‘ಕೂಲಂಕಷ ಸಾಕ್ಷಿ ನೀಡಿ’
1. ಅಪೊಸ್ತಲ ಪೌಲನ ಯಾವ ಮಾದರಿ ನಮ್ಮ ಮುಂದಿದೆ?
1 “ನಿನ್ನ ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸು” ಎಂದು ಪೌಲ ತಿಮೊಥೆಯನಿಗೆ ಹೇಳಿದನು. (2 ತಿಮೊ. 4:5) ಪೌಲ ಹೀಗೆ ಹೇಳಬೇಕಾದರೆ ಅವನೂ ಅದನ್ನು ಮಾಡಿರಬೇಕು. ಮಾಡಿದ್ದನು ಸಹ. ಕ್ರಿ.ಶ. 47-56ರೊಳಗೆ ಮೂರು ಮಿಷನೆರಿ ಪ್ರಯಾಣವನ್ನು ಪೂರ್ಣಗೊಳಿಸಿದ್ದನು. ಪೌಲ “ಕೂಲಂಕಷವಾಗಿ ಸಾಕ್ಷಿ” ಕೊಟ್ಟದ್ದರ ಬಗ್ಗೆ ಅಪೊಸ್ತಲರ ಕಾರ್ಯಗಳು ಪುಸ್ತಕದಲ್ಲಿ ನಾವು ಆಗಾಗ್ಗೆ ಓದುತ್ತೇವೆ. (ಅ. ಕಾ. 23:11; 28:23) ಇಂದು ನಾವೂ ಹೇಗೆ ಕೂಲಂಕಷ ಸಾಕ್ಷಿ ನೀಡಬಹುದು?
2. ಮನೆಮನೆ ಸೇವೆಯಲ್ಲಿ ಹೇಗೆ ಕೂಲಂಕಷ ಸಾಕ್ಷಿ ನೀಡಬಲ್ಲೆವು?
2 ಮನೆಮನೆ ಸೇವೆ: ಸುವಾರ್ತೆಯನ್ನೇ ಕೇಳಿರದ ವ್ಯಕ್ತಿಗಳನ್ನು ಭೇಟಿಯಾಗಬೇಕಂದರೆ ನಾವು ಬೇರೆ ಬೇರೆ ಸಮಯದಲ್ಲಿ ಮನೆಮನೆ ಸೇವೆ ಮಾಡಬೇಕು. ಉದಾ: ಗಂಡಸರು ಹೆಚ್ಚಾಗಿ ಸಂಜೆ ಅಥವಾ ವಾರಾಂತ್ಯದಲ್ಲಿ ಮನೆಯಲ್ಲಿರುತ್ತಾರೆ. ನಮ್ಮ ಸೇವಾಕ್ಷೇತ್ರದ ಕೆಲವು ಭಾಗಗಳಲ್ಲಿ ವಿರಳವಾಗಿ ಸೇವೆಮಾಡಿರುವುದಾದರೆ ಅಂಥ ಜಾಗದಲ್ಲಿ ಸುವಾರ್ತೆ ಸಾರಬೇಕು. ಆಗ ಹೊಸ ಹೊಸ ಜನರು ಸಿಗುತ್ತಾರೆ. ಪ್ರತಿಯೊಂದು ಮನೆಯಲ್ಲಿ ಸುವಾರ್ತೆ ತಿಳಿಸಿದ್ದೇವೆಂದು ಖಚಿತಪಡಿಸಿಕೊಳ್ಳಬೇಕು. ಮನೆಯಲ್ಲಿ ಯಾರೂ ಸಿಗದಿದ್ದರೆ ಮತ್ತೊಮ್ಮೆ ಪ್ರಯತ್ನಿಸಬೇಕು. ನೀವೆಷ್ಟೇ ಪ್ರಯತ್ನಪಟ್ಟರೂ ಸಿಗದಿದ್ದರೆ? ಪತ್ರ ಇಲ್ಲವೆ ಫೋನ್ ಮುಖೇನ ಸುವಾರ್ತೆ ತಿಳಿಸಬಹುದು.
3. ಸಾರ್ವಜನಿಕವಾಗಿ ಸಾಕ್ಷಿನೀಡಲು ಮತ್ತು ಅನೌಪಚಾರಿಕವಾಗಿ ಸಾಕ್ಷಿನೀಡಲು ನಿಮಗೆ ಯಾವ ಸಂದರ್ಭಗಳು ಸಿಗುತ್ತೆ?
3 ಸಾರ್ವಜನಿಕ ಮತ್ತು ಅನೌಪಚಾರಿಕ ಸಾಕ್ಷಿಕಾರ್ಯ: ಜನರಿಗೆ ಯೆಹೋವನ ಸೇವಕರು ದೇವ “ಜ್ಞಾನ” ತಿಳಿಸುತ್ತಾರೆ. ಅದು “ಬೀದಿಗಳಲ್ಲಿ,” “ಚೌಕಗಳಲ್ಲಿ” ಅಂದರೆ ಸಾರ್ವಜನಿಕ ಸ್ಥಳಗಳಲ್ಲಿ ಇರಬಹುದು. (ಜ್ಞಾನೋ. 1:20, 21) ದಿನನಿತ್ಯದ ಕೆಲಸಕಾರ್ಯಗಳಲ್ಲಿ ತೊಡಗಿರುವಾಗಲೂ ಸಾಕ್ಷಿಕೊಡಲು ಸಿದ್ಧರಿರುತ್ತೇವಾ? “ವಾಕ್ಯವನ್ನು ಸಾರುವುದರಲ್ಲಿ . . . ತೀವ್ರಾಸಕ್ತಿಯಿಂದ ನಿರತ”ರಾಗಿರುತ್ತೇವಾ? (ಅ. ಕಾ. 18:5) ಹಾಗೆ ಇರುವುದಾದರೆ “ಕೂಲಂಕಷವಾದ ಸಾಕ್ಷಿಯನ್ನು ನೀಡುವಂತೆ” ನಮಗೆ ಕೊಡಲಾದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದೀವಿ ಎಂದರ್ಥ.—ಅ. ಕಾ. 10:42; 17:17; 20:20, 21, 24.
4. ಕೂಲಂಕಷ ಸಾಕ್ಷಿನೀಡಲು ನಮಗೆ ಪ್ರಾರ್ಥನೆ ಮತ್ತು ಧ್ಯಾನ ಹೇಗೆ ನೆರವಾಗುತ್ತೆ?
4 ಆದರೆ ಕೆಲವೊಮ್ಮೆ ವೈಯಕ್ತಿಕ ಕುಂದುಕೊರತೆಗಳ ಅಥವಾ ನಾಚಿಕೆ ಸ್ವಭಾವದ ಕಾರಣ ಸಾಕ್ಷಿನೀಡಲು ನಾವು ಹಿಂಜರಿಯಬಹುದು. ಯೆಹೋವ ದೇವರು ಆ ನಮ್ಮ ಕುಂದುಕೊರತೆಗಳನ್ನು ಬಲ್ಲನು. (ಕೀರ್ತ. 103:14) ಹಾಗಾಗಿ ಮಾತಾಡಲು ಧೈರ್ಯ ಕೊಡಪ್ಪಾ ಅಂತ ಆತನ ಬಳಿ ಬೇಡಿಕೊಳ್ಳಬೇಕು. (ಅ. ಕಾ. 4:30, 31) ದೇವರ ವಾಕ್ಯವನ್ನು ಅಧ್ಯಯನ ಮಾಡಿ ಧ್ಯಾನ ಮಾಡುವಾಗ ಸುವಾರ್ತೆಗಿರುವ ಅಪಾರ ಮೌಲ್ಯದ ಬಗ್ಗೆಯೂ ಯೋಚಿಸಿ. (ಫಿಲಿ. 3:8) ಇದು ಸುವಾರ್ತೆ ಸಾರಲು ಪ್ರೇರಣೆ ನೀಡುತ್ತೆ.
5. ಯೋವೇಲನ ಪ್ರವಾದನೆಯ ನೆರವೇರಿಕೆಗೆ ನಾವು ಹೇಗೆ ಕೈಜೋಡಿಸಬಹುದು?
5 ಯೆಹೋವನ ಮಹಾದಿನ ಹತ್ತಿರ ಬರುತ್ತಿರುವಾಗ ದೇವಜನರು ಯಾವ ವಿಷಯಕ್ಕೂ ಜಗ್ಗದೆ ಸುವಾರ್ತೆ ಸಾರುವ ಕೆಲಸದಲ್ಲಿ ಬಹಳ ಕ್ರಿಯಾಶೀಲರಾಗಿರುತ್ತಾರೆ ಅಂತ ಪ್ರವಾದಿ ಯೋವೇಲ ನುಡಿದಿದ್ದನು. (ಯೋವೇ. 2:2, 7-9) ಎಂದಿಗೂ ಪುನರಾವರ್ತಿಸದ ಈ ಅಪೂರ್ವ ಸುಯೋಗದಲ್ಲಿ ಪೂರ್ಣವಾಗಿ ಭಾಗವಹಿಸೋಣ.