ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 5/14 ಪು. 3
  • ಪ್ರಶ್ನಾ ಚೌಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ಚೌಕ
  • 2014 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಸುಖ ಸಂಸಾರ ಸಾಧ್ಯ!—ಭಾಗ 2
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಹೆತ್ತವರೇ, ಯೆಹೋವನನ್ನು ಪ್ರೀತಿಸೋಕೆ ಮಕ್ಕಳಿಗೆ ಸಹಾಯ ಮಾಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಆತ್ಮಿಕವಾಗಿ ಬಲವಾಗಿರುವ ಕುಟುಂಬವನ್ನು ಕಟ್ಟುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ನಿಮಗೆ ಇನ್ನೂ ಹೆಚ್ಚು ಸೇವೆ ಮಾಡಬೇಕು ಅಂತ ಅನಿಸುತ್ತಿದೆಯಾ?
    2013 ನಮ್ಮ ರಾಜ್ಯದ ಸೇವೆ
ಇನ್ನಷ್ಟು
2014 ನಮ್ಮ ರಾಜ್ಯದ ಸೇವೆ
km 5/14 ಪು. 3

ಪ್ರಶ್ನಾ ಚೌಕ

◼ ಮಕ್ಕಳು ಆಧ್ಯಾತ್ಮಿಕವಾಗಿ ಪ್ರೌಢರಾಗಲು ಏನನ್ನು ಕಲಿಯಬೇಕು?

ಕ್ರೈಸ್ತ ಹೆತ್ತವರು ತಮ್ಮ ಮಕ್ಕಳನ್ನು ಯೆಹೋವನ “ಶಿಸ್ತಿನಲ್ಲಿಯೂ ಉಪದೇಶದಲ್ಲಿಯೂ” ಬೆಳೆಸಲು ಶತಪ್ರಯತ್ನ ಮಾಡುತ್ತಾರೆ. (ಎಫೆ. 6:4 ಪವಿತ್ರ ಗ್ರಂಥ ಭಾಷಾಂತರ) ಕೆಲವು ಹೆತ್ತವರು ಪ್ರತಿದಿನ ಬೆಳಿಗ್ಗೆ ತಮ್ಮ ಮಕ್ಕಳೊಂದಿಗೆ ದಿನದ ವಚನ ಓದಿ, ಚರ್ಚಿಸುವುದರಿಂದ ಪ್ರಯೋಜನ ಪಡೆದಿದ್ದಾರೆ. ನೀವು ಸಹ ನಿಮ್ಮ ಕುಟುಂಬ ಆರಾಧನೆಯಲ್ಲಿ ಅಥವಾ ಇತರ ಸಂದರ್ಭಗಳಲ್ಲಿ, ಎಲ್ಲರೂ ಒಟ್ಟಿಗೆ ಕೂತು ಸಂಘಟನೆಯ ವಿಡಿಯೋಗಳನ್ನು ನೋಡಿ ಅದನ್ನು ಚರ್ಚಿಸಬಹುದು, ಯುವಜನರ ಪ್ರಶ್ನೆ ಲೇಖನಗಳಿಂದ ಒಂದು ನಿರ್ದಿಷ್ಟ ವಿಷಯ ಆಯ್ಕೆ ಮಾಡಿ ಅದನ್ನೂ ಚರ್ಚಿಸಬಹುದು, ಬೈಬಲ್‌ ವೃತ್ತಾಂತವೊಂದನ್ನು ಅಭಿನಯಿಸಬಹುದು ಅಥವಾ ಪ್ರ್ಯಾಕ್ಟಿಸ್‌ ಸೆಷನ್‌ಗಳನ್ನು ಮಾಡಬಹುದು. ಆದರೂ, ನಿಮ್ಮ ಮಕ್ಕಳು ‘ಪ್ರೌಢತೆಯ ಕಡೆಗೆ ಮುಂದೊತ್ತಲು’ ಅವರಿಗೆ ಬೈಬಲಿನ ಅಗಾಧ ವಿಷಯಗಳನ್ನು ಬೋಧಿಸಿ.—ಇಬ್ರಿ. 6:1.

ಸೇವೆಯಲ್ಲಿ ಜನರಿಗೆ ಬೋಧಿಸಲು ನಾವು ಏನೆಲ್ಲಾ ಮಾಡುತ್ತೇವೆ? ಸಾಮಾನ್ಯವಾಗಿ ಮೊದಲ ಭೇಟಿಯಲ್ಲಿ ಅಥವಾ ನಂತರದ ಭೇಟಿಯಲ್ಲಿ, ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದಿಂದ ಅಧ್ಯಯನವನ್ನು ಆರಂಭಿಸುತ್ತೇವೆ. ಆ ಪುಸ್ತಕ ಮುಗಿದ ನಂತರ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ ಪುಸ್ತಕದಿಂದ ಅಧ್ಯಯನ ಮಾಡುತ್ತೇವೆ. ಕಾರಣ, ಬೈಬಲ್‌ ಬೋಧಿಸುತ್ತದೆ ಪುಸ್ತಕದಿಂದ ವಿದ್ಯಾರ್ಥಿ ಬೈಬಲಿನ ಮೂಲಭೂತ ಜ್ಞಾನ ಪಡೆಯುತ್ತಾನೆ. ದೇವರ ಪ್ರೀತಿ ಪುಸ್ತಕದಿಂದ ಬೈಬಲಿನ ಮೂಲತತ್ವಗಳನ್ನು ಜೀವನದಲ್ಲಿ ಹೇಗೆ ಅನ್ವಯಿಸಿಕೊಳ್ಳುವುದೆಂದು ಕಲಿಯುತ್ತಾನೆ. ಈ ಎರಡೂ ಪುಸ್ತಕಗಳನ್ನು ಅಧ್ಯಯನ ಮಾಡುವುದರಿಂದ ಹೊಸಬರು ಕ್ರಿಸ್ತನಲ್ಲಿ ‘ಬೇರೂರಲು’ ಮತ್ತು ‘ನಂಬಿಕೆಯಲ್ಲಿ ಸ್ಥಿರೀಕರಿಸಲ್ಪಡಲು’ ಸಾಧ್ಯವಾಗುತ್ತದೆ. (ಕೊಲೊ. 2:6, 7) ಈ ಪುಸ್ತಕಗಳು ಹೊಸಬರಿಗೇ ಇಷ್ಟೊಂದು ಪ್ರಯೋಜನ ತರುವುದಾದರೆ, ಇನ್ನು ನಮ್ಮ ಮಕ್ಕಳಿಗೆ ಪ್ರಯೋಜನ ತರುವುದಿಲ್ವಾ? ನಮ್ಮ ಮಕ್ಕಳು ಸಹ ವಿಮೋಚನಾ ಮೌಲ್ಯದ ಬಗ್ಗೆ, ದೇವರ ರಾಜ್ಯದ ಬಗ್ಗೆ ಮತ್ತು ಸತ್ತವರ ಸ್ಥಿತಿಯ ಬಗ್ಗೆ ಕಲಿಯಬೇಕು. ದೇವರು ಏಕೆ ಕಷ್ಟಸಂಕಟಗಳನ್ನು ಅನುಮತಿಸಿದ್ದಾನೆ, ಈ ವಿಷಯಗಳ ವ್ಯವಸ್ಥೆಯ ಕಡೇ ದಿವಸಗಳನ್ನು ಗುರುತಿಸುವುದು ಹೇಗೆ ಎಂದು ಸಹ ಅವರು ಕಲಿಯಬೇಕು. ಯೆಹೋವನ ಸಾಕ್ಷಿಗಳಲ್ಲೇ ಸತ್ಯವಿದೆ ಎನ್ನುವುದನ್ನು ಮನಗಾಣಬೇಕು. ಯೌವನಸ್ಥರು ಬೈಬಲಿನ ಮೂಲತತ್ವಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ತಮ್ಮ ‘ಗ್ರಹಣ ಶಕ್ತಿಗಳನ್ನು ತರಬೇತುಗೊಳಿಸಿಕೊಳ್ಳಲು ಕಲಿತುಕೊಳ್ಳಬೇಕು.’ (ಇಬ್ರಿ. 5:14) ಮಕ್ಕಳಿಗೆ ಕಲಿಸುವಾಗ ಅವರ ವಯಸ್ಸು ಮತ್ತು ಸಾಮರ್ಥ್ಯವನ್ನು ಹೆತ್ತವರು ಪರಿಗಣಿಸಬೇಕೆಂಬುದೇನೋ ನಿಜ. ಆದರೆ ಅನೇಕ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಬೈಬಲಿನ ಅಗಾಧ ಸತ್ಯಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ.—ಲೂಕ 2:42, 46, 47.

ಹೆತ್ತವರಿಗೆ ಸಹಾಯ ಮಾಡಲು jw.org ವೆಬ್‌ಸೈಟ್‌ನಲ್ಲಿ ಬೈಬಲ್‌ ಬೋಧಿಸುತ್ತದೆ ಪುಸ್ತಕದ ಮೇಲಾಧಾರಿತ ಅಧ್ಯಯನ ಸಾಧನಗಳನ್ನು ಒಳಗೂಡಿಸಲಾಗುವುದು. ಇವು ಕೆಲವು ಭಾಷೆಗಳಲ್ಲಿ ಮಾತ್ರ ಲಭ್ಯ. ಈ ಅಧ್ಯಯನ ಸಾಧನಗಳನ್ನು BIBLE TEACHINGS > TEENAGERS ಪುಟದಲ್ಲಿ ನೋಡಬಹುದು. ಮುಂದಿನ ದಿನಗಳಲ್ಲಿ ದೇವರ ಪ್ರೀತಿ ಪುಸ್ತಕದ ಮೇಲಾಧರಿತವಾಗಿಯೂ ಅಧ್ಯಯನ ಸಾಧನಗಳನ್ನು ತಯಾರಿಸಲಾಗುವುದು. ಇವು ಸಹ ಕೆಲವೇ ಭಾಷೆಗಳಲ್ಲಿ ಲಭ್ಯವಿರುತ್ತವೆ. ಹೆತ್ತವರು ಈ ಅಧ್ಯಯನ ಸಾಧನಗಳ ಅಥವಾ ಇವುಗಳ ಮುದ್ರಿತ ಪ್ರತಿಗಳ ಸದ್ಬಳಕೆ ಮಾಡಬಹುದು. ಈ ವಿಷಯಗಳನ್ನು ಕುಟುಂಬ ಆರಾಧನೆಯಲ್ಲಿ ಬಳಸಬೇಕಾ, ತಮ್ಮ ಮಕ್ಕಳಲ್ಲೊಬ್ಬರೊಂದಿಗೆ ಅಧ್ಯಯನ ಮಾಡಲಿಕ್ಕೆ ಉಪಯೋಗಿಸಬೇಕಾ ಅಥವಾ ವೈಯಕ್ತಿಕ ಅಧ್ಯಯನ ಮಾಡುವುದು ಹೇಗೆಂದು ತಮ್ಮ ಮಗುವಿಗೆ ಕಲಿಸಲು ಉಪಯೋಗಿಸಬೇಕಾ ಎನ್ನುವುದನ್ನು ಹೆತ್ತವರು ನಿರ್ಣಯಿಸಬಹುದು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ