ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಏಪ್ರಿಲ್-ಜೂನ್
“ದೇವರು ಎಲ್ಲರ ಪ್ರಾರ್ಥನೆಗಳನ್ನು ಕೇಳುತ್ತಾನೆಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ನಮ್ಮ ಪ್ರಾರ್ಥನೆಗಳು ಏಕೆ ಹೃತ್ಪೂರ್ವಕವಾಗಿರಬೇಕು ಎಂಬುದಕ್ಕೆ ಒಂದು ಒಳ್ಳೇ ಸಲಹೆಯನ್ನು ನಿಮಗೆ ತೋರಿಸಲೋ? [ಮನೆಯವನಿಗೆ ಆಸಕ್ತಿಯಿದೆ ಎಂದು ತೋರುವಲ್ಲಿ ಮತ್ತಾಯ 6:7 ಓದಿ.] ಈ ಆಸಕ್ತಿಕರ ಲೇಖನವು, ಪ್ರಾರ್ಥನೆಯ ಕುರಿತು ಆಗಾಗ್ಗೆ ಕೇಳಲಾಗುವ ನಾಲ್ಕು ಪ್ರಶ್ನೆಗಳಿಗೆ ಶಾಸ್ತ್ರೀಯ ಉತ್ತರವನ್ನು ಕೊಡುತ್ತದೆ.” ಪುಟ 16ರಲ್ಲಿರುವ ಲೇಖನ ತೋರಿಸಿರಿ.
ಎಚ್ಚರ! ಏಪ್ರಿಲ್-ಜೂನ್
“ಒಳ್ಳೇ ಸ್ನೇಹಿತರು ಇರಬೇಕೆಂದು ನಾವೆಲ್ಲರೂ ಬಯಸುತ್ತೇವೆ. ಸ್ನೇಹಿತರೊಬ್ಬರಲ್ಲಿ ಯಾವ ಯಾವ ಗುಣಗಳಿರಬೇಕೆಂದು ನೀವು ಇಷ್ಟಪಡುತ್ತೀರಿ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಪ್ರಾಚೀನ ಗ್ರಂಥದಲ್ಲಿರುವ ಈ ಮಾತುಗಳನ್ನು ಗಮನಿಸಿ. [ಮನೆಯವನಿಗೆ ಆಸಕ್ತಿಯಿರುವುದಾದರೆ ಜ್ಞಾನೋಕ್ತಿ 17:17 ಓದಿ.] ಈ ಲೇಖನದಲ್ಲಿ, ಒಳ್ಳೇ ಸ್ನೇಹಿತರನ್ನು ಆರಿಸಲು ಮತ್ತು ಸ್ವತಃ ಒಳ್ಳೇ ಸ್ನೇಹಿತರಾಗಿರಲು ಉತ್ತಮ ಸಲಹೆಗಳು ಇವೆ.” ಪುಟ 22ರಲ್ಲಿ ಆರಂಭವಾಗುವ ಲೇಖನವನ್ನು ತೋರಿಸಿರಿ.
ಕಾವಲಿನಬುರುಜು ಜುಲೈ-ಸೆಪ್ಟೆಂಬರ್
“ಸ್ವಚ್ಛ ಪರಿಸರದಲ್ಲಿ ಜೀವಿಸಲು ಪ್ರತಿಯೊಬ್ಬರು ಬಯಸುತ್ತಾರೆ. ತನ್ನ ಆರಾಧಕರು ಶುದ್ಧರಾಗಿರಬೇಕೆಂದು ದೇವರು ಸಹ ಬಯಸುತ್ತಾನೆಂದು ನಿಮಗೆ ತಿಳಿದಿದೆಯೋ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಈ ಕುರಿತು ಆತನು ಏನು ತಿಳಿಸಿದ್ದಾನೆಂದು ನಿಮಗೆ ತೋರಿಸಲೋ? [ಮನೆಯವನು ಒಪ್ಪುವಲ್ಲಿ 1 ಪೇತ್ರ 1:16 ಓದಿ. ಬಳಿಕ ಪುಟ 9ರಲ್ಲಿರುವ ಲೇಖನ ತೋರಿಸಿ.] ಈ ಲೇಖನವು, ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ನಾವು ತೆಗೆದುಕೊಳ್ಳಬೇಕಾದ ವ್ಯಾವಹಾರಿಕ ಹೆಜ್ಜೆಗಳನ್ನು ವಿವರಿಸುತ್ತದೆ.”
ಎಚ್ಚರ! ಜುಲೈ-ಸೆಪ್ಟೆಂಬರ್
“ಶಾಲೆಗೆ ಹೋಗುವ ಅನೇಕ ಮಕ್ಕಳು ಒತ್ತಡಕ್ಕೆ ಒಳಗಾಗಿದ್ದಾರೆ. ಅವರ ಹೆತ್ತವರು ಶಾಲೆಯಲ್ಲಿದ್ದ ಕಾಲಕ್ಕೂ ಇಂದಿಗೂ ವಿಷಯಗಳು ತುಂಬ ಬದಲಾಗಿವೆಯೆಂದು ನೀವೆಣಿಸುತ್ತೀರೋ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಅತಿರೇಕ ಒತ್ತಡವು ಮಕ್ಕಳ ಮೇಲೆ ಕೆಟ್ಟ ಪರಿಣಾಮಬೀರುತ್ತದೆ. ಈ ವಿಷಯದಲ್ಲಿ ಒಂದು ಗ್ರಂಥವು ಏನು ಹೇಳುತ್ತದೆಂದು ನಿಮಗೆ ತೋರಿಸಲೋ? [ಸಂಭಾಷಣೆ ಮುಂದುವರಿಸಲು ಮನೆಯವನಿಗೆ ಆಸಕ್ತಿಯಿದ್ದರೆ ಪ್ರಸಂಗಿ 12:12 ಓದಿ.] ಈ ಸಮಸ್ಯೆಯನ್ನು ಎದುರಿಸಲು ದೊಡ್ಡವರು ಮಕ್ಕಳಿಗೆ ಹೇಗೆ ಸಹಾಯ ಮಾಡಬಹುದೆಂದು ಈ ಪತ್ರಿಕೆಯು ತಿಳಿಸುತ್ತದೆ.”