾಗಿ ಪ್ರಗತಿಹೊಂದಲು ಸಭೆಯಲ್ಲಿ ನಮಗೆ ಬೇರೆ ಯಾವ ತರಬೇತಿ ಲಭ್ಯವಿದೆ?

5 ಆರಂಭದಿಂದಲೇ ಕ್ರೈಸ್ತ ಶುಶ್ರೂಷಕರು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಪಾಲ್ಗೊಳ್ಳುವಾಗ ಒಬ್ಬರು ಇನ್ನೊಬ್ಬರಿಂದ ಕಲಿತುಕೊಂಡರು ಎಂಬುದರಲ್ಲಿ ಸಂದೇಹವಿಲ್ಲ. (ಲೂಕ 10:⁠1) ಪಯನೀಯರರು, ಹಿರಿಯರು ಮತ್ತು ಸಂಚರಣ ಮೇಲ್ವಿಚಾರಕರು ಸೇರಿದಂತೆ ಅನುಭವಸ್ಥ ಪ್ರಚಾರಕರೊಂದಿಗೆ ಬೈಬಲ್‌ ಅಧ್ಯಯನಗಳಿಗೆ ಹೋಗಿರಿ. ಅವರು ಬೈಬಲ್‌ ಸತ್ಯಗಳನ್ನು ವಿವರಿಸಲು ನಮ್ಮ ಅಧ್ಯಯನ ಪ್ರಕಾಶನಗಳಲ್ಲಿರುವ ಸರಳ ದೃಷ್ಟಾಂತಗಳನ್ನೂ ಇತರ ಕಲಿಸುವ ವಿಧಾನಗಳನ್ನೂ ಹೇಗೆ ಉಪಯೋಗಿಸುತ್ತಾರೆ ಎಂಬದನ್ನು ಗಮನಿಸಿ. ನೀವು ಒಬ್ಬ ಒಳ್ಳೇ ಬೋಧಕರಾಗಲು ಏನು ಮಾಡಬೇಕೆಂದು ಅವರಿಂದ ಸಲಹೆ ಕೇಳಿರಿ. (ಜ್ಞಾನೋ. 1:5; 27:17) ಇಂಥ ಎಲ್ಲಾ ತರಬೇತಿಯನ್ನು​—⁠ದೇವರಿಂದಲೇ ಬಂದ ತರಬೇತಿಯಾಗಿ ಗಣ್ಯಮಾಡಿ.​—⁠2 ಕೊರಿಂ. 3:⁠5.

6. ದೇವರ ವಾಕ್ಯದ ಬೋಧಕರಾಗಲು ಪ್ರಾಮುಖ್ಯವಾಗಿ ಯಾವುದರ ಅಗತ್ಯವಿದೆ?

6 ಯೆಹೋವನ ಮೇಲೆ ಆತುಕೊಳ್ಳಿರಿ ಮತ್ತು ಆತನು ಒದಗಿಸುವ ತರಬೇತಿಯಿಂದ ಪ್ರಯೋಜನ ಪಡೆಯಿರಿ. ನಿಮ್ಮ ಪ್ರಗತಿಗಾಗಿ ಯೆಹೋವನಿಗೆ ಪ್ರಾರ್ಥಿಸಿರಿ. (ಕೀರ್ತ. 25:​4, 5) ಹೀಗೆ, ನಿಮ್ಮಂತೆ ಇತರರು ಕೂಡ ದೇವರ ವಾಕ್ಯದ ಬೋಧಕರಾಗಲಿಕ್ಕಾಗಿ ಸಹಾಯಮಾಡುವಾಗ ದೊರೆಯುವ ಸಂತೋಷವನ್ನು ನೀವು ಕೂಡ ಸವಿಯಬಲ್ಲಿರಿ!

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ