ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಜುಲೈ-ಸೆಪ್ಟೆಂಬರ್
“ಜೀವನದಲ್ಲಿ ನಡೆಯುವ ಎಲ್ಲವನ್ನೂ ದೇವರು ಮುಂಚೆಯೇ ನಿರ್ಣಯಿಸಿರುತ್ತಾನೆ ಎಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಪ್ರೀತಿಸ್ವರೂಪಿಯೂ ನ್ಯಾಯವಂತನೂ ಆದ ನಮ್ಮ ನಿರ್ಮಾಣಿಕನು ಹಾಗೆ ಮಾಡುವನೋ? [ಮನೆಯವನಿಗೆ ಮಾತಾಡಲು ಆಸಕ್ತಿಯಿರುವುದಾದರೆ ಪ್ರಸಂಗಿ 9:11 ಓದಿ.] ದೇವರು ಈ ಭೂಮಿಗಾಗಿ ಒಂದು ಭವ್ಯ ಭವಿಷ್ಯತ್ತನ್ನು ಮುಂಚಿತವಾಗಿ ನಿರ್ಣಯಿಸಿರುತ್ತಾನಾದರೂ, ಪ್ರತಿಯೊಬ್ಬನು ತನ್ನ ಸ್ವಂತ ಜೀವನಕ್ರಮವನ್ನು ತಾನೇ ಆರಿಸುವಂತೆ ಆತನು ಅನುಮತಿಸುತ್ತಾನೆ ಎಂದು ಈ ಪತ್ರಿಕೆ ವಿವರಿಸುತ್ತದೆ.”
ಎಚ್ಚರ! ಜುಲೈ-ಸೆಪ್ಟೆಂಬರ್
“ದಾಂಪತ್ಯದ್ರೋಹದ ಕಾರಣ ಅನೇಕ ವಿವಾಹಗಳು ವಿಫಲಗೊಳ್ಳುತ್ತವೆ. ವಿವಾಹಗಳು ಸಫಲಗೊಳ್ಳುವಂತೆ ನೆರವಾಗುವ ಕೆಲವು ಪ್ರಾಚೀನ ಸಲಹೆಗಳನ್ನು ನಿಮಗೆ ಆಸಕ್ತಿಯಿದ್ದಲ್ಲಿ ನಾನು ತೋರಿಸಬಲ್ಲೆ. [ಮನೆಯವನಿಗೆ ಮಾತಾಡಲು ಆಸಕ್ತಿಯಿದ್ದಲ್ಲಿ ಮತ್ತಾಯ 5:28 ಓದಿ.] ದಾಂಪತ್ಯದ್ರೋಹದ ಪಾಶವನ್ನು ದಂಪತಿಗಳು ವರ್ಜಿಸಲು ಸಹಾಯಕ್ಕಾಗಿ ಬೈಬಲ್ ಸಲಹೆಗಳನ್ನು ಈ ಲೇಖನವು ಕೊಡುತ್ತದೆ.” ಪುಟ 18ರಿಂದ ಆರಂಭಿಸುವ ಲೇಖನವನ್ನು ತೋರಿಸಿರಿ.