‘ನಂಬಿಕೆಯಲ್ಲಿ ಸ್ಥಿರರಾಗಲು’ ಅವರಿಗೆ ಸಹಾಯಮಾಡಿ
ಪ್ರತಿ ವರ್ಷ 2,50,000ಕ್ಕಿಂತ ಹೆಚ್ಚು ಮಂದಿ ದೀಕ್ಷಾಸ್ನಾನ ಪಡೆಯುತ್ತಿದ್ದಾರೆ. ಜನರನ್ನು ಒಟ್ಟುಗೂಡಿಸುವ ಕೆಲಸದ ಮೇಲೆ ಯೆಹೋವನ ಈ ಆಶೀರ್ವಾದವನ್ನು ನೋಡುವುದು ನಿಜಕ್ಕೂ ರೋಮಾಂಚಕ! (ಧರ್ಮೋ. 28:2) ತನ್ನ ಬೈಬಲ್ ವಿದ್ಯಾರ್ಥಿಯ ದೀಕ್ಷಾಸ್ನಾನವಾದ ಬಳಿಕ ಪ್ರಚಾರಕನು ಅವನ ಅಧ್ಯಯನ ನಿಲ್ಲಿಸಿ, ತಾನು ಇತರರಿಗೆ ನೆರವು ನೀಡುವುದಕ್ಕೆ ಗಮನ ಕೊಡಬೇಕೆಂದು ನೆನಸಬಹುದು. ವಿದ್ಯಾರ್ಥಿ ಸಹ ಶುಶ್ರೂಷೆಯಲ್ಲಿ ಹೆಚ್ಚು ಸಮಯ ಕಳೆಯಲಿಕ್ಕೋಸ್ಕರ ಅಧ್ಯಯನ ನಿಲ್ಲಿಸಲು ಮನಸ್ಸು ಮಾಡಬಹುದು. ಆದರೆ ಬೈಬಲ್ ವಿದ್ಯಾರ್ಥಿಗಳಿಗೆ ಸತ್ಯದಲ್ಲಿ ಒಳ್ಳೇ ಅಸ್ತಿವಾರವಿರಬೇಕು. ಇದು ತುಂಬ ಪ್ರಾಮುಖ್ಯ. ಅವರು ಕ್ರಿಸ್ತನಲ್ಲಿ “ಬೇರೂರಿದವರಾಗಿದ್ದು . . . ನಂಬಿಕೆಯಲ್ಲಿ ಸ್ಥಿರೀಕರಿಸಲ್ಪ”ಡಬೇಕು. (ಕೊಲೊ. 2:6, 7; 2 ತಿಮೊ. 3:12) ಆದ್ದರಿಂದ ದೀಕ್ಷಾಸ್ನಾನದ ಬಳಿಕವೂ ವಿದ್ಯಾರ್ಥಿಯ ಬೈಬಲ್ ಅಧ್ಯಯನ ಮುಂದುವರಿಯಬೇಕು. ಬೈಬಲ್ ಬೋಧಿಸುತ್ತದೆ ಹಾಗೂ “ದೇವರ ಪ್ರೀತಿ” ಪುಸ್ತಕಗಳೆರಡನ್ನೂ ಅಧ್ಯಯನ ಮಾಡಿ ಮುಗಿಸಬೇಕು.—ಏಪ್ರಿಲ್ 2011 ನಮ್ಮ ರಾಜ್ಯ ಸೇವೆ ಪುಟ 2 ನೋಡಿ.