ನಮ್ಮ ಆಧ್ಯಾತ್ಮಿಕತೆಯನ್ನು ಕಾಪಾಡಲು ನೆರವಾಗುವ ಸರ್ಕಿಟ್ ಸಮ್ಮೇಳನ
1. ಸುವಾರ್ತೆಯನ್ನು ಹಬ್ಬಿಸುವ ನಮ್ಮ ನಿಯೋಗವನ್ನು ಪೂರೈಸಲು ಯೆಹೋವನು ಮಾಡಿರುವ ಒದಗಿಸುವಿಕೆಗಳಲ್ಲಿ ಒಂದು ಯಾವುದು?
1 ಸುವಾರ್ತೆಯನ್ನು ಹಬ್ಬಿಸುವ ದೈವಿಕ ನಿಯೋಗವನ್ನು ಪೂರೈಸಲು ಬೇಕಾದ ಮಾಹಿತಿ, ತರಬೇತಿ ಮತ್ತು ಪ್ರೋತ್ಸಾಹವನ್ನು ಯೆಹೋವನು ಉದಾರವಾಗಿ ನಮಗೆ ಒದಗಿಸುತ್ತಾನೆ. (ಮತ್ತಾ. 24:14; 2 ತಿಮೊ. 4:17) ನಮ್ಮ ವಾರ್ಷಿಕ ಸರ್ಕಿಟ್ ಸಮ್ಮೇಳನವು ಅಂಥ ಒದಗಿಸುವಿಕೆಗಳಲ್ಲಿ ಒಂದು. 2010ರ ಸೇವಾ ವರ್ಷಕ್ಕಾಗಿರುವ ಹೊಸ ಸರ್ಕಿಟ್ ಸಮ್ಮೇಳನದ ಮುಖ್ಯವಿಷಯವು “ನಿಮ್ಮ ಆಧ್ಯಾತ್ಮಿಕತೆಯನ್ನು ಕಾಪಾಡಿಕೊಳ್ಳಿರಿ” ಎಂದಾಗಿದೆ. ಇದು, ರೋಮನ್ನರಿಗೆ 8:5 ಮತ್ತು ಯೂದ 17-19ರ ಮೇಲೆ ಆಧಾರಿತವಾಗಿದೆ. ಸಮ್ಮೇಳನವು 2009ರ ನವೆಂಬರ್ನಿಂದ ಆರಂಭವಾಗಲಿದೆ.
2. (ಎ) ಸರ್ಕಿಟ್ ಸಮ್ಮೇಳನವು ಯಾವ ರೀತಿಯಲ್ಲಿ ನಮಗೆ ಪ್ರಯೋಜನಕರವಾಗಿರುವುದು? (ಬಿ) ಹಿಂದಿನ ಸರ್ಕಿಟ್ ಸಮ್ಮೇಳನಗಳು ನಿಮಗೆ ಶುಶ್ರೂಷೆಯಲ್ಲಿ ಹೇಗೆ ಸಹಾಯಮಾಡಿವೆ?
2 ಹೇಗೆ ಪ್ರಯೋಜನಕರ?: ನಮ್ಮ ಸಮಯವನ್ನು ಅಪಹರಿಸುವ ಹಾಗೂ ಪ್ರಾಮುಖ್ಯವಾದ ವಿಷಯಗಳಿಂದ ನಮ್ಮ ಗಮನವನ್ನು ತಿರುಗಿಸುವ ಅಪಕರ್ಷಣೆಗಳಂಥ ಅಪಾಯಗಳ ಕುರಿತು ಕಾರ್ಯಕ್ರಮವು ಎಚ್ಚರಿಸುವುದು. ಅಲ್ಲದೆ, ಸ್ವೇಚ್ಛಾಪ್ರವೃತ್ತಿಯನ್ನು ಎದುರಿಸುವುದು ಹೇಗೆಂದು ನಾವು ಕಲಿಯುವೆವು ಹಾಗೂ ಆಧ್ಯಾತ್ಮಿಕ ವ್ಯಕ್ತಿಯಲ್ಲಿರುವ ಗುಣಲಕ್ಷಣಗಳನ್ನು ಚರ್ಚಿಸಲಿರುವೆವು. ನಂಬಿಕೆಯ ಗಂಭೀರ ಪರೀಕ್ಷೆಯ ಮಧ್ಯೆ ಹಾಗೂ ಅಧಿಕವಾಗುತ್ತಿರುವ ಒತ್ತಡಗಳ ಎದುರಲ್ಲಿ ತಮ್ಮ ಆಧ್ಯಾತ್ಮಿಕತೆಯನ್ನು ಬಲಪಡಿಸಲು ಪ್ರತಿಯೊಬ್ಬನು ಮತ್ತು ಕುಟುಂಬಗಳು ಯಾವ ಹೆಜ್ಜೆಗಳನ್ನು ತಕ್ಕೊಳ್ಳಬಹುದೆಂದು ಭಾನುವಾರದ ಭಾಷಣಮಾಲೆಯು ತೋರಿಸುವುದು. ಈ ಕಾರ್ಯಕ್ರಮವು ನಮ್ಮ ಹೃದಯಗಳನ್ನೂ ನಮ್ಮ ಆಧ್ಯಾತ್ಮಿಕ ಆರೋಗ್ಯವನ್ನೂ ಕಾಪಾಡಿಕೊಳ್ಳಲು ನೆರವಾಗುತ್ತದೆ. ಹಾಗೂ ಆಧ್ಯಾತ್ಮಿಕತೆಯನ್ನು ಕಾಪಾಡಿಕೊಳ್ಳುವವರಿಗಾಗಿ ಇರುವ ಮಹಾ ಆಶೀರ್ವಾದಗಳನ್ನು ಸದಾ ಮನಸ್ಸಿನಲ್ಲಿಡಲು ನಮಗೆ ಸಹಾಯಮಾಡುವುದು.
3. ಮುಂದಿನ ನಿಮ್ಮ ಸರ್ಕಿಟ್ ಸಮ್ಮೇಳನ ಯಾವಾಗ ನಡೆಯಲಿದೆ ಮತ್ತು ನಿಮ್ಮ ದೃಢನಿರ್ಣಯ ಏನಾಗಿರಬೇಕು?
3 ಮುಂದಿನ ಸರ್ಕಿಟ್ ಸಮ್ಮೇಳನವು ಎಲ್ಲಿ ಮತ್ತು ಯಾವಾಗ ನಡೆಯಲಿದೆ ಎಂಬುದು ನಿಮಗೆ ತಿಳಿದೊಡನೆ, ಎರಡೂ ದಿನಗಳಿಗೆ ಹಾಜರಾಗಿ ಎಲ್ಲಾ ಸೆಷನ್ಗಳಿಗೆ ಕಿವಿಗೊಡಲು ಯೋಜನೆಗಳನ್ನು ಮಾಡಿರಿ. ಶ್ರಮವಹಿಸಿ ಪ್ರಯತ್ನ ಮಾಡುವವರನ್ನು ಯೆಹೋವನು ಆಶೀರ್ವದಿಸುವನೆಂಬ ಆಶ್ವಾಸನೆ ನಿಮಗಿರಲಿ.—ಜ್ಞಾನೋ. 21:5.
4. ಬರಲಿರುವ ಸರ್ಕಿಟ್ ಸಮ್ಮೇಳನದಲ್ಲಿ ನಮಗೆ ಏನೆಲ್ಲಾ ದೊರೆಯುವ ನಿಶ್ಚಯತೆ ಇದೆ?
4 ಈ ಸುವರದ ದಾತನು ಯೆಹೋವನು ತಾನೇ ನಿಶ್ಚಯ. ಕ್ರೈಸ್ತ ಶುಶ್ರೂಷಕರಾಗಿ ಮುಂದುವರಿಯಲು ನಮಗೆ ಅತ್ಯಾವಶ್ಯಕವಾಗಿ ಬೇಕಾದ ವಿಷಯವು ನಂಬಿಗಸ್ತ ಆಳು ವರ್ಗದಿಂದ ತಯಾರಿಸಲ್ಪಟ್ಟ ಈ ಕಾರ್ಯಕ್ರಮವೇ. ‘ವಿಚಲಿತರಾಗದೆ ನಮ್ಮ ನಿರೀಕ್ಷೆಯ ಬಹಿರಂಗ ಅರಿಕೆಯನ್ನು ದೃಢವಾಗಿ ಹಿಡಿದುಕೊಳ್ಳಲು’ ಈ ಸಮ್ಮೇಳನ ನೆರವು ನೀಡುತ್ತದೆ. ಯೆಹೋವನ ಪ್ರೀತಿಯ ಈ ಎಲ್ಲಾ ಒದಗಿಸುವಿಕೆಗಳಿಗಾಗಿ ಆತನಿಗೆ ನಾವು ಕೃತಜ್ಞರು.—ಇಬ್ರಿ. 10:23-25; ಯಾಕೋ. 1:17.