ಆಗಸ್ಟ್ನಲ್ಲಿ ನಡೆಯುವ ಅಭಿಯಾನ ಅವಿಸ್ಮರಣೀಯವಾಗಲಿ
ಭೂಮಿಯಾದ್ಯಂತ ಹೊಸ ಕರಪತ್ರದ ವಿತರಣೆ
1. ದೇವರ ರಾಜ್ಯದ 100ನೇ ವಾರ್ಷಿಕೋತ್ಸವ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಯಾವ ವಿಶೇಷ ಅಭಿಯಾನವನ್ನು ಆಯೋಜಿಸಲಾಗಿದೆ?
1 ದೇವರ ರಾಜ್ಯದಾಳ್ವಿಕೆಯ 100ನೇ ವಾರ್ಷಿಕೋತ್ಸವ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ, ಒಂದು ವಿಶೇಷ ಅಭಿಯಾನದ ಮೂಲಕ ಯೆಹೋವನನ್ನು ಮಹಿಮೆಪಡಿಸುವುದು ಎಷ್ಟೊಂದು ಸೂಕ್ತವಲ್ಲವೇ? ಆದ್ದರಿಂದ ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು? ಎಂಬ ಹೊಸ ಕರಪತ್ರವನ್ನು ಆಸ್ಟ್ ತಿಂಗಳಿನಲ್ಲಿ ಭೂಮಿಯಾದ್ಯಂತ ವಿತರಿಸಲಿದ್ದೇವೆ. ಈ ಕರಪತ್ರವು ಓದುಗರನ್ನು ಅವರಿಗಿರುವ ಪ್ರಶ್ನೆಗಳಿಗೆ ಉತ್ತರಕ್ಕಾಗಿ ಬೈಬಲಿನ ಕಡೆಗೆ ನೋಡುವಂತೆ ಉತ್ತೇಜಿಸುತ್ತದೆ ಮತ್ತು jw.org ವೆಬ್ಸೈಟ್ ಅವರಿಗೆ ಹೇಗೆ ಸಹಾಯ ಮಾಡುತ್ತದೆ ಎಂದು ವಿವರಿಸುತ್ತದೆ. ಇಂಟರ್ನೆಟ್ನ ಬಳಕೆ ಇಂದು ಸರ್ವೇಸಾಮಾನ್ಯವಾಗಿದೆ. ಒಂದುವೇಳೆ ಮನೆಯವನಿಗೆ ಅದನ್ನು ಬಳಸಲು ಗೊತ್ತಿಲ್ಲದಿರುವಲ್ಲಿ, ಸತ್ತವರು ಮತ್ತೆ ಬದುಕಿ ಬರುತ್ತಾರಾ? (T-35) ಅಥವಾ ಸೂಕ್ತವಾದ ಬೇರೊಂದು ಕರಪತ್ರವನ್ನು ಕೊಡಿ.
2. ‘ಯೆಹೋವನನ್ನು ಸ್ತುತಿಸುವ ಉತ್ಸಾಹಧ್ವನಿ’ ಉತ್ತುಂಗಕ್ಕೇರುವ ಈ ಆಗಸ್ಟ್ ತಿಂಗಳಲ್ಲಿ ಪೂರ್ಣವಾಗಿ ಪಾಲ್ಗೊಳ್ಳಲು ನಾವೇನು ಮಾಡಬಹುದು?
2 ಉತ್ಸಾಹ ಧ್ವನಿಯಿಂದ ಸ್ತುತಿಸಿ: ಆಗಸ್ಟ್ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರಿಂಗ್ ಮಾಡುವ ಮೂಲಕ ತಮ್ಮ ಸೇವೆಯನ್ನು ಹೆಚ್ಚಿಸಲು ಬಯಸುವ ಪ್ರಚಾರಕರಿಗಾಗಿ ಒಂದು ವಿಶೇಷ ಏರ್ಪಾಡನ್ನು ಮಾಡಲಾಗಿದೆ. ಆ ತಿಂಗಳಿನಲ್ಲಿ ಸ್ನಾತ ಪ್ರಚಾರಕರಿಗೆ 30 ತಾಸುಗಳ ಆಕ್ಸಿಲಿಯರಿ ಪಯನೀಯರಿಂಗ್ ಮಾಡುವ ಸದವಕಾಶವಿದೆ. ಜೊತೆಗೆ ಐದು ಶುಕ್ರವಾರಗಳು, ಶನಿವಾರಗಳು ಮತ್ತು ಭಾನುವಾರಗಳಿರುವುದರಿಂದ ಶಾಲೆಗೆ ಹೋಗುವ ಮಕ್ಕಳು ಮತ್ತು ಐಹಿಕ ಕೆಲಸ ಮಾಡುವವರು ಕೂಡ ಆಕ್ಸಿಲಿಯರಿ ಪಯನೀಯರಿಂಗ್ ಮಾಡಬಹುದು. ನಿಮ್ಮ ಪ್ರಗತಿಪರ ಬೈಬಲ್ ವಿದ್ಯಾರ್ಥಿ ಅಥವಾ ಮಗು ಪ್ರಚಾರಕನಾಗಲು ಇಷ್ಟಪಡುವುದಾದರೆ, ಅದರ ಬಗ್ಗೆ ತಕ್ಷಣವೇ ಹಿರಿಯ ಮಂಡಲಿಯ ಸಂಯೋಜಕನ ಬಳಿ ಮಾತನಾಡಿ. ಈ ಅವಿಸ್ಮರಣೀಯ ತಿಂಗಳಿನಲ್ಲಿ ನಮ್ಮೊಂದಿಗೆ ಸೇರಿ ಪ್ರಚಾರಕರಾಗಿ ಕೆಲಸ ಮಾಡುವುದು ಅವರಿಗೆ ಎಷ್ಟೊಂದು ಉತ್ತೇಜನ ತರುತ್ತದಲ್ಲವೇ! ಹೆಚ್ಚಿನ ಪಯನೀಯರರು ತಮ್ಮ ವಾರ್ಷಿಕ ತಾಸುಗಳನ್ನು ಪೂರೈಸಿ ಆಗಸ್ಟ್ ತಿಂಗಳಿನಲ್ಲಿ ಸ್ವಲ್ಪ ಬಿಡುವು ತೆಗೆದುಕೊಳ್ಳುತ್ತಾರಾದರೂ ಈ ವಿಶೇಷ ಕಾರ್ಯಾಚರಣೆಯಲ್ಲಿ ಪೂರ್ಣವಾಗಿ ಪಾಲ್ಗೊಳ್ಳಲು ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬಹುದು. ‘ಯೆಹೋವನನ್ನು ಸ್ತುತಿಸುವ ಉತ್ಸಾಹಧ್ವನಿ’ ಉತ್ತುಂಗಕ್ಕೇರುವ ಈ ಆಗಸ್ಟ್ ತಿಂಗಳಲ್ಲಿ ಕುಟುಂಬದವರೆಲ್ಲರೂ ಪೂರ್ಣವಾಗಿ ಪಾಲ್ಗೊಳ್ಳಲು ಏನು ಮಾಡಬಹುದೆಂದು ಈಗಿನಿಂದಲೇ ಚರ್ಚಿಸಿ.—ಎಜ್ರ 3:11; ಜ್ಞಾನೋಕ್ತಿ 15:22.
3. ಈ ವಿಶೇಷ ಅಭಿಯಾನದಲ್ಲಿ ಏನನ್ನು ನಿರೀಕ್ಷಿಸಲಾಗಿದೆ?
3 ಈ ಹಿಂದೆ ನಾವೆಷ್ಟೋ ಬಾರಿ ಇಂತಹ ಅಭಿಯಾನಗಳಲ್ಲಿ ಪಾಲ್ಗೊಂಡಿರುವುದಾದರೂ ಆಗಸ್ಟ್ ತಿಂಗಳ ಈ ಅಭಿಯಾನ ನಮ್ಮ ಇತಿಹಾಸದಲ್ಲೇ ಅವಿಸ್ಮರಣೀಯವಾಗುವುದೆಂದು ನಿರೀಕ್ಷಿಸುತ್ತೇವೆ. ಆದ್ದರಿಂದ, ಆಗಸ್ಟ್ನಲ್ಲಿ ತಾಸುಗಳ, ಪ್ರಚಾರಕರ ಮತ್ತು ಆಕ್ಸಿಲಿಯರಿ ಪಯನೀಯರರ ಸಂಖ್ಯೆಯಲ್ಲಿ ಹೊಸ ಉಚ್ಚಾಂಕಗಳನ್ನು ತಲುಪೋಣವೇ? ಯೆಹೋವನ ಜನರು ಈ ಹಿಂದೆ ಮಾಡಿರುವಂತಹ ಸಾಕ್ಷಿಕಾರ್ಯಗಳಿಗಿಂತ, 2014ರ ಸೇವಾವರ್ಷದ ಸಮಾಪ್ತಿಯಲ್ಲಿ ಮಾಡುವ ಈ ವಿಶೇಷ ಸಾಕ್ಷಿಕಾರ್ಯ ಅವಿಸ್ಮರಣೀಯವಾಗಲಿ ಮತ್ತು ಅದಕ್ಕಾಗಿ ಭೂಮಿಯಾದ್ಯಂತ ತನ್ನ ಜನರು ಮಾಡುವ ಸಕಲ ಪ್ರಯತ್ನಗಳನ್ನು ಯೆಹೋವನು ಆಶೀರ್ವದಿಸಲಿ.—ಮತ್ತಾಯ 24:14.