ಬೈಬಲ್—ಅದರಲ್ಲಿ ಏನಿದೆ? ಬ್ರೋಷರನ್ನು ಬಳಸುವ ಒಂದು ವಿಧ
ನಮ್ಮ ಟೆರಿಟೊರಿಯಲ್ಲಿರುವ ಅನೇಕರಿಗೆ ವಿಶೇಷವಾಗಿ ಕ್ರೈಸ್ತರಲ್ಲದವರಿಗೆ ಬೈಬಲಿನ ಬಗ್ಗೆ ಗೊತ್ತಿಲ್ಲ. ಇಂಥವರೊಂದಿಗೆ ಬೈಬಲ್ ಬೋಧಿಸುತ್ತದೆ ಪುಸ್ತಕದ ಅಧ್ಯಯನ ಮಾಡುವಾಗ, ಅವರಿಗೆ ಬೈಬಲಿನ ಬಗ್ಗೆ ಸ್ಥೂಲ ಮಾಹಿತಿ ಸಿಗುವಂತೆ ಕೆಲವು ಪ್ರಚಾರಕರು ಬೈಬಲ್—ಅದರಲ್ಲಿ ಏನಿದೆ? ಎಂಬ ಬ್ರೋಷರನ್ನು ಬಳಸಿದ್ದಾರೆ. ಉದಾಹರಣೆಗೆ, ಒಬ್ಬ ಸಹೋದರನು ಬೈಬಲ್ ಬೋಧಿಸುತ್ತದೆ ಪುಸ್ತಕದ 3ನೇ ಅಧ್ಯಾಯವನ್ನು ಚರ್ಚಿಸುವಾಗ, ಬ್ರೋಷರಿನ 1ನೇ ವಿಭಾಗವನ್ನು ವಿದ್ಯಾರ್ಥಿಗೆ ಪರಿಚಯಿಸುತ್ತಾನೆ. ಹೀಗೆ ಪ್ರತಿಯೊಂದು ಅಧ್ಯಯನದ ಕೊನೆಯಲ್ಲಿ ಒಂದೊಂದು ವಿಭಾಗವನ್ನು ಚರ್ಚಿಸುತ್ತಾನೆ. ಬೈಬಲಿನ ಬಗ್ಗೆ ಅಲ್ಪಸ್ವಲ್ಪ ತಿಳಿದಿರುವ ಇಲ್ಲವೆ ಏನೂ ತಿಳಿಯದವರೊಂದಿಗೆ ನೀವು ಅಧ್ಯಯನ ಮಾಡುತ್ತಿದ್ದೀರೊ? ‘ರಕ್ಷಣೆಗಾಗಿ ವಿವೇಕಿಯನ್ನಾಗಿ ಮಾಡಬಲ್ಲ ಪವಿತ್ರ ಬರಹಗಳನ್ನು’ ಕಲಿಯುವಂತೆ ಅವರಿಗೆ ನೆರವಾಗಲು ಬೈಬಲ್ ಬೋಧಿಸುತ್ತದೆ ಪುಸ್ತಕದ ಜತೆಗೆ ಬೈಬಲ್—ಅದರಲ್ಲಿ ಏನಿದೆ? ಎಂಬ ಬ್ರೋಷರಿನಲ್ಲಿರುವ ವಿಷಯವನ್ನೂ ಸೇರಿಸಿರಿ.—2 ತಿಮೊ. 3:15.