ಮಾದರಿ ನಿರೂಪಣೆಗಳು
ಎಚ್ಚರ! ಜುಲೈ-ಸೆಪ್ಟೆಂಬರ್
“ಸುತ್ತಮುತ್ತಲಿನ ಜನರನ್ನು ಭೇಟಿಮಾಡಿ ನಾವೆಲ್ಲ ಎದುರಿಸೋ ಒಂದು ಸಮಸ್ಯೆ ಬಗ್ಗೆ ಮಾತಾಡುತ್ತಿದ್ದೇವೆ. ಅದು ಹೆಚ್ಚುತ್ತಿರುವ ಅಪರಾಧಗಳು. ಕೆಲವರು ನೆನಸುತ್ತಾರೆ ಪೊಲೀಸರ ಸಂಖ್ಯೆ ಹೆಚ್ಚಿಸಿದರೆ ಈ ಸಮಸ್ಯೆಗೆ ಪರಿಹಾರ ಅಂತ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿದುಕೊಳ್ಳಬಹುದಾ? [ಉತ್ತರಕ್ಕಾಗಿ ಕಾಯಿರಿ.] ಪಾತಕಗಳಿಗೆ ಬೇಗನೆ ಕೊನೆ ತರುತ್ತೇನೆ ಅಂತ ದೇವರೇ ಕೊಟ್ಟಿರೋ ಮಾತನ್ನು ನಿಮಗೆ ತೋರಿಸಲಾ? [ಮನೆಯವರು ಒಪ್ಪಿದರೆ ಕೀರ್ತನೆ 37:10, 11 ಓದಿ.] ಈ ಪತ್ರಿಕೆಯಲ್ಲಿ, ಇದರ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಪಾತಕಗಳಿಂದ ಹೇಗೆ ನಮ್ಮನ್ನು ಕಾಪಾಡಿಕೊಳ್ಳಬಹುದು ಅಂತ ಕೆಲವು ಸಲಹೆಗಳಿವೆ.”