ಮಾದರಿ ನಿರೂಪಣೆಗಳು
ಆಗಸ್ಟ್ ತಿಂಗಳ ಮೊದಲ ಶನಿವಾರದಂದು ಬೈಬಲ್ ಅಧ್ಯಯನ ಆರಂಭಿಸಲಿಕ್ಕಾಗಿ
“ಹೆಚ್ಚಿನ ಜನರು ಸೃಷ್ಟಿಕರ್ತನಿದ್ದಾನೆ ಎಂದು ನಂಬುತ್ತಾರೆ. ಆತನಿಗೊಂದು ಹೆಸರಿದೆ ಎಂದು ನೆನಸುತ್ತೀರೊ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಈ ಬಗ್ಗೆ ಶಾಸ್ತ್ರವಚನಗಳು ಏನು ತಿಳಿಸುತ್ತವೆಂದು ನಿಮಗೆ ತೋರಿಸಲೋ? [ಮನೆಯವನು ಒಪ್ಪಿದರೆ ಕೀರ್ತನೆ 83:18 ಓದಿ.]” ಜುಲೈ-ಸೆಪ್ಟೆಂಬರ್ ಕಾವಲಿನಬುರುಜುವಿನ ಪುಟ 22ರಲ್ಲಿರುವ ಲೇಖನದಿಂದ ಮೂರನೇ ಉಪಶೀರ್ಷಿಕೆಯನ್ನು ಓದಿ, ಚರ್ಚಿಸಿ.
ಕಾವಲಿನಬುರುಜು ಜುಲೈ-ಸೆಪ್ಟೆಂಬರ್
“ಇಂದು ಅನೇಕರ ವಿವಾಹಗಳು ಮುರಿದುಬೀಳುತ್ತಿವೆ. ಆದರೆ ದಾಂಪತ್ಯವನ್ನು ಸಫಲಗೊಳಿಸಲು ಯಾವುದು ಸಹಾಯ ಮಾಡಬಲ್ಲದು? [ಪ್ರತಿಕ್ರಿಯೆಗೆ ಅವಕಾಶಕೊಡಿ.] ವಿವಾಹ ಜೀವನಕ್ಕೆ ಸಂಬಂಧಪಟ್ಟ ಒಂದು ಸೂತ್ರವನ್ನು ಶಾಸ್ತ್ರವಚನದಿಂದ ನಿಮಗೆ ತೋರಿಸಲೋ? [ಮನೆಯವನು ಒಪ್ಪಿದರೆ ಮತ್ತಾಯ 19:4-6 ಓದಿ.] ಪತಿಪತ್ನಿಯರು ತಮ್ಮ ವಿವಾಹದಲ್ಲಿ ಎದುರಾಗುವ ಸವಾಲುಗಳನ್ನು ಜಯಿಸುವಂತೆ ಸಹಾಯಮಾಡುವ ಶಾಸ್ತ್ರಾಧಾರಿತ ಸೂತ್ರಗಳನ್ನು ಈ ಪತ್ರಿಕೆ ಚರ್ಚಿಸುತ್ತದೆ.”
ಎಚ್ಚರ! ಜುಲೈ-ಸೆಪ್ಟೆಂಬರ್
“ಇಂದು ಅನೇಕರು ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ದೇವರು ಕೊಟ್ಟಿರುವ ಒಂದು ಆಶ್ವಾಸನೆಯನ್ನು ಜನರಿಗೆ ತಿಳಿಸುತ್ತಿದ್ದೇವೆ. ಅದನ್ನು ನಿಮಗೆ ಓದಿ ಹೇಳಲಾ? [ಮನೆಯವನು ಒಪ್ಪಿದರೆ ಯೆಶಾಯ 33:24 ಓದಿ.] ಇದು ನೆರವೇರುವಾಗ, ಜೀವನವು ಯಾವೆಲ್ಲ ವಿಧಗಳಲ್ಲಿ ಭಿನ್ನವಾಗಿರುವುದೆಂದು ನೆನಸುತ್ತೀರಿ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಆದರೆ ಸೃಷ್ಟಿಕರ್ತನು ಈ ಬದಲಾವಣೆಯನ್ನು ತರುವ ತನಕ ನಾವು ಕೆಲವೊಂದು ಸರಳ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ನಮ್ಮ ಆರೋಗ್ಯವನ್ನು ಸ್ವಲ್ಪಮಟ್ಟಿಗೆ ಉತ್ತಮಗೊಳಿಸಬಲ್ಲೆವು. ಅವು ಯಾವುವೆಂದು ಈ ಪತ್ರಿಕೆ ವಿವರಿಸುತ್ತದೆ.”