ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಜುಲೈ-ಸೆಪ್ಟೆಂಬರ್
“ಜೀವನದಲ್ಲಿ ಸಮಸ್ಯೆ, ಸವಾಲುಗಳು ಎಲ್ಲರಿಗೂ ಇದ್ದದ್ದೇ. [ನಿಮ್ಮ ಟೆರಿಟೊರಿಯಲ್ಲಿ ಸಾಮಾನ್ಯವಾಗಿರುವ ಕೆಲವು ಸಮಸ್ಯೆಗಳನ್ನು ತಿಳಿಸಿ.] ಇವುಗಳನ್ನು ನಿಭಾಯಿಸಲು ದೇವರು ನಮಗೆ ಸಹಾಯ ಮಾಡಬಹುದೊ? [ಪ್ರತಿಕ್ರಿಯೆಗೆ ಅವಕಾಶಕೊಡಿ. ಮನೆಯವರಿಗೆ ಇನ್ನೂ ಮಾತಾಡಲು ಮತ್ತು ಒಂದು ವಚನ ನೋಡಲು ಇಷ್ಟವಿರುವಲ್ಲಿ ಮಾತು ಮುಂದುವರಿಸಿ.] ದೇವರು ನಮಗೆ ಬಲಕೊಡುವ, ಸಹಾಯಮಾಡುವ ಒಂದು ವಿಧ ಇದಾಗಿದೆ. [ಲೂಕ 11:13 ಓದಿ.] ಪವಿತ್ರಾತ್ಮ ಎಂದರೇನು ಮತ್ತು ಅದು ನಮಗೆ ಹೇಗೆ ಸಹಾಯ ಮಾಡುತ್ತದೆಂದು ಈ ಲೇಖನ ತಿಳಿಸುತ್ತದೆ.”
ಎಚ್ಚರ! ಜುಲೈ-ಸೆಪ್ಟೆಂಬರ್
“ಸಾಮಾನ್ಯವಾಗಿ ಯುವಜನರಿಗೆ ಸ್ವಲ್ಪ ಏಕಾಂತ ಬೇಕನಿಸುತ್ತದೆ. ನೀವೇನು ನೆನಸುತ್ತೀರಿ, ಯುವಜನರೂ ಅವರ ಹೆತ್ತವರೂ ಈ ವಿಷಯದಲ್ಲಿ ಹೇಗೆ ಸಮತೋಲನ ಕಾಯ್ದುಕೊಳ್ಳಬಹುದು? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಹೆತ್ತವರೂ ಮಕ್ಕಳೂ ಮನಸ್ಸಿನಲ್ಲಿಡಬೇಕಾದ ಒಂದು ವಿಷಯವನ್ನು ದೇವರು ತಿಳಿಸಿದ್ದಾನೆ. ಅದನ್ನು ನಿಮಗೆ ತೋರಿಸಲಾ? [ಮನೆಯವನು ಒಪ್ಪುವಲ್ಲಿ ಎಫೆಸ 6:4 ಓದಿ.] ಈ ಲೇಖನ, ಏಕಾಂತದ ವಿಷಯದಲ್ಲಿ ಹೆತ್ತವರಿಗೆ ಮತ್ತು ಮಕ್ಕಳಿಗೆ ಪ್ರಾಯೋಗಿಕ ಸಲಹೆಗಳನ್ನು ಕೊಡುತ್ತದೆ.”
ಕಾವಲಿನಬುರುಜು ಅಕ್ಟೋಬರ್-ಡಿಸೆಂಬರ್
“ಜಗತ್ತಿನಲ್ಲಿ ಯಾಕಿಷ್ಟು ಕಷ್ಟಗಳಿವೆ ಎಂದು ಯಾವತ್ತಾದರೂ ಯೋಚಿಸಿದ್ದೀರಾ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಇಂದು ಅನೇಕರ ಮನಸ್ಸಿನಲ್ಲಿ ಏಳುವ ಪ್ರಶ್ನೆಯೇ ಹಿಂದೆ ಒಬ್ಬ ವ್ಯಕ್ತಿಗೆ ಬಂದಿತ್ತು. ಅದನ್ನು ನಿಮಗೆ ಓದಿ ಹೇಳಲಾ? [ಮನೆಯವರಿಗೆ ಆಸಕ್ತಿಯಿರುವಲ್ಲಿ ಕೀರ್ತನೆ 10:1 ಓದಿ.] ಈ ಪತ್ರಿಕೆಯು, ದೇವರು ಯಾಕೆ ಈ ಕಷ್ಟಗಳನ್ನು ಹೀಗೆ ಬಿಟ್ಟಿದ್ದಾನೆ, ಕಷ್ಟಗಳನ್ನು ಪರಿಹರಿಸಲು ಏನು ಮಾಡಲಿಕ್ಕಿದ್ದಾನೆ ಎಂಬದರ ಬಗ್ಗೆ ಶಾಸ್ತ್ರಗ್ರಂಥ ಹೇಳುವ ವಿಷಯಗಳನ್ನು ತಿಳಿಸುತ್ತದೆ.”
ಎಚ್ಚರ! ಅಕ್ಟೋಬರ್-ಡಿಸೆಂಬರ್
“ಜಗತ್ತಿನ ಆರ್ಥಿಕ ಪರಿಸ್ಥಿತಿ ಬೇಗನೆ ಸುಧಾರಿಸಬಹುದೆಂದು ನೀವೆಣಿಸುತ್ತೀರಾ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಇಂಥ ಇಕ್ಕಟ್ಟಿನ ಸಮಯಗಳಲ್ಲಿ ದೇವರ ಮಾರ್ಗದರ್ಶನ ಹೇಗೆ ನೆರವಾಗಬಲ್ಲದೆಂದು ಅನೇಕರಿಗೆ ಇಂದು ತಿಳಿದಿಲ್ಲ. [ಮನೆಯವನಿಗೆ ಆಸಕ್ತಿಯಿದ್ದಲ್ಲಿ ಲೇಖನದಲ್ಲಿರುವ ವಚನವೊಂದನ್ನು ಓದಿ.] ಆರ್ಥಿಕ ಅಸ್ಥಿರತೆಯ ಸಮಯದಲ್ಲಿ ನಮ್ಮ ನಿರ್ಮಾಣಿಕನ ಸಲಹೆಗಳನ್ನು ಪಾಲಿಸುವುದು ಹೇಗೆ ನಮಗೆ ನೆರವಾಗಬಲ್ಲದು ಎಂಬುದನ್ನು ಈ ಲೇಖನ ತಿಳಿಸುತ್ತದೆ.” ಪುಟ 20ರಲ್ಲಿರುವ ಲೇಖನ ತೋರಿಸಿ.