ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 12/08 ಪು. 1
  • ಸಾರಲು ತಾಳ್ಮೆ ಅತ್ಯಾವಶ್ಯಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಾರಲು ತಾಳ್ಮೆ ಅತ್ಯಾವಶ್ಯಕ
  • 2008 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಯೆಹೋವನ ಸಂಘಟನೆಯನ್ನು ಎಂದಿಗೂ ಬಿಟ್ಟುಹೋಗಬೇಡಿ
    ಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು
  • “ತಾಳ್ಮೆಯು ತನ್ನ ಕೆಲಸವನ್ನು ಸಂಪೂರ್ಣಗೊಳಿಸಲಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ತಾಳ್ಮೆ—ಕ್ರೈಸ್ತರಿಗೆ ಅತ್ಯಾವಶ್ಯಕ
    ಕಾವಲಿನಬುರುಜು—1993
  • “ಸಹಿಸಿಕೊಂಡಿರುವವನನ್ನು ನಿಕಟವಾಗಿ ಪರಿಗಣಿಸಿ”
    “ನನ್ನನ್ನು ಹಿಂಬಾಲಿಸಿರಿ”
ಇನ್ನಷ್ಟು
2008 ನಮ್ಮ ರಾಜ್ಯದ ಸೇವೆ
km 12/08 ಪು. 1

ಸಾರಲು ತಾಳ್ಮೆ ಅತ್ಯಾವಶ್ಯಕ

1 ಅಪೊಸ್ತಲ ಪೌಲನು ಸುಮಾರು 30 ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಸೌವಾರ್ತಿಕ ಸೇವೆಯನ್ನು ತನ್ನ ಸಂತೃಪ್ತಿಕರ ಜೀವನಮಾರ್ಗವನ್ನಾಗಿ ಮಾಡುವುದರಲ್ಲಿ ಸಂತೋಷಿಸಿದನು. ಯಾವುದೇ ಸಾರ್ಥಕ ಸಾಧನೆಯಲ್ಲಿ ಹೇಗೋ ಹಾಗೆ ತನ್ನ ಸಾರುವ ಚಟುವಟಿಕೆಯಲ್ಲೂ ಅವನು ಹಲವಾರು ಕಷ್ಟಗಳನ್ನು ಅನುಭವಿಸಿದನು. (2 ಕೊರಿಂ. 11:​23-29) ಆದರೂ ಪೌಲನು ಸಾರುವುದನ್ನು ನಿಲ್ಲಿಸಲಿಲ್ಲ. (2 ಕೊರಿಂ. 4:⁠1) ತನ್ನ ಶುಶ್ರೂಷೆಯನ್ನು ಪೂರೈಸುವಾಗ ತಾಳಿಕೊಳ್ಳಲು ಬೇಕಾದ ಬಲವು ಯೆಹೋವನಿಂದಲೇ ಬರುವುದೆಂದು ಅವನಿಗೆ ತಿಳಿದಿತ್ತು. (ಫಿಲಿ. 4:13) ತನ್ನ ನಂಬಿಗಸ್ತ ತಾಳ್ಮೆಯ ಮಾದರಿಯಿಂದಾಗಿ ಪೌಲನು ಹೀಗೆ ಹೇಳಶಕ್ತನಾಗಿದ್ದನು: “ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ.”​—⁠1 ಕೊರಿಂಥ 11:⁠1.

2 ಕಷ್ಟಗಳನ್ನು ತಾಳಿಕೊಳ್ಳುವುದು: ಇಂದು ನಮ್ಮ ಸಹೋದರರಲ್ಲಿ ಅನೇಕರು ಪ್ರತಿದಿನ ಕುಟುಂಬದವರಿಂದ, ಸಹೋದ್ಯೋಗಿಗಳಿಂದ ಅಥವಾ ಸಹಪಾಠಿಗಳಿಂದ ಅಪಹಾಸ್ಯ, ವಿರೋಧ ಅಥವಾ ಅಸಡ್ಡೆಯನ್ನು ಎದುರಿಸುತ್ತಾರೆ. (ಮತ್ತಾ. 10:35; ಯೋಹಾ. 15:20) ಪ್ರಾಯಶಃ ನೀವು ಸಹ ಅದನ್ನು ಅನುಭವಿಸಿರಬಹುದು. ಒಂದು ವೇಳೆ ನೀವು ಅಸೌಖ್ಯದಿಂದ ಬಳಲುತ್ತಿರಬಹುದು ಇಲ್ಲವೆ ನಿಮ್ಮ ನಂಬಿಕೆ ಮತ್ತು ತಾಳ್ಮೆಯನ್ನು ಪರೀಕ್ಷೆಗೊಡ್ಡುವ ಅಪಕರ್ಷಣೆಗಳನ್ನೊ ಶೋಧನೆಗಳನ್ನೊ ಎದುರಿಸಲು ದಿನಾಲೂ ಹೋರಾಡುತ್ತಿರಬಹುದು. ಕಷ್ಟಗಳನ್ನು ಎದುರಿಸಿ ಜಯಿಸಿದ ಪುರಾತನ ಕಾಲದ ನಂಬಿಗಸ್ತ ಸೇವಕರ ಹಾಗೂ ಇಂದಿನ ಜೊತೆಕ್ರೈಸ್ತರ ಮಾದರಿಗಳನ್ನು ಪರಿಗಣಿಸುವ ಮೂಲಕ ನಾವು ಬಲವನ್ನು ಹೊಂದಬಲ್ಲೆವು.​—⁠1 ಪೇತ್ರ 5:⁠9.

3 ‘ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಲು’ ನಿಶ್ಚೈಸುವ ಮೂಲಕ ನಾವು ಶುಶ್ರೂಷೆಯಲ್ಲಿ ದೃಢರಾಗಿ ಉಳಿಯಲು ಶಕ್ತಿಯನ್ನು ಪಡೆಯಬಹುದು. (ಎಫೆ. 6:​10-13, 15) ತಾಳಿಕೊಳ್ಳಲಿಕ್ಕಾಗಿ ಪ್ರಾರ್ಥನೆಯು ಸಹ ಅತ್ಯಾವಶ್ಯಕ. ಕಷ್ಟಗಳನ್ನು ತಾಳಿಕೊಳ್ಳಲು ದೇವರು ತನ್ನ ಪವಿತ್ರಾತ್ಮವನ್ನು ನಮಗೆ ದಯಪಾಲಿಸುತ್ತಾನೆ. (2 ಕೊರಿಂ. 6:​4-7) ನಮ್ಮ ಆಧ್ಯಾತ್ಮಿಕ ಹೋರಾಟವನ್ನು ಜಯಿಸಲಿಕ್ಕಾಗಿ ದೇವರು ನಮ್ಮಲ್ಲಿ ಮರು ಚೈತನ್ಯವನ್ನು ಹುಟ್ಟಿಸುವಂತೆ ನಾವು ಆತನ ಮರುಜ್ಞಾಪನಗಳನ್ನು ಕೈಕೊಳ್ಳಬೇಕು. (ಕೀರ್ತ. 119:​24, 85-88) ಪ್ರೀತಿಯ ತಂದೆಯಿಂದ ಬಂದ ಪತ್ರವನ್ನು ಮಗನು ಹೇಗೆ ಪುನಃ ಪುನಃ ಓದುತ್ತಾನೋ ಹಾಗೆಯೇ ನಮ್ಮ ದಿನದಿನದ ಬೈಬಲ್‌ ವಾಚನವು ಯೆಹೋವನೊಂದಿಗೆ ನಮ್ಮ ಸಂಬಂಧವನ್ನು ಬಲಗೊಳಿಸುತ್ತದೆ. ಕ್ರಮದ ವೈಯಕ್ತಿಕ ಅಧ್ಯಯನದ ಮೂಲಕ ಕಷ್ಟಗಳನ್ನು ನಿಭಾಯಿಸಲು ಬೇಕಾದ ವಿವೇಕವನ್ನು ನಾವು ಗಳಿಸುತ್ತೇವೆ. ಹೀಗೆ ದೇವರ ಆಲೋಚನೆಗಳು ನಮ್ಮ ನಿರ್ಣಯಗಳನ್ನು ಪ್ರಭಾವಿಸುವಂತೆ ಮತ್ತು ನಮ್ಮ ಸಮಗ್ರತೆಯನ್ನು ಬಲಗೊಳಿಸುವಂತೆ ನಾವು ಬಿಟ್ಟುಕೊಡುತ್ತೇವೆ.​—⁠ಜ್ಞಾನೋ. 2:​10, 11.

4 ತಾಳ್ಮೆಯಿಂದ ಆಶೀರ್ವಾದಗಳು: ಪೌಲನ ವಿಷಯದಲ್ಲಿ ಹೇಗೊ ಹಾಗೆ ನಮ್ಮ ಶುಶ್ರೂಷೆಯನ್ನು ಪೂರೈಸುವಾಗ ನಾವು ತೋರಿಸುವ ನಂಬಿಗಸ್ತ ತಾಳ್ಮೆಯು ಯೆಹೋವನ ಹೃದಯವನ್ನು ಸಂತೋಷಪಡಿಸುತ್ತದೆ ಮಾತ್ರವಲ್ಲ ನಮಗೂ ಇತರರಿಗೂ ಆಶೀರ್ವಾದಗಳನ್ನು ತರುತ್ತದೆ ನಿಶ್ಚಯ. (ಜ್ಞಾನೋ. 27:11) ಆದುದರಿಂದ ನಮ್ಮ ಶುಶ್ರೂಷೆಯನ್ನು ಎಡೆಬಿಡದೆ ಮಾಡಲು ದೃಢನಿರ್ಧಾರವನ್ನು ಮಾಡೋಣ. ಆ ಮೂಲಕ ‘ಬೆಂಕಿಯಲ್ಲಿ ಪುಟಾಹಾಕಿದ ಬಂಗಾರಕ್ಕಿಂತ’ ನಮ್ಮ ನಂಬಿಕೆಯು ಶೋಧಿತವಾಗಿಯೂ ಅಮೂಲ್ಯವಾಗಿಯೂ ಇದೆಯೆಂದು ರುಜುಪಡಿಸೋಣ.​—⁠1 ಪೇತ್ರ 1:​6, 7.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ