ಸಂಜೆ ಸಾಕ್ಷಿಕಾರ್ಯದಲ್ಲಿ ಭಾಗವಹಿಸ್ತಿರಾ?
1. ಮನೆಮನೆ ಸೇವೆ ಮಾಡಲು ಅಪೊಸ್ತಲ ಪೌಲ ಯಾವ ಸಮಯವನ್ನು ಆರಿಸಿಕೊಂಡನು ಅಂತ ಒಂದು ಪುಸ್ತಕ ಹೇಳುತ್ತೆ?
1 ಅಪೊಸ್ತಲ ಪೌಲ “ಸಂಜೆ 4 ಗಂಟೆಯಿಂದ ಬಹು ರಾತ್ರಿಯ ತನಕ” ಮನೆಮನೆ ಸೇವೆಯಲ್ಲಿ ಭಾಗವಹಿಸುತ್ತಿದ್ದನು ಎಂದು ಬೈಬಲ್ ಕಾಲದ ದಿನಚರಿ ಎಂಬ (ಇಂಗ್ಲಿಷ್) ಪುಸ್ತಕ ಹೇಳುತ್ತದೆ. ಪೌಲನ ವೇಳಾಪಟ್ಟಿ ಏನಾಗಿತ್ತು ಅಂತ ನಮಗೆ ಗೊತ್ತಿಲ್ಲ ನಿಜ. ಆದರೂ ಪೌಲ “ಎಲ್ಲವನ್ನು ಸುವಾರ್ತೆಗೋಸ್ಕರವೇ” ಮಾಡಿದನೆಂದು ನಮಗೆ ಗೊತ್ತಿದೆ. (1 ಕೊರಿಂ. 9:19-23) ಹೆಚ್ಚು ಜನರಿಗೆ ಸುವಾರ್ತೆ ಮುಟ್ಟಬೇಕು ಅನ್ನುವ ಅವನ ಬಯಕೆಯೇ ದಿನಚರಿಯಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡು, ಸಂಜೆ ಹೊತ್ತಲ್ಲಿ ಮನೆಮನೆ ಸೇವೆಯಲ್ಲಿ ಭಾಗವಹಿಸುವಂತೆ ಮಾಡಿತು.
2. ಸೇವೆಯಲ್ಲಿ ಭಾಗವಹಿಸಲು ಸಂಜೆಯ ಸಮಯ ಉತ್ತಮ ಸಮಯವೇಕೆ?
2 ಅನೇಕ ಸ್ಥಳಗಳಲ್ಲಿ ಪ್ರಚಾರಕರು ಬೆಳಗ್ಗಿನ ಸಮಯದಲ್ಲೇ ಮನೆಮನೆ ಸೇವೆ ಮಾಡುವುದು ಸಾಮಾನ್ಯ. ನಿಮ್ಮ ಕ್ಷೇತ್ರದ ಕುರಿತೇನು? ಬೆಳಗ್ಗಿನ ಸಮಯವೇ ಉತ್ತಮ ಸಮಯನಾ? ಒಬ್ಬ ಪಯನೀಯರನು ತನ್ನ ಸೇವಾ ಕ್ಷೇತ್ರದ ಕುರಿತು ಹೇಳುವುದು: “ಹಗಲುಹೊತ್ತಿನಲ್ಲಿ ಜನರು ಮನೆಯಲ್ಲಿ ಇರುವುದೇ ಕಮ್ಮಿ. ಸಂಜೆ ಹೊತ್ತಲ್ಲಿ ಜಾಸ್ತಿ ಜನ ಸಿಗ್ತಾರೆ.” ಹೆಚ್ಚಾಗಿ ಗಂಡಸರು ಸಂಜೆ ಮನೆಯಲ್ಲಿರುತ್ತಾರೆ. ಆದ್ದರಿಂದ ಅವರಿಗೆ ಸುವಾರ್ತೆಯನ್ನು ತಲಪಿಸುವ ಒಳ್ಳೆಯ ಅವಕಾಶ ನಮಗಿದೆ. ಅಲ್ಲದೆ ಸಂಜೆ, ಮನೆಯವರಿಗೆ ಹೆಚ್ಚು ಬಿಡುವು ಇರುತ್ತದೆ ಮತ್ತು ಮಾತಾಡಲು ಸಮಯನೂ ಕೊಡ್ತಾರೆ. ಸಂಜೆ ಸಾಕ್ಷಿಕಾರ್ಯ ಪ್ರಯೋಜನಕರ ಎಂದು ಕಂಡಲ್ಲಿ ಹಿರಿಯರು ಅದಕ್ಕಾಗಿ ಸಂಜೆ ಹೊತ್ತು ಕ್ಷೇತ್ರ ಸೇವೆಗಾಗಿ ಕೂಟಗಳನ್ನು ಏರ್ಪಡಿಸಬೇಕು.
3. ಸಂಜೆ ಸಾಕ್ಷಿಕಾರ್ಯದಲ್ಲಿ ಭಾಗವಹಿಸುವಾಗ ನಾವು ಹೇಗೆ ವಿವೇಚನೆ ತೋರಿಸಬಹುದು?
3 ವಿವೇಚನೆ ಬಳಸಿ: ಸಂಜೆ ಸಾಕ್ಷಿಕಾರ್ಯದಲ್ಲಿ ವಿವೇಚನೆ ಬಳಸುವುದು ಅತ್ಯಾವಶ್ಯಕ. ಉದಾಹರಣೆಗೆ, ಮನೆಯವರು ಊಟ ಮಾಡುತ್ತಿದ್ದರೆ ಅಥವಾ ಬ್ಯುಸಿ ಇದ್ದರೆ ಬೇರೊಂದು ಸಮಯದಲ್ಲಿ ಬರುತ್ತೇವೆಂದು ಹೇಳಿ ಬರುವುದು ಒಳ್ಳೆಯದು. ಕತ್ತಲಾಗಿದ್ದರೆ ಮನೆಯವರಿಗೆ ಕಾಣಿಸುವ ಸ್ಥಳದಲ್ಲಿ ನಿಂತುಕೊಳ್ಳಿ. ಬೇಗನೆ ನಿಮ್ಮ ಪರಿಚಯ ಮಾಡಿಕೊಂಡು ನಿಮ್ಮ ಭೇಟಿಯ ಉದ್ದೇಶವನ್ನು ತಿಳಿಸಿ. ಇಬ್ಬಿಬ್ಬರಾಗಿ ಇಲ್ಲವೆ ಗುಂಪಾಗಿ ಸೇವೆಗೆ ಹೋಗುವುದು ವಿವೇಕಯುತ ಹಾಗೂ ಸುರಕ್ಷಿತ. ಇಬ್ಬರು ಸೇವೆಮಾಡುವಾಗ ಉಳಿದವರು ಹತ್ತಿರದಲ್ಲೇ ಅವರಿಗೋಸ್ಕರ ಕಾಯುತ್ತಾ ನಿಂತಿರಬಹುದು. ಜನರಿಲ್ಲದ ಸ್ಥಳದಲ್ಲಿ ಅಥವಾ ಕತ್ತಲಲ್ಲಿ ನಿಲ್ಲಬೇಡಿ. ತುಂಬ ತಡವಾಗಿ ಅಂದರೆ ನಿದ್ದೆ ಮಾಡುವ ಹೊತ್ತಿಗೆ ಭೇಟಿ ಮಾಡಬೇಡಿ. (2 ಕೊರಿಂ. 6:3) ಕತ್ತಲಲ್ಲಿ ಸೇವೆಮಾಡುವುದು ಸುರಕ್ಷಿತವಲ್ಲವಾದರೆ ಸಂಜೆ ಬೆಳಕಿರುವಾಗ ಮಾಡಿ.—ಜ್ಞಾನೋ. 22:3.
4. ಸಂಜೆ ಸಾಕ್ಷಿಕಾರ್ಯದಿಂದ ಯಾವ ಆಶೀರ್ವಾದಗಳು ಸಿಗುವವು?
4 ಆಶೀರ್ವಾದಗಳು: ಸಾಕ್ಷಿಕೊಡಲು ಎಷ್ಟು ಹೆಚ್ಚು ಅವಕಾಶ ಸಿಗುತ್ತೊ ಅಷ್ಟೆ ಹೆಚ್ಚು ಸೇವೆನಾ ಆನಂದಿಸಲು ಆಗುತ್ತೆ. ಅಲ್ಲದೆ ಹೆಚ್ಚು ಜನರಿಗೂ ಸುವಾರ್ತೆ ತಲುಪುತ್ತೆ. ಹೀಗೆ ಅನೇಕರು “ರಕ್ಷಣೆಯನ್ನು ಹೊಂದಿ ಸತ್ಯದ ನಿಷ್ಕೃಷ್ಟ ಜ್ಞಾನಕ್ಕೆ” ಬರಲು ಸಾಧ್ಯವಾಗುತ್ತೆ. (1 ತಿಮೊ. 2:3, 4) ಸಂಜೆ ಸಾಕ್ಷಿಕಾರ್ಯದಲ್ಲಿ ಭಾಗವಹಿಸಲು ನಿಮ್ಮ ಸಮಯವನ್ನು ಹೊಂದಿಸಿಕೊಳ್ಳಬಲ್ಲಿರಾ?