ರಾಜ್ಯ ಗೀತೆಯನ್ನು ಆನಂದಿಸುವ ಒಳ್ಳೇ ವಿಧಾನ
ದೇವಜನರು ಸಂಗೀತವನ್ನು ಯೆಹೋವನು ಒದಗಿಸಿದ ಉಡುಗೊರೆಯಾಗಿ ವೀಕ್ಷಿಸುತ್ತಾರೆ. (ಯಾಕೋ. 1:17) ಹಲವು ಸಭೆಗಳಲ್ಲಿ ಕೂಟಗಳು ಆರಂಭವಾಗುವ ಮುನ್ನ ಹಾಗೂ ನಂತರ ಮೆಲುದನಿಯಲ್ಲಿ ರಾಜ್ಯ ಗೀತೆಯನ್ನು ಹಾಕುತ್ತಾರೆ. ದೇವಪ್ರಭುತ್ವಾತ್ಮಕ ಗೀತೆಗಳ ಸುಮಧುರ ರಾಗ ನಮ್ಮನ್ನು ಕೂಟಗಳಿಗೆ ಸ್ವಾಗತಿಸುತ್ತಾ ಮನಸ್ಸಿಗೆ ಮುದ ನೀಡುತ್ತದೆ. ಆರಾಧನೆಗಾಗಿ ನಮ್ಮ ಹೃದಮನಗಳನ್ನು ಸಿದ್ಧಪಡಿಸುತ್ತದೆ. ಗೀತೆ ಪುಸ್ತಕದ ಹೊಸ ಗೀತೆಗಳ ವಾದ್ಯಸಂಗೀತವನ್ನು ಹಾಕುವಾಗ ಅವು ನಮ್ಮ ಮನಸ್ಸಿನಲ್ಲಿ ಇಳಿದು ಶ್ರುತಿಗೆ ತಕ್ಕಂತೆ ಹಾಡಲು ಸಹಾಯವಾಗುತ್ತದೆ. ಕೂಟಗಳ ನಂತರ ಪರಸ್ಪರ ಉತ್ತೇಜನ ಭಕ್ತಿವೃದ್ಧಿ ಮಾಡುವಂಥ ಒಡನಾಟಕ್ಕೆ ಈ ಸಂಗೀತ ಇಂಪಾದ ಹಿನ್ನೆಲೆ ನೀಡುತ್ತದೆ. ಕೂಟಕ್ಕೆ ಮುನ್ನ ಹಾಗೂ ಕೂಟದ ನಂತರ ಸಿಂಗ್ ಟು ಜೆಹೋವ—ಪಿಆ್ಯನೋ ಅಕಂಪನಿಮಂಟ್ ಹಾಕುವುದಕ್ಕೆ ಹಿರಿಯರ ಮಂಡಲಿ ಏರ್ಪಾಡು ಮಾಡಬೇಕು. ನಮ್ಮ ಸಂಘಟನೆ ಒದಗಿಸಿರುವ ಗೀತೆಗಳ ರೆಕಾರ್ಡಿಂಗ್ಗಳನ್ನು ಮಾತ್ರ ಹಾಕಬೇಕು. ಹಾಗೂ ಅದು ಸಂಭಾಷಣೆಗೆ ಅಡಚಣೆ ಆಗುವಷ್ಟು ಗಟ್ಟಿಯಾಗಿ ಇರದಂತೆ ಹಿರಿಯರು ನೋಡಿಕೊಳ್ಳಬೇಕು.