ಬೈಬಲ್ ಅಧ್ಯಯನದಲ್ಲಿ “ದೇವರ ಪ್ರೀತಿ” ಪುಸ್ತಕವನ್ನು ಬಳಸುವುದು ಹೇಗೆ?
1. “ದೇವರ ಪ್ರೀತಿ” ಪುಸ್ತಕದ ಉದ್ದೇಶವೇನು?
1 “ಪವಿತ್ರಾತ್ಮದ ಮಾರ್ಗದರ್ಶನ” ಎಂಬ ಜಿಲ್ಲಾ ಅಧಿವೇಶನದಲ್ಲಿ “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಪುಸ್ತಕ ಬಿಡುಗಡೆಯಾದಾಗ ನಮಗೆಲ್ಲರಿಗೂ ತುಂಬ ಸಂತೋಷವಾಗಿತ್ತು. ಆ ಅಧಿವೇಶನದಲ್ಲಿ ತಿಳಿಸಲಾದಂತೆ ಈ ಪುಸ್ತಕದ ಉದ್ದೇಶ ಬೈಬಲಿನ ಮೂಲಭೂತ ಬೋಧನೆಗಳನ್ನು ಕಲಿಸುವುದಲ್ಲ. ಬದಲಾಗಿ ನಡತೆಯ ಕುರಿತ ಯೆಹೋವನ ಮಟ್ಟಗಳನ್ನು ತಿಳಿಯಲು ಮತ್ತು ಪ್ರೀತಿಸಲು ನಮಗೆ ಸಹಾಯಮಾಡುವುದೇ ಆಗಿದೆ. ಮನೆಮನೆ ಸೇವೆಯಲ್ಲಿ ಈ ಪುಸ್ತಕವನ್ನು ನಾವು ನೀಡುವುದಿಲ್ಲ.
2. “ದೇವರ ಪ್ರೀತಿ” ಪುಸ್ತಕವನ್ನು ಹೇಗೆ ಬಳಸಬೇಕು? ಯಾರೊಂದಿಗೆ ಅಧ್ಯಯನ ಮಾಡಬೇಕು?
2 ಬೈಬಲ್ ಬೋಧಿಸುತ್ತದೆ ಪುಸ್ತಕದ ನಂತರ ನಮ್ಮ ಬೈಬಲ್ ವಿದ್ಯಾರ್ಥಿಗಳೊಂದಿಗೆ ಅಧ್ಯಯನಮಾಡಬೇಕಾದ ಎರಡನೇ ಪುಸ್ತಕ ಇದಾಗಿದೆ. ಎಲ್ಲ ವಿದ್ಯಾರ್ಥಿಗಳು ಒಂದೇ ವೇಗದಲ್ಲಿ ಆಧ್ಯಾತ್ಮಿಕ ಪ್ರಗತಿಮಾಡುವುದಿಲ್ಲ ಎಂಬದನ್ನು ಮನಸ್ಸಿನಲ್ಲಿಡಿ. ವಿದ್ಯಾರ್ಥಿಯ ಸಾಮರ್ಥ್ಯಕ್ಕನುಸಾರ ಎಷ್ಟು ವಿಷಯಭಾಗವನ್ನು ಆವರಿಸಬೇಕೆಂದು ನಿರ್ಧರಿಸಿ. ಅವರಿಗೆ ವಿಷಯವು ಚೆನ್ನಾಗಿ ಅರ್ಥವಾಗಿದೆಯೋ ಎಂದು ಖಚಿತಪಡಿಸಿಕೊಳ್ಳಿ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ, ಈಗಾಗಲೇ ಹಲವಾರು ಪುಸ್ತಕಗಳಿಂದ ಅಧ್ಯಯನಮಾಡಿದ್ದರೂ ಸಭಾ ಕೂಟಗಳಿಗೆ ಹಾಜರಾಗದ ಮತ್ತು ಕಲಿತ ಬೈಬಲ್ ಸತ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಮನಸ್ಸಿಲ್ಲದವರೊಂದಿಗೆ ಈ ಪುಸ್ತಕದಿಂದ ಅಧ್ಯಯನ ಶುರುಮಾಡುವ ಅಗತ್ಯವಿಲ್ಲ.
3. ದೇವರನ್ನು ಆರಾಧಿಸಿರಿ ಪುಸ್ತಕವನ್ನು ವಿದ್ಯಾರ್ಥಿಯೊಂದಿಗೆ ಅಧ್ಯಯನ ಮಾಡುತ್ತಿರುವಲ್ಲಿ ನಾವೇನು ಮಾಡಬೇಕು?
3 ದೇವರನ್ನು ಆರಾಧಿಸಿರಿ ಪುಸ್ತಕವನ್ನು ನೀವೀಗ ವಿದ್ಯಾರ್ಥಿಯೊಂದಿಗೆ ಅಧ್ಯಯನ ಮಾಡುತ್ತಿದ್ದು, ಕೆಲವೇ ಅಧ್ಯಾಯಗಳು ಉಳಿದಿರುವಲ್ಲಿ ಅದನ್ನೇ ಮುಂದುವರಿಸಿ. ಆ ವಿದ್ಯಾರ್ಥಿಗೆ “ದೇವರ ಪ್ರೀತಿ” ಪುಸ್ತಕವನ್ನು ವೈಯಕ್ತಿಕವಾಗಿ ಓದುವಂತೆ ಪ್ರೋತ್ಸಾಹಿಸಿ. ಆದರೆ, ದೇವರನ್ನು ಆರಾಧಿಸಿರಿ ಪುಸ್ತಕದಲ್ಲಿ ಕೆಲವೇ ಅಧ್ಯಾಯಗಳನ್ನು ಮುಗಿಸಿರುವಲ್ಲಿ ಅದನ್ನು ನಿಲ್ಲಿಸಿ ಹೊಸ ಪುಸ್ತಕದ ಮೊದಲನೇ ಅಧ್ಯಾಯದಿಂದ ಶುರುಮಾಡುವುದು ಉತ್ತಮ. ಬೈಬಲ್ ಬೋಧಿಸುತ್ತದೆ ಪುಸ್ತಕದ ಪರಿಶಿಷ್ಟ ಭಾಗದ ವಿಷಯದಲ್ಲಿ ಮಾಡುತ್ತಿದ್ದಂತೆ ಈ ಪುಸ್ತಕದ ಪರಿಶಿಷ್ಟವನ್ನೂ ಅಗತ್ಯವಿದ್ದಲ್ಲಿ ಮಾತ್ರ ಚರ್ಚಿಸಬಹುದು.
4. ಬೈಬಲ್ ಬೋಧಿಸುತ್ತದೆ ಮತ್ತು “ದೇವರ ಪ್ರೀತಿ” ಪುಸ್ತಕಗಳ ಅಧ್ಯಯನ ಮುಗಿಯುವ ಮುಂಚೆ ವಿದ್ಯಾರ್ಥಿ ದೀಕ್ಷಾಸ್ನಾನ ಪಡೆಯುವಲ್ಲಿ ನಾವೇನು ಮಾಡಬೇಕು?
4 ಎರಡೂ ಪುಸ್ತಕಗಳ ಅಧ್ಯಯನ ಮುಗಿಯುವ ಮುಂಚೆಯೇ ವಿದ್ಯಾರ್ಥಿ ದೀಕ್ಷಾಸ್ನಾನ ಪಡೆದುಕೊಂಡರೂ “ದೇವರ ಪ್ರೀತಿ” ಪುಸ್ತಕ ಮುಗಿಯುವ ವರೆಗೆ ಅಧ್ಯಯನ ಮುಂದುವರಿಸಬೇಕು. ಆ ಅಧ್ಯಯನವನ್ನೂ ಸಮಯವನ್ನೂ ಪುನರ್ಭೇಟಿಯನ್ನೂ ನೀವು ವರದಿಸಬಹುದು. ನಿಮ್ಮೊಂದಿಗೆ ಅಧ್ಯಯನದಲ್ಲಿ ಜೊತೆಗೂಡುವ ಮತ್ತು ಭಾಗವಹಿಸುವ ಪ್ರಚಾರಕರು ಸಮಯವನ್ನು ವರದಿಸಬಹುದು.
5. ಸಾರುವ ಕೆಲಸದಲ್ಲಿ ನಿಷ್ಕ್ರಿಯರಾಗಿರುವ ಪ್ರಚಾರಕರಿಗೆ ಸಹಾಯಮಾಡಲು ನಾವು “ದೇವರ ಪ್ರೀತಿ” ಪುಸ್ತಕವನ್ನು ಹೇಗೆ ಬಳಸಬಹುದು?
5 ಸಾರುವ ಕೆಲಸದಲ್ಲಿ ನಿಷ್ಕ್ರಿಯರಾಗಿರುವ ಪ್ರಚಾರಕರೊಂದಿಗೆ ಅಧ್ಯಯನಮಾಡಲು ಸಭಾ ಸೇವಾ ಕಮಿಟಿಯ ಸದಸ್ಯರೊಬ್ಬರು ನಿಮ್ಮನ್ನು ನೇಮಿಸುವಲ್ಲಿ, “ದೇವರ ಪ್ರೀತಿ” ಪುಸ್ತಕದಿಂದ ಆಯ್ದ ಕೆಲವು ಅಧ್ಯಾಯಗಳನ್ನು ಆ ಪ್ರಚಾರಕರೊಂದಿಗೆ ಚರ್ಚಿಸಲು ಅವರು ನಿಮಗೆ ಹೇಳಬಹುದು. ಅಂಥ ಅಧ್ಯಯನಗಳನ್ನು ದೀರ್ಘ ಅವಧಿಯ ವರೆಗೆ ಮಾಡಬೇಕಾಗಿಲ್ಲ. “ದೇವರ ಪ್ರೀತಿಯಲ್ಲಿ” ನಮ್ಮನ್ನು ಕಾಪಾಡಿಕೊಳ್ಳಲು ನಮಗೆ ನೆರವು ನೀಡುವ ಈ ಪುಸ್ತಕ ಒಂದು ಉತ್ತಮ ಸಾಧನವೇ ಸರಿ!—ಯೂದ 21.