‘ದೇವರ ಚಿತ್ತವು ನೆರವೇರಲಿ’
1. ಮುಂದಿನ ವಿಶೇಷ ಸಮ್ಮೇಳನ ದಿನದ ಮುಖ್ಯವಿಷಯ ಯಾವುದು? ಈ ವಿಷಯವನ್ನು ನಾವು ಪರಿಗಣಿಸುವುದು ತಕ್ಕದ್ದಾಗಿದೆ ಏಕೆ?
1 ಯೆಹೋವನ ಚಿತ್ತದ ನಿಮಿತ್ತವೇ ನಾವು ಸೃಷ್ಟಿಸಲ್ಪಟ್ಟಿದ್ದೇವೆ. (ಪ್ರಕ. 4:11) ಆದಕಾರಣ, ದೇವರ ಚಿತ್ತವನ್ನು ಕಲಿಯದ ಹಾಗೂ ಮಾಡದ ಹೊರತು ನಮ್ಮ ಜೀವನದ ಉದ್ದೇಶವನ್ನು ಪೂರೈಸುವುದು ಅಸಾಧ್ಯ. ಇದು ಅಷ್ಟೇನೂ ಸುಲಭವಲ್ಲ. ಏಕೆಂದರೆ “ಶರೀರ ಮತ್ತು ಆಲೋಚನೆಗಳು ಬಯಸುವಂಥ ವಿಷಯಗಳನ್ನು” ಇಲ್ಲವೇ “ಅನ್ಯಜನಾಂಗಗಳ ಇಚ್ಛೆಗಳನ್ನು” ಮಾಡುವ ಪ್ರವೃತ್ತಿ ನಮ್ಮೊಳಗಿದೆ. ಅದರೊಂದಿಗೆ ನಾವು ಹೋರಾಡಬೇಕಾಗಿದೆ. (ಎಫೆ. 2:3; 1 ಪೇತ್ರ 4:3; 2 ಪೇತ್ರ 2:10) ನಮಗೆ ದೇವರ ಸಹಾಯವಿಲ್ಲದಿದ್ದರೆ, ‘ನಮ್ಮನ್ನು ಪಿಶಾಚನು ತನ್ನ ಚಿತ್ತಕ್ಕಾಗಿ ಸಜೀವವಾಗಿ ಹಿಡಿದುಬಿಡುವ’ ಅಪಾಯವೂ ಇದೆ. (2 ತಿಮೊ. 2:26) 2012ರ ಸೇವಾ ವರ್ಷದ ವಿಶೇಷ ಸಮ್ಮೇಳನ ದಿನ ಕಾರ್ಯಕ್ರಮವು, ಮಾದರಿ ಪ್ರಾರ್ಥನೆಯಲ್ಲಿನ ಮೂರನೇ ಮುಖ್ಯ ಬೇಡಿಕೆಗೆ ಅನುಸಾರವಾಗಿ ಕ್ರಿಯೆಗೈಯುವಂತೆ ನಮಗೆಲ್ಲರಿಗೂ ಸಹಾಯ ಮಾಡುವುದು. (ಮತ್ತಾ. 6:9, 10) ಸಮ್ಮೇಳನದ ಮುಖ್ಯವಿಷಯವು ‘ದೇವರ ಚಿತ್ತವು ನೆರವೇರಲಿ’ ಎಂದಾಗಿದೆ.
2. ಕಾರ್ಯಕ್ರಮದಲ್ಲಿ ಯಾವ ಪ್ರಶ್ನೆಗಳನ್ನು ಉತ್ತರಿಸಲಾಗುವುದು?
2 ಉತ್ತರಿಸಲ್ಪಡುವ ಪ್ರಶ್ನೆಗಳು: ಕಾರ್ಯಕ್ರಮಕ್ಕೆ ಕಿವಿಗೊಡುತ್ತಿರುವಾಗ ಮುಂದಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿ: ದೇವರ ವಾಕ್ಯವನ್ನು ಕೇಳಿಸಿಕೊಳ್ಳುವುದಕ್ಕಿಂತ ಯಾವುದು ಹೆಚ್ಚು ಮಹತ್ವದ್ದು? ನಮಗಾಗಿ ದೇವರ ಚಿತ್ತವೇನೆಂಬದನ್ನು ಹೇಗೆ ಗ್ರಹಿಸಬಲ್ಲೆವು? ಎಲ್ಲ ರೀತಿಯ ಜನರಿಗೆ ಸಾರಲು ನಾವೇಕೆ ಸಿದ್ಧಮನಸ್ಕರಾಗಿರಬೇಕು? ಸಮೃದ್ಧ, ತೃಪ್ತಿಕರ ಜೀವನವನ್ನು ನೀವು ಹೇಗೆ ಕಂಡುಕೊಳ್ಳಸಾಧ್ಯ? ಯುವ ಜನರೇ, ನೀವು ಯೆಹೋವನಿಗೆ ಯಾವುದರ ರುಜುವಾತು ಕೊಡಬೇಕು? ದೇವರ ಚಿತ್ತ ಮಾಡುವುದರಿಂದ ದೊರೆಯುವ ಪ್ರತಿಫಲಗಳಾವವು? ನಾವು ಒಬ್ಬರಿನ್ನೊಬ್ಬರ ಭಕ್ತಿವೃದ್ಧಿ ಮಾಡುವುದು, ಪ್ರೋತ್ಸಾಹಿಸುವುದು ತುರ್ತಿನದ್ದೇಕೆ?
3. ಈ ಆಧ್ಯಾತ್ಮಿಕ ಒದಗಿಸುವಿಕೆಯಿಂದ ನಾವು ಪೂರ್ಣವಾಗಿ ಹೇಗೆ ಪ್ರಯೋಜನ ಪಡೆಯಬಹುದು?
3 ತಪ್ಪದೇ ಹಾಜರಾಗಿ. ಕಾರ್ಯಕ್ರಮಕ್ಕೆ ತದೇಕಚಿತ್ತದಿಂದ ಕಿವಿಗೊಡಿ. ಬೆತೆಲ್ ಪ್ರತಿನಿಧಿ ಇಲ್ಲವೇ ಸಂಚರಣ ಮೇಲ್ವಿಚಾರಕರಲ್ಲಿ ಒಬ್ಬರು ಸಂದರ್ಶಕ ಭಾಷಣಕಾರರಾಗಿ ಬರುವರು. ಕಾರ್ಯಕ್ರಮದ ಮುಂಚೆ ಮತ್ತು ನಂತರ ಅವರೊಂದಿಗೂ, ವಿವಾಹಿತರಾಗಿದ್ದಲ್ಲಿ ಅವರ ಪತ್ನಿಯೊಂದಿಗೂ ಮಾತಾಡಲು ಹಿಂಜರಿಯಬೇಡಿ. ಮನೆಗೆ ಹಿಂದಿರುಗಿದಾಗ ‘ಕೇಳಿಸಿಕೊಂಡು ಮರೆತುಹೋಗುವವರಾಗಿರದೆ’ ಕಾರ್ಯಕ್ರಮವನ್ನು ಕುಟುಂಬವಾಗಿ ಪುನರವಲೋಕಿಸಿ, ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿ ಹೆಚ್ಚು ಪೂರ್ಣವಾಗಿ ನೀವು ಹೇಗೆ ಕ್ರಿಯೆಗೈಯಬಹುದೆಂಬುದನ್ನು ಚರ್ಚಿಸಿ.—ಯಾಕೋ. 1:25.
4. ದೇವರ ಚಿತ್ತ ಮಾಡುವುದನ್ನು ನಮ್ಮ ಆದ್ಯತೆಯಾಗಿ ಮಾಡಿಕೊಳ್ಳುವುದು ಪ್ರಾಮುಖ್ಯವೇಕೆ?
4 ತಮ್ಮ ಸ್ವಂತ ಇಚ್ಛೆಗನುಸಾರ ನಡೆಯುವವರು ಮತ್ತು ಯೆಹೋವನ ಚಿತ್ತಕ್ಕೆ ಅಧೀನರಾಗಲು ನಿರಾಕರಿಸುವ ಎಲ್ಲರೂ ಬೇಗನೆ ನಾಶವಾಗಲಿರುವರು. (1 ಯೋಹಾ. 2:17) ಆದ್ದರಿಂದ ದೇವರ ಚಿತ್ತ ಮಾಡುವುದನ್ನು ನಮ್ಮ ಆದ್ಯತೆಯಾಗಿ ಮಾಡಿಕೊಳ್ಳುವಂತೆ ಯೆಹೋವನು ಈ ಸಮಯೋಚಿತ ಮಾಹಿತಿಯನ್ನು ತಯಾರಿಸಿರುವುದಕ್ಕಾಗಿ ನಾವೆಷ್ಟು ಕೃತಜ್ಞರು!